ನವದೆಹಲಿ, ಜೂ.17- ಭಾರತದ ವಿರುದ್ಧ ಕಾಲುಕೆರೆದು ಸಂಘರ್ಷ ಉಂಟುಮಾಡಿದ್ದಲ್ಲದೆ 20 ಯೋಧರನ್ನು ಹತ್ಯೆ ಮಾಡಿರುವ ಪ್ರತೀಕಾರಕ್ಕೆ ಭಾರತ ಸನ್ನದ್ಧವಾಗಿದ್ದು, ಸೈನಿಕರ ತ್ಯಾಗವನ್ನು ಮರೆಯುವುದಿಲ್ಲ ಎನ್ನುವ ಮೂಲಕ ಚೀನಾಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. 20 ಯೋಧರ ತ್ಯಾಗವನ್ನು ರಾಷ್ಟ್ರ ಎಂದಿಗೂ ಮರೆಯುವುದಿಲ್ಲ. ಸೈನಿಕರ ಸಾವು ಅತ್ಯಂತ ನೋವು ತಂದಿದೆ. ಇದಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಪರೋಕ್ಷವಾಗಿ ಚೀನಾ ರಾಷ್ಟ್ರವನ್ನು ಉಲ್ಲೇಖಿಸದೆ ಭಾರತ ಸಮರಕ್ಕೆ ಸಿದ್ಧ …
Read More »ವಿಪರೀತ ಮಳೆ ಲಾರಿ ಪಲ್ಟಿ- 190 ಚೀಲ ಸಕ್ಕರೆ ಎಗರಿಸಿದ ಜನ………
ಬೆಳಗಾವಿ: ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ಥವ್ಯವಸ್ಥವಾಗಿದ್ದು, ನದಿಗಳ ಒಳಹರಿವು ಹೆಚ್ಚಾಗಿ ರಸ್ತೆಗಳು ಬಂದ್ ಆಗಿವೆ. ಇದರ ಮಧ್ಯೆಯೇ ಸಕ್ಕರೆ ಸಾಗಿಸುತ್ತಿದ್ದ ಲಾರಿ ಮೊಗಚಿ ಬಿದ್ದಿದೆ. ಬೆಳಗಾವಿ ತಾಲೂಕಿನ ಸುತಗತ್ತಿ ಗ್ರಾಮದ ಸಮೀಪ ತಡರಾತ್ರಿ ಘಟನೆ ನಡೆದಿದ್ದು, ಮಹಾರಾಷ್ಟ್ರದ ಓಲಂ ಸಕ್ಕರೆ ಕಾರ್ಖಾನೆಯಿಂದ 300 ಚೀಲ ಸಕ್ಕರೆ ಹೊತ್ತು ಲಾರಿ ರಾಜ್ಯಕ್ಕೆ ಆಗಮಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. …
Read More »ಅತ್ತ ಗಡಿಯಲ್ಲಿ ಚೀನಿಯರ ಕಿರಿಕ್ ಬೆನ್ನಲ್ಲೇ ಇತ್ತ ಪಾಕ್ ಪುಂಡಾಟಿಕೆ………….
ಶ್ರೀನಗರ, ಜೂ.17- ಇಂಡೋ-ಚೀನಾ ಗಡಿಯಲ್ಲಿ ಉಭಯ ಸೇನಾ ಪಡೆಗಳ ನಡುವೆ ಬಿಕ್ಕಟ್ಟು ಉಲ್ಬಣಗೊಂಡಿರುವಾಗಲೇ ಅತ್ತ ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲೂ ಪಾಕಿಸ್ತಾನ ಸೇನಾಪಡೆಗಳ ಪುಂಡಾಟ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ನೌಗಂ ಬಳಿ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನಾ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ನಿನ್ನೆ ರಾತ್ರಿ ಪಾಕಿಸ್ತಾನ ಸೈನಿಕರು ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ …
Read More »ಶಿವಮೊಗ್ಗದಲ್ಲಿ ಕೊರನ್ ಮಹಾಮಾರಿಗೆ ಮೊದಲ ಬಲಿ
ಶಿವಮೊಗ್ಗ: ಕೊರೊನಾ ಮಹಾಮಾರಿಗೆ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದ ಮೊದಲ ಘಟನೆಯಾಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲದ 70 ವರ್ಷದ ವೃದ್ಧೆ ಮೂಲವ್ಯಾಧಿ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗೆಂದು ಕಳೆದ ಮೂರು ದಿನದ ಹಿಂದೆ ಮೆಗ್ಗಾನ್ ಆಸ್ಪತ್ರೆಗೆ ಸ್ವತಃ ಅವರೇ ಆಗಮಿಸಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ಆದರೆ ಈ …
Read More »507 ವೈದ್ಯರು ಬುಧವಾರ ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.
ಬೆಂಗಳೂರು: ಹಲವು ಬಾರಿಯ ಮನವಿ ನಂತರವೂ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ 507 ವೈದ್ಯರು ಬುಧವಾರ ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಕೋರಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದರು. ಆದರೆ ಇದಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ರಾಜೀನಾಮೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ. …
Read More »ಕೊರೊನಾ ಕಾಲದ ಕಷ್ಟಕ್ಕೆ ಮಿಡಿದರು ಪ್ರಥಮ್………..
ಯಾವುದೇ ಸಂಕಷ್ಟಗಳೆದುರಾದರೂ ತಕ್ಷಣಕ್ಕೆ ಸಹಾಯಕ್ಕೆ ಮುಂದಾಗುವ ಮನಸ್ಥಿತಿಯ ಒಂದಷ್ಟು ಮಂದಿ ಚಿತ್ರರಂಗದಲ್ಲಿದ್ದಾರೆ. ಈ ತಲೆಮಾರಿನಲ್ಲಿ ಆ ಹಾದಿಯಲ್ಲಿ ಅಗ್ರಸ್ಥಾನ ಗಳಿಸಿಕೊಳ್ಳುವಂತಹ ವ್ಯಕ್ತಿತ್ವ ಹೊಂದಿರುವವರು ಪ್ರಥಮ್. ಕೊರೊನಾ ಮಹಾಮಾರಿಯಿಂದಾದ ಅನಾಹುತಗಳ ಸಂದರ್ಭದಲ್ಲಿಯೂ ಪ್ರಥಮ್ ಅಂತದ್ದೇ ಮನಸ್ಥಿತಿಯಿಂದ ಮತ್ತಷ್ಟು ಜನರ ಮನ ಗೆದ್ದಿದ್ದರು. ಇದೀಗ ಕೊಂಚ ಮುಂದೂಡಲ್ಪಟ್ಟರೂ ನಟಭಯಂಕರ ಚಿತ್ರದ ತಂತ್ರಜ್ಞರಿಗೆ, ಕಾರ್ಮಿಕರಿಗೆ ಅವರು ಆಹಾರ ಕಿಟ್ ಮತ್ತು ತಲಾ ಮೂರು ಸಾವಿರ ರೂಪಾಯಿಗಳನ್ನು ಕೊಡುವ ಮೂಲಕ ನೆರವಾಗಿದ್ದಾರೆ. ಕೊರೊನಾ ಮಾರಿ ವಕ್ಕರಿಸದೇ …
Read More »ಣ್ಣೆ ಏಟಿನಲ್ಲಿ 250 ಜನರಿಗೆ ಕಚ್ಚಿ ಓರ್ವನ ಸಾವಿಗೆ ಕಾರಣವಾಗಿದ್ದ ಮಂಗ.
ಲಕ್ನೋ: ಎಣ್ಣೆ ಏಟಿನಲ್ಲಿ 250 ಜನರಿಗೆ ಕಚ್ಚಿ, ಓರ್ವನ ಸಾವಿಗೆ ಕಾರಣವಾಗಿದ್ದ ಮಂಗವು ಜೀವಾವಧಿ ಶಿಕ್ಷೆಗೆ ಗುರಿಯಾದ ಘಟನೆ ಉತ್ತರ ಪ್ರದೇಶ ಮಿರ್ಜಾಪುರದಲ್ಲಿ ನಡೆದಿದೆ. ಮಿರ್ಜಾಪುರ ಜಿಲ್ಲೆಯ ನಿವಾಸಿ ಅತೀಂದ್ರಿಯ ಎಂಬವರು ‘ಕಲುವಾ’ ಹೆಸರಿನ ಮಂಗವನ್ನು ಸಾಕಿದ್ದರು. ಆದರೆ ಅವರು ಅದಕ್ಕೆ ನಿಯಮಿತವಾಗಿ ಮದ್ಯ ಕುಡಿಸುತ್ತಿದ್ದರು. ನಿಧಾನವಾಗಿ ಕೋತಿ ಮದ್ಯ ವ್ಯಸನಿಯಾಗಿತ್ತು. ಈ ಮಧ್ಯೆ ಅತೀಂದ್ರಿಯ ಮೃತಪಟ್ಟಿದ್ದರಿಂದ ಕೋತಿಗೆ ಮದ್ಯ ನೀಡುವವರೇ ಇಲ್ಲದಂತಾಗಿತ್ತು. ಕಲುವಾ ಮದ್ಯಕ್ಕಾಗಿ ಸ್ಥಳೀಯರ ಮೇಲೆ ಹಲ್ಲೆ …
Read More »200 ವರ್ಷದ ಹಳೆಯದಾದ ಶಿವನ ದೇವಾಲಯ ಪತ್ತೆ…….
ಹೈದರಾಬಾದ್: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಸುಮಾರು 200 ವರ್ಷ ಹಳೆಯ ಶಿವ ದೇವಾಲಯ ಪತ್ತೆಯಾಗಿದೆ. ಪೆನ್ನಾ ನದಿ ಪಾತ್ರದಲ್ಲಿ ದೇವಾಲಯ ಪತ್ತೆಯಾಗಿದೆ. ಮರಳು ಗಣಿಗಾರಿಕೆ ವೇಳೆ ಶಿವ ದೇವಾಲಯ ಕಂಡು ಜನರು ಅಚ್ಚರಿಗೆಗೊಳಗಾಗಿದ್ದಾರೆ. ಸುಮಾರು 200 ವರ್ಷ ಹಳೆಯ ದೇಗುಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.ದೇಗುಲದ ಗೋಪುರ ಕಾಣಿಸಿಕೊಂಡಿದ್ದು, ಕಲ್ಲುಗಳಿಂದ ಮಾಡಲ್ಪಟ್ಟಿದೆ. ಗೋಪುರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಮರಳಿನಲ್ಲಿ ಹುದುಗಿರುವ ದೇವಾಲಯ ತೆಗೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ …
Read More »ನನಗೆ ಒಬ್ಬನೇ ಮಗ- ಕಣ್ಣೀರಿಟ್ಟ ಕರ್ನಲ್ ಸಂತೋಷ್ ಬಾಬು ತಾಯಿ…….
ಹೈದರಾಬಾದ್: ನನಗೆ ಒಬ್ಬನೇ ಮಗ ಎಂದು ಹುತಾತ್ಮ ಯೋಧ ಕರ್ನಲ್ ಸಂತೋಷ್ ಬಾಬು ಅವರ ತಾಯಿ ಕಣ್ಣೀರಿಟ್ಟಿದ್ದಾರೆ. ಭಾರತ-ಚೀನಾ ಮಧ್ಯೆ ಯುದ್ಧದ ಕಾರ್ಮೋಡ ಆವರಿಸುತ್ತಿದೆ. ಪದೇ ಪದೇ ಕಿರಿಕ್ ಮಾಡುವ ಚೀನಾ, ಯುದ್ಧೋನ್ಮಾದದಲ್ಲೇ ತೇಲಾಡುತ್ತಿದೆ. ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ಭಾರತೀಯ ಸೇನೆ ಕರ್ನಲ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಇಂದು ರಾತ್ರಿ ಬಂದ ಮಾಹಿತಿ ಪ್ರಕಾರ ಒಟ್ಟು 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ …
Read More »ಅಶೋಕ ವೆಂಕಪ್ಪ ಚಂದರಗಿ ಅವರನ್ನು ಎಂಎಲ್ಸಿ ಮಾಡುವಂತೆ
ಬೆಳಗಾವಿ: ಸಮಸ್ತ ಕರ್ನಾಟಕ ವಿಶೇಷವಾಗಿ ಉತ್ತರ ಕರ್ನಾಟಕ ಜಿಲ್ಲೆಗಳ ಜ್ಞಾನ ಅನುಭವ ಹೊಂದಿರುವ ಪ್ರಮುಖ ಕನ್ನಡ ಹೋರಾಟಗಾರ ಅಶೋಕ ವೆಂಕಪ್ಪ ಚಂದರಗಿ ಅವರನ್ನು ಎಂಎಲ್ಸಿ ಮಾಡುವಂತೆ ಕನ್ನಡಪರ ಹೋರಾಟಗಾರರ ಒಕ್ಕೂಟ ಆಗ್ರಹಿಸಿದೆ. ಇಂದು ಸಂಯುಕ್ತ ಸುದ್ದಿಗೋಷ್ಠಿಯಲ್ಲಿ ಕರವೇ ಮಹಾದೇವ ತಳವಾರ ಮತ್ತು ಹಿರಿಯ ಕನ್ನಡ ಮುಖಂಡರು ರಾಜ್ಯ ಬಿಜೆಪಿ ಸರಕಾರ ಮತ್ತು ಎಲ್ಲ ರಾಜಕೀಯ ಪಕ್ಷಗಳನ್ನು ಆಗ್ರಹಿಸಿದ್ದಾರೆ. ಕನ್ನಡ ನಾಡು-ನುಡಿ, ನೆಲ -ಜಲ ಹಾಗೂ ಸಾಮಾಜಿಕ ಸೇವಾ ವಲಯದಲ್ಲಿ ನೈಜ …
Read More »
Laxmi News 24×7