ಬೆಂಗಳೂರು: ಅತ್ಯಾಚಾರ ಆರೋಪದಡಿ ಬಂಧಿಸಲ್ಪಟ್ಟಿರುವ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಖ್ಯಾತಿಯ ನಟ ಮಡೆನೂರು ಮನುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 3ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ. ಈ ಹಿಂದೆ ಖಾಸಗಿ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ಮನು ಭಾಗಿಯಾಗಿದ್ದರು. ಅದೇ ಶೋನಲ್ಲಿ ಭಾಗಿಯಾಗಿದ್ದ ಸಹ ಸ್ಪರ್ಧಿಯೊಬ್ಬರು ನೀಡಿದ್ದ ದೂರಿನನ್ವಯ ಮನು ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಕಾಮಿಡಿ ಕಾರ್ಯಕ್ರಮವೊಂದಕ್ಕೆ 2022ರಲ್ಲಿ ಶಿಕಾರಿಪುರಕ್ಕೆ ತೆರಳಿದ್ದಾಗ, ತನ್ನ ಮೇಲೆ …
Read More »39 ನಿಮಿಷ 24 ಸೆಕೆಂಡ್‌ಗಳಲ್ಲಿ 11.18 ಕಿ.ಮೀ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾದ ಹುಬ್ಬಳ್ಳಿಯ ಬಾಲಕ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಬಾಲಕ ಸುಶ್ವಿನ್ ಅವರು 39 ನಿಮಿಷ 24 ಸೆಕೆಂಡ್‌ಗಳಲ್ಲಿ 11.18 ಕಿ.ಮೀ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗಿದ್ದಾರೆ. ಇವರಿಗೆ ಈಗ 4 ವರ್ಷ 8 ತಿಂಗಳು ವಯಸ್ಸು. ಸುಶ್ವಿನ್ ಹಳೇಹುಬ್ಬಳ್ಳಿಯ ಇಂದ್ರಪ್ರಸ್ತ ನಗರದ ವಿನಾಯಕ ಮತ್ತು ಸುಷ್ಮಾ ಹಳಪೇಟಿ ದಂಪತಿಯ ಪುತ್ರ ಏ.5ರಂದು ಈ ಬಾಲಕ ಸತ್ತೂರು ಆಶ್ರಯ ಕಾಲೊನಿಯಿಂದ ಬೆಳಗ್ಗೆ 6.40ಕ್ಕೆ ಆರಂಭಿಸಿ 7.19ಕ್ಕೆ ಉಣಕಲ್ ಕ್ರಾಸ್‌ವರೆಗೆ ಸೈಕಲ್ ಓಡಿಸಿ ಈ …
Read More »ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರ ಮಳೆ….ಕೆಸರು ಗದ್ದೆಯಾದ ಜಕನೂರು ಗ್ರಾಮದ ಮುಖ್ಯ ರಸ್ತೆ….
ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರ ಮಳೆ….ಕೆಸರು ಗದ್ದೆಯಾದ ಜಕನೂರು ಗ್ರಾಮದ ಮುಖ್ಯ ರಸ್ತೆ…. ನಿರಂತರ ಮಳೆಯಿಂದಾಗಿ ಜಮಖಂಡಿ ತಾಲೂಕಿನ ಜಕನೂರು ಗ್ರಾಮದ ಮುಖ್ಯ ರಸ್ತೆಗಳು ಹಾಳಾಗಿದ್ದು ವಾಹನಸ್ವಾರರು ತೀವ್ರ ತೊಂದರೆ ಅನುಭವಿಹಿಸುವಂತಾಗಿದೆ. ತಗ್ಗು ಗುಂಡಿಗಳಿದ್ದರೂ ರಸ್ತೆಯನ್ನು ಹಲವಾರು ವರ್ಷಗಳಿಂದ ದುರಸ್ತಿಗೊಳಿಸುತ್ತಿಲ್ಲ ವಾಹನ ಸವಾರರು ತಗ್ಗು ಗುಂಡಿಗಳಲ್ಲೇ ಕುಂಟುತ್ತಾ ತೆವಳುತ್ತಾ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಸ್ವಲ್ಪ ಯಾಮಾರಿದ್ರೂ ಬೈಕ್ ಸವಾರರಿಗೆ ಭಾರಿ ಅನಾಹುತಗಳಾಗುತ್ತವೆ. ಕಳೆದ ಕಳೆದ 8 ವರ್ಷಗಳಿಂದ ದುರಸ್ಥಿ ಕಾಣದ ರಸ್ತೆಗಳಿಂದಾಗಿ …
Read More »ಮೈಸೂರು: ಅವಧೂತ ದತ್ತಪೀಠದಿಂದ ಭಾರತೀಯ ಸೇನೆಗೆ 25 ಲಕ್ಷ ರೂಪಾಯಿ ಕಾಣಿಕೆ
ಮೈಸೂರು: ಮೈಸೂರಿನ ಅವಧೂತ ದತ್ತಪೀಠದ ವತಿಯಿಂದ ಭಾರತೀಯ ಸೇನೆಗೆ 25 ಲಕ್ಷ ರೂ.ಗಳ ಕಾಣಿಕೆಯನ್ನು ಅರ್ಪಿಸಲಾಯಿತು. ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 26ನೇ ಬ್ರಹ್ಮೋತ್ಸವ ಭಾನುವಾರ ಸಂಜೆ ವೇದ ಪಾರಾಯಣಗಳ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೈಸೂರು ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮೂಲಕ …
Read More »ಭಾರಿ ಮಳೆಗೆ ಕುಮಟಾ ಬಳಿ ಗುಡ್ಡ ಕುಸಿತ
ಕಾರವಾರ (ಉತ್ತರಕನ್ನಡ): ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಭಾನುವಾರ ರಾತ್ರಿ ಕುಮಟಾದ ಮುಸುಗುಪ್ಪ ಬಳಿ ಬೃಹತ್ ಬಂಡೆಗಳ ಸಹಿತ ಗುಡ್ಡ ಕುಸಿತವಾಗಿ ಮೂರೂರು-ಹರಕಡೆ ಸಂಪರ್ಕ ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡಿತ್ತು. ಜಿಲ್ಲಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದೇವಿಮನೆ ಘಟ್ಟ ಸೇರಿದಂತೆ ಹಲವೆಡೆ ಗುಡ್ಡ ಕುಸಿತಗೊಂಡ ಬೆನ್ನಲ್ಲೇ ಇದೀಗ ಮೂರೂರು ಭಾಗದಲ್ಲಿಯೂ ಕಟ್ಟಿಂಗ್ ಮಾಡಿದ್ದ ಧರೆಭಾಗ ಕುಸಿದು ಸಂಚಾರ ಸಂಪೂರ್ಣ ಬಂದ್ ಆಗಿತ್ತು. “ಕುಮಟಾ ತಾಲೂಕಿನ ಮೂರೂರು-ಮುಸುಗುಪ್ಪ ರಸ್ತೆಯಲ್ಲಿ ಬಿದ್ದಂತಹ ಕಲ್ಲು ಬಂಡೆಯನ್ನು ತೆರವುಗೊಳಿಸಲು …
Read More »‘ಕನ್ನಡೇತರ ವ್ಯಕ್ತಿಯನ್ನು ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಅಂಬಾಸಿಡರ್ ಮಾಡಿ ಕನ್ನಡಿಗರನ್ನು ದೂರವಿಟ್ಟಿದ್ದಾರೆ’: ರಮ್ಯಾ
ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಸಂಸ್ಥೆಯ ಪ್ರಚಾರಕ್ಕೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ. ಕರುನಾಡಿನ ಖ್ಯಾತ ಉತ್ಪನ್ನಕ್ಕೆ ಕನ್ನಡೇತರ ನಟಿಯನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿರೋದು ಬಹುತೇಕರ ಆಕ್ರೋಶಕ್ಕೂ ಕಾರಣವಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಕೂಡಾ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಟಿ ರಮ್ಯಾ ಎಕ್ಸ್ ಪೋಸ್ಟ್: ”ಕೆಎಸ್‌ಡಿಎಲ್ ಪುನರುಜ್ಜೀವನಗೊಳಿಸುವ ಉದ್ದೇಶವನ್ನು …
Read More »ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಬಳಕೆದಾರರಿಗೆ ಪ್ರಮುಖ ಸುದ್ದಿ
ಬೆಂಗಳೂರು (ಮೇ. 24): ತಂತ್ರಜ್ಞಾನವು (Technology) ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸಿದೆಯೋ, ಅಷ್ಟೇ ಅಪಾಯಗಳನ್ನೂ ಒಡ್ಡುತ್ತಿದೆ. ಇಂಟರ್ನೆಟ್ ಪ್ರವೇಶ ಹೆಚ್ಚಳದ ನಂತರ ಬಂದಿರುವ ದೊಡ್ಡ ಬದಲಾವಣೆಯೆಂದರೆ ಹಣದ ವಹಿವಾಟುಗಳಲ್ಲಿ. ಈಗ ನೀವು ಯಾರಿಗಾದರೂ ಹಣವನ್ನು ಕಳುಹಿಸಲು ಅಥವಾ ಅಂಗಡಿಯಿಂದ ಏನಾದರು ಖರೀದಿಸಿದರೆ ಹೆಚ್ಚಿನ ಜನರು ಆನ್‌ಲೈನ್‌ನಲ್ಲಿ ಪಾವತಿಗಳನ್ನು ಮಾಡುತ್ತಾರೆ. ಪ್ರತಿಯೊಂದು ಸ್ಥಳದಲ್ಲೂ ವಿಭಿನ್ನ ಜನರು ಆನ್‌ಲೈನ್ ಪಾವತಿಗಳನ್ನು ಆಶ್ರಯಿಸುತ್ತಿದ್ದಾರೆ. ನೀವು ಸಹ ಆನ್‌ಲೈನ್ ಪಾವತಿಗಳನ್ನು ಮಾಡುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಈಗ …
Read More »ನನಗೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗುವ ಆಸೆ ಇಲ್ಲ: ಯದುವೀರ್
ಮೈಸೂರು: ಮೈಸೂರು ಸ್ಯಾಂಡಲ್ ಸೋಪಿಗೆ ನನಗೆ ವೈಯಕ್ತಿಕವಾಗಿ ರಾಯಭಾರಿಯಾಗುವ ಆಸೆ ಇಲ್ಲ ಎಂದು ರಾಜವಂಶಸ್ಥರು, ಬಿಜೆಪಿ ಸಂಸದರೂ ಆಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದರು. “ಮೈಸೂರು ಸ್ಯಾಂಡಲ್ ಸೋಪಿಗೆ ಸೂಕ್ತ ರಾಯಭಾರಿ ಎಂದರೆ ನಮ್ಮ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬ್ರ್ಯಾಂಡೂ ನಮ್ದೇ ಬ್ರ್ಯಾಂಡು ಅಂಬಾಸಿಡರು ನಮ್ಮವ್ರೇ ‘ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಚಾರವಾಗಿ, ನಗರದ ಖಾಸಗಿ ಹೋಟೆಲ್ನಲ್ಲಿಂದು ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು”ರಾಜಮನೆತನ ಕಮರ್ಷಿಯಲ್ ಆಗಿ …
Read More »ಮಂಜುನಾಥ ರಾವ್ ನಿವಾಸಕ್ಕೆ ಅಸ್ಸೋಂ ಸಚಿವ ಭೇಟಿ, ₹5 ಲಕ್ಷ ಪರಿಹಾರ
ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಮಂಜುನಾಥ ರಾವ್ ನಿವಾಸಕ್ಕೆ ಭಾನುವಾರ ಅಸ್ಸೋಂನ ಸಚಿವ ಬಿಮಲ್ ಬೋರಾಹ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಂಗಳೂರಿನಿಂದ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಬಿಮಲ್ ಬೋರಾಹ್, ವಿಜಯನಗರದ ಮಂಜುನಾಥ ರಾವ್ ಅವರ ಮನೆಗೆ ಭೇಟಿ ನೀಡಿ, ಮಂಜುನಾಥ ರಾವ್ ಆವರ ಫೋಟೋಗೆ ಪುಷ್ಪ ನಮನ ಸಲ್ಲಿಸಿದರು. ನಂತರ ರಾವ್ ಅವರ ತಾಯಿ ಸುಮತಿ, ಪತ್ನಿ ಪಲ್ಲವಿ ಹಾಗೂ ಮಗ ಅಭಿರಾಮ್ ಅವರಿಗೆ …
Read More »ಯತ್ನಾಳ್ ಕಾಟವನ್ನೇ ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗ್ತಾ ಇಲ್ಲ:ಜಮೀರ್ ಅಹ್ಮದ್
ದಾವಣಗೆರೆ: ಬಿಜೆಪಿಯವರಿಗೆ ಯತ್ನಾಳ್ ಕಾಟವನ್ನೇ ಸಹಿಸಿಕೊಳ್ಳಲು ಆಗ್ತಾ ಇಲ್ಲ, ನಮ್ಮ ಪಕ್ಷದ ವಿಚಾರ ಏನಕ್ಕೆ ಬೇಕು? ಮೊದಲು ಯತ್ನಾಳ್ ವಿಚಾರವನ್ನು ಸರಿಪಡಿಸಿಕೊಳ್ಳಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಬಿಜೆಪಿ ನಾಯಕರ ವಿರುದ್ದ ಗರಂ ಆದರು. ದಾವಣಗೆರೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ತಮನ್ನಾ ಭಾಟಿಯಾ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಟಿ ತಮನ್ನಾ ಭಾಟಿಯಾ ಆಯ್ಕೆ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದರು. “ನಮ್ಮ ರಾಜ್ಯದಲ್ಲಿ ನಟಿಯರು ತುಂಬಾ …
Read More »
Laxmi News 24×7