ಬೆಂಗಳೂರು: 27 ಜನರು ಕಳೆದ 24 ಗಂಟೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 100ಕ್ಕೆ ತಲುಪಿದೆ. ಭಾನುವಾರ ಸುಮಾರು 12 ಜನರನ್ನು ಕೊರೊನಾ ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇನ್ನು ಕೊರೊನಾ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಭಾನುವಾರ ಒಂದೇ ದಿನ ಸುಮಾರು 500ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ಸೋಂಕಿಂತರ ಸಂಖ್ಯೆ ದ್ವಿಗುಣವಾಗಿ ಏರಿಕೆಯಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ …
Read More »ಕೊರೊನಾ ಅಂಧಕಾರದ ವಿರುದ್ಧ ಬೆಳಕಿನ ಯುದ್ಧ – ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಜನ
ಬೆಂಗಳೂರು: ಮನುಕುಲದ ಹೆಮ್ಮಾರಿ, ಮಹಾಮಾರಿ, ಕೊರೊನಾ ವೈರಸ್ ಮೂಡಿಸಿರೋ ಅಂಧಕಾರ ಸಂಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಲೈಟ್ಸ್ ಆರಿಸಿ.. ದೀಪ ಹಚ್ಚಿ’ ಆಂದೋಲನ ಜನ ಭರ್ಜರಿ ಬೆಂಬಲ ಸೂಚಿಸಿದ್ದಾರೆ. ದೇಶಾದ್ಯಂತ ದೀಪಾವಳಿಯಂತೆ ಜನ ದೀಪ ಹಚ್ಚುತ್ತಿದ್ದಾರೆ. ಮನೆಗಳ ಲೈಟ್ಸ್ ಆಫ್ ಮಾಡಿ, ದೇವರ ಮನೆ, ಮನೆ ಒಳಗೆ, ಮನೆ ಆವರಣ, ತುಳಸಿ ಗಿಡ, ಬಾಲ್ಕನಿ, ಟೆರೆಸ್‍ಗಳಲ್ಲಿ ದೀಪ, ಮೇಣದ ಬತ್ತಿ, ಮೊಬೈಲ್ ಫ್ಲ್ಯಾಶ್ ಹಾಗೂ ಟಾರ್ಚ್‍ಗಳ …
Read More »ಹುಬ್ಬಳ್ಳಿಯಲ್ಲಿ ಆಸ್ಪತ್ರೆಗೆ ನುಗ್ಗಿ ಜನರ ಮೇಲೆ ಉಗುಳಿದಾತ ಪೊಲೀಸರ ವಶಕ್ಕೆ
ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ನಡುವೆ ಆಸ್ಪತ್ರೆಗೆ ನುಗ್ಗಿ ಜನರ ಮೇಲೆ ಉಗುಳುವ ಮೂಲಕ ಸೋಂಕು ಹರಡಲು ಯತ್ನಿಸಿದ ಕಿಡಿಗೇಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ಆಜಾದ್ ಪಾರ್ಕ್ ನಿವಾಸಿ ಇನಾಯತ್ ಉಲ್ಲಾಖಾನ್ ಈ ಕೃತ್ಯವೆಸೆಗಿದ ಆರೋಪಿ ಎಂದು ಗುರುತಿಸಲಾಗಿದೆ. ಗದಗ ರಸ್ತೆ ಇಸಿಎಸ್‍ಎಚ್ ಆಸ್ಪತ್ರೆಗೆ ಮಾರ್ಚ 3ರ ಮಧ್ಯಾಹ್ನ 1 ಗಂಟೆಗೆ ಏಕಾಏಕಿ ಪ್ರವೇಶ ಮಾಡಿದಲ್ಲದೇ, ಅಲ್ಲಿದ್ದ ಜನರ ಮೇಲೆ ಇನಾಯತ್ ಉಗುಳಿದ್ದಾನೆ. ಕೊರೊನಾ ಸೋಂಕು ಪರಸ್ಪರ ಅಂತರ …
Read More »ಭಾರತಕ್ಕೆ ಬೇಕಾಗಿರುವುದು ಮಹಾಪುರುಷರ ಸಿದ್ಧಾಂತಗಳು ಹೊರತು ದೀಪಗಳಲ್ಲ:ಸತೀಶ ಜಾರಕಿಹೊಳಿ
ಗೋಕಾಕ:ಭಾರತಕ್ಕೆ ಬೇಕಾಗಿರುವುದು ಮಹಾಪುರುಷರ ಸಿದ್ಧಾಂತಗಳು ಹೊರತು ದೀಪಗಳಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಂದೇಶ ಸಾರುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ಇಂದು ನಗರದ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಮಕ್ಕಳ ಜೊತೆ “ಇಂಡಿಯಾ ನಿಡ್ಸ್ ಗ್ರೆಟ್ ಪೀಪಲ್ಸ್ ಐಡಿಯೊಲೊಜಿ ನೊಟ್ ಲ್ಯಾಂಪ್ಸ್” ಎಂಬ ಸಂದೇಶ ಬರೆದ ಪಟ ಮತ್ತು ಮಹಾ ಮಾನವತಾವಾದಿಗಳಾದ ಬುದ್ದ, ಬಸವ ಮತ್ತು ಅಂಬೇಡ್ಕರ್ ಅವರ ಚಿತ್ರವನ್ನು ಹಿಡಿದು ಈ ಸಂದೇಶ ಸಾರಿ …
Read More »ಭಾರತಕ್ಕೆ ಬೇಕಾಗಿರುವುದು ಮಹಾಪುರುಷರು ಸಾರಿದ ಸಿದ್ದಾಂತಗಳು ಹೊರತು ದೀಪಗಳಲ್ಲ: ಸತೀಶ ಜಾರಕಿಹೊಳಿ
ಗೋಕಾಕ:ಭಾರತಕ್ಕೆ ಬೇಕಾಗಿರುವುದು ಮಹಾಪುರುಷರ ಸಿದ್ಧಾಂತಗಳು ಹೊರತು ದೀಪಗಳಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಂದೇಶ ಸಾರುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ಇಂದು ನಗರದ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಮಕ್ಕಳ ಜೊತೆ “ಇಂಡಿಯಾ ನಿಡ್ಸ್ ಗ್ರೆಟ್ ಪೀಪಲ್ಸ್ ಐಡಿಯೊಲೊಜಿ ನೊಟ್ ಲ್ಯಾಂಪ್ಸ್” ಎಂಬ ಸಂದೇಶ ಬರೆದ ಪಟ ಮತ್ತು ಮಹಾ ಮಾನವತಾವಾದಿಗಳಾದ ಬುದ್ದ, ಬಸವ ಮತ್ತು ಅಂಬೇಡ್ಕರ್ ಅವರ ಚಿತ್ರವನ್ನು ಹಿಡಿದು ಈ ಸಂದೇಶ ಸಾರಿ …
Read More »“ಕೊರೋನಾ ವೈರಸ್ ಹರಡದಂತೆ ಕ್ರಮ ಕೈಗೊಳ್ಳಲು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚನೆ”
“ಕೊರೋನಾ ವೈರಸ್ ಹರಡದಂತೆ ಕ್ರಮ ಕೈಗೊಳ್ಳಲು ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚನೆ” ಬೆಳಗಾವಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ,ಕೊರೋನಾ ವೈರಸ್ ಹರಡದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೈಗೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳನ್ನು ಪರಿಶೀಲಿಸುವ ಕುರಿತು ಇಲಾಖೆಯ ನಿರ್ದೇಶಕರು ಹಾಗೂ ಎಲ್ಲ ಜಿಲ್ಲೆಗಳ ಉಪನಿರ್ದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ …
Read More »ಕೊರೊನಾ ವಿರುದ್ಧದ ಹೋರಾಟದಲ್ಲಿ ಮೋದಿಗೆ ನನ್ನ ಬೆಂಬಲವಿದೆ: ಹೆಚ್‍ಡಿಡಿ
ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ. ಕೊರೊನಾ ವೈರಸ್ ನಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಜೊತೆಗೆ ಇಂದು ದೇಶದ ಹಲವಾರು ನಾಯಕರಿಗೆ ಕರೆ ಮಾಡಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಬೆಂಬಲ ಸೂಚಿಸುವಂತೆ ಕೋರುತ್ತಿದ್ದಾರೆ. ಅಂತಯೇ ದೇವೇಗೌಡರಿಗೂ ಕರೆ ಮಾಡಿದ್ದು, ನಾನು ಬೆಂಬಲ …
Read More »ರಾಜ್ಯದಲ್ಲಿ 7 ಮಂದಿಗೆ ಕೊರೊನಾ, ಐವರಿಗೆ ಜಮಾತ್ ನಂಟು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 151ಕ್ಕೆ ಏರಿದೆ. ಶನಿವಾರ ಏಕಾಏಕಿ 16 ಮಂದಿ ಸೋಂಕಿತರು ಪತ್ತೆಯಾಗಿದ್ದರೆ, ಇಂದು 7 ಜನರಿಗೆ ಕೊರೊನಾ ತಗುಲಿರುವುದು ದೃಢವಾಗಿದೆ. ಈ ಪೈಕಿ 5 ಕೇಸ್‍ಗಳು ದೆಹಲಿಯ ತಬ್ಲಿಘಿ ಧರ್ಮ ಸಭೆಗೆ ಹೋಗಿ ಬಂದವರೇ ಆಗಿದ್ದಾರೆ. ಬೆಳಗಾವಿಯ ನಾಲ್ವರು, ಬಳ್ಳಾರಿಯ ಒಬ್ಬರ ಜೊತೆ ದುಬೈನಿಂದ ಬೆಂಗಳೂರಿಗೆ ಆಗಮಿಸಿದ ವೃದ್ಧ ದಂಪತಿಗೆ ಸೋಂಕು ಬಂದಿದೆ. ರೋಗಿ 145 – ಬೆಂಗಳೂರಿನ 68 ವರ್ಷದ ವೃದ್ಧ. ದುಬೈಗೆ …
Read More »ಗ್ರಾಮಸ್ಥರು, ಆಶಾ ಕಾರ್ಯಕರ್ತೆ ಜೊತೆ ನಾವಿದ್ದೇವೆ ಎಂದು ಕೂಗಿ ಹೂಮಳೆಯ ಸ್ವಾಗತ
ಯಾದಗಿರಿ: ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾದಗಿರಿಯ ಜನ ಹೂಮಳೆಯ ಸ್ವಾಗತ ಮಾಡಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಆರೋಗ್ಯ ತಪಾಸಣೆಗೆ ತೆರಳಿದ್ದ ಆಶಾ ಕಾರ್ಯಕರ್ತರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿ ಕೆಲವರು ವಿಕೃತಿ ಮೆರೆದಿದ್ದರು. ಆದರೆ ಯಾದಗಿರಿ ಜಿಲ್ಲೆಯ ಬೆಳೆಗೇರಾ ಗ್ರಾಮದಲ್ಲಿ ಕೊರೊನಾ ಜಾಗೃತಿಗೆ ತೆರಳಿದ್ದ ಆಶಾ ಕಾರ್ಯಕರ್ತೆರಿಗೆ ಗ್ರಾಮದ ಎಲ್ಲಾ ಓಣಿಗಳಲ್ಲಿ ಕೈಯಲ್ಲಿ ಹೂ ಹಿಡಿದು ನಿಂತು ಅವರ ಮೇಲೆ …
Read More »ಸರ್ಕಾರಕ್ಕೆ ವೈದ್ಯರಿಗೆ ಸಹಕಾರ ನೀಡದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು :ಸಂಸದೆ ಶೋಭಾ ಕರಂದ್ಲಾಜೆ
ಉಡುಪಿ: ದೇಶದಲ್ಲಿ ಕೊರೊನಾ ಜಿಹಾದ್ ನಡೆಯುತ್ತಿದೆ. ಸರ್ಕಾರಕ್ಕೆ ವೈದ್ಯರಿಗೆ ಸಹಕಾರ ನೀಡದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೊರೊನಾ ರೋಗಿ ವೈದ್ಯರನ್ನು ತಬ್ಬಿಕೊಳ್ಳುತ್ತಾರೆ. ನರ್ಸ್ ಗಳಿಗೆ ರೋಗ ಹಬ್ಬಿಸುವ ಧಮ್ಕಿ ಹಾಕಿದ್ದಾರೆ. ಇದು ಭಯೋತ್ಪಾದನೆಯ ಮುಂದುವರಿದ ಭಾಗ. ಕ್ವಾರಂಟೈನ್‍ನಲ್ಲಿ ಇರುವ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಕಠಿಣವಾದ ಕಾನೂನು ದೇಶದಲ್ಲಿ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಕೊರೊನಾ ವಿಚಾರದಲ್ಲಿ …
Read More »
Laxmi News 24×7