Breaking News

ರಾಜ್ಯ

ಮಹತ್ವದ ಬೆಳವಣಿಗೆ: ಗಡಿಯಿಂದ 10 ಸಾವಿರ ಸೈನಿಕರ ವಾಪಸ್ ಪಡೆದ ಚೀನಾ

ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಚೀನಾ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ) ಪ್ರದೇಶದಿಂದ 10 ಸಾವಿರ ಸೈನಿಕರನ್ನು ಹಿಂಪಡೆದುಕೊಂಡಿದೆ. ಲಡಾಖ್ ನ ಭಾರತೀಯ ಗಡಿ ಪ್ರದೇಶಕ್ಕೆ ಸಮೀಪವಿರುವ ಚೀನಾ ಸೈನ್ಯದ ಸಾಂಪ್ರದಾಯಿಕ ತರಬೇತಿ ಪ್ರದೇಶಗಳಲ್ಲಿ ಇದ್ದ 10 ಸಾವಿರ ಸೈನಿಕರನ್ನು ಹಿಂಪಡೆದುಕೊಂಡಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಇಡೀ ಜಗತ್ತು ಹೋರಾಟ ನಡೆಸುತ್ತಿದ್ದಾಗ ಚೀನಾ 50 ಸಾವಿರ ಸೈನಿಕರನ್ನು …

Read More »

ಕಲ್ಲಿದ್ದಲು ಗಣಿಗಾರಿಕೆಗೆ ಆನ್ ಲೈನ್ ಮೂಲಕ ಅನುಮತಿ ಒದಗಿಸುವ ಏಕ ಗವಾಕ್ಷಿ ಅನುಮೋದನೆ ಪಡೆಯುವ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

ನವದೆಹಲಿ: ಕಲ್ಲಿದ್ದಲು ಗಣಿಗಾರಿಕೆಗೆ ಆನ್ ಲೈನ್ ಮೂಲಕ ಅನುಮತಿ ಒದಗಿಸುವ ಏಕ ಗವಾಕ್ಷಿ ಅನುಮೋದನೆ ಪಡೆಯುವ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು. ಈ ಕುರಿತು ಮಾತನಾಡಿದ ಅವರು ಕಲ್ಲಿದ್ದಲು ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವಿದ್ದರೂ ಅದರ ಸದ್ಬಳಕೆ ಆಗುತ್ತಿರಲಿಲ್ಲ, ಇದೀಗ ಕಲ್ಲಿದ್ದಲು ಕ್ಷೇತ್ರದಲ್ಲಿ ಪಾರದರ್ಶಕತೆ ತರುವ ಮತ್ತು ಅದರ ಕ್ಷಮತೆಯನ್ನು ಹೆಚ್ಚಿಸುವ ಹಾಗೂ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಈ ಏಕ …

Read More »

ಬಾಲಿವುಡ್ ನಟಿ ಪ್ರೀತಿ ಜಿಂಟಾ ಕುಟುಂಬದ ಸದಸ್ಯರೆಲ್ಲರಿಗೂ ಕೊರೊನಾ ಪಾಸಿಟಿವ್

ಮುಂಬೈ, ಜ.11- ಬಾಲಿವುಡ್ ನಟಿ ಮತ್ತು ಐಪಿಎಲ್ ಕಿಂಗ್ಸ್ 11 ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಕುಟುಂಬದ ಸದಸ್ಯರೆಲ್ಲರಿಗೂ ಕೊರೊನಾ ಸೋಂಕು ಪಾಸಿಟೀವ್ ಎಂದು ತಿಳಿದು ಬಂದಿದೆ. ಜಿಂಟಾ ಅವರ ತಾಯಿ, ಸಹೋದರ, ಅತ್ತಿಗೆ ಅವರ ಮಕ್ಕಳು ಮತ್ತು ಚಿಕ್ಕಪ್ಪ ಅವರು ಕೋವಿಡ್-19 ಪರೀಕ್ಷೆಗೊಳಗಾಗಿದ್ದು, ಪ್ರಯೋಗಾಲದ ವರದಿ ಪ್ರಕಾರ ಎಲ್ಲರಿಗೂ ಕೊರೊನಾ ಸೋಂಕು ತಗುಲಿದೆ. ಪ್ರಸ್ತುತ ಅಮೆರಿಕದಲ್ಲಿರುವ ಪ್ರೀತಿ ಜಿಂಟಾ ಇನ್‍ಸ್ಟಾ ಗ್ರಾಂನಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಕೋವಿಡ್-19 …

Read More »

ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೇಸ್ಬುಕ್ ಲೈವ್ ಬಂದಿದ್ದೇಕೆ..?

ಬೆಂಗಳೂರು, ಜ.10- ಕಳೆದೆರಡು ದಿನಗಳ ಹಿಂದೆಯೇ ಫೇಸ್‍ಬುಕ್ ಲೈವ್‍ಗೆ ಬರುವುದಾಗಿ ಡಿ ಬಾಸ್ ದರ್ಶನ್ ಅವರು ಹೇಳಿದ್ದರಿಂದ ಇಂದು (ಜ.10) ಅಭಿಮಾನಿಗಳು ಅವರ ಮಾತುಗಳನ್ನು ಕೇಳಲು ಕಾತರರಾಗಿದ್ದರು. ಇಂದು ಬೆಳಗ್ಗೆ 11 ಗಂಟೆಗೆ ದರ್ಶನ್ ಫೇಸ್‍ಬುಕ್ ಲೈವ್ ಬಂದಾಗ ಈ ಬಾರಿ ನಮ್ಮ ನೆಚ್ಚಿನ ನಟ ಯಾವ ಕುತೂಹಲ ಅಂಶದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ, ರಾಬರ್ಟ್ ಸಿನಿಮಾದ ಬಿಡುಗಡೆಯ ಕುರಿತು ಏನಾದರೂ ವಿಷಯ ತಿಳಿಸುತ್ತಾರೋ, ಅಥವಾ ತಮ್ಮ ಹುಟ್ಟುಹಬ್ಬದ ಬಗ್ಗೆ …

Read More »

ಬೆಳಗಾವಿ : ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಬೆಳಗಾವಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ರೈತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.   ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ನೂತನ ಕೃಷಿ ಕಾಯ್ದೆ ಗಳು ರೈತರಿಗೆ ಮಾರಕವಾಗಿವೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ …

Read More »

ಭೀಕರ ಅಪಘಾತ : 18 ವರ್ಷದ ಯುವತಿ ಸೇರಿ ಮೂವರು ಸಾವು

ಕಲಬುರಗಿ : ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ರಾವೂರ್ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. ಭೀಮಾಶಂಕರ್ ಪ್ಯಾಟಿ, ಅಕ್ಬರ್ ಪಟೇಲ್ ಮತ್ತು 18 ವರ್ಷದ ಯುವತಿ ಜವರಾಯನ ಅಟ್ಟಹಾಸಕ್ಕೆ ಕೊನೆಯುಸಿರೆಳೆದಿದ್ದಾರೆ. ಈ ಮೂವರು ಒಂದೆ ದ್ವಿ ಚಕ್ರದ ಮೇಲೆ ಹೊಗುತ್ತಿರುವ ವೇಳೆ ದುರ್ಘಟನೆ ನಡೆದಿದೆ. ಮೃತದೇಹಗಳು ರಕ್ತಸಿಕ್ತವಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೈಕ್​ ನಜ್ಜುಗುಜ್ಜಾಗಿದೆ. ಈ …

Read More »

ಸಂಪುಟ ವಿಸ್ತರಣೆಯೋ,ಪುನರ್ ರಚನೆಯೋ ಇಂದೇ ಗೊತ್ತಾಗತ್ತೆ: ಸಿಎಂ ಸಚಿವ ಆಕಾಂಕ್ಷಿಗಳಲ್ಲಿ ಹೆಚ್ಚಿದ ಟೆನ್ಸನ್!!

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಏನೆಂಬುದು ಇಂದೇ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದು, ಆ ಮೂಲಕ ಸಚಿವರು ಹಾಗೂ ಆಕಾಂಕ್ಷಿಗಳಲ್ಲಿ ಎದೆಬಡಿತ ಹೆಚ್ಚಿಸಿದ್ದಾರೆ. ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರ‌ 54ನೇ ಪುಣ್ಯತಿಥಿ ನಿಮಿತ್ತ ವಿಧಾನಸೌಧದ ಬಳಿ ಅವರ ಭಾವಚಿತ್ರಕ್ಕೆ ಸೋಮವಾರ ಮಾಲಾರ್ಪಣೆ ಮಾಡಿದ ಬಳಿಕ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು. ಖಾಲಿಯಿರುವ 7 ಸ್ಥಾನಗಳನ್ನು ತುಂಬುವುದು ಖಚಿತ. ಬುಧವಾರ ಇಲ್ಲವೇ ಗುರುವಾರ ನೂತನ …

Read More »

ಶಾಸಕ ಎಂ.ಸಿ. ಮನಗೂಳಿ ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲು

ವಿಜಯಪುರ: ಅನಾರೋಗ್ಯದಿಂದ ಬಳಲುತ್ತಿರುವ ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಹಿಂದೆ ಕಲಬುರಗಿಯಿಂದ ಏರ್​ಲಿಫ್ಟ್ ಮೂಲಕ ಶಾಸಕರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಫ ಕಟ್ಟಿದ ಹಿನ್ನೆಲೆಯಲ್ಲಿ ಶಾಸಕ ಮನಗೂಳಿ ತೀವ್ರ ಅಸ್ವಸ್ಥರಾಗಿದ್ದರು. ಸದ್ಯ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More »

ಗ್ರಾಹಕರಿಗೆ ಗುಡ್ ನ್ಯೂಸ್ : ಇಲ್ಲಿ ಸಿಲಿಂಡರ್ ಬುಕ್ ಮಾಡಿದ್ರೆ ನಿಮಗೆ ಸಿಗಲಿದೆ 50 ರೂ. ಕ್ಯಾಶ್ ಬ್ಯಾಕ್!

ನವದೆಹಲಿ : ಐಸಿಐಸಿಐ ಬ್ಯಾಂಕ್ ಎಲ್ ಪಿಜಿ ಗ್ರಾಹಕರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಐಸಿಐಸಿಐ ಬ್ಯಾಂಕ್ ನ ಪಾಕೆಟ್ಸ್ ವ್ಯಾಲೆಟ್ ಮೂಲಕ ಸಿಲೆಂಡರ್ ಕಾಯ್ದಿರಿಸಿದರೆ 50 ರೂ. ಕ್ಯಾಶ್ ಬ್ಯಾಕ್ ಪಡೆಯಬಹುದು. ಹೌದು, ಕ್ಯಾಶ್ ಬ್ಯಾಕ್ ಪಡೆಯಲು, ನೀವು PMRJAN2021 ಪ್ರೋಮೋ ಕೋಡ್ ಅನ್ನು ನಮೂದಿಸಬೇಕು. 10 ಪರ್ಸೆಂಟ್ ಗೆ ಗರಿಷ್ಠ 50 ರೂಪಾಯಿ ಕ್ಯಾಶ್ ಬ್ಯಾಕ್ ನೀಡ್ತಿದೆ. ಪಾಕೆಟ್ಸ್ ಪ್ರಕಾರ, ಈ ಆಫರ್ 2021ರ ಜನವರಿ 25ರವರೆಗೆ ಮಾನ್ಯವಾಗಿರುತ್ತದೆ. ಈ …

Read More »

ಹಾಲು ಉತ್ಪಾದಕರಿಗೆ ಭರ್ಜರಿ ಸಿಹಿಸುದ್ದಿ : ಪ್ರತಿ ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಳ!

ಬೆಂಗಳೂರು : ಸಂಕ್ರಾಂತಿ ಹಬ್ಬಕ್ಕೆ ಹಾಲು ಉತ್ಪಾದಕರಿಗೆ ಭರ್ಜರಿ ಸಿಹಿಸುದ್ದಿ ಸಿಗುವ ಸಾಧ್ಯತೆ ಇದ್ದು, ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟವು ಪ್ರತಿ ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಬಮೂಲ್ ಹಾಲು ಒಕ್ಕೂಟವು ಪ್ರತಿ ಲೀಟರ್ ಹಾಲಿಗೆ 25.30 ರೂ. ನೀಡುತ್ತಿದೆ. ಅದರಲ್ಲಿ 24 ರೂ. ಹಾಲು ಉತ್ಪಾದಕರಿಗೆ ಮತ್ತು 1.30 ರೂ. ಸೊಸೈಟಿಗೆ ಸಿಗುತ್ತಿದೆ. ಬಮೂಲ್ ಸಂಕ್ರಾಂತಿ ಬಳಿಕ 1 ರೂ. …

Read More »