Breaking News

ರಾಜ್ಯ

ಹಳ್ಳಿಹಕ್ಕಿ ಅವರದ್ದು ಸಿಡಿ ಇದ್ಯಾಂತ? ಕುಟುಕಿದ ಕುಮಾರಸ್ವಾಮಿ

ಮೈಸೂರು (ಮಾ. 11): ರಮೇಶ್ ಜಾರಕಿಹೊಳಿ ಸಿಡಿ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಸಿಡಿ ವಿಚಾರವಾಗಿ ರಾಜಕೀಯ ನಾಯಕರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದೇ ವೇಳೆ ಸಿಡಿ ವಿಚಾರವಾಗಿ ಎಂಎಲ್​ಸಿ ವಿಶ್ವನಾಥ್​ ವಿರುದ್ಧ ವ್ಯಂಗ್ಯವಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಏನು ಅವರದ್ದು ಸಿಡಿ ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಯಾರ್ಯಾರ ಸಿಡಿ ಇದೇಯೋ ಇಲ್ವೋ ನನಗೇನು ಗೊತ್ತು, ಆ ಯತ್ನಾಳ್ ಹೇಳುತ್ತಾರೆ ಇನ್ನು 26 ಜನರ …

Read More »

ಒಕ್ಕಲಿಗರಿಗೆ 500 ಕೋಟಿಯಲ್ಲ, 5 ರೂಪಾಯಿ ಕೂಡ ಸಿಗಲ್ಲ: ಎಚ್‌ಡಿಕೆ ವ್ಯಂಗ್ಯ

ಮೈಸೂರು, ಮಾರ್ಚ್ 11: ಒಕ್ಕಲಿಗರ ನಿಗಮಕ್ಕೆ 500 ಕೋಟಿ ರೂಪಾಯಿಯಲ್ಲ, 5 ರೂಪಾಯಿಯೂ ಸಿಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್‌ನಲ್ಲಿ ಹೈಕಮಾಂಡ್‌ ಅನ್ನುವ ಸಂಸ್ಕೃತಿಯೇ ಇಲ್ಲ ಎಂದು ಹೇಳಿದ ಅವರು, ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ ಕೇವಲ ಘೋಷಣೆ ಮಾತ್ರ. ಅದು ಬಿಡುಗಡೆಗೆ ಅದೆಷ್ಟು ವರ್ಷ ಬೇಕೋ ಗೊತ್ತಿಲ್ಲ ಎಂದು ಎಂದು ತಿಳಿಸಿದರು. ಇಂತಹ ಅವಧಿಯಲ್ಲಿ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿಲ್ಲ, …

Read More »

ಮಾರ್ಚ್ 11ರಂದು ಬಿಟ್ ಕಾಯಿನ್ ಮೌಲ್ಯ ಭಾರಿ ಏರಿಕೆ

ಬೆಂಗಳೂರು, ಮಾರ್ಚ್11: ಕಳೆದ ಕೆಲ ದಿನಗಳು ಕುಸಿತ ಕಾಣುತ್ತಿದ್ದ ಬಿಟ್ ಕಾಯಿನ್ ಮೌಲ್ಯ ಸತತವಾಗಿ ಏರಿಕೆ ಕಾಣುತ್ತಿದೆ. ಗುರುವಾರ(ಮಾರ್ಚ್ 11)ರಂದು ಈ ಸಮಯಕ್ಕೆ ಏರಿಕೆ ಕಂಡು 55, 000 ಡಾಲರ್ ಗಡಿ ದಾಟಿದೆ. ಡಿಜಿಟಲ್ ದುಡ್ಡು ಬಿಟ್ ಕಾಯಿನ್ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿದ ಬಳಿಕ ಭಾರಿ ಕುಸಿತ ಕಂಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 27,734 ಡಾಲರ್ ಮೌಲ್ಯ ಹೊಂದಿದ್ದ ಬಿಟ್ ಕಾಯಿನ್ …

Read More »

ಗೋಕಾಕ ಫಾಲ್ಸ್‌ನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ..

ಗೋಕಾಕ ಫಾಲ್ಸ್‌ನಲ್ಲಿ ಗೋಕಾಕ ಖ್ಯಾತ ಶಿಲ್ಪಿ ಜಕಣಾಚಾರಿ ಅವರಿಂದ ನಿರ್ಮಿತವಾಗಿರುವ ಐತಿಹಾಸಿಕ ತಡಸಲ ಮಹಾಲಿಂಗೇಶ್ವರ “ತಟಾಕೇಶ್ವರ” ದೇವಸ್ಥಾನದಲ್ಲಿ ಮಹಾಶಿವರಾತ್ರಿವನ್ನು ಪ್ರತಿ ವರ್ಷದಂತೆ ಇ ವರ್ಷವು ಅತಿ ವಿಜೃಂಭಣೆಯಿಂದ ಆಚರಣೆ ಮಾಡಿದಲಾಗಿತ್ತು. 1153 ನೇ ಕಾಲದಲ್ಲಿ ನಿರ್ಮಿತವಾದ ಈ ದೇವಸ್ಥಾನ ಪ್ರತಿ ಶಿಲ್ಪಗಳೂ ಐತಿಹಾಸಿಕ ಮಹತ್ವ ಸಾರುತ್ತವೆ. ಪಕ್ಕದಲ್ಲಿ ಫಾಲ್ಸ್ ಹಸಿರಿನ ನಿಸರ್ಗ ತಾಣ ಇದ್ದು ಇದರ ಮುಂದೆ ಹರಿದು ಬರುವ ಘಟಪ್ರಭೆ 134 ಕಲ್ಲಿನ ಪದರಗಳ ಮಧ್ಯೆ ಸಾಗಿ ಜಲಪಾತವಾಗಿ …

Read More »

ಮಹಾರಾಷ್ಟ್ರದಲ್ಲಿ ಮತ್ತೆ ಏರುತ್ತಿರುವ ಕೊರೋನಾ ಪ್ರಕರಣ; ನಾಗ್ಪುರದಲ್ಲಿ ಒಂದು ವಾರ ಲಾಕ್​ಡೌನ್

ಮುಂಬೈ (ಮಾರ್ಚ್​ 11); ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಏರುತ್ತಲೇ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು ಶೇ.85.91 ರಷ್ಟು ಹೊಸ ಕೊರೋನಾ ಪ್ರಕರಣಗಳು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಂತೆ ದೇಶದಲ್ಲಿ ಒಂದೇ ದಿನದಲ್ಲಿ 22,854 ಹೊಸ ಪ್ರಕರಣಗಳು ಕಂಡುಬಂದಿದೆ. ಇನ್ನೂ ಮಹಾರಾಷ್ಟ್ರದಲ್ಲಿ ಅತೀ …

Read More »

ಸಿಡಿಯಲ್ಲಿ ಕಾಣಿಸಿಕೊಂಡ ಎಂದು ಹೇಳಲಾದ ಮಹಿಳೆಯ ಸಂಬಂಧಿಕರು ಮತ್ತು ಕುಟುಂಬವನ್ನು ಭೇಟಿಯಾದ ಸತೀಶ್ ಜಾರಕಿಹೋಳಿ

ಬೆಂಗಳೂರು: ಕೆಲವು ದಿನಗಳ ಹಿಂದೆ ಸೆಕ್ಸ್ ಸಿಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೊದಲೇ, ರಮೇಶ್ ಅವರ ಸಹೋದರ ಮತ್ತು ಕೆಪಿಸಿಸಿ ಕಾರ್ಯನಿರತ ಅಧ್ಯಕ್ಷ ಸತೀಶ್ ಜಾರಕಿಹೋಳಿ ತಮ್ಮ ಹೆಲಿಕಾಪ್ಟರ್‌ನಲ್ಲಿ ಗೋಕಾಕ್‌ನಿಂದ ಬಾಗಲಕೋಟೆ ಬಳಿಯ ನಿಡಗುಂದಿ ಗ್ರಾಮಕ್ಕೆ ತೆರಳಿದ್ದರು. ಅಲ್ಲಿ ಸಿಡಿಯಲ್ಲಿದ್ದ ಮಹಿಳೆಯ ಕುಟುಂಬ ಎಂದು ನಂಬಲಾದ ಕುಟುಂಬ ಒಂದು ವಾಸವಿದ್ದು ಅವರನ್ನು ಭೇಟಿಯಾಗಿದ್ದರು. ಅಲ್ಲಿಂದ ‘ಸತೀಶ್ ಮಾರ್ಚ್ 5 ರಂದು ತನ್ನ ಖಾಸಗಿ ಚಾಪರ್‌ನಲ್ಲಿ ಕೂಡಲಸಂಗಮಕ್ಕೆ ಬಂದರು. ಅವರು …

Read More »

ಸಿಡಿ ಪ್ರಕರಣದಲ್ಲಿ FIR ದಾಖಲಾಗಲಿದೆ : ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು, ಫೆ.11- ಪ್ರಾಥಮಿಕ ತನಿಖೆ ನಂತರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿಯು ಪ್ರಾಥಮಿಕ ತನಿಖೆ ಆರಂಭವಾದ ಬಳಿಕ ಎಫ್‍ಐಆರ್ ದಾಖಲಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಯಾರ ಮೇಲೂ ಯಾವ ರೀತಿಯ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಜಾರಕಿಹೊಳಿ ಕುಟುಂಬದವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಡಿ ಪ್ರಕರಣದ ವಿಚಾರವಾಗಿ ವಿಶೇಷ …

Read More »

‘ಸಿ.ಡಿ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಸಿದರೂ ಪ್ರಯೋಜನವಿಲ್ಲ.:H.D.K.

ಮೈಸೂರು: ‘ಸಿ.ಡಿ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಸಿದರೂ ಪ್ರಯೋಜನವಿಲ್ಲ. ತನಿಖೆಗಳೆಲ್ಲವೂ ತಿಪ್ಪೆ ಸಾರಿಸುವ ಕೆಲಸ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಇಲ್ಲಿ ಟೀಕಿಸಿದರು. ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ‘ಯಾರ ವಿರುದ್ಧ, ಏನಂತ ತನಿಖೆ ಮಾಡುತ್ತಾರೆ? ಯಾವ ಅಂಶಗಳ ಅಧಾರದಲ್ಲಿ ತನಿಖೆಗೆ ಆದೇಶಿಸಿದ್ದಾರೋ ಗೊತ್ತಿಲ್ಲ’ ಎಂದರು. ‘ಎಫ್‌ಎಸ್‌ಎಲ್‌ …

Read More »

ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಇವತ್ತು ನಾಯಕರ ದಂಡು ಆಗಮಿಸಿತು, ಮಾದ್ಯಮಗಳ ಲೋಗೋ ನೋಡಿದ್ರೆ ಸಾಕು ರಾಜಕಾರಣಿ ಗಳು ಪ್ರತಿಕ್ರಿಯೆ ನೀಡಲಿಲ್ಲ.

ಬೆಳಗಾವಿ- ಬಜೆಟ್ ಅಧಿವೇಶನ ಮುಗಿಸಿಕೊಂಡು ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಇವತ್ತು ನಾಯಕರ ದಂಡು ಆಗಮಿಸಿತು,ಏನಾದ್ರು ಬಿಸಿಬಿಸಿ ಸುದ್ಧಿ ಸಿಗಬಹುದು ಎಂದು ಮಾದ್ಯಮ ಪ್ರತಿನಿಧಿಗಳು ಮೈಕ್ ಹಿಡಿದು ನಿಂತರೆ ಅಲ್ಲಿ ನಡೆದಿದ್ದು ನಾ…ಒಲ್ಲೇ….ನೀ..ಒಲ್ಲೆ… ಮಾದ್ಯಮಗಳ ಲೋಗೋ ನೋಡಿದ್ರೆ ಸಾಕು ರಾಜಕಾರಣಿ ಗಳು ಮಾತನಾಡಲು ನಾ.ಮುಂದೆ ನೀ ಮುಂದೆ ಅಂತಾರೆ ಆದ್ರೆ ಇವತ್ತು ಸಾಂಬ್ರಾ ಏರ್ ಪೋರ್ಟ್ ನಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಸಂಗ ಎದುರಾಯಿತು.ಶ್ರೀಮಂತ ಪಾಟೀಲ ಅವರನ್ನು ಹೊರತು ಪಡಿಸಿದರೆ …

Read More »

ಪೊಲೀಸರೇ ಕೋವಿಡ್ ಲಸಿಕೆ ಪಡೆಯಿರಿ: ಐಜಿಪಿ

ಕಲಬುರಗಿ: ಕೋವಿಡ್ ಸೋಂಕು ನಿರ್ಮೂಲನೆ ಆಗದೇ ಇರುವುದರಿಂದ ಸೋಂಕಿನಿಂದ ರಕ್ಷಣೆಗೆ ಇದುವರೆಗೂ ಲಸಿಕೆ ಪಡೆದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಲಸಿಕೆ ಸ್ವೀಕರಿಸಬೇಕೆಂದು ನಗರ ಪೊಲೀಸ್‌ ಆಯುಕ್ತ, ಐಜಿಪಿ ಎನ್‌. ಸತೀಶಕುಮಾರ ತಿಳಿಸಿದರು. ನಗರದ ಪೊಲೀಸ್‌ ಮೈದಾನದಲ್ಲಿ ಮಂಗಳವಾರದಿಂದ ಆರಂಭವಾದ ನಗರ ಪೊಲೀಸ್‌ ಆಯುಕ್ತಾಲಯದ ಪ್ರಥಮ ಪೊಲೀಸ್‌ ಕ್ರೀಡಾಕೂಟವನ್ನು ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪೊಲೀಸರು ಸದಾ ಒತ್ತಡದ ನಡುವೆಯೇ ಕೆಲಸ ಮಾಡುವುದು ಅನಿವಾರ್ಯ. ಇದರ ನಡುವೆಯೂ …

Read More »