ಚಿತ್ರದುರ್ಗ: ಆಕ್ಸಿಜನ್ ಬೆಡ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ, ಆರೋಗ್ಯಾಧಿಕಾರಿ ವಿರುದ್ಧ ದರ್ಪದಿಂದ ಮಾತನಾಡಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪ್ರವಾಸಿ ಮಂದಿರದ ಬಳಿ 50 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ವಾರ್ಡ್ ನಿರ್ಮಿಸಲಾಗಿದ್ದು, ಈ ಬಗ್ಗೆ ಶಾಸಕ ಎಂ.ಚಂದ್ರಪ್ಪ ಅವರಿಗೆ ಮಾಹಿತಿ ನೀಡಿದ ಆರೋಗ್ಯಾಧಿಕಾರಿ ಪಾಲಾಕ್ಷ, 50 ಬೆಡ್ ಗಳಲ್ಲಿ 10 ಬೆಡ್ ಗಳಿಗೆ ಮಾತ್ರ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. …
Read More »ಎರಡು ವರ್ಷ ಕಳೆದರು ಮುಗಿಯದ ಚಿತ್ರದುರ್ಗ ನಗರದ ರಸ್ತೆಗಳು; ಅಪಘಾತಗಳಿಗೆ ಇನ್ನೆಷ್ಟು ಬಲಿ!
ಚಿತ್ರದುರ್ಗ : ಅದು ಐತಿಹಾಸಿಕ ಖ್ಯಾತಿ ಹೊಂದಿರೋ ಹೆಸರಾಂತ ನಗರ ಚಿತ್ರದುರ್ಗ. ಅಲ್ಲಿ ರಸ್ತೆಗಳ ಅಭಿವೃದ್ದಿ, ಅಗಲೀಕರಣ ಮಾಡೋಕೆ ಪ್ರಾರಂಭ ಮಾಡಿ ಎರಡು ವರ್ಷಗಳೇ ಕಳಿಯುತ್ತಿವೆ. ಆದರೇ ಆ ಕಾಮಗಾರಿಗಳು ಮಾತ್ರ ಮುಗಿಯುವಂತೆ ಕಾಣುತ್ತಿಲ್ಲ. ಪರಿಣಾಮ ನಗರದ ಜನರು ಕಿರಿಕಿರಿ ಅನುಭವಿಸಿ ಸಾಕಾಗಿ ಹೋಗಿದ್ದಾರೆ. ಆ ರಸ್ತೆಗಳು ಬರು ಬರುತ್ತಾ ಸಾವಿನ ಕೂಪಗಳಾಗಿ ಜನರ ಪ್ರಣವನ್ನೇ ಬಲಿ ಪಡೆಯುವಂತಾಗಿವೆ. ಇದ್ರಿಂದ ಬೇಸತ್ತ ಜನರು ಜನರ ಹಿತ ಕಾಯದ ಜಿಲ್ಲಾಡಳಿತಕ್ಕೆ ಹಿಡಿ …
Read More »ವಿದ್ಯುತ್ ಲೈನ್ ಸಂಪರ್ಕವನ್ನು ಕಡಿತಗೊಳಿಸಿದ್ದಕ್ಕೆ ಬೆಸ್ಕಾಂ ಸಿಬ್ಬಂದಿಯ ಮೇಲೆ ಮಾರಕಾಸ್ತ್ರ ಹಾಗೂ ಚಪ್ಪಲಿಯಿಂದ ಹಲ್ಲೆ
ಚಿತ್ರದುರ್ಗ: ನೀರಾವರಿ ಪಂಪ್‍ಸೆಟ್‍ಗೆ ಅಕ್ರಮವಾಗಿ ಹಾಕಿಕೊಂಡಿದ್ದ ನಿರಂತರ ಜ್ಯೋತಿ ವಿದ್ಯುತ್ ಲೈನ್ ಸಂಪರ್ಕವನ್ನು ಕಡಿತಗೊಳಿಸಿದ್ದಕ್ಕೆ ಬೆಸ್ಕಾಂ ಸಿಬ್ಬಂದಿಯ ಮೇಲೆ ಮಾರಕಾಸ್ತ್ರ ಹಾಗೂ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬೆಸ್ಕಾಂ ಕಚೇರಿ ಬಳಿ ನಡೆದಿದೆ ಹಲವು ದಿನಗಳಿಂದ ಶಿವರಾಜ್ ಎನ್ನುವವರು ನಿಯಮಬಾಹಿರವಾಗಿ ವಿದ್ಯುತ್ ಸಂಪರ್ಕ ಹಾಕಿಕೊಂಡಿದ್ದರು. ಈ ಬಗ್ಗೆ ಲೈನ್‍ಮ್ಯಾನ್ ಕೇಶವ ಅವರು ಒಂದು ಬಾರಿ ಶಿವರಾಜ್‍ಗೆ ಎಚ್ಚರಿಕೆ ನೀಡಿದ್ದರು. ಆದರೆ ನಿನ್ನೆ …
Read More »ವಿನಯ್ ಕುಲಕರ್ಣಿ ಸಿಬಿಐ ವಿಚಾರಣೆ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ
ಚಿತ್ರದುರ್ಗ: ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಜೊತೆ ನಾನೂ ಮಾತನಾಡಿದ್ದೇನೆ. ನಾನು ಏನೂ ತಪ್ಪು ಮಾಡಿಲ್ಲ ಎಂದು ನನ್ನ ಬಳಿ ಹೇಳಿದ್ದಾನೆ. ಹೀಗಾಗಿ ವಿಚಾರಣೆ ಹಂತದಲ್ಲಿರುವಾಗ ನಾನು ಏನೂ ಹೇಳುವುದಿಲ್ಲ ಎಂದರು. ಕೊರೊನಾಗೆ ವ್ಯಾಕ್ಸಿನ್ ಬರುವ ತನಕ ಗ್ರಾ.ಪಂ. ಚುನಾವಣೆ …
Read More »ಏಕಾಏಕಿ ಹೆಚ್ಚಿದ ವಿಚಿತ್ರ ರೋಗದಿಂದ ಜನರಲ್ಲಿ ಆತಂಕ
ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸುಲೇನಹಳ್ಳಿಯಲ್ಲಿ 35ಕ್ಕೂ ಹೆಚ್ಚು ಜನರಿಗೆ ಜ್ವರ, ಮೈ-ಕೈ ನೋವು, ಕಾಲು ಊತ ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ಕಾಣಿಸಿಕೊಂಡಿರುವ ಈ ಖಾಯಿಲೆಯಿಂದ ಜನ ಹೈರಾಣುಗೊಂಡಿದ್ದಾರೆ. ಮೊಳಕಾಲ್ಮೂರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಏಕಾಏಕಿ ಹೆಚ್ಚಿದ ವಿಚಿತ್ರ ರೋಗದಿಂದ ಸುಲೇನಹಳ್ಳಿ ಜನರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Read More »ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ:ಶ್ರೀರಾಮುಲು
ಚಿತ್ರದುರ್ಗ: ನಾಡಿನ ಜನರು ಶ್ರೀರಾಮುಲುಗೆ ಒಳ್ಳೆಯದಾಗಬೇಕೆಂದು ಬಯಸುತ್ತಾರೆ. ಏನೇ ಸ್ಥಾನ ಕೊಟ್ಟರು ನಿಭಾಯಿಸುವ ಶಕ್ತಿ ಭಗವಂತ ನನಗೆ ನೀಡಿದ್ದಾನೆ. ಪಕ್ಷ ಯಾವ ತಿರ್ಮಾನ ಕೈಗೊಳ್ಳಲಿದೆ ಕಾದು ನೋಡುತ್ತೇನೆ ಅಂತ ಹೇಳುವ ಮೂಲಕ ಪರೋಕ್ಷವಾಗಿ ತಾವು ಡಿಸಿಎಂ ಸ್ಥಾನದ ಆಕಾಂಕ್ಷಿ ಎಂಬ ಸಂದೇಶದವನ್ನು ಸಚಿವ ಶ್ರೀರಾಮಲು ಪಕ್ಷಕ್ಕೆ ರವಾನಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ಪಟ್ಟಣದಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ದೆಹಲಿಗೆ …
Read More »4 ಕೋಟಿ ಮೌಲ್ಯದ ಗಾಂಜಾ ವಶ, ಸಹಶಿಕ್ಷಕ ಸೇರಿ ಐವರ ಸೆರೆ..!
ಚಿತ್ರದುರ್ಗ : ಹೊಲದಲ್ಲಿ ಗಾಂಜಾ ಬೆಳೆದಿದ್ದ ಸಹಶಿಕ್ಷಕ ಸೇರಿದಂತೆ ಐವರನ್ನು ಬಂಧಿಸಿ, 4 ಕೋಟಿ ಮೌಲ್ಯದ ಗಾಂಜಾ ಗಿಡ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಜಿ.ರಾಧಿಕಾ ತಿಳಿಸಿದರು. ಸಂಡೂರು ತಾಲೂಕಿನ ಅಂತಾಪುರ ಕೊರಚರಹಟ್ಟಿಯ ರುದ್ರೇಶ(45), ಮಹದೇವಪುರ ಗ್ರಾಮದ ಸಮಂತಗೌಡ(42), ಭೂ ಮಾಲೀಕ ಸಹ ಶಿಕ್ಷಕ ವೈ.ಜಂಬುನಾಥ(50), ಹೊಟೇಲ್ ಮಾಲೀಕ ಡಿ.ಬಿ.ಮಂಜುನಾಥ(45) ಹಾಗೂ ಡಿ.ವೈ ಮಂಜುನಾಥ(48) ಇವರುಗಳನ್ನು ಬಂಧಿಸಲಾಗಿದೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಮೊಳಕಾಲ್ಮೂರು ತಾಲ್ಲೂಕು ವಡೇರಹಳ್ಳಿ ಗ್ರಾಮದ ಜಮೀನಿನಲ್ಲಿ ಹೆಚ್ಚಿನ …
Read More »ಮಾರುತಿ ಕಾರ್ ಪಲ್ಟಿ: ಸ್ಥಳದಲ್ಲೇ ಇಬ್ಬರ ಸಾವು, ಐವರು ಗಂಭೀರ
ಚಿತ್ರದುರ್ಗ: ಭೀಕರ ಕಾರು ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಐದು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆನೆಸಿದರೆ ಗ್ರಾಮದ ಬಳಿ ಈ ಘಟನೆ ಸಂಭವಿಸಿದ್ದು, ಮಾರುತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 7 ಜನರ ಪೈಕಿ, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಉಳಿದ ಐದು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕಾಗಮಿಸಿದ ಸಿಪಿಐ ರಾಘವೇಂದ್ರ, …
Read More »ಹಂದಿ ಕಳ್ಳರಿಂದ ತ್ರಿಬಲ್ ಮರ್ಡರ್ – ಓರ್ವನ ಶಿರ ನಾಪತ್ತೆ
ಚಿತ್ರದುರ್ಗ: ಹಂದಿ ಕದಿಯಲು ಬಂದಿದ್ದ ಕಳ್ಳರು ಮೂವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ಮಾರೇಶ್ (50), ಯಲ್ಲೇಶ್ (30) ಮತ್ತು ಸೀನಪ್ಪ (30) ಕೊಲೆಯಾದ ದುರ್ದೈವಿಗಳು. ಒಂದು ವಾರದ ಹಿಂದೆ ನಾಯಕನಹಟ್ಟಿಗೆ ಬುಲೇರೊ ವಾಹನದಲ್ಲಿ ಬಂದಿದ್ದ ಆಂಧ್ರ ಮೂಲದ ಗುಂಪೊಂದು ನಿಮಗೆ ಪಾಠ ಕಲಿಸುವುದಾಗಿ ಎಚ್ಚರಿಕೆ ಕೊಟ್ಟು ತೆರಳಿದ್ದರು. ಹಂದಿ ವ್ಯಾಪಾರದ ವಿಚಾರದಲ್ಲಿ ಪರಸ್ಪರ ದ್ವೇಷವಿರಬಹುದೆಂಬ ಶಂಕೆ ನಾಯಕನಹಟ್ಟಿಯಲ್ಲಿ ವ್ಯಕ್ತವಾಗಿತ್ತು. …
Read More »ಪತ್ರಕರ್ತರ ಮೇಲೆ ಹಲ್ಲೆ ಜಿಲ್ಲಾಧಿಕಾರಿಗಳಿಗೆ ಮನವಿ
ಚಿತ್ರದುರ್ಗ,ಆ12(ಹಿಸ): ಬೆಂಗಳೂರಿನ ಡಿ.ಜಿ ಹಳ್ಳಿ ಮತ್ತು ಕೆ.ಆರ್.ಹಳ್ಳಿಗಳಲ್ಲಿ ನಡೆದಿರುವ ಗಲಭೆಯ ಸಂದರ್ಭದಲ್ಲಿ ಸುದ್ದಿ ಮಾಧ್ಯಮದ ಪ್ರತಿನಿಧಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹಲ್ಲೆಗೊಳಗಾದ ಪತ್ರಕರ್ತರಿಗೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಬೇಕು ಮತ್ತು ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಹಾಗೆಯೇ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಕೊಡ ಪತ್ರಕರ್ತರಿಗೆ ರಕ್ಷಣೆ ನೀಡುವಂತಹ ಸುರಕ್ಷಣಾ ಕಾನೂನು ಜಾರಿ ಮಾಡಬೇಕು ಎಂದು …
Read More »