ಹುಬ್ಬಳ್ಳಿ: ರಾಜ್ಯದಲ್ಲಿ ಮಹಿಳೆಯರು ಗೌರವದಿಂದ ಬದುಕುವ ಹಕ್ಕು ಕಸಿದುಕೊಳ್ಳಲಾಗಿದೆ. ಪೊಲೀಸರೇ ದುಶ್ಯಾಸನರಾಗಿದ್ದಾರೆ. ಜಯನಗರ ಪ್ರಕರಣದಲ್ಲಿ ಕಳ್ಳರಾಗಿದ್ದರು. ಈ ಪ್ರಕರಣದ ಸಿಪಿಐ ಹಾಗೂ ಪಿಎಸ್ ಐ ಅಮಾನತು ಆಗಬೇಕು. ನ್ಯಾಯಂಗ ತನಿಖೆಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಛಲವಾದಿ ನಾರಾಯಣ ಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಇಡೀ ಪೊಲೀಸ್ ಠಾಣೆ ಕಾಂಗ್ರೆಸ್ ಕಚೇರಿಯಾಗಿದೆ. ಸುವರ್ಣ ಕಲಕುಂಟ್ಲಾ ಮೇಲೆ ಮೂರು ವರ್ಷ ಜೈಲಾಗಿತ್ತು. ಜಾಮೀನು ಮೇಲೆ ಆಕೆ ಹೊರಗಿದ್ದಾಳೆ. ಈ ಪ್ರಕರಣ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸಿಪಿಐ, ಪಿಎಸ್ಐ ಯಾವುದೇ ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿಲ್ಲ. ಘಟನೆಗೆ ಅವರ ಬೇಜವಾಬ್ದಾರಿ ಕಾರಣ. ಗೃಹ ಸಚಿವ ಪರಮೇಶ್ವರ
ಮಹಿಳೆಯರ ಜೊತೆ ಗೌರವದಿಂದ ವರ್ತಿಸಿ ಅಂತ ಸಿಬ್ಬಂದಿಗೆ ತಿಳಿ ಹೇಳಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳೋದಾಗಿ ಕಮಿಷನರ್ ಹೇಳಿದ್ದಾರೆ. ಅವರು ಕ್ರಮ ಕೈಗೊಳ್ಳೋ ವಿಶ್ವಾಸವಿದೆ. ತಪ್ಪಿತಸ್ಥರ ಅಮಾನತು ಆಗಬೇಕು ಅಂತ ಹೇಳಿದ್ದೇವೆ ಎಂದರು.
ಸಿಐಡಿ ತನಿಖೆಗೆ ಒಪ್ಪಿಗೆ ಇಲ್ಲ. ಸದ್ಯ ಪೊಲೀಸ್ ಠಾಣೆಯನ್ನು ಕಾಂಗ್ರೆಸ್ ಕಚೇರಿ ಮಾಡಿದ್ದಾರೆ. ಸಿಐಡಿಗೆ ನೀಡಿದ್ರೆ ಅದು ಹೈಲೆವಲ್ ಕಾಂಗ್ರೆಸ್ ಕಚೇರಿ ಆಗುತ್ತೆ. ಸಿಐಡಿ ಕಾಂಗ್ರೆಸ್ ಗೆ ವಾಷಿಂಗ್ ಮಷಿನ್ ಇದ್ದಂತೆ. ಅದರಲ್ಲಿ ಹಾಕಿ ಕ್ಲೀನ್ ಚೀಟ್ ನೀಡ್ತಾರೆ. ಕಾಂಗ್ರೆಸ್ ಪೊಲೀಸ್ ಇಲಾಖೆಯನ್ನು ಕುಗ್ಗಿಸೋ ಕೆಲಸ ಮಾಡುತ್ತಿದೆ ಎಂದು ಆರ್ ಅಶೋಕ್ ಆರೋಪಿಸಿದರು.
Laxmi News 24×7