Breaking News

ರಾಜ್ಯ

ಆನ್‌ಲೈನ್‌‌ನಲ್ಲಿ ದ್ರಾಕ್ಷಿ ಮಾರಾಟಕ್ಕೆ‌ ವ್ಯವಸ್ಥೆ : ಸಚಿವ ಬಿ.ಸಿ.ಪಾಟೀಲ್

ವಿಜಯಪುರ, ಏ. 7: ರೈತ ಸಮುದಾಯಕ್ಕಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ.ಹೀಗಾಗಿ ರೈತ ಸಮುದಾಯಕ್ಕೆ‌ ಅನುಕೂಲವಾಗಲೆಂದು ಕೃಷಿ ಉತ್ಪನ್ನಗಳ ಸುಲಲಿತ ಮಾರಾಟಕ್ಕೆ ಅಂತರಾಜ್ಯ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಸಚಿವರು ಕೊರೊನಾ ಹಿನ್ನಲೆಯಲ್ಲಿ ರೈತ ಮತ್ತು ಕೃಷಿ ಚಟುವಟಿಕೆಗಳ ಕುರಿತು ಜಿಲ್ಲಾ ಕೃಷಿ, ತೋಟಗಾರಿಕೆ, ಆರೋಗ್ಯ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. …

Read More »

ಶಂಕಿತ ಕೊರೊನಾಗೆ ಮಗು ಹಂಸಲೇಖ ಬಲಿ

ಶಂಕಿತ ಕೊರೊನಾಗೆ ಮಗು ಹಂಸಲೇಖ ಬಲಿ ಯಾದಗಿರಿ, ಶಹಾಪುರಃ ಕೊರೊನಾ ವೈರಸ್ ಶಂಕಿತ ಕ್ವಾರಂಟೈನ್ ನಲ್ಲಿದ್ದ ಮಗುವೊಂದ ಕೆಮ್ಮು, ಜ್ವರದಿಂದ ಬಳಲಿ‌ ಅಸುನೀಗದ ಘಟನೆ ಜಿಲ್ಲೆಯ ಶಹಾಾಪುರ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ನಡೆದಿದೆ. ಹಂಸಲೇಖ ತಂದೆ ರಾಮಪ್ಪ ಹೊಸಮನಿ (4) ಎಂಬ ಮಗುವೇ ಶಂಕಿತ ಕೊರೊನಾದಿಂದ ಮೃತಪಟ್ಟಿದೆ ಎನ್ನಲಾಗಿದೆ. ಮಗುವಿನ ಪಾಲಕರು ಬೆಂಗಳೂರಿನಲ್ಲಿ‌ ಕೆಲಸ‌ ಮಾಡುತ್ತಿದ್ದು, ಕೊರೊನಾ ಹಾವಳಿಗೆ ಇಡಿ ದೇಶ ಲಾಕ್ ಡೌನ್ ಆದ ಹಿನ್ನೆಲೆ ಅವರು ಏಪ್ರೀಲ್ …

Read More »

ಕ್ವಾರಂಟೈನ್ ಕೋಣೆ ಮುಂದೆಯೇ ಮಲವಿಸರ್ಜಿಸಿ ವಿಕೃತಿ – ತಬ್ಲಿಘಿಗಳ ವಿರುದ್ಧ ಕೇಸ್

ನವದೆಹಲಿ: ಕೊರೊನಾ ಕ್ವಾರಂಟೈನ್ ಕೋಣೆಯ ಮುಂದೆಯೇ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಇಬ್ಬರು ತಬ್ಲಿಘಿಗಳು ಕ್ವಾರಂಟೈನ್ ಕೊಠಡಿಯ ಮುಂದೆಯೇ ಮಲವಿಸರ್ಜನೆ ಮಾಡಿ ವಿಕೃತಿ ಮರೆದಿರುವಂತಹ ಘಟನೆ ನರೇಲಾ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಕ್ವಾರಂಟೈನ್ ಕೋಣೆಯ ಮುಂದೆ ಮುಲವಿಸರ್ಜನೆ ಮಾಡಿದ ಇಬ್ಬರ ಮೇಲೆ ದೂರು ದಾಖಲಾಗಿದೆ. ಈ ಇಬ್ಬರು ಆರೋಪಿಗಳು ಉತ್ತರ ಪ್ರದೇಶದ ಬರಾಬಂಕಿ ನಿವಾಸಿಗಳಾಗಿದ್ದು, ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ …

Read More »

ಪ್ರಾಣದ ಹಂಗು ತೊರೆದು ಪೇಂಟರ್ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ನೆಲಮಂಗಲ: ಬಣ್ಣ ಬಳಿಯಲು ಹೋಗಿ ಸುಮಾರು 12 ಅಡಿ ಆಳದ ನೀರಿನ ಸಂಪ್‍ಗೆ ಬಿದ್ದು ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದವರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಪ್ರಾಣದ ಹಂಗು ತೊರೆದು ರಕ್ಷಿಸಿ ಹೀರೋ ಆಗಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಸುಭಾಷ್ ನಗರದಲ್ಲಿ ಘಟನೆ ನಡೆದಿದ್ದು, ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದ ವ್ಯಕ್ತಿ ಒಟ್ಟು ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ …

Read More »

ಮದ್ಯ ಮಾರಾಟಕ್ಕೆ ಅನುಮತಿ ಕೋರಿದ್ದ ವೈದ್ಯರಿಗೆ 10 ಸಾವಿರ ದಂಡ

ಬೆಂಗಳೂರು: ಲಾಕ್‍ಡೌನ್ ವೇಳೆ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದ ಮನೋವೈದ್ಯರಿಗೆ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸಿದೆ. ಕೊರೊನಾ ವೈರಸ್ ಹಾವಳಿ ತಡೆಗಟ್ಟುವ ಸಂಬಂಧ ದೇಶದಲ್ಲಿ ಲಾಕ್‍ಡೌನ್ ಜಾರಿಯಾಗಿದ್ದು ಎಲ್ಲ ರಾಜ್ಯ ಸರ್ಕಾರಗಳು ಮದ್ಯ ಮಾರಾಟಕ್ಕೆ ನಿಷೇಧ ಹೇರಿದೆ. ಕರ್ನಾಟಕದಲ್ಲೂ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಖ್ಯಾತ ಮನೋವೈದ್ಯ ವಿನೋದ್ ಕುಲಕರ್ಣಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಪಿಐಎಲ್ ಸಲ್ಲಿಸಿದ್ದರು. …

Read More »

ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸುವ ದುಬಾರೆ ಸಾಕಾನೆ ಶಿಬಿರಕ್ಕೂ ಲಾಕ್‍ಡೌನ್ ಎಫೆಕ್ಟ್

ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸುವ ದುಬಾರೆ ಸಾಕಾನೆ ಶಿಬಿರಕ್ಕೂ ಲಾಕ್‍ಡೌನ್ ಎಫೆಕ್ಟ್ ತಟ್ಟಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಪರಿಸ್ಥಿತಿ ಸಾಕಾನೆಗಳ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಆಗಿದೆ. ಶಿಬಿರದಲ್ಲಿರುವ ಆನೆಗಳಿಗೆ ಹೊಟ್ಟೆ ತುಂಬಾ ಆಹಾರ ಬಳಲುತ್ತಿವೆ. ಲಾಕ್‍ಡೌನ್ ಹಿನ್ನೆಲೆ ಆಹಾರ ಪೂರೈಕೆಯಾಗಿಲ್ಲ. ಆನೆಗಳಿಗೆ ಪ್ರತಿದಿನ ಆಹಾರ ನೀಡುತ್ತಿದ್ದ ಭತ್ತದ ಹುಲ್ಲು, ಬೆಲ್ಲದ ಕೊರತೆ ಉಂಟಾಗಿದೆ. ಮಾವುತರು, ಕಾವಡಿಗರಿಗೂ ಅಗತ್ಯ ವಸ್ತುಗಳ ಕೊರತೆಯಾಗಿದೆ. …

Read More »

ಲಾಕ್ ಡೌನ್ ಏಪ್ರೀಲ್ 14ರ ಬಳಿಕವೂ ಮುಂದುವರೆದರೆ  ದಿನ ಪ್ರತಿ 3 ಗಂಟೆ ಮದ್ಯದಂಗಡಿಗಳನ್ನು ತೆರೆಯಲು  ರಾಜ್ಯ ಸರ್ಕಾರ ಚಿಂತನೆ

ಬೆಳಗಾವಿ:  ಭಾರತ್ ಲಾಕ್ ಡೌನ್ ಏಪ್ರೀಲ್ 14ರ ಬಳಿಕವೂ ಮುಂದುವರೆದರೆ  ಮದ್ಯ ವ್ಯಸನಿಗಳಿಗಾಗಿ ದಿನ ಪ್ರತಿ 3 ಗಂಟೆ ಮದ್ಯದಂಗಡಿಗಳನ್ನು ತೆರೆಯಲು  ರಾಜ್ಯ ಸರ್ಕಾರ ನೀಡಲು ಚಿಂತನೆ ನಡೆಸಿದೆ. ಕೊರೊನಾದಿಂದಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಅಗತ್ಯ ವಸ್ತುಗಳ ದೊರೆಯುವಂತಹ ಅಂಗಡಿಗಳನ್ನು ಹೊರತು ಪಡೆಸಿ ಉಳಿದೆಲ್ಲವನ್ನು ಬಂದ್ ಮಾಡಲಾಗಿದೆ.  ಇದರಿಂದ ರಾಜ್ಯದಲ್ಲಿ ಮದ್ಯ ಚಟಕ್ಕೆ ಒಳಗಾಗಿರುವವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ ಕಾರಣ ಪ್ರತಿ ದಿನ ಮೂರು ಗಂಟೆ ಮಾತ್ರ …

Read More »

ಕ್ವಾರಂಟೈನ್‍ಗಳಿಂದ ಬ್ರಾಂಡೆಡ್ ಬೇಡಿಕೆ – ಉಡುಪಿಯಲ್ಲಿ ಹೊಸ ತಲೆನೋವು ಶುರು

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಕ್ವಾರಂಟೈನ್‍ನಲ್ಲಿರುವ ಜನರ ಕಿರಿಕ್ ಜಾಸ್ತಿಯಾಗುತ್ತಿದೆ. ನಮಗೆ ಬ್ರಾಂಡೆಡ್ ಐಟಂ ಬೇಕು ಅಂತ ಸಿಬ್ಬಂದಿಗೆ ಒತ್ತಡ ಹಾಕುತ್ತಿದ್ದಾರೆ. ಉಡುಪಿ ಜಿಲ್ಲೆಯ ನರ್ಸ್, ಆಶಾ ಕಾರ್ಯಕರ್ತರಿಗೆ ಕ್ವಾರಂಟೈನ್‍ಗಳು ದುಂಬಾಲು ಬೀಳುತ್ತಿದ್ದಾರೆ. ವಿದೇಶದಿಂದ ಬಂದ ವ್ಯಕ್ತಿಗಳ ಕುಟುಂಬಕ್ಕೆ ಜಿಲ್ಲಾಡಳಿತ ಒಂದು ತಿಂಗಳ ಕಾಲ ಹೋಂ ಕ್ವಾರಂಟೈನ್ ವಿಧಿಸಿತ್ತು. ಕುಟುಂಬದ ಯಾವ ಸದಸ್ಯರು ಹೊರಗೆ ಬಾರದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಕಾರ್ಯಕರ್ತರು ದಿಗ್ಬಂಧನ ಹಾಕಿದ್ದರು. ಒಂದು ಕುಟುಂಬಕ್ಕೆ ಬೇಕಾದ …

Read More »

ಧಾರವಾಡದಲ್ಲಿ ಕೊರೋನಾ ಪ್ರಕರಣ ಜೀರೋ ಹಂತಕ್ಕೆ ಬಂದಿದೆ; ಸಚಿವ ಜಗದೀಶ್‌ ಶೆಟ್ಟರ್ ಸಂತಸ

ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯಲ್ಲಿ ಮಾತ್ರ ಕೊರೋನಾ ವೈರಸ್‌ ಪತ್ತೆಯಾಗಿತ್ತು. ಇದೀಗ ಅವರಿಗೂ ಚಿಕಿತ್ಸೆ ನೀಡಿ ಗುಣಪಡಿಸಲಾಗಿದ್ದು ಧಾರವಾಡದಲ್ಲಿ ಯಾರೂ ಕೊರೋನಾ ಸೋಂಕಿತರ ಇಲ್ಲದಿರುವುದು ಸಂತಸದ ವಿಚಾರವಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್‌ ತಿಳಿಸಿದ್ದಾರೆ. ಇಂದು ಧಾರವಾಡದಲ್ಲಿ ಕರೊನಾ ಮಾನಸಿಕ ಸಹಾಯವಾಣಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಶೆಟ್ಟರ್, “ಧಾರವಾಡದಲ್ಲಿ ಆರಂಭದಲ್ಲೇ ಒಂದು ಕೇಸ್ ಪಾಸಿಟಿವ್ ಆಗಿತ್ತು. ಆದರೆ, ಈಗ ಅವರು ಗುಣಮುಖರಾಗಿರುವುದು ಸಂತಸ ತಂದಿದೆ. ಕಿಮ್ಸ್‌ನಲ್ಲಿ ನಿರಂತರ ಚಿಕಿತ್ಸೆ ಕೊಡಿಸಿ ಗುಣಪಡಿಸಲಾಗಿದೆ. …

Read More »

ಭಾರತ ಸರ್ಕಾರ ಶಿಫಾರಸು ಮಾಡಿದ ಔಷಧಿಗೆ ವಿಶ್ವಾದ್ಯಂತ ಭಾರೀ ಬೇಡಿಕೆ

ನವದೆಹಲಿ(ಏ. 06): ಕೊರೋನಾ ವೈರಸ್ ಸೋಂಕು ನಿವಾರಣೆಗೆ ಇನ್ನೂ ಆಧಿಕೃತವಾಗಿ ಮದ್ದು ಘೋಷಿಸಿಲ್ಲ. ಈಗಲೂ ವಿಶ್ವಾದ್ಯಂತ ಔಷಧಿ ಕಂಡುಹಿಡಿಯಲು ಪ್ರಯೋಗಗಳಾಗುತ್ತಿವೆ. ಒಂದೆರಡು ದೇಶಗಳಲ್ಲಿ ಔಷಧಿ ಕಂಡು ಹಿಡಿದು ಮಾನವರ ಮೇಲೆ ಪ್ರಯೋಗಗಳು ಮಾತ್ರ ಬಾಕಿ ಇವೆ. ಸದ್ಯಕ್ಕೆ ಇರುವ ಕೊರೋನಾ ರೋಗಿಗಳಿಗೆ ಆಯಾ ದೇಶದ ವೈದ್ಯರು ಬೇರೆ ಬೇರೆ ಕಾಯಿಲೆಗಳಿಗೆ ಬಳಕೆಯಲ್ಲಿರುವ ಔಷಧಗಳನ್ನು ಪ್ರಯೋಗಾತ್ಮಕವಾಗಿ ನೀಡುತ್ತಿದ್ದಾರೆ. ಭಾರತ ಸರ್ಕಾರ ಕೆಲ ದಿನಗಳ ಹಿಂದೆ ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಔಷಧವನ್ನು ಕೊರೋನಾ ಸೋಂಕಿತರ …

Read More »