Breaking News

ಣ್ಣೆ ಏಟಿನಲ್ಲಿ 250 ಜನರಿಗೆ ಕಚ್ಚಿ ಓರ್ವನ ಸಾವಿಗೆ ಕಾರಣವಾಗಿದ್ದ ಮಂಗ.

Spread the love

ಲಕ್ನೋ: ಎಣ್ಣೆ ಏಟಿನಲ್ಲಿ 250 ಜನರಿಗೆ ಕಚ್ಚಿ, ಓರ್ವನ ಸಾವಿಗೆ ಕಾರಣವಾಗಿದ್ದ ಮಂಗವು ಜೀವಾವಧಿ ಶಿಕ್ಷೆಗೆ ಗುರಿಯಾದ ಘಟನೆ ಉತ್ತರ ಪ್ರದೇಶ ಮಿರ್ಜಾಪುರದಲ್ಲಿ ನಡೆದಿದೆ.

ಮಿರ್ಜಾಪುರ ಜಿಲ್ಲೆಯ ನಿವಾಸಿ ಅತೀಂದ್ರಿಯ ಎಂಬವರು ‘ಕಲುವಾ’ ಹೆಸರಿನ ಮಂಗವನ್ನು ಸಾಕಿದ್ದರು. ಆದರೆ ಅವರು ಅದಕ್ಕೆ ನಿಯಮಿತವಾಗಿ ಮದ್ಯ ಕುಡಿಸುತ್ತಿದ್ದರು. ನಿಧಾನವಾಗಿ ಕೋತಿ ಮದ್ಯ ವ್ಯಸನಿಯಾಗಿತ್ತು. ಈ ಮಧ್ಯೆ ಅತೀಂದ್ರಿಯ ಮೃತಪಟ್ಟಿದ್ದರಿಂದ ಕೋತಿಗೆ ಮದ್ಯ ನೀಡುವವರೇ ಇಲ್ಲದಂತಾಗಿತ್ತು.

ಕಲುವಾ ಮದ್ಯಕ್ಕಾಗಿ ಸ್ಥಳೀಯರ ಮೇಲೆ ಹಲ್ಲೆ ಮಾಡಲು ಆರಂಭಿಸಿತ್ತು. ಕೋತಿಯು 250ಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದರು. ಇದರಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾಗಿ ಅರಣ್ಯ ಮತ್ತು ಮೃಗಾಲಯದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ಸೆರೆ ಹಿಡಿದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾನ್ಪೂರ್ ಮೃಗಾಲಯದ ವೈದ್ಯ ಮೊಹಮ್ಮದ್ ನಾಸಿರ್, “ನಾವು ಕೋತಿಯನ್ನು ಕೆಲವು ತಿಂಗಳು ಪ್ರತ್ಯೇಕವಾಗಿ ಇರಿಸಿ ಬಳಿಕ ಮೃಗಾಲಯದ ಪ್ರತ್ಯೇಕ ಪಂಜರಕ್ಕೆ ಸ್ಥಳಾಂತರಿಸಿದ್ದೆವು. ಈಗಲೂ ಕಲುವಾ ನಡವಳಿಕೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಆಕ್ರಮಣಕಾರಿಯಾಗಿ ಉಳಿದಿದ್ದಾನೆ. ಅವನನ್ನು ಇಲ್ಲಿಗೆ ಕರೆತಂದು ಮೂರು ವರ್ಷಗಳಾಗಿವೆ. ಆದರೆ ಈಗ ಕಲುವಾ ಜೀವನದುದ್ದಕ್ಕೂ ಸೆರೆಯಲ್ಲಿಯೇ ಇರುತ್ತಾನೆ ಎಂದು ನಿರ್ಧರಿಸಲಾಗಿದೆ” ಎಂದು ಹೇಳಿದರು.

ಆರು ವರ್ಷದ ಕೋತಿ ಕಲುವಾನನ್ನು ಮೃಗಾಲಯದಿಂದ ಮುಕ್ತಗೊಳಿಸಿದರೆ ಅದು ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಕಲುವಾ ಈವರೆಗೆ ತನ್ನ ಕೇಜ್ ಕೀಪರ್ ಜೊತೆಗೂ ಸ್ನೇಹ ಬೆಳೆಸಿಲ್ಲ. ಹೀಗಾಗಿ ಅದು ಮೃಗಾಲಯದಲ್ಲಿ ಇರುವುದೇ ಸೂಕ್ತ ಎಂದು ಮೊಹಮ್ಮದ್ ನಾಸಿರ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಎಲ್ಲಾ ಶಾಸಕರು ಪಂಚಮಸಾಲಿ ‌ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಇಲ್ಲವಾದ್ರೆ ಜನರಿಂದ ನೀವು ದೂರವಾಗು ಕಾಲ ಬರಲಿದೆ.

Spread the love2A ಮೀಸಲಾಗಿಗೆ ಆಗ್ರಹಿಸಿ ಪಂಚಮಸಾಲಿ ‌ಶ್ರೀ‌ಹೋರಾಟಕ್ಕೆ ಕರೆ. ಡಿಸೆಂಬರ್ ‌10ರಂದು ಬೆಳಗಾವಿ ನಗರಕ್ಕೆ ಟ್ರ್ಯಾಕ್ಟರ್, ಕ್ರೂಸರ್ ನಿಷೇಧ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ