Breaking News

ಚಿಕ್ಕ ಮಂಗಳೂರು

ಶಾಲೆ ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್‌ ಅಭಾವದ ಬಿಸಿ – ಸೌದೆ ಒಲೆಯಲ್ಲೇ ಅಡುಗೆ ಮಾಡಿದ ಸಿಬ್ಬಂದಿ

ಚಿಕ್ಕಮಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಗ್ಯಾಸ್ ಅಭಾವ  ಶಾಲೆಗಳ ಬಿಸಿಯೂಟ ಯೋಜನೆ ಮೇಲೂ ಪರಿಣಾಮ ಬೀರಿದೆ. ಗ್ಯಾಸ್ ಇಲ್ಲದೇ ಮೂಡಿಗೆರೆ  ತಾಲೂಕಿನ ಕೊಟ್ಟಿಗೆಹಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ (School) ಸಿಬ್ಬಂದಿ ಅಡುಗೆ ಮಾಡಲು ಪರದಾಡಿದ್ದಾರೆ. ಸಿಲಿಂಡರ್‌ ಸರಬರಾಜಾಗದೇ ಇದ್ದಿದ್ದರಿಂದ ಶಾಲೆಯ ಸಿಬ್ಬಂದಿ ಸೌದೆ ಬಳಸಿ ಬಯಲಲ್ಲಿ ಬಿಸಿಯೂಟ ಸಿದ್ಧಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಶಾಲೆಯ ಸಿಬ್ಬಂದಿ, ಐದು ದಿನಗಳಿಂದ ಗ್ಯಾಸ್ ಇಲ್ಲದೆ ಸೌದೆಯಲ್ಲೇ ಅಡುಗೆ …

Read More »

ತಂದೆಯ ಅಂತ್ಯಸಂಸ್ಕಾರ ಮಾಡಿ, ಲಿಂಗ ಸಮಾನತೆ ಸಾರಿದ ಹೆಣ್ಣುಮಕ್ಕಳು

ಚಿಕ್ಕಮಗಳೂರು: ಪುರುಷ ಪ್ರಾಧಾನ್ಯತೆಯ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು, ಹೆಣ್ಣು ಮಕ್ಕಳೇ ತಮ್ಮ ತಂದೆಯ ಅಂತ್ಯಸಂಸ್ಕಾರ ನಡೆಸಿ ಲಿಂಗ ಸಮಾನತೆಯ ಸಂದೇಶ ಸಾರಿರುವ ಘಟನೆ ಚಿಕ್ಕಮಗಳೂರು  ಜಿಲ್ಲೆ ಕಡೂರು  ತಾಲೂಕಿನ ಚಪಟ್ಟಣದಲ್ಲಿ ನಡೆದಿದೆ. ಗುರುವಾರ (ಮಾ.12) ಬೀರೂರು ಪಟ್ಟಣದಲ್ಲಿ ಭಾವಸಾರ ಸಮಾಜದ ವಿಶ್ವನಾಥ ಎಂಬುವವರು ನಿಧನರಾಗಿದ್ದರು. ಮೃತ ವಿಶ್ವನಾಥ್ ಅವರಿಗೆ ಮಕ್ಕಳೇ ಇರಲಿಲ್ಲ. ಅವರ ಸಹೋದರರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಹೀಗಾಗಿ ಮೃತ ವಿಶ್ವನಾಥ್ ಸಹೋದರನ ಮಗಳು ಐಶ್ವರ್ಯ ಅವರೂ ನನ್ನ …

Read More »

ಮುತ್ತೋಡಿ ಅರಣ್ಯದಲ್ಲಿ ಭಾರೀ ಕಾಡ್ಗಿಚ್ಚು – ಅಪರೂಪದ ಸಸ್ಯರಾಶಿ ಬೆಂಕಿಗೆ ಆಹುತಿ

ಚಿಕ್ಕಮಗಳೂರು: ತಾಲೂಕಿನ  ಮುತ್ತೋಡಿ ಅರಣ್ಯ  ವಲಯದಲ್ಲಿ ಕಳೆದ 2 ದಿನಗಳಿಂದ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು  ಕಾಣಿಸಿಕೊಂಡಿದೆ. ಪರಿಣಾಮ ಅಪರೂಪದ ಅರಣ್ಯ ಸಂಪತ್ತು, ಜೀವ ಸಂಕುಲಕ್ಕೆ ಸಂಚಕಾರ ಎದುರಾಗಿದೆ. ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಕಾಡ್ಗಿಚ್ಚು ಹಬ್ಬಿರೋದು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಮುತ್ತೋಡಿ ಅರಣ್ಯ ವ್ಯಾಪ್ತಿಯ ಎಮ್ರಹಳ್ಳಿ ಮತ್ತು ಹೊಸಕಾನ್ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡದೆ. ಬಿಸಿಲ ಬೇಗೆಗೆ ಒಣಗಿದ ತರಗೆಲೆಗಳು ಮತ್ತು ಹುಲ್ಲಿನಿಂದಾಗಿ ಕ್ಷಣಾರ್ಧದಲ್ಲೇ ಕಿಲೋ …

Read More »

ಸಂಪರ್ಕಕ್ಕೇ ಸಿಗುತ್ತಿಲ್ಲ ಇರಾನ್‌ನಲ್ಲಿ ಕೆಲಸಕ್ಕೆ ಹೋದ ಕಾಫಿನಾಡ ಯುವಕ – ಕುಟುಂಬದಲ್ಲಿ ಆತಂಕ

ಚಿಕ್ಕಮಗಳೂರು: ಇರಾನ್ ಯುದ್ಧದ ಕೆನ್ನಾಲಗೆಗೆ ಸಿಲುಕಿರುವ ಚಿಕ್ಕಮಗಳೂರು  ಜಿಲ್ಲೆ ಕೊಪ್ಪ ತಾಲೂಕಿನ ಯುವಕ ಸಂಪರ್ಕಕ್ಕೆ ಸಿಗದ ಕಾರಣ ಕುಟುಂಬಸ್ಥರು ಆತಂಕಕ್ಕೀಡಾಗಿರುವ ಘಟನೆ ಕೊಪ್ಪ ತಾಲೂಕಿನ ಹಿರೇಕೂಡಿಗೆ ಗ್ರಾಮದಲ್ಲಿ ನಡೆದಿದೆ. ಸಂಪರ್ಕಕ್ಕೆ ಸಿಗದ ಮಗನ ಪತ್ತೆಗೆ ಪೋಷಕರು ರಾಜ್ಯ ಹಾಗೂ ಕೇಂದ್ರ ಸರ್ಕಾರದ  ಕದ ಬಡಿದಿದ್ದಾರೆ. ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮದ ನಿಶ್ಚಿತ್ ಎಂಬ ಯುವಕ ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಯುದ್ಧದ ಸುಳಿಯಲ್ಲಿ ಸಿಲುಕಿರುವ ಆತಂಕಕಾರಿ ವರದಿ ಲಭ್ಯವಾಗಿದೆ. …

Read More »

ಪಹಲ್ಗಾಮ್‌ ದಾಳಿಯಾದಾಗ ಸುಮ್ಮನಿದ್ದವ್ರು ಖಮೇನಿ ಹತ್ಯೆಗೆ ಪ್ರತಿಭಟಿಸ್ತಿದ್ದಾರೆ: ಮುತಾಲಿಕ್‌

ಚಿಕ್ಕಮಗಳೂರು: ಪಹಲ್ಗಾಮ್‌ ದಾಳಿಯಾದಾಗ  ಸುಮ್ಮನಿದ್ದವ್ರು ಖಮೇನಿ  ಹತ್ಯೆಗೆ ಪ್ರತಿಭಟಿಸುತ್ತಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌  ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಇರಾನ್ ಪರಮೋಚ್ಛ ನಾಯಕ ಖಮೇನಿ ಓರ್ವ ರಾಕ್ಷಸ. ಮಹಿಳೆಯರ ಮೇಲೆ ಅತ್ಯಂತ ದೌರ್ಜನ್ಯ ಎಸಗಿದವರ ಪರ ಪ್ರತಿಭಟನೆ ಮಾಡುವವರಿಗೆ ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದರು. ಇದೇ ವೇಳೆ, ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಶಿಯಾ ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದನ್ನು …

Read More »

ನಾನು ರೈತನ ಮಗ, ಕೃಷಿ ಅಧ್ಯಯನಕ್ಕೆ ವಿದೇಶ ಪ್ರವಾಸಕ್ಕೆ ಹೋಗ್ತಿದ್ದೇನೆ: ತಮ್ಮಯ್ಯ

ಚಿಕ್ಕಮಗಳೂರು: ನಾನೊಬ್ಬ ರೈತನ ಮಗನಾಗಿದ್ದು ಕೃಷಿ ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದು ಚಿಕ್ಕಮಗಳೂರು ಶಾಸಕ ಹೆಚ್‌.ಡಿ  ತಮ್ಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ನಾನು ಒಬ್ಬ ರೈತರ ಮಗ. ಒಬ್ಬ ಕೃಷಿಕ ಈಗ ಶಾಸಕನಾಗಿದ್ದೇನೆ. ಕೃಷಿ ವಿಚಾರ ತಿಳಿಯಲು ವಿದೇಶ ಪ್ರವಾಸಕ್ಕೆ ಹೋಗಿತ್ತಿದ್ದೇನೆ  ಎಂದು ತಿಳಿಸಿದ್ದಾರೆ. ಮೊದಲಿನಿಂದಲೂ ನಾನು ವಿದೇಶಕ್ಕೆ ಹೋಗಿ ಬರುತ್ತಿದ್ದೇನೆ. ಬೇರೆ ಬೇರೆ ದೇಶಗಳಲ್ಲಿ ಕೃಷಿ ಹೇಗಿದೆ ಎಂದು ನೋಡಬೇಕು. ಹಾಗಾಗಿ ಪ್ರವಾಸಕ್ಕೆ ಹೋಗ್ತಾ ಇದಿನಿ. …

Read More »

ತಾಯಿ ಬೈದಿದ್ದಕ್ಕೆ 7ನೇ ತರಗತಿ ಬಾಲಕಿ ಆತ್ಮಹತ್ಯೆ

ಚಿಕ್ಕಮಗಳೂರು: ತಾಯಿ ಬೈದಿದ್ದಕ್ಕೆ ಮನನೊಂದು ಏಳನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಚಿಕ್ಕಮಗಳೂರುಜಿಲ್ಲೆ, ಕೊಪ್ಪ ತಾಲೂಕಿನ ಜಯಪುರ ಸಮೀಪದ ಬಸರೀಕಟ್ಟೆ ಗ್ರಾಮದಲ್ಲಿ ನಡೆದಿದೆ. ಮೃತಳನ್ನು 13 ವರ್ಷದ ಸುಪ್ರಿತಾ ಎಂದು ಗುರುತಿಸಲಾಗಿದೆ. ಬಸರಿಕಟ್ಟೆ ಗ್ರಾಮದಲ್ಲಿ ಮೊಬೈಲ್ ಅಂಗಡಿಗೆ ಕೆಲಸಕ್ಕೆ ಹೋಗಿದ್ದ ತಾಯಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದರು. ಈ ವೇಳೆ ಸುಪ್ರಿತಾ ಟಿವಿ ನೋಡುತ್ತಿದ್ದಳು. ತಾಯಿ ಊಟ ಹಾಕಿ ಕೊಟ್ಟಾಗ ಸುಪ್ರಿತಾ ಟಿವಿ ನೋಡುತ್ತಾ ತಟ್ಟೆ ಬೀಳಿಸಿ …

Read More »

ಅಲ್ಪಸಂಖ್ಯಾತ ನಿಗಮ ಮಂಡಳಿ ಸಾಲದ ಬಡ್ಡಿ ಮನ್ನಾ – ಇದು ಸಂವಿಧಾನ ವಿರೋಧಿ ನಡೆ: ಸಿ.ಟಿ.ರವಿ ಕಿಡಿ

ಚಿಕ್ಕಮಗಳೂರು: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ  ಸಾಲದ  ಬಡ್ಡಿ ಮನ್ನಾ ಮಾಡಿರುವ ರಾಜ್ಯ ಸರ್ಕಾರದ ನೀತಿಯನ್ನ ತೀವ್ರವಾಗಿ ಖಂಡಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ  ಮುಖ್ಯಮಂತ್ರಿಗಳು ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ  ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಕೇವಲ ಒಂದು ಕೋಮಿನ ಜನರನ್ನು ಓಲೈಸುವ ರಾಜಕಾರಣ ಮಾಡುವುದು ಇತರ …

Read More »

ಚಿಕ್ಕಮಗಳೂರು ಡಿಸಿಸಿ ಬ್ಯಾಂಕಿಗೆ ಸಿ.ಟಿ.ರವಿ ಅಧ್ಯಕ್ಷ, ದಿನೇಶ್ ಹೊಸೂರು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್  ಅಧ್ಯಕ್ಷರಾಗಿ ಎಂಎಲ್‌ಸಿ ಸಿ.ಟಿ. ರವಿ ಹಾಗೂ ಉಪಾಧ್ಯಕ್ಷರಾಗಿ ಕೊಪ್ಪ ತಾಲೂಕಿನ ದಿನೇಶ್ ಹೊಸೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 13 ನಿರ್ದೇಶಕರ ಬಲ ಹೊಂದಿರುವ ಡಿಸಿಸಿ ಬ್ಯಾಂಕಿನಲ್ಲಿ ಬಿಜೆಪಿ 11 ಹಾಗೂ ಜೆಡಿಎಸ್ 2 ಸ್ಥಾನಗಳನ್ನು ಹೊಂದುವ ಮೂಲಕ ಮೈತ್ರಿಕೂಟವು ಸಂಪೂರ್ಣ ಹಿಡಿತ ಸಾಧಿಸಿತ್ತು. ಬಿಜೆಪಿಯಿಂದ ಸಿ.ಟಿ. ರವಿ ಅವರೊಂದಿಗೆ ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಮತ್ತು ಡಿ.ಎಸ್. ಸುರೇಶ್ ಅವರು ನೇಮಕಗೊಂಡಿದ್ದರೆ, …

Read More »

ಪ್ರತಿಮನೆಯ ಯಜಮಾನಿಗೆ 2000 ಸಾವಿರ ಕೊಟ್ಟು ಸಿದ್ದರಾಮಯ್ಯ ಅತ್ತೆ-ಸೊಸೆ ನಡುವೆ ಜಗಳ : ಸಿಎಂ ಇಬ್ರಾಹಿಂ ವ್ಯಂಗ್ಯ

ಚಿಕ್ಕಮಗಳೂರು : 2 ಸಾವಿರ ಕೊಟ್ಟು ಸಿದ್ದರಾಮಯ್ಯ ಅತ್ತೆ-ಸೊಸೆ ನಡುವೆ ಜಗಳ ತಂದಿಡುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. ಕಡೂರಿನಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಮನೆಯ ಯಜಮಾನಿಗೆ 2000 ರೂ ಹಣ ನೀಡುತ್ತಾರೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. 2 ಸಾವಿರ ಕೊಟ್ಟು ಸಿದ್ದರಾಮಯ್ಯ ಅತ್ತೆ-ಸೊಸೆ ನಡುವೆ ಜಗಳ ತಂದಿಡುತ್ತಾರೆ ಎಂದು ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಯ ಯಜಮಾನಿಗೆ 2000 …

Read More »