ಪಾಟ್ನಾ: ಕ್ವಾರಂಟೈನ್ ಕೇಂದ್ರದಲ್ಲಿರುವ ವ್ಯಕ್ತಿಯೊಬ್ಬ ತಿಂಡಿಗೆ 40 ಚಪಾತಿ, ಊಟಕ್ಕೆ 10 ಪ್ಲೇಟ್ ಅನ್ನವನ್ನು ತಿನ್ನುವುದನ್ನು ನೋಡಿ ಅಧಿಕಾರಿಗಳು ಸುಸ್ತುಗಿದ್ದಾರೆ. ಈ ರೀತಿ ತಿನ್ನುವ ವ್ಯಕ್ತಿಯನ್ನು ಅನುಪ್ ಓಜಾ ಎಂದು ಗುರುತಿಸಲಾಗಿದೆ. ಈತ ದಿನದಲ್ಲಿ ತಿಂಡಿಗೆ ಬರೋಬ್ಬರಿ 40 ಚಪಾತಿಗಳನ್ನು ತಿಂದಿದ್ದಾನೆ. ಜೊತೆಗೆ ಊಟದ ಸಮಯದಲ್ಲಿ ಹತ್ತು ಪ್ಲೇಟ್ ಅನ್ನವನ್ನು ತಿಂದಿದ್ದಾನೆ. ಈ ಅಧುನಿಕ ಬಕಾಸುರನನ್ನು ನೋಡಿದ ಅಲ್ಲಿ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ. ಈ ಘಟನೆ ಬಿಹಾರದ ಬಕ್ಸಾರ್ ನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ …
Read More »ದೇಶದಲ್ಲಿ ದಾಖಲೆ ಸೋಂಕು ಪತ್ತೆ – ಜಾಗತಿಕ ಮಟ್ಟದಲ್ಲಿ 9ನೇ ಸ್ಥಾನದಲ್ಲಿ ಭಾರತ
ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಮತ್ತೊಂದು ಹೊಸ ದಾಖಲೆ ಬರೆದಿದೆ. ಕಳೆದ 24 ಗಂಟೆಯಲ್ಲಿ 7,466 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಒಂಭತ್ತನೇ ಸ್ಥಾನಕ್ಕೆ ಏರಿದೆ. ಭಾರತದಲ್ಲಿ ಈವರೆಗೂ 1,65,799 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ 1,60,979 ಸೋಂಕಿತರು ಹೊಂದಿ ಒಂಭತ್ತನೇ ಸ್ಥಾನದಲ್ಲಿದ್ದ ಟರ್ಕಿಯನ್ನು ಹಿಂದಿಕ್ಕಿದೆ. ಇತ್ತಿಚೀಗಷ್ಟೇ ಭಾರತ, ಪೆರು, ಇರಾನ್, ಕೆನಡಾವನ್ನು ಹಿಂದಿಕ್ಕಿ ಹತ್ತನೇ ಸ್ಥಾನದಲ್ಲಿತ್ತು. ಇಂದಿನ ವರದಿಯಲ್ಲಿ …
Read More »ಕೊರೊನಾ ತೊಲಗಿಸಲು ಅರ್ಚಕನೋರ್ವ ನರ ಬಲಿ ನೀಡಿರುವ ಆಘಾತಕಾರಿ ಘಟನೆ ನಡೆದಿದೆ.
ಭುವನೇಶ್ವರ: ಕೊರೊನಾ ತೊಲಗಿಸಲು ಅರ್ಚಕನೋರ್ವ ನರ ಬಲಿ ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಒಡಿಶಾದ ಕಟಕ್ ಜಿಲ್ಲೆಯ ನರಸಿಂಗ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಧಾಹೂಡಾದ ಬಳಿಯ ಬಂಧಾ ಮಾ ಬುಧ ಬ್ರಾಹ್ಮಿಣಿ ದಿ ದೇವಸ್ಥಾನದ ಹಿರಿಯ ಅರ್ಚಕ ಸನ್ಸಾರಿ ಓಝಾ(72) ಈ ಕೃತ್ಯ ಎಸಗಿದ್ದಾನೆ. ಬುಧವಾರ ರಾತ್ರಿ ಘಟನೆ ನಡೆದಿದ್ದು, ಕೊರೊನಾ ವೈರಸ್ ತೊಲಗಿಸುವಂತೆ ಮನುಷ್ಯನನ್ನು ಬಲಿ ಕೊಟ್ಟಿದ್ದಾನೆ. ಸ್ಥಳೀಯ ವ್ಯಕ್ತಿಯ ರುಂಡವನ್ನೇ ಕತ್ತರಸಿ, ಪೂಜೆ ಸಲ್ಲಿಸಿದ್ದಾನೆ. ಕೃತ್ಯ ಎಸಗುತ್ತಿದ್ದಂತೆ …
Read More »ಪ್ರೀತಿಸಿ ಓಡಿಹೋದ ಜೋಡಿಯೊಂದು ಕ್ವಾರಂಟೈನ್ ಕೇಂದ್ರದಲ್ಲಿ ಮದುವೆ
ಭುವನೇಶ್ವರ್: ಮಹಾಮಾರಿ ಕೊರೊನಾ ವೈರಸ್ ಪ್ರಪಂಚದಾದ್ಯಂತ ಭಾರೀ ಕೋಲಾಹಲ ಸೃಷ್ಟಿ ಮಾಡಿದೆ. ಹಾಗೆಯೇ ಪ್ರೀತಿಸಿ ಓಡಿಹೋದ ಜೋಡಿಯೊಂದು ಕ್ವಾರಂಟೈನ್ ಕೇಂದ್ರದಲ್ಲಿ ಮದುವೆಯಾದ ಘಟನೆ ಒಡಿಶಾದಲ್ಲಿ ನಡೆದಿದೆ. ಈ ಜೋಡಿ ಕಳೆದ ಜನವರಿಯಲ್ಲಿ ತಮ್ಮ ತಮ್ಮ ಮನೆಯಿಂದ ಹೊರಬಂದಿದ್ದಾರೆ. ಪುರಿ ಜಿಲ್ಲೆಯ ಸಗದ ಗ್ರಾಮದ ಸೌರಭ್ ದಾಸ್(19) ಭಾನುವಾರ ತನ್ನ ಪ್ರಿಯತಮೆ ಪಿಂಕ್ಯಾರಾಣಿ ದಾಸ್ ಳನ್ನು 14 ದಿನಗಳ ಕ್ವಾರಂಟೈನ್ ಮುಗಿಸಿ ಕೇಂದ್ರದಲ್ಲೇ ಮದುವೆಯಾಗಿದ್ದಾನೆ. ಸೌರಭ್ ತನ್ನ ಪ್ರಿಯತಮೆಯೊಂದಿಗೆ ಜನವರಿ ತಿಂಗಳಲ್ಲಿ …
Read More »ಮಹಾರಾಷ್ಟ್ರದ ನಾಗಪೂರ,ಹಾಗು ವಿಧರ್ಭ ಭಾಗದಲ್ಲಿ ಮಿಡತೆ ದಾಳಿ,ಈ ದಾಳಿ ಕರ್ನಾಟಕದ ಗಡಿ ಜಿಲ್ಲೆಗೆ ನುಗ್ಗುವ ಆತಂಕ
ಬೆಳಗಾವಿ- ಮಹಾರಾಷ್ಟ್ರದ ನಾಗಪೂರ,ಹಾಗು ವಿಧರ್ಭ ಭಾಗದಲ್ಲಿ ಮಿಡತೆ ದಾಳಿ ವಿಪರೀತವಾಗಿದ್ದು,ಈ ದಾಳಿ ಕರ್ನಾಟಕದ ಗಡಿ ಜಿಲ್ಲೆಗೆ ನುಗ್ಗುವ ಆತಂಕ ಶುರುವಾಗಿದೆ. ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮಿಡತೆ ದಾಳೆ ಎದುರಾಗುವ ಆತಂಕವಿದ್ದು ಗಡಿ ಜಿಲ್ಲೆಗಳಾದ,ಗುಲ್ಬರ್ಗ, ರಾಯಚೂರ,ವಿಜಯಪೂರ,ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಶಿ,ರಾಶಿ ಮಿಡತೆಗಳು ಹೊಲಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮಹಾರಾಷ್ಟ್ರದ ವಿಧರ್ಭ ಭಾಗದಲ್ಲಿ ಮಿಡತೆ ದಾಳಿಯಿಂದ ರೈತರು ಕಂಗಾಲಾಗಿದ್ದು, ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲೂ ಮಿಡತೆ …
Read More »ಡಿಜೆ ಹಳ್ಳಿಯ ಎಸ್.ಕೆ.ಗಾರ್ಡನ್ ಸ್ಲಂ ಈಗ ಸಿಲಿಕಾನ್ ಸಿಟಿ ಬೆಂಗಳೂರಿನ ಜನರ ನಿದ್ದೆಯನ್ನ ನಿದ್ದೆಗೆಡಿಸಿದೆ.
ಬೆಂಗಳೂರು: ಡಿಜೆ ಹಳ್ಳಿಯ ಎಸ್.ಕೆ.ಗಾರ್ಡನ್ ಸ್ಲಂ ಈಗ ಸಿಲಿಕಾನ್ ಸಿಟಿ ಬೆಂಗಳೂರಿನ ಜನರ ನಿದ್ದೆಯನ್ನ ನಿದ್ದೆಗೆಡಿಸಿದೆ. ಹೌದು. ಡಿ.ಜೆ.ಹಳ್ಳಿ ಮೂಲದ 34 ವರ್ಷದ ಮಹಿಳೆಗೆ ಕೊರೊನಾ ಸೋಂಕು ಪತ್ತೆ ಪ್ರಕರಣ ಈಗ ತಲೆ ಬಿಸಿಗೆ ಕಾರಣವಾಗಿದೆ. ಮಹಿಳೆಯನ್ನು ರೋಗಿ-2180 ಗುರುತಿಸಲಾಗಿದ್ದು, ಅವರ ಪ್ರಯಾಣದ ಹಿನ್ನೆಲೆ ಜನರನ್ನು ಬೆಚ್ಚಿಬೀಳಿಸುವಂತಿದೆ. ಮಹಿಳೆ ಮೇ 25ರಂದು ಉಸಿರಾಟದ ಸಮಸ್ಯೆ ಎಂದು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬೋರಿಂಗ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿದಾಗ …
Read More »ಅಭಿಷೇಕ್ ಮುಂದಿನ ಸಿನಿಮಾಗೆ ಸೂರಿ ಆ್ಯಕ್ಷನ್ ಕಟ್?
ಬೆಂಗಳೂರು: ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಒಂದೊಳ್ಳೆ ಬ್ರೇಕ್‍ಗಾಗಿ ಎದುರು ನೋಡುತ್ತಿದ್ದು, ಉತ್ತಮ ಕಥೆಗಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಇದೀಗ ಚಂದನವನದ ಖ್ಯಾತ ನಿರ್ದೇಶಕರೊಬ್ಬರು ಅಭಿಷೇಕ್ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಮೂಲಕ ಒಂದೊಳ್ಳೆ ಸಿನಿಮಾ ಮಾಡಲು ಅಭಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಅಭಿಷೇಕ್ ಸ್ಯಾಂಡಲ್‍ವುಡ್‍ನಲ್ಲಿ ಬೆಳೆಯಬೇಕು ಎಂಬುದು ಅಂಬರೀಶ್ ಅವರ ಮಹದಾಸೆಯಾಗಿತ್ತು. ಹೀಗಾಗಿಯೇ ಅಮರ್ ಸಿನಿಮಾಕ್ಕೆ ಸ್ವತಃ ಅವರೇ ಮಹೂರ್ತ ಮಾಡಿದ್ದರು. …
Read More »ಕೊರೊನಾ ವೈರಸ್’ ಸಿನಿಮಾ ಟ್ರೇಲರ್‌ನೊಂದಿಗೆ ಭಯ ಹುಟ್ಟಿಸುತ್ತಿರೋ ಆರ್‌ಜಿವಿ
ಹೈದರಾಬಾದ್: ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ (ಆರ್‌ಜಿವಿ) ಸಮಾಜದಲ್ಲಿ ಟ್ರೆಂಡಿಂಗ್‍ನಲ್ಲಿರುವ ವಿಚಾರಗಳೊಂದಿಗೆ ಸಿನಿಮಾ ಮಾಡಿ ಹಲವು ಬಾರಿ ಗೆಲುವು ಪಡೆದಿದ್ದಾರೆ. ಸದ್ಯ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಕುರಿತು ರಾಮ್‍ಗೋಪಾಲ್ ವರ್ಮಾ ಫೀಚರ್ ಫಿಲ್ಮ್ ಮಾಡಿರುವುದಾಗಿ ತಿಳಿಸಿದ್ದಾರೆ. ಇಂದು ಆರ್‌ಜಿವಿ ತಮ್ಮ ಹೊಸ ಸಿನಿಮಾ ‘ಕೊರೊನಾ ವೈರಸ್’ ಟ್ರೇಲರನ್ನು ಯೂಟ್ಯೂಬ್‍ನಲ್ಲಿ ಬಿಟುಗಡೆ ಮಾಡಿದ್ದು, 4 ನಿಮಿಷ ಅವಧಿಯ ಟ್ರೇಲರ್ ನೋಡುತ್ತಿದ್ದಂತೆ ಪ್ರೇಕ್ಷಕರಲ್ಲಿ ಭಯ ಹುಟ್ಟಿಸುವಂತಿದೆ. …
Read More »ರಮೇಶ ಜಾರಕಿಹೊಳಿಯವರ ಪ್ರವಾಸದ ವಿವರ…….ಮೇ.27ರಿಂದ ಬೆಳಗಾವಿ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ
ಬೆಳಗಾವಿ: ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಮೇ.27ರಿಂದ ಬೆಳಗಾವಿ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮೇ.27ರಂದು ಬೆಳಿಗ್ಗೆ9.30ಕ್ಕೆ ಗೋಕಾಕ್ ನಿರ್ಗಮನ, 10.30ಕ್ಕೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಆಹ್ವಾಲ ಸ್ವೀಕಾರ, ಮಧ್ಯಾಹ್ನ 2 ಗಂಟೆಗೆ ಬೆಳಗಾವಿಯಿಂದ ಮೈಸೂರಿಗೆ ತೆರಳಿ ವಾಸವ್ಯ. ಮೇ .28ರಂದು ಬೆಳಿಗ್ಗೆ 8ಗಂಟೆಗೆ ಸುತ್ತೂರು ಮಹಾಸಂಸ್ಥಾನದ ಸ್ವಾಮಿಜೀಯೊಂದಿಗೆ ಮಾತುಕತೆ, 9 ಗಂಟಗೆ ಗಣಪತಿ ಸಚ್ಛಿದಾನಂದ ಆಶ್ರಮಕ್ಕೆ ಭೇಟಿ, 11.30ಕ್ಕೆ ಮೈಸೂರಿಂದ …
Read More »ರಾಜ್ಯದಲ್ಲಿ ಇನ್ನೂ ಒಂದು ವಾರ ಉತ್ತಮ ಮಳೆ ಸಾಧ್ಯತೆ
ಬೆಂಗಳೂರು, ಮೇ 26- ರಾಜ್ಯದ ಒಳನಾಡಿನಲ್ಲಿ ಇನ್ನೊಂದು ವಾರದವರೆಗೂ ಉತ್ತಮ ಮಳೆಯಾಗುವ ಮುನ್ಸೂಚನೆ ಗಳಿವೆ. ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ನೈರುತ್ಯ ಮುಂಗಾರು ಆರಂಭಕ್ಕೂ ಮುನ್ನ ರಾಜ್ಯದಲ್ಲಿ ಒಂದು ವಾರ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು. ರಾಜ್ಯದಲ್ಲಿ ಚದುರಿದಂತೆ ಕೆಲವು …
Read More »
Laxmi News 24×7