ಹಾವೇರಿ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರನ್ನ ನೋಡುವ ದೃಷ್ಟಿಕೋನ ಬೇರೆಯಾಗಿದೆ. ಆದರೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಅಕ್ಕಿಆಲೂರಿನ ಪುಟ್ಟ ಬಾಲಕಿಯೊಬ್ಬಳು ಮಹಾಮಾರಿ ಕೊರೊನಾ ಸೋಂಕಿನ ಬಗ್ಗೆ ಮನಮುಟ್ಟುವ ಸಂದೇಶವನ್ನು ನೀಡಿದ್ದಾಳೆ. ಅಕ್ಕಿಆಲೂರು ಗ್ರಾಮದ ಬಾಲಕಿ ವಚನಾ ಚಿಲ್ಲೂರಮಠ ಜೈನ್ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಕೊರೊನಾ ಕುರಿತು ಮಾನವೀಯ ಸಂದೇಶವನ್ನು ಸಾರಿದ್ದಾಳೆ.ಗ್ರಾಮದ ಕೊರೊನಾ ವ್ಯಕ್ತಿಗಳನ್ನು ಸಮಾಜದಲ್ಲಿ ನೋಡುವ ದೃಷ್ಟಿ ಬದಲಾಗಿದೆ. ಕೊರೊನಾ ಬಂದ …
Read More »10 ದಿನ ಕಳೆದ್ರೂ ಬಾರದ ವರದಿ – ಜಿಲ್ಲಾಡಳಿತದ ವಿರುದ್ಧ ಆಕ್ರೋಶ
ಹಾವೇರಿ: ಸಾಂಸ್ಥಿಕ ಕ್ವಾರಂಟೈನ್ ಆಗಿದ್ದವರ ವರದಿ ಎಂಟು ಹತ್ತು ದಿನಗಳು ಕಳೆದರೂ ಬಾರದ ಹಿನ್ನೆಲೆ ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ದೂದೀಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊರ ರಾಜ್ಯಗಳಿಂದ ಬಂದ 60ಕ್ಕೂ ಹೆಚ್ಚಿನ ಜನರನ್ನು ಸರ್ಕಾರದ ಆದೇಶದಂತೆ ಸರ್ಕಾರಿ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇಲ್ಲಿಯ ಜನರು ಸರಿಯಾಗಿ ಊಟವೂ ಸಿಗದೆ ಇತ್ತು ಕೊರೊನಾ ವರದಿಯೂ ಬಾರದೆ, ಮನೆಗೂ ಹೋಗಲಾಗದೆ ಪರದಾಟ ಅನುಭವಿಸುತ್ತಿದ್ದೇವೆ …
Read More »ದೊಣ್ಣೆಗಳನ್ನು ಹಿಡಿದು ಕಾವಲು ಕಾಯುತ್ತಿದ್ದಾರೆಗ್ರಾಮಸ್ಥರು
ಹಾವೇರಿ,- ಮಹಾಮಾರಿ ಕೊರೊನಾ ರಾಜ್ಯದ ಮೂಲೆ ಮೂಲೆಗೂ ಹಬ್ಬುತ್ತಿದ್ದು, ಸೋಂಕಿನಿಂದ ದೂರವಿರಲು ಹಿರೆಕೆರೂರು ತಾಲ್ಲೂಕಿನ ಚಿನ್ನಮುಳಗುಂದ ಗ್ರಾಮಸ್ಥರು ದೊಣ್ಣೆಗಳನ್ನು ಹಿಡಿದು ಸ್ವಯಂಪ್ರೇರಿತ ನಿರ್ಬಂಧ ಹೇರಿಕೊಂಡಿದ್ದಾರೆ. ನಮ್ಮ ಗ್ರಾಮದಲ್ಲಿ ಯಾವುದೇ ಸೋಂಕಿಲ್ಲ. ಬೇರೆ ಊರಿನವರು ಬಂದು ಸೋಂಕು ಹಬ್ಬಿಸುವುದು ಬೇಡ ಎಂದು ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರು ದೊಣ್ಣೆಗಳನ್ನು ಹಿಡಿದು ಕಾವಲು ಕಾಯುತ್ತಿದ್ದಾರೆ. ಈ ಗ್ರಾಮಕ್ಕೆ ಬೇರೆ ಊರುಗಳಿಂದ ಯಾರೂ ಬರುವಂತಿಲ್ಲ, ಯಾರೂ ಹೊರಹೋಗದಂತೆ ನೋಡಿಕೊಳ್ಳುತ್ತಿದ್ದಾರೆ.ಮನೆಗೆ ಒಬ್ಬೊಬ್ಬರು ಇಂತಿಷ್ಟು ಗಂಟೆಗಳ ಲೆಕ್ಕದಲ್ಲಿ ಊರಿನ …
Read More »ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ- 2 ಗಂಟೆ ಅಂಬುಲೆನ್ಸ್‌ನಲ್ಲೇ ಸೋಂಕಿತ……..
ಹಾವೇರಿ: ಮಹಾಮಾರಿ ಕೊರೊನಾದಿಂದ ಅಂಬುಲೆನ್ಸ್, ಬೆಡ್ ಸಿಗುತ್ತಿಲ್ಲ ಎಂಬ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತನನ್ನು ಸೇರಿಸಿಕೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ. ಹಾವೇರಿ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಉಂಟಾಗಿದೆ. ಇದರಿಂದ ಸುಮಾರು ಎರಡು ಗಂಟೆ ಸಮಯ ಆಸ್ಪತ್ರೆ ಮುಂದೆ ನಿಂತಿದ್ದ ಅಂಬುಲೆನ್ಸ್‌ನಲ್ಲೇ ಕೊರೊನಾ ಸೋಂಕಿತ ಕುಳಿತಿದ್ದರು. ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ. ಹೀಗಾಗಿ ಬೆಡ್ ಖಾಲಿ ಆಗುವರೆಗೂ ಕಾಯಿರಿ ಎಂದು ಆಸ್ಪತ್ರೆ …
Read More »ಸೋಂಕಿತ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕಳಿಸಲು ಪತಿರಾಯನ ರಂಪಾಟ!
ಹಾವೇರಿ:ಕೋವಿಡ್-19 ಪಾಸಿಟಿವ್ ಇರುವ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕಳುಹಿಸಲು ಒಪ್ಪದ ಪತಿ ಆರೋಗ್ಯ ಸಿಬ್ಬಂದಿಯೊಂದಿಗೆ ರಂಪಾಟ ಮಾಡಿದ ಘಟನೆ ಗುರುವಾರ ತಾಲೂಕಿನ ಕನವಳ್ಳಿಯಲ್ಲಿ ನಡೆದಿದೆ. ಕೋವಿಡ್ 19 ಪಾಸಿಟಿವ್ ವರದಿ ಬಂದಾಗ ಗರ್ಭಿಣಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ಸಿಬ್ಬಂದಿ ಕನವಳ್ಳಿಯ ಮನೆಗೆ ಹೋದಾಗ ಪತ್ನಿಯೊಂದಿಗೆ ಪತಿಯೂ ಆಂಬ್ಯುಲೆನ್ಸ್ ಏರಲು ಯತ್ನಿಸಿದ್ದಾನೆ. ಪ್ರೀತಿಯ ಪತ್ನಿಯನ್ನು ಒಬ್ಬಳೇ ಇರಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಸ್ಥಳೀಯರು, ಸಿಬ್ಬಂದಿ ಮನವೊಲಿಸಿ ಆಂಬ್ಯುಲೆನ್ಸ್ ಹತ್ತುವುದನ್ನು …
Read More »ಆರೋಗ್ಯ ಸಿಬ್ಬಂದಿ ಕರೆದರೂ ಸೋಂಕಿತರ ಶವ ಸಂಸ್ಕಾರಕ್ಕೆ ಬಾರದ ಸಂಬಂಧಿಕರು
ಹಾವೇರಿ: ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಆಗಮಿಸುವಂತೆ ಪಿಪಿಇ ಕಿಟ್ ತಯಾರು ಮಾಡಿಕೊಂಡು ಆರೋಗ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತರೂ ಯಾರು ಬಂದಿಲ್ಲ. ಹೀಗಾಗಿ ಆರೋಗ್ಯ ಇಲಾಖೆಯ ಸಿಬ್ಬದಿಯೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಮಂಗಳವಾರ ಬೆಳಗ್ಗೆ 6-30ಕ್ಕೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಜಿಲ್ಲೆಯ ಶಿಗ್ಗಾವಿ ಪಟ್ಟಣದ ದೇಸಾಯಿ ಗಲ್ಲಿ ನಿವಾಸಿ 75 ವರ್ಷದ ವೃದ್ಧೆ ಮತ್ತು ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ನಿವಾಸಿ 60 ವರ್ಷದ ವೃದ್ಧೆಯರ ಅಂತ್ಯ ಸಂಸ್ಕಾರವನ್ನು …
Read More »ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಆರ್ಭಟಕ್ಕೆ ಇಂದು ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ
ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಆರ್ಭಟಕ್ಕೆ ಇಂದು ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸಾವಿನ ಖಾತೆಯನ್ನು ತೆರೆದಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ದೇಸಾಯಿ ಗಲ್ಲಿ ನಿವಾಸಿಯಾಗಿದ್ದ 75 ವರ್ಷದ ವೃದ್ಧೆ (ರೋಗಿ-8295) ಮೃತಪಟ್ಟಿದ್ದಾರೆ. ಮೃತ ವೃದ್ಧೆಗೆ ರೋಗಿ-6832ರ ಪ್ರಾಥಮಿಕ ಸಂಪರ್ಕದಲ್ಲಿದ್ದರಿಂದ ಸೋಂಕು ತಗುಲಿತ್ತು. ಜೂನ್ 19ರಂದು ಕೋವಿಡ್ ಆಸ್ಪತ್ರೆಗೆ ವೃದ್ಧೆಯನ್ನು ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಸಾವನ್ನಪ್ಪಿದ್ದಾರೆ. ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ 60 ವರ್ಷದ …
Read More »ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಭಾನುವಾರ ಬೆಳಗ್ಗೆ ಆ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿತ್ತು. ವಧು–ವರ ಇಬ್ಬರೂ ಇಷ್ಟು ಹೊತ್ತಿಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಅಷ್ಟರಲ್ಲಿ ಆವರಿಸಿದ ಕೋವಿಡ್ ಸೋಂಕಿನ ಛಾಯೆ ಎಲ್ಲವನ್ನೂ ಹಾಳು ಮಾಡಿದೆ.
ಹಾವೇರಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಭಾನುವಾರ ಬೆಳಗ್ಗೆ ಆ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿತ್ತು. ವಧು–ವರ ಇಬ್ಬರೂ ಇಷ್ಟು ಹೊತ್ತಿಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಅಷ್ಟರಲ್ಲಿ ಆವರಿಸಿದ ಕೋವಿಡ್ ಸೋಂಕಿನ ಛಾಯೆ ಎಲ್ಲವನ್ನೂ ಹಾಳು ಮಾಡಿದೆ. ಹಾವೇರಿ ನಗರದ ಶಿವಾಜಿ ನಗರದ ಯುವಕನ ಜೊತೆ ನಾಗೇಂದ್ರ ಮಟ್ಟಿ ಪ್ರದೇಶದ ಯುವತಿಯ ಮದುವೆ ನಿಶ್ಚಯವಾಗಿತ್ತು. ಇತ್ತ ಮದುಮಗ ಹಾಗೂ ಸಂಬಂಧಿಕರು ಶಿವಾಜಿ ನಗರಕ್ಕೆ ಬಂದಿದ್ದರು. ಇನ್ನೇನು ಭಾನುವಾರ ಬೆಳಗ್ಗೆ …
Read More »ವಧುವಿನ ಸಹೋದರಿಗೆ ಸೋಂಕು :ವಧು ಸೇರಿ 19 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ
ಹಾವೇರಿ: ಇನ್ನೇನು ಕೆಲವೇ ಗಂಟೆಗಳಲ್ಲಿ ಯುವತಿಯೊಬ್ಬಳ ಮದುವೆ ನಡೆಯಬೇಕಿದ್ದು, ಆದ್ರೆ ವಧುವಿನ ಸಹೋದರಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮದುವೆ ಮುಂದೂಡಿ ವಧು ಸೇರಿ 19 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ ಭಾನುವಾರ ನಡೆದಿದೆ. ವಧುವಿನ ಸಹೋದರಿಗೆ ಸೋಂಕು ಇರುವುದನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ದೃಢಪಡಿಸಿದೆ. ಇಲಾಖೆ ಸಂಜೆ ಬಿಡುಗಡೆ ಮಾಡುವ ಆರೋಗ್ಯ ಬುಲೆಟಿನ್ ಮೂಲಕ ಅಧಿಕೃತ ಮಾಹಿತಿ ನೀಡಬೇಕಿದೆ. ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಜಿಲ್ಲಾಡಳಿತ ಸೋಂಕಿತೆ ವಾಸವಿದ್ದ …
Read More »ವಿಶ್ವ ಮಾದಕ ದ್ರವ್ಯಗಳ ಸೇವನೆ ಹಾಗು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಜನ ಜಾಗೃತಿ ಪದಾಯತ್ರೆ: ಹಾವೇರಿ
ಸವಣೂರ: ಇಂದಿನ ಯುವ ಜನಾಂಗ ಮಾಧಕ ವ್ಯಸನಗಳಿಗೆ ದಾಸರಾಗುವ ಮೂಲಕ ಆರೋಗ್ಯದ ಜೊತೆ ಉತ್ತಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಯೋಗಿಶ್ವರ ಎಸ್. ಕಳವಳ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲಾ ಪೊಲೀಸ್ ಶಿಗ್ಗಾಂವ ಉಪ ವಿಭಾಗದ ಹಾಗೂ ಸವಣೂರ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾದಕ ದ್ರವ್ಯಗಳ ಸೇವನೆ ಹಾಗು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಜನ ಜಾಗೃತಿ ಪದಾಯತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾದಕ ದ್ರವ್ಯಗಳ ಸೇವನೆಯಿಂದ ಆರೋಗ್ಯದ …
Read More »