Breaking News

ಕಿತ್ತೂರು

ಎಂ.ಕೆ.ಹುಬ್ಬಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ:

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕಳೆದ 8 ದಿನಗಳಿಂದ ನೀರು ಬಿಡದ ಹಿನ್ನೆಲೆ ಆಕ್ರೋಶಗೊಂಡಿರುವ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. ಹೌದು ಎಂಕೆ ಹುಬ್ಬಳ್ಳಿ ಪಟ್ಟಣದ ವಾರ್ಡ ನಂ.1, 2, 3ರಲ್ಲಿ ಕಳೆದ ಎಂಟು ದಿನಗಳಿಂದ ನೀರು ಬಿಟ್ಟಿಲ್ಲ. ಇಲ್ಲಿನ ಜನ ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಕ್ರೋಶಗೊಂಡಿರುವ ಇಲ್ಲಿನ ನಿವಾಸಿಗಳು ಕೈಯಲ್ಲಿ ಖಾಲಿ ಕೊಡಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಈ ವೇಳೆ ಪಟ್ಟಣ …

Read More »

ಕಿತ್ತೂರು ಉತ್ಸವಕ್ಕೆ : ₹ 2 ಕೋಟಿ ನೆರವು- ಈ ಬಾರಿಯಿಂದ ರಾಜ್ಯಮಟ್ಟದ ಉತ್ಸವ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಈ ಭಾಗವನ್ನು ‘ಕಿತ್ತೂರು ಕರ್ನಾಟಕ’ ಎಂದು ಘೋಷಣೆ ಮಾಡಿದ ಬಳಿಕ ನಡೆಯುತ್ತಿರುವ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ ₹ 2 ಕೋಟಿ ಅನುದಾನ ನೀಡಿದೆ. ಈ ಬಾರಿಯಿಂದ ರಾಜ್ಯಮಟ್ಟದ ಉತ್ಸವವಾಗಿಯೂ ಆಚರಿಸಲಾಗುತ್ತಿದೆ.   ಪಟ್ಟಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡ್ರ, ಅ.23, 24, 25ರಂದು ವೈಭವ ಮರುಕಳಿಸಲಿದೆ. ಅ.2ರಂದು ಬೆಂಗಳೂರಿನಿಂದ ಹೊರಡುವ ವೀರಜ್ಯೋತಿ ಯಾತ್ರೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ’ …

Read More »

ಚನ್ನಮ್ಮನ ಕಿತ್ತೂರು: ಅರಳಿಕಟ್ಟಿ ಸರ್ಕಲ್‌ನಲ್ಲಿ ನಿಲ್ಲಲು ಸಮರ್ಪಕ ಬಸ್‌ ತಂಗುದಾಣ ಇಲ್ಲ

ಕಿತ್ತೂರು: ಅರಳಿಕಟ್ಟಿ ಸರ್ಕಲ್‌ನಲ್ಲಿ ನಿಲ್ಲಲು ಸಮರ್ಪಕ ಬಸ್‌ ತಂಗುದಾಣ ಇಲ್ಲದೇ ಸಾರ್ವಜನಿಕರು ಮಳೆಗಾಲ-ಬೇಸಿಗೆಯಲ್ಲಿ ಪರದಾಡುವಂತಾಗಿದೆ. ಕಿತ್ತೂರು ಸುತ್ತಮುತ್ತಲಿನ ಗ್ರಾಮಗಳಾದ ನಂದಿಹಳ್ಳಿ, ಕಲಭಾವಿ, ಶಿವನೂರು, ಮರಿಗೇರಿ, ಜಮಳೂರು, ಹೂಲಿಕಟ್ಟಿ, ಉಗರಕೋಡ, ತೇಗೂರು, ಖೋದಾನಪೂರ ಸಂಗೊಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಿಂದ ಕೆಲಸಕ್ಕೆ ಗ್ರಾಮಸ್ಥರು, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬಸ್‌ ಮುಖಾಂತರ ಆಗಮಿಸುತ್ತಾರೆ. ಅವರು ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ಹೋಗುವಾಗ ಅರಳಿಕಟ್ಟಿ ಸರ್ಕಲ್‌ನಲ್ಲಿ ಇರುವ ಬಸ್‌ ತಂಗುದಾಣ ಚಿಕ್ಕದಿರುವುದರಿಂದ ಬಹುತೇಕರಿಗೆ ನೆರಳಲ್ಲಿ ನಿಲ್ಲಲು-ಕುಳಿತುಕೊಳ್ಳಲು …

Read More »

ಕಿತ್ತೂರು ರಾಣಿ ಚನ್ನಮ್ಮನಿಂದಾಗಿ ಅಧಿಕಾರ ಹೋದರೆ ಸಂತಸಪಡುವೆ: ಸಿ.ಎಂ ಬೊಮ್ಮಾಯಿ

ಬೆಳಗಾವಿ: ‘ಕಿತ್ತೂರು ರಾಣಿ ಚನ್ನಮ್ಮನ ಸಲುವಾಗಿ ಯಾವುದೇ ಮೂಢನಂಬಿಕೆ ನನಗೆ ಅಡ್ಡಬರುವುದಿಲ್ಲ. ಚನ್ನಮ್ಮನ ಸಲುವಾಗಿ ಅಧಿಕಾರ ಹೋದರೆ ಬಹಳ ಸಂತೋಷಪಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಜಿಲ್ಲೆಯ ಕಿತ್ತೂರಿನಲ್ಲಿ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ‘ಕಿತ್ತೂರಿಗೆ ಬಂದ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯಕ್ಕೆ ಸಡ್ಡು ಹೊಡೆದಿದ್ದೀರಿ’ ಎಂಬ ಪ್ರಶ್ನೆಗೆ, ‘ಚಾಮರಾಜನಗರಕ್ಕೆ ಹೋಗಬೇಡ ಎಂದಿದ್ದರು ಹೋಗಿದ್ದೆ. ಕಿತ್ತೂರಿಗೆ ಬರಬೇಡ ಎಂದಿದ್ದರು ಬಂದಿದ್ದೇನೆ. ಹಿಂದೆ ಕಾಕತಾಳೀಯವಾಗಿ …

Read More »

ಕಿತ್ತೂರು ತಾಲೂಕಿನ ವೈದ್ಯರಿಗೆ Thermos ವಿತರಿಸಿ ವೈದ್ಯರ ಸೇವೆಯನ್ನು ಗುಣಗಾನ ಮಾಡಿದ ಪೆಂಡಾಲ್ ಗುತ್ತಿಗೆದಾರ ಪಕ್ಕಿರಪ್ಪ ಮುರಗೋಡ..!!

ಕಿತ್ತೂರು ತಾಲೂಕಿನ ವೈದ್ಯರಿಗೆ Thermos ವಿತರಿಸಿ ವೈದ್ಯರ ಸೇವೆಯನ್ನು ಗುಣಗಾನ ಮಾಡಿದ ಪೆಂಡಾಲ್ ಗುತ್ತಿಗೆದಾರ ಪಕ್ಕಿರಪ್ಪ ಮುರಗೋಡ..!! ಕಿತ್ತೂರು :ಗುರುವಾರ ದಂದು ಕಿತ್ತೂರು ಪಟ್ಟಣದಲ್ಲಿರುವ ಕಲ್ಮಠ ಸಭಾಭವನದಲ್ಲಿ ವೈದ್ಯರ ದಿನಾಚರಣೆ ನಿಮಿತ್ಯ ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ರಾಜಗುರು ಸಂಸ್ಥಾನ ಕಲ್ಮಠದ ಶ್ರೀಗಳ ದಿವ್ಯ ಸಾನಿದ್ಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಿತ್ತೂರು ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ತಾಲೂಕಿನ ಗಣ್ಯ ವ್ಯಕ್ತಿಗಳು ಮತ್ತು ಪೆಂಡಾಲ್ ಗುತ್ತಿಗೆದಾರರು ಆದ ಪಕ್ಕಿರಪ್ಪ …

Read More »

ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿ……

ಬೆಳಗಾವಿ: ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವರಶೀಗಿಹಳ್ಳಿ ಹೊರವಲಯದಲ್ಲಿ ಹುಲ್ಲಿನ ಹೊರೆ ಹೊತ್ತು ಹೋಗುತ್ತಿದ್ದ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪದ ಮೇಲೆ ಮೂವರನ್ನು ಕಿತ್ತೂರು ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ದೇವರಶೀಗಿಹಳ್ಳಿ ಗ್ರಾಮದ ನಾಗೇಶ ದೊಡಮನಿ, ವಿಜಯ ಮದನಬಾವಿ ಮತ್ತು ಚೇತನ ಹಿರೇಮಠ ಬಂಧಿತರು. ಅವರಿಂದ, ಕಳವು ಮಾಡಿದ್ದ ₹ 1.40 ಲಕ್ಷ ಮೌಲ್ಯದ 35 ಗ್ರಾಂ. ತೂಕದ ಚಿನ್ನದ ಸರ, ದ್ವಿಚಕ್ರ ವಾಹನ, ₹ 10 ಸಾವಿರ, …

Read More »

ಕಿತ್ತೂರು ಕ್ಷೇತ್ರದಲ್ಲಿ ಕೈಗಾರಿಕೆ ರಫ್ತು ವಲಯ ಕೇಂದ್ರ ಸ್ಥಾಪಿಸಿ

ಬೈಲಹೊಂಗಲ: ಕೈಗಾರಿಕೆ ರಫ್ತು ವಲಯ ಕೇಂದ್ರ ಸ್ಥಾಪನೆ ತೀರ ಅಗತ್ಯವಾಗಿದ್ದು, ತಮ್ಮ ಕಿತ್ತೂರು ಮತಕ್ಷೇತ್ರದಲ್ಲಿ ಇದನ್ನು ತೆರೆಯುವಂತೆ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ರಫ್ತು ಪ್ರಮೋಷನ್‌ ಸಮಿತಿ ಸಭೆಯ ನಂತರ ಶಾಸಕರ ಕಾರ್ಯಾಲಯದಿಂದ ಈ ಕುರಿತು ಹೇಳಿಕೆ ನೀಡಿರುವ ಶಾಸಕರು ತಮ್ಮ ಬೇಡಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದಾಗಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ 4ರ ಬಳಿ ಇರುವ ಪ್ರದೇಶದಲ್ಲಿ ಕೈಗಾರಿಕಾ ರಫ್ತು ವಲಯ …

Read More »

ಸೈಕಲ್ ಮೇಲೆ ಶವ ಸಾಗಿಸಿ ಅಂತಿಮಸಂಸ್ಕಾರ ಮಾಡಿದ ಮನಕಲಕುವ ಘಟನೆ ಎಂ.ಕೆ.‌ಹುಬ್ಬಳ್ಳಿಯಲ್ಲಿ ಭಾನುವಾರ ಮ್ಯಧ್ಯಾಹ್ನ ನಡೆದಿದೆ‌. ಎಂ.ಕೆ.‌ಹುಬ್ಬಳ್ಳಿಯ ಗಾಂಧಿ ನಗರದಲ್ಲಿ ಈ ಘಟನೆ ನಡೆದಿದೆ. ಕಳೆದ ಎರ

ಬೆಳಗಾವಿ: ಕೊರೊನಾ ಶಂಕಿತ ವ್ಯಕ್ತಿ ಮನೆಯಲ್ಲಿಯೇ ಮೃತಪಟ್ಟಿದ್ದು, ಅಂತ್ಯಕ್ರಿಯೆ ಸಹಾಯಕ್ಕೆ ಯಾರೂ ಬರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸೈಕಲ್ ಮೇಲೆ ಶವ ಸಾಗಿಸಿ ಅಂತಿಮಸಂಸ್ಕಾರ ಮಾಡಿದ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.‌ಹುಬ್ಬಳ್ಳಿಯಲ್ಲಿ ಭಾನುವಾರ ಮ್ಯಧ್ಯಾಹ್ನ ನಡೆದಿದೆ‌. ಎಂ.ಕೆ.‌ಹುಬ್ಬಳ್ಳಿಯ ಗಾಂಧಿ ನಗರದಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ದಿನದಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ಬೆಳಗಾವಿ ಆಸ್ಪತ್ರೆಗೆ ಕರೆದೊಯ್ಯುವಂತೆ …

Read More »

ದನ ಕರುಗಳು ಸಜೀವ ದಹನವಾದ ಘಟನೆ ಕಿತ್ತೂರು ತಾಲೂಕಿನ ಎನ್ ತೇಗೂರು ಗ್ರಾಮದಲ್ಲಿ ನಡೆದಿದೆ.

ಕಿತ್ತೂರು: ಗುಡಿಸಿಲಿಗೆ ಬೆಂಕಿ ತಗುಲಿ ದನ ಕರುಗಳು ಸಜೀವ ದಹನವಾದ ಘಟನೆ ಕಿತ್ತೂರು ತಾಲೂಕಿನ ಎನ್ ತೇಗೂರು ಗ್ರಾಮದಲ್ಲಿ ನಡೆದಿದೆ. ಎನ್ ತೇಗೂರು ಗ್ರಾಮದ ಶಿವರಾಯಪ್ಪ ಚಂದ್ರಪ್ಪ ಪಾಗಾದ ಎಂಬುವವರ ಹೊಲದಲ್ಲಿರುವ ಗುಡಿಸಲಿಗೆ ನಿನ್ನೆ ರಾತ್ರಿ ಆಕಸ್ಮೀಕ ಬೆಂಕಿ ಸುಮಾರು 3 ಲಕ್ಷ ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿದೆ. ಅಲ್ಲದೇ 2 ಹೋರಿ, 3 ಆಕಳು , 2 ಕರು, 1 ಕುರಿ ಸಜೀವ ದಹನವಾಗಿದೆ. ಜೀವನಕ್ಕೆ ಆಧಾರವಾಗಿದ್ದ ದನ …

Read More »

ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ  ಕೊನೆಗೆ ಎಚ್ಚತ್ತ ಅಧಿಕಾರಿಗಳು  ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.

ಕಿತ್ತೂರು:  ನಿರಂತರ ಮಳೆಯಿಂದಾಗಿ ತೆಗ್ಗು, ಗುಂಡಿ ಬಿದ್ದು ಸಂಪೂರ್ಣ  ಹಾಳಾಗಿದ್ದ  ನೇಗಿನಾಳ- ಬೈಲಹೊಂಗಲ ರಸ್ತೆ  ದುರಸ್ತಿ ಮಾಡುವಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ  ಕೊನೆಗೆ ಎಚ್ಚತ್ತ ಅಧಿಕಾರಿಗಳು  ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಎಂ.ಕೆ ಹುಬ್ಬಳ್ಳಿಯಿಂದ ನೇಗಿನಾಳ ಮಾರ್ಗವಾಗಿ ಬೈಲಹೊಂಗಲ ತಲುಪುವ ರಸ್ತೆ ಸಂಪೂರ್ಣ ನಾಶವಾಗಿತ್ತು. 1 ಕೀಮಿ ವರೆಗೂ ರಸ್ತೆ ಸಂಪೂರ್ಣ ಹಾಳಾಗಿದ್ದು, ತಗ್ಗು , ಗುಂಡಿಯಲ್ಲಿ  ಮಳೆ ನೀರು  ತುಂಬಿದ್ದರಿಂದ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿ ವಾಹನ ಸವಾರರು …

Read More »