Breaking News

ರಾಜ್ಯ

ಮಗಳ ಮೇಲೆ ಅತ್ಯಾಚಾರ! ದೂರು ಕೊಟ್ಟ ತಂದೆ ಅಪಘಾತದಲ್ಲಿ ಸಾವು!

ತನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರ ವಿರುದ್ಧ ದೂರು ನೀಡಿದ್ದ ವ್ಯಕ್ತಿ ಎರಡು ದಿನಗಳ ಬಳಿಕ ಅಪಘಾತದಲ್ಲಿ ಮೃತಪಟ್ಟಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅದು ಕೂಡ ತಮ್ಮ ಮಗಳ ವೈದ್ಯಕೀಯ ಪರೀಕ್ಷೆ ನಡೆಯುತ್ತಿದ್ದ ಆಸ್ಪತ್ರೆ ಎದುರಿಗೇ ಅಪಘಾತವಾಗಿ ಮೃತಪಟ್ಟಿದ್ದಾರೆ. ಈ ಘಟನೆ ಉತ್ತರಪ್ರದೇಶದ ಕಾನ್ಪುರ್​ನಲ್ಲಿ ನಡೆದಿದೆ. ಇವತ್ತು ಬೆಳಗ್ಗೆ ಟೀ ಕುಡಿಯೋಣ ಅಂತ ವ್ಯಕ್ತಿ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಈ ವೇಳೆ ಎರಗಿ ಬಂದ ಟ್ರಕ್ ಅವರ ಪ್ರಾಣವನ್ನೇ ತೆಗೆದುಬಿಟ್ಟಿದೆ. …

Read More »

ಎಸಿಬಿ ಅಧಿಕಾರಿಗಳಿಂದ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಬಂಧನ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ದಾಳಿಗೊಳಗಾಗಿದ್ದ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಮಂಗಳವಾರ ವಿಕ್ಟರ್ ಸೈಮನ್ ಅವರ ಮನೆ ಮತ್ತು ಇತರ ಕೆಲವು ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆದಿತ್ತು. ಮನೆಯಲ್ಲಿ ₹1 ಕೋಟಿ ಮೌಲ್ಯದ ಬಾಂಡ್ ಪೇಪರ್ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು. ‘ಇನ್ನೂ ಕೆಲವು …

Read More »

ರಾಜ್ಯದಲ್ಲಿ 2.28 ಲಕ್ಷ ಬಿಪಿಎಲ್‌ ಪಡಿತರ ಚೀಟಿ ರದ್ದು: ಸಚಿವ ಉಮೇಶ್‌ ಕತ್ತಿ

ಬೆಂಗಳೂರು: ರಾಜ್ಯದಲ್ಲಿ 2,28,188 ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನು ಪತ್ತೆ ಮಾಡಿ ರದ್ದುಪಡಿಸಲಾಗಿದೆ. ಅರ್ಹತೆ ಇಲ್ಲದೆ ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದ ವ್ಯಕ್ತಿಗಳಿಂದ ₹ 3.07 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ತಿಳಿಸಿದರು. ಮಂಗಳವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ 10.90 ಲಕ್ಷ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳು ಮತ್ತು …

Read More »

ನಕಲಿ ಸಿ.ಡಿ ತಯಾರಿಸಿದ್ದು ಕಾಂಗ್ರೆಸಿನ ಕೆಲವು ‘ಮನೆಹಾಳ’ ನಾಯಕರು: ಸಚಿವ ಸೋಮಶೇಖರ್

ಬೆಂಗಳೂರು: ‘ಸಮ್ಮಿಶ್ರ ಸರ್ಕಾರ’ದ ಪತನಕ್ಕೆ ಕಾರಣರಾದವರ ರಾಜಕೀಯ ಜೀವನ ಮುಗಿಸಲು ಕಾಂಗ್ರೆಸ್‌ ಪಿತೂರಿ ಮಾಡಿದ್ದು, ಅದರ ಭಾಗವಾಗಿಯೇ ರಮೇಶ ಜಾರಕಿಹೊಳಿ ಅವರ ತೇಜೋವಧೆಯ ಸಿ.ಡಿ ಬಿಡುಗಡೆ ಆಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ದೂರಿದರು. ‘ನಕಲಿ ಸಿ.ಡಿ ತಯಾರಿಸಿದ್ದು ನೂರಕ್ಕೆ ನೂರರಷ್ಟು ಆ ಪಕ್ಷದಲ್ಲಿರುವ ಕೆಲವು ಮನೆಹಾಳ ನಾಯಕರೇ’ ಎಂದು ಹೇಳಿದ ಅವರು, ’20 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿದ್ದ ನನಗೆ ಆ ಪಕ್ಷದ ಮಹಾನ್‌ ನಾಯಕರ ನೈತಿಕತೆ- ಅನೈತಿಕತೆಯ …

Read More »

ಸಚಿವರ ಸಾಮೂಹಿಕ ಗೈರು: ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ ‘

ಬೆಂಗಳೂರು: ಕಲಾಪದಲ್ಲಿ ಭಾಗವಹಿಸಬೇಕಿದ್ದ ಸಚಿವರು ಸಾಮೂಹಿಕವಾಗಿ ಗೈರಾಗಿದ್ದರಿಂದ ಬುಧವಾರ ಮಧ್ಯಾಹ್ನದ ಬಳಿಕ ವಿಧಾನ ಪರಿಷತ್ ಕಲಾಪ ನಡೆಯಲಿಲ್ಲ. ಮಧ್ಯಾಹ್ನ 1.45ಕ್ಕೆ ಗಂಟೆಗೆ ಸದನದ ಕೋರಂ ಬೆಲ್ ಹಾಕಲಾಯಿತು. 15 ನಿಮಿಷಗಳ ಬಳಿಕ ಕಲಾಪ ಆರಂಭವಾಯಿತು. ಆದರೆ, ಸಭಾ ನಾಯಕ‌ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆಲವು ಸದಸ್ಯರು ಮಾತ್ರ ಆಡಳಿತ ಪಕ್ಷದ ಸಾಲಿನಲ್ಲಿದ್ದರು. ಸಚಿವರಾದ ಎಂ.ಟಿ.ಬಿ. ನಾಗರಾಜ್, ಕೆ. ಗೋಪಾಲಯ್ಯ, ಸಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಸಿ.ಪಿ. ಯೋಗೇಶ್ವರ ಹಾಜರಿರಬೇಕಿತ್ತು. …

Read More »

ಅರಣ್ಯ ಇಲಾಖೆ ಬೋನಿಗೆ ಸೆರೆಸಿಕ್ಕ ಚಿರತೆ

ಶಿಕಾರಿಪುರ: ತಾಲ್ಲೂಕಿನ ಮದಗಹಾರನಹಳ್ಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ ಸಂಗ್ರಹಿಸಿಟ್ಟಿದ ಬೋನಿನಲ್ಲಿ ಬುಧವಾರ ಮುಂಜಾನೆ ಚಿರತೆ ಸೆರೆ ಸಿಕ್ಕಿದೆ. ಗ್ರಾಮದ ಸುತ್ತಲೂ ಚಿರತೆ ಓಡಾಡುತ್ತಿದೆ ಎಂಬ ಮಾಹಿತಿಯನ್ನು ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದರು. ಗ್ರಾಮಸ್ಥರ ಮಾಹಿತಿ ಆಧಾರದ ಮೇಲೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಗೋಪ್ಯಾನಾಯ್ಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿಗಳು ಚಿರತೆ ಚಲನವಲನ ಗಮನಿಸಿ ಎರಡು ದಿನಗಳ ಹಿಂದೆ ಗ್ರಾಮ ಸಮೀಪವೇ ನಾಯಿ …

Read More »

ಸರ್ಕಾರದ ಮೇಲೆ ಅಶೋಕ್ ಪೂಜಾರಿ ಗಂಭೀರ್ ಆರೋಪ..

ಓರ್ವ ಜವಾಬ್ದಾರಿಯುತ ಹಿರಿಯ ಸಚಿವ ರಾಸಲೀಲೆ ಸಿಡಿ ಹಗರಣದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಅದು ಸಣ್ಣ ವಿಷಯ ಅಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಸರ್ಕಾರ ಈವರೆಗೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಗಂಭೀರ ಆರೋಪ ಮಾಡಿದರು. ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ ಪೂಜಾರಿ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಸಂಪೂರ್ಣವಾಗಿ ಇದು ಫೇಕ್ ವಿಡಿಯೋ ಇದೆ ಎಂದು …

Read More »

2020ರಲ್ಲಿ ದೇಶದ 10 ಸಾವಿರ ಕಂಪನಿಗಳು ಬಂದ್! ಕರ್ನಾಟಕದಲ್ಲಿ ಎಷ್ಟು ಗೊತ್ತಾ?

ನವದೆಹಲಿ : 2020ರ ಏಪ್ರಿಲ್ ನಿಂದ ಈ ವರ್ಷದ ಫೆಬ್ರವರಿವರೆಗೆ ದೇಶದಲ್ಲಿ 10,000 ಕ್ಕೂ ಹೆಚ್ಚು ಕಂಪನಿಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಲಭ್ಯವಿರುವ ಇತ್ತೀಚಿನ ದತ್ತಾಂಶದ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರವರಿವರೆಗೆ ಒಟ್ಟು 10,113 ಕಂಪನಿಗಳು ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 248(2) ರ ಅಡಿಯಲ್ಲಿ ಸ್ಥಗಿತವಾಗಿವೆ.ಸೆಕ್ಷನ್ 248(2) ಪ್ರಕಾರ ಕಂಪನಿಗಳು ಸ್ವಯಂ ಪ್ರೇರಿತವಾಗಿ …

Read More »

ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ! ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಘಟನೆ

ಮಂಡ್ಯ: ದ್ವಿಚಕ್ರ ವಾಹನ ದಾಖಲೆಗಳ ತಪಾಸಣೆ ವೇಳೆ ಯುವತಿಯೊಬ್ಬರು ತನ್ನೊಂದಿಗೆ ವಾಗ್ವಾದಕ್ಕೆ ಇಳಿದರೆಂದು ವ್ಯಗ್ರಗೊಂಡ ಮಹಿಳಾ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಯುವತಿಯ ಕಪಾಳಕ್ಕೆ ಹೊಡೆದಿರುವ ಘಟನೆ ನಡೆದಿದೆ. ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಈ ಘಟನೆ ನಡೆದಿದೆ. ಪಿಎಸ್‌ಐ ಹೊಡೆದ ಬಳಿಕ ಯುವತಿಯೂ ಏಕವಚನದಲ್ಲಿ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಅವರನ್ನು ನಿಂದಿಸಿದ್ದಾರೆ. ಈ ಬಗ್ಗೆ ಯುವತಿಯು ಸ್ಥಳದಲ್ಲಿದ್ದ ಹಿರಿಯರೊಬ್ಬರ ಗಮನ ಸೆಳೆದಾಗ ಅವರೂ ಸಹ ಪೊಲೀಸ್​ ಅಧಿಕಾರಿಯ ದರ್ಪವನ್ನು ಪ್ರಶ್ನಿಸಿದ್ದಾರೆ. …

Read More »

ವಿದ್ಯುತ್ ಉತ್ಪಾದನೆಗೆ ಬ್ಯಾರೇಜ್ ನಿರ್ಮಾಣ, ದೀಪದ ಬುಡಕ್ಕೆ ಕತ್ತಲು; ಸಿಎಂ ಸಾಹೇಬ್ರೇ ಪರಿಹಾರ ನೀಡಿ!

ಯಾದಗಿರಿ: ಕರ್ನಾಟಕ ರಾಜ್ಯಕ್ಕೆ ಬೆಳಕಿನ ಸೌಲಭ್ಯ ಕಲ್ಪಿಸುವ ಆರ್ ಟಿಪಿಎಸ್ ಕೇಂದ್ರವು ಈಗ ರೈತರ ಜೀವಕ್ಕೆ ಮಾತ್ರ ಕತ್ತಲಾಗಿಸಿದೆ. ರಾಯಚೂರಿನ ಶಕ್ತಿನಗರದಲ್ಲಿರುವ ಆರ್ ಟಿಪಿಎಸ್ ಕೇಂದ್ರಕ್ಕೆ ವಿದ್ಯುತ್ ಉತ್ಪಾದನೆ ಗಾಗಿ ನೀರು ಪೂರೈಕೆ ಮಾಡಲು ಸರಕಾರ 2016 ನೆ ಸಾಲಿನಲ್ಲಿ ಕೋಟ್ಯಾಂತರ ರೂ ವೆಚ್ಚ ಮಾಡಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದೆ. ಬ್ಯಾರೇಜ್ ನಿರ್ಮಾಣ ಮಾಡಿ ನಾಲ್ಕು ವರ್ಷ ಕಳೆದಿದ್ದು, ಈಗ ಬ್ಯಾರೇಜ್ ರೈತರ ಪಾಲಿಗೆ ಜಲಕಂಟಕ ತಂದಿದೆ. …

Read More »