Breaking News

ಬೆಳಗಾವಿ

Belagavi: ಗ್ರಾಮೀಣ ಕ್ಷೇತ್ರ ಮಾದರಿಯಾಗಿ ಅಭಿವೃದ್ಧಿ

ಬೆಳಗಾವಿ: ನಾನು ಪ್ರತಿನಿಧಿಸುವ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಸಂಕಲ್ಪ ಮಾಡಿದ್ದು, ಅದರಂತೆಯೇ ಕೆಲಸ ಮಾಡುತ್ತಿರುವೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ತಾಲೂಕಿನ ಕಿಣೆಯೇ ಗ್ರಾಮದಲ್ಲಿ ಗುರುವಾರ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಹಾಲಕ್ಷ್ಮೀ ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಾಡಾ ಅಧ್ಯಕ್ಷ ಯುವರಾಜ ಕದಂ, ಮಾರುತಿ ಪಾಟೀಲ, ಬಾಳು ದೇಸೂರಕರ, ಮಾರುತಿ ಡುಕ್ರೆ, ಮಧುಕರ ಪಾಟೀಲ, ಹೇಮಂತ …

Read More »

ಮದುವೆ ದಿನವೇ ಅಂಗಾಂಗ ದಾನ ; ಅಥಣಿಯಲ್ಲೊಂದು‌ ಸಾಮಾಜಿಕ ಸೇವೆಯ ಮದುವೆ

ಅಥಣಿ : ತಮ್ಮ ಮದುವೆಯ ದಿನವೇ ಅಂಗಾಂಗ ದಾನ ಮಾಡುವ ಮೂಲಕ ಜನರಲ್ಲಿ ದೇಹದಾನದ ಮಹತ್ವ ತಿಳಿಸಿಕೊಡುವ ಮಹತ್ವ ಕೆಲಸವನ್ನು ನವಜೋಡಿ ಮಾಡಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ. ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ವಾಗೇಶ ಕಾಡದೇವರಮಠ ಮತ್ತು ಕೋಮಲ ಹಿರೇಮಠ ಇವರ ವಿವಾಹ ಸಮಾರಂಭ ಬುಧವಾರ ಸಂಪ್ರದಾಯದಂತೆ ಜರುಗಿತು. ಈ ವೇಳೆ ವಾಗೇಶ್ ಹಾಗೂ ಕೋಮಲ್ ಇಬ್ಬರೂ ದೇಹದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸುತ್ತಮುತ್ತಲಿನ …

Read More »

ಫೆ.19 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ: ಬೆಳಗಾವಿಯಲ್ಲಿ ವಿಜಯೇಂದ್ರ ಹೇಳಿಕೆ

ಬೆಳಗಾವಿ: ಫೆಬ್ರವರಿ 19ರಂದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ‌‌. ಸಭೆಯಲ್ಲಿ ಮುಂದಿನ ಕೆಲವು ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿವರಿಸಿದರು‌. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಕಾರ್ಯಕಾರಣಿ ಸಭೆಯಲ್ಲಿ ಜಿಪಂ, ತಾಪಂ, ಗ್ರೇಟರ್ ಬೆಂಗಳೂರು, ವಿಧಾನಪರಿಷತ್ ಸ್ಥಾನಗಳ ಚುನಾವಣೆ, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಚರ್ಚೆ ಮಾಡುತ್ತೇವೆ. ಉದ್ಘಾಟನೆಗೆ ಹಿರಿಯ ಸಚಿವರು …

Read More »

ದುರ್ಗಂಧದ ಗೂಡಾದ ಬೆಳಗಾವಿಯ ಹೊಸ ನಗರ ಬಸ್ ನಿಲ್ದಾಣ ಶಚಾಲಯ

ಬೆಳಗಾವಿಯ ಹೊಸ ನಗರ ಬಸ್ ನಿಲ್ದಾಣ ( CBT ) ಉದ್ಘಾಟನೆಯಾಗಿ ಇನ್ನೂ ಎರಡು ತಿಂಗಳು ಕೂಡ ಆಗಿಲ್ಲಾ, ಅಲ್ಲಿಯ ಶೌಚಾಲಯಗಳ ಪರಿಸ್ಥಿತಿ ನೋಡ್ರಿ. ಇಲ್ಲಿ ಎಲ್ಲೆಂದರಲ್ಲಿ ಕಸ, ನೀರು ಕೂಡ ಸರಿಯಾಗಿ ಇಲ್ಲಾ. ಈ ಶೌಚಾಲಯಗಳ ದುಸ್ಥಿತಿ ಕಂಡು ನಿಜಕ್ಕೂ ಬೇಸರವಾಯ್ತು. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಈ ಶೌಚಾಲಯಗಳ ಶುಚಿತ್ವಕ್ಕೆ ಆಧ್ಯತೆ ನೀಡಿ.

Read More »

ಬೆಳಗಾವಿಯಲ್ಲಿ ಗಗನ ಮುಟ್ಟಿದ ಒಣ ಮೆನಸಿನಕಾಯಿ ಬೆಲೆ

ಬೆಳಗಾವಿ:  ಗ್ರಾಹಕರಿಗೆ ಘಾಟು ತಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ‌ ಇಳುವರಿ‌ ಬಾರದ ಹಿನ್ನೆಲೆಯಲ್ಲಿ ಮೆಣಸಿನಕಾಯಿ‌ ದರ ಮಾರುಕಟ್ಟೆಯಲ್ಲಿ  ದರ 500 ರೂ.‌ ಗಡಿ ದಾಟಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ ಅಂತಾ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಬೇಸಿಗೆ ಶುರುವಾದರೆ ಸಾಕು ಉತ್ತರ ಕರ್ನಾಟಕ ಜನರು ವರ್ಷಪೂರ್ತಿ ಆಗುವಷ್ಟು ಖಾರವನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಈಗ ಬೇಸಿಗೆ ಶುರುವಾಗಿದ್ದು, ಮೆಣಸಿನಕಾಯಿ ತರಲು ಮಾರುಕಟ್ಟೆಗೆ ಬರುವ ಕುಂದಾನಗರಿ ಗ್ರಾಹಕರಿಗೆ ದರ ಕೇಳಿ ತಲೆ ತಿರುಗುತ್ತಿದೆ. ಕಳೆದ ವರ್ಷ ಕೆಜಿಗೆ …

Read More »

BELAGAVI: ಜಮೀನುಗಳಿಗೆ ನೀರು ಹರಿಸಿ

ರಾಮದುರ್ಗ: ತಾಲೂಕಿನ ರೈತರ ಹಿತದೃಷ್ಟಿಯಿಂದ ವೀರಭದ್ರೇಶ್ವರ ಹಾಗೂ ಸಾಲಾಪುರ ಬಸವೇಶ್ವರ ಏತ ನೀರಾವರಿ ಯೋಜನೆಗಳಿಂದ ಶ್ರೀವೇ ರೈತರ ಜಮೀನಿಗೆ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂದ ಅಧ್ಯಕ್ಷ ಚೂನಪ್ಪ ಪೂಜಾರಿ ಒತ್ತಾಯಿಸಿದರು. ನಗರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರಭದ್ರೇಶ್ವರ, ಬಸವೇಶ್ವರ ಏತ ನೀರಾವರಿ ಯೋಜನೆಗಳ ಕಾಮಗಾರಿ ನಡೆದು 10 ವರ್ಷ ಕಳೆದಿವೆ. ಈವರೆಗೆ ರೈತರ ಜಮೀನುಗಳಿಗೆ ನೀರು ಹರಿಯದಿರುವುದು ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಪ್ರದರ್ಶಿಸುತ್ತದೆ ಎಂದು ದೂರಿದರು. ಬಾಕಿ ಕಾಮಗಾರಿ ಪೂರ್ಣಗೊಳಿಸಿ, …

Read More »

belagavi: ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ

ಸತ್ತಿಗೇರಿ:  ಸವದತ್ತಿ ಯಲ್ಲಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸಮೀಪದ ಗುಡುಮಕೇರಿ ಗ್ರಾಮದಲ್ಲಿ 70 ಲ ರೂ.ವೆಚ್ಚದಲ್ಲಿ ರಸ್ತೆ ಸುಧಾರಣೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗುಡಮಕೇರಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ರೈತರಿಗೆ ಅನುಕೂಲವಾಗಲಿದೆ. ಸಮರ್ಪಕ ರಸ್ತೆ ನಿರ್ಮಾಣದ ಮೂಲಕ ಪ್ರತಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು …

Read More »

ವಿದ್ಯಾರ್ಜನೆಯ ಕೇಂದ್ರ ಗ್ರಂಥಾಲಯ

ಕಡಬಿ: ಗ್ರಂಥಾಲಯ ವಿದ್ಯಾರ್ಥಿಗಳ ಮತ್ತು ಯುವಜನರ ಭವಿಷ್ಯಕ್ಕೆ ಮಹತ್ವದ ಹೆಜ್ಜೆಯಾಗಿದೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಜ್ಞಾನದ ಬೆಳಕಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸಮೀಪದ ಗೊರಗುದ್ದಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಅಂದಾಜು 4 ಲ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಂಥಾಲಯ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಾ ಅಭ್ಯರ್ಥಿಗಳು, ಓದುಗರಿಗೆ ಉಪಯುಕ್ತವಾಗಲಿದೆ. ಗ್ರಂಥಾಲಯದಲ್ಲಿ ವಿವಿಧ ವಿಷಯಗಳ ಪುಸ್ತಕ, ಪತ್ರಿಕೆ ಹಾಗೂ ಸ್ಪರ್ಧಾತ್ಮಕ …

Read More »

ಹುಬ್ಬಳ್ಳಿ ಪಾದಯಾತ್ರೆಗೆ ಇಂದು ಚಾಲನೆ

ಬೆಟಗೇರಿ: ಗ್ರಾಮದ ಬಸವೇಶ್ವರ ವೃತ್ತದಲ್ಲಿ ಫೆ. .12ರಂದು ಬೆಳಗ್ಗೆ 9ಗಂಟೆಗೆ ಹುಬ್ಬಳ್ಳಿ ಸಿದ್ಧಾರೂಢರ ಮಠದಲ್ಲಿ ಜರುಗಲಿರುವ ಮಹಾಶಿವರಾತ್ರಿ ಜಾತ್ರೆಗೆ ಸದ್ಗುರು ಸಿದ್ಧಾರೂಢರ ಸದ್ಭಭಕ್ತರಿಂದ 11ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ. ಬೆಟಗೇರಿ ಗ್ರಾಮದ ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಲಿದ್ದಾರೆ. ಶರಣರಾದ ಮಲ್ಲಪ್ಪ ಪಣದಿ, ಸಿದ್ದಪ್ಪ ಹೊರಟ್ಟಿ, ಬಾಳಪ್ಪ ಕನೋಜಿ ನೇತೃತ್ವವಹಿಸಲಿದ್ದಾರೆ. ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಪ್ರಧಾನ ಸಂಚಾಲಕ ಈಶ್ವರ ಬಳಿಗಾರ ಅಧ್ಯತೆ ವಹಿಸಲಿದ್ದು, ತಾಪಂ …

Read More »

ಬೆಳಗಾವಿಯಲ್ಲಿ ಅನಧಿಕೃತ ಖಾಸಗಿ ಹೂವಿನ ಮಾರುಕಟ್ಟೆ ಅಟ್ಟಹಾಸಕ್ಕೆ ಸರ್ಕಾರಿ ವ್ಯಾಪಾರಿಗಳು ಕಂಗಾಲು ದಂಡು ಮಂಡಳಿ ಮೊರೆ ಹೋಗಿ ನ್ಯಾಯಕ್ಕಾಗಿ ಆಗ್ರಹ..ಕೂಡಲೇ ಮಾರುಕಟ್ಟೆ ಬಂದ್ ಮಾಡಲೂ ಒತ್ತಾಯ!!!

ಕುಂದಾನಗರಿ ಬೆಳಗಾವಿಯಲ್ಲಿ ಹೂವಿನ ವ್ಯಾಪಾರಿಗಳ ನಡುವೆ ಕಿಚ್ಚು ಹತ್ತಿಕೊಂಡಿದೆ. ಎಪಿಎಂಸಿ ಮತ್ತು ತೋಟಗಾರಿಕಾ ಇಲಾಖೆಯ ಅನುಮತಿ ಇಲ್ಲದೆ ತಲೆ ಎತ್ತಿರುವ ಖಾಸಗಿ ಹೂವಿನ ಮಾರುಕಟ್ಟೆ ವಿರುದ್ಧ ಸರ್ಕಾರಿ ಮಾರುಕಟ್ಟೆಯ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ. ಇಂದು ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. :ಬೆಳಗಾವಿಯ ಭರತೇಶ್ ಶಿಕ್ಷಣ ಸಂಸ್ಥೆಯ ಸಮೀಪ ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಖಾಸಗಿ ಸಗಟು ಹೂವಿನ ಮಾರುಕಟ್ಟೆಯನ್ನು ಆರಂಭಿಸಲಾಗಿದೆ. ಇದರಿಂದಾಗಿ ರೈತರು …

Read More »