Breaking News
Home / ಜಿಲ್ಲೆ / ಚಿತ್ರದುರ್ಗ / ಎರಡು ವರ್ಷ ಕಳೆದರು ಮುಗಿಯದ ಚಿತ್ರದುರ್ಗ ನಗರದ ರಸ್ತೆಗಳು; ಅಪಘಾತಗಳಿಗೆ ಇನ್ನೆಷ್ಟು ಬಲಿ!

ಎರಡು ವರ್ಷ ಕಳೆದರು ಮುಗಿಯದ ಚಿತ್ರದುರ್ಗ ನಗರದ ರಸ್ತೆಗಳು; ಅಪಘಾತಗಳಿಗೆ ಇನ್ನೆಷ್ಟು ಬಲಿ!

Spread the love

ಚಿತ್ರದುರ್ಗ : ಅದು ಐತಿಹಾಸಿಕ ಖ್ಯಾತಿ ಹೊಂದಿರೋ ಹೆಸರಾಂತ ನಗರ ಚಿತ್ರದುರ್ಗ. ಅಲ್ಲಿ ರಸ್ತೆಗಳ ಅಭಿವೃದ್ದಿ, ಅಗಲೀಕರಣ ಮಾಡೋಕೆ ಪ್ರಾರಂಭ ಮಾಡಿ ಎರಡು ವರ್ಷಗಳೇ ಕಳಿಯುತ್ತಿವೆ. ಆದರೇ ಆ ಕಾಮಗಾರಿಗಳು ಮಾತ್ರ  ಮುಗಿಯುವಂತೆ ಕಾಣುತ್ತಿಲ್ಲ. ಪರಿಣಾಮ ನಗರದ ಜನರು ಕಿರಿಕಿರಿ ಅನುಭವಿಸಿ ಸಾಕಾಗಿ ಹೋಗಿದ್ದಾರೆ. ಆ ರಸ್ತೆಗಳು ಬರು ಬರುತ್ತಾ ಸಾವಿನ ಕೂಪಗಳಾಗಿ ಜನರ ಪ್ರಣವನ್ನೇ ಬಲಿ ಪಡೆಯುವಂತಾಗಿವೆ. ಇದ್ರಿಂದ ಬೇಸತ್ತ ಜನರು ಜನರ ಹಿತ ಕಾಯದ ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕಿದ್ದಾರೆ. ನಿರ್ಮಾಣ ಹಂತದ ರಾಷ್ಟೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ನಾಮ ಪಲಕಗಳು ಇಲ್ಲದೇ ಅಪಘಾತಗಳು ಆಗಿರೋದನ್ನು ನೋಡಿದ್ದೇವೆ, ಕೇಳಿದ್ದೇವೆ. ಚಿತ್ರದುರ್ಗ ನಗರದಲ್ಲಿ‌ ರಸ್ತೆ ಕಾಮಗಾರಿ ಪ್ರಾರಂಭವಾದಾಗಿನಿಂದ ಜನರಿಗೆ ಒಂದಲ್ಲ ಒಂದು ಕಿರಿಕಿರಿ ತಪ್ಪಿದ್ದಲ್ಲ. ನಗರದ ಚಳ್ಳಕೆರೆ ಗೇಟ್ ನಿಂದ ಪ್ರವಾಸಿ ಮಂದಿರದ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ.

ಇದರಿಂದ ಈ ಮಾರ್ಗದಲ್ಲಿ ಸಂಚರಿಸೋ ಜನರು ಧೂಳು, ತಗ್ಗು ಗುಂಡಿಯಿಂದ ಯಮ ಯಾತನೆ ಅನುಭವಿಸಿಸುತ್ತಿದ್ದಾರೆ. ಇದೀಗ ಅರ್ಧಂಬರ್ಧವಾಗಿರೋ ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ  ಅವೈಜ್ಞಾನಿಕವಾಗಿ ರಸ್ತೆಗಳ ತಿರುವು ನೀಡಲಾಗಿದೆ. ಆದರೇ ಆ ರಸ್ತೆ ತಿರುವುಗಳಿಗೆ ಯಾವುದೇ ಮಾರ್ಗ, ನಮಫಲಕ, ಅಥವಾ ಬ್ಯಾರಿಕೆಡ್ ಹಾಕಿಲ್ಲ. ಅಲ್ಲದೇ ಜವಬ್ದಾರಿ ಇಲ್ಲದ ಗುತ್ತಿಗೆದಾರರು ಎಲ್ಲೆಂದರಲ್ಲಿ ರಸ್ತೆ ಬಗೆದು ಕಾಮಗಾರಿ ಮಾಡುತ್ತಿದ್ದಾರೆ. ಇದರಿಂದ ಅದೇ ರಸ್ತೆಯಲ್ಲಿ ನಿಂತಿದ್ದ ಇಟಾಚಿಗೆ ಕಾರೋಂದು ಡಿಕ್ಕಿ ಹೊಡೆದು ಕೆಂಚಪ್ಪ ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ.


Spread the love

About Laxminews 24x7

Check Also

ಮುರುಘಾ ಶ್ರೀ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ: ಸ್ಪೋಟಕ ಸಂಗತಿಗಳು ಬಹಿರಂಗ

Spread the love ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಅನಿಲ್‌ ನೇತೃತ್ವದಲ್ಲಿ ಪ್ರಕರಣದ ತನಿಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ