Breaking News
Home / ಜಿಲ್ಲೆ / ಕಲಬುರ್ಗಿ / ಭೀಕರ ಅಪಘಾತ : 18 ವರ್ಷದ ಯುವತಿ ಸೇರಿ ಮೂವರು ಸಾವು

ಭೀಕರ ಅಪಘಾತ : 18 ವರ್ಷದ ಯುವತಿ ಸೇರಿ ಮೂವರು ಸಾವು

Spread the love

ಕಲಬುರಗಿ : ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ರಾವೂರ್ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.

ಭೀಮಾಶಂಕರ್ ಪ್ಯಾಟಿ, ಅಕ್ಬರ್ ಪಟೇಲ್ ಮತ್ತು 18 ವರ್ಷದ ಯುವತಿ ಜವರಾಯನ ಅಟ್ಟಹಾಸಕ್ಕೆ ಕೊನೆಯುಸಿರೆಳೆದಿದ್ದಾರೆ. ಈ ಮೂವರು ಒಂದೆ ದ್ವಿ ಚಕ್ರದ ಮೇಲೆ ಹೊಗುತ್ತಿರುವ ವೇಳೆ ದುರ್ಘಟನೆ ನಡೆದಿದೆ. ಮೃತದೇಹಗಳು ರಕ್ತಸಿಕ್ತವಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೈಕ್​ ನಜ್ಜುಗುಜ್ಜಾಗಿದೆ.

ಈ ಭೀಕರ ದೃಶ್ಯ ಕಂಡ ಇತರೆ ವಾಹನ ಸವಾರರು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಬಂದವಾಡಿ ಠಾಣೆಯ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಮುಂದುವರೆದ ʼಮಹಾʼ ಸಿಎಂ ಉದ್ಧಟತನ

Spread the loveಮುಂಬೈ: ಗಡಿ ವಿಚಾರದ ಬೆನ್ನಲ್ಲೇ ಇದೀಗ ಭಾಷೆ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ಕ್ಯಾತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ