ಹುಬ್ಬಳ್ಳಿ, ಮಾರ್ಚ್ 22: ನೈಋತ್ಯ ರೈಲ್ವೆ ಸದ್ಯ ಸಂಚಾರ ನಡೆಸುತ್ತಿರುವ ಹಬ್ಬದ ವಿಶೇಷ ರೈಲು ಮತ್ತು ಪ್ಯಾಸೆಂಜರ್ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ವಿಸ್ತರಣೆ ಮಾಡಿದೆ. ಮಾರ್ಚ್ ಅಂತ್ಯಕ್ಕೆ ರೈಲುಗಳ ಸಂಚಾರ ಕೊನೆಗೊಳ್ಳಬೇಕಿತ್ತು. ಹಬ್ಬದ ವಿಶೇಷ ಎಕ್ಸ್‌ಪ್ರೆಸ್ ರೈಲು ಮತ್ತು ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಜೂನ್ ತನಕ ವಿಸ್ತರಣೆ ಮಾಡಲಾಗಿದೆ. ಯಾವ-ಯಾವ ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹುಬ್ಬಳ್ಳಿ-ಸಿಕಂದರಾಬಾದ್ ರೈಲು ಮಾರ್ಚ್ 31 ರಿಂದ ಜೂನ್ …
Read More »ಗೋವಾ ಪ್ರವಾಸಿಗರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆಯ ವೇಗ ಹೆಚ್ಚುತ್ತಿರುವ ಹಿನ್ನೆಲೆ ಗೋವಾಗೆ ತೆರಳುವ ಪ್ರತಿಯೊಬ್ಬ ಪ್ರವಾಸಿಗರು ಕೊವಿಡ್-19 ನೆಗೆಟಿವ್ ವರದಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ. ಕೊರೊನಾವೈರಸ್ ನೆಗೆಟಿವ್ ವರದಿ ಕಡ್ಡಾಯಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ. ಕೊವಿಡ್-19 ಶಿಷ್ಟಾಚಾರ ಪಾಲನೆಯ ಉದ್ದೇಶದಿಂದಾಗಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳು ಅಂತರ-ರಾಜ್ಯ ಪ್ರಯಾಣಿಕರಿಗೆ ಕೊವಿಡ್-19 ನೆಗೆಟಿವ್ ವರದಿ …
Read More »ಕನ್ಯಾಕುಮಾರಿ ಟು ಕಾಶ್ಮೀರ: ಕೋವಿಡ್ ವಾರಿಯರ್ ಗಳ ಗೌರವಾರ್ಥ ಕನ್ನಡಿಗನಿಂದ ಪಾದಯಾತ್ರೆ
ಮೈಸೂರು: ಕೋವಿಡ್ ವಾರಿಯರ್ ಗಳ ತ್ಯಾಗಮತ್ತು ಪ್ರಯತ್ನಗಳನ್ನು ಪ್ರಶಸ್ತಿ ನೀಡುವುದು, ಕಲಾಕೃತಿ ರಚನೆ ಸೇರಿ ಅನೇಕ ವಿಧದಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಗುರುತಿಸಿವೆ. ಆದರೆ ಮೈಸೂರಿನ ಈ 33 ವರ್ಷದ ವ್ಯಕ್ತಿ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಕೋವಿಡ್ ವಾರಿಯರ್ ಗಳಿಗೆ ಅದ್ಭುತ ಗೌರವ ಸಲ್ಲಿಸಲು ನಿರ್ಧರಿಸಿದ್ದು ‘ವಾಕ್ ಫಾರ್ ಹ್ಯುಮಾನಿಟಿ’ ಎಂಬ ನೂತನ ಪ್ರಯತ್ನ ಪ್ರಾರಂಬಿಸಿದ್ದಾರೆ. ಮೈಸೂರಿನವರಾದ ಭರತ್ ಪಿ ಎನ್, ಕೋವಿಡ್ ಮುಂಚೂಣಿ ವಾರಿಯರ್ ಗಳ ಶ್ರಮ …
Read More »ಯಾವ ಪುರುಷಾರ್ಥಕ್ಕೆ ಸರ್ಕಾರ ಬೀಳಿಸಿದ್ವೋ ಅನ್ನಿಸ್ತಿದೆ, ಈ ಅಡ್ಜಸ್ಟ್ಮೆಂಟ್ ಸರ್ಕಾರದಲ್ಲಿ ಹೆಚ್ಡಿಕೆ, ಸಿದ್ದು ಮೋಸದ ಪಾಲಿದೆ: ಹೆಚ್.ವಿಶ್ವನಾಥ್
ಮೈಸೂರು: ರಾಜ್ಯದಲ್ಲಿರೋದು ಬಿಜೆಪಿ ಸರ್ಕಾರ ಅಲ್ಲ. ಅದು ನ್ಯಾಷನಲ್ ಸರ್ಕಾರ. ಸಿದ್ದರಾಮಯ್ಯರನ್ನ ಕುಮಾರಸ್ವಾಮಿ ರಕ್ಷಣೆ ಮಾಡ್ತಾರೆ, ಕುಮಾರಸ್ವಾಮಿರವನ್ನ ಸಿದ್ದರಾಮಯ್ಯ ರಕ್ಷಣೆ ಮಾಡ್ತಾರೆ, ಇಬ್ಬರೂ ಸೇರಿ ಯಡಿಯೂರಪ್ಪರನ್ನ ರಕ್ಷಿಸುತ್ತಿದ್ದಾರೆ. ಇದು ಒಬ್ಬೊರಿಗೊಬ್ಬರು ಅಡ್ಜಸ್ಟ್ಮೆಂಟ್ ರಾಜಕಾರಣ. ಇದರಲ್ಲಿ ಯಡಿಯೂರಪ್ಪ ನ್ಯಾಷನಲ್ ಗೌರ್ನ್ಮೆಂಟ್ ಚೀಫ್ ಮಿನಿಸ್ಟರ್. ಅವರು ಬುದ್ದಿ ಚಾತುರ್ಯದಿಂದ ಎಲ್ಲರನ್ನು ಅಡ್ಜಸ್ಟ್ ಮಾಡಿಕೊಂಡಿದ್ದಾರೆ. ಅವರವರ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಈ ರೀತಿ ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ, ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ತಮ್ಮ …
Read More »ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ
ಕೊಪ್ಪಳ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಾರಿನ ಚಾಲಕನಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಥಳಿಸಿದ್ದಾರೆ. ಚಾಲಕ ಅವಾಚ್ಯ ಶಬ್ದ ಉಪಯೋಗಿಸಿದ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಮಹಿಳೆ ಸುಜಾತಾ ಗೋರ್ಲೆಕೊಪ್ಪ ಕೊಪ್ಪಳದ ಕುಕನೂರು ಪಟ್ಟಣ ನಿವಾಸಿ. ಕಾರು ಚಾಲಕ ವಿಜಯ್ ನನ್ನನ್ನು ನಿಂದಿಸಿದ್ದಾನೆಂದು ಆರೋಪಿಸಿ, ಕೊಪ್ಪಳ ಜಿಲ್ಲಾಡಳಿತದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯಲ್ಲೇ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read More »15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳ ನೋಂದಣಿ ನವೀಕರಣವು ಏಪ್ರಿಲ್ 1ರ ಬಳಿಕ ಸಾಧ್ಯವಾಗುವುದಿಲ್ಲ…?
ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ಪ್ರಸ್ತಾವನೆಯು ಅಂತಿಮಗೊಂಡರೆ, 15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳ ನೋಂದಣಿ ನವೀಕರಣವು ಏಪ್ರಿಲ್ 1ರ ಬಳಿಕ ಸಾಧ್ಯವಾಗುವುದಿಲ್ಲ. ಸರ್ಕಾರದ ಎಲ್ಲಾ ವಾಹನಗಳಿಗೆ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರೋದ್ಯಮಗಳು, ಮಹಾನಗರ ಪಾಲಿಕೆ ಮತ್ತು ಸ್ವಾಯತ್ತ ಸಂಸ್ಥೆಗಳ ಎಲ್ಲಾ ವಾಹನಗಳಿಗೂ ಇದು ಅನ್ವಯವಾಗಲಿದೆ. ಈ ಕುರಿತು ಸಚಿವಾಲಯವು ಶನಿವಾರ ಟ್ವೀಟ್ ಮಾಡಿದೆ. ಕರಡು ನಿಯಮಗಳ ಕುರಿತು ಪ್ರತಿಕ್ರಿಯೆ, ಸಲಹೆ, …
Read More »ಲೋಕಸಭಾ ಉಪಚುನಾವಣೆ ಹಿನ್ನೆಲೆ ಎಂ.ಜಿ.ಹಿರೇಮಠ ಅವರನ್ನು ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು – ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ವರ್ಗಾವಣೆ ಮಾಡಲಾಗಿದೆ. ಡಾ.ಕೆ.ಹರೀಶ್ ಕುಮಾರ ಬೆಳಗಾವಿಯ ನೂತನ ಜಿಲ್ಲಾಧಿಕಾರಿಗಳಾಗಿದ್ದಾರೆ. ಹರೀಶ್ ಕುಮಾರ ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಅವರು ಕಾರವಾರ ಜಿಲ್ಲಾಧಿಕಾರಿಗಳಾಗಿಯೂ ಕೆಲಸಮಾಡಿದ್ದಾರೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಎಂ.ಜಿ.ಹಿರೇಮಠ ಬೆಳಗಾವಿ ಜಿಲ್ಲೆಯವರಾಗಿರುವುದರಿಂದ ಅವರನ್ನು ಚುನಾವಣೆ ಸಂದರ್ಭದಲ್ಲಿ ವರ್ಗಾಯಿಸಲಾಗಿದೆ.
Read More »ಬಾಂಬೆ ತಂಡ’ದ ಕ್ಷೇತ್ರಗಳು ಭೂಲೋಕದ ಸ್ವರ್ಗಗಳಾಗಿವೆಯೇ ಯಡಿಯೂರಪ್ಪನವರೇ? ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯ
ಬೆಂಗಳೂರು : ಮಸ್ಕಿಯಲ್ಲಿ ಶಾಸಕರಾಗಿರುವ ಮಹಾತ್ಯಾಗದಿಂದ ಬಿಎಸ್‌ವೈ ಅವರಿಗೆ ಅಧಿಕಾರ ಸಿಕ್ಕು 2 ವರ್ಷಗಳಾಗುತ್ತಾ ಬಂದಿವೆ. ಈ ವರೆಗೆ ಯಾಕಾಗಿರಲಿಲ್ಲ ಮಸ್ಕಿಯ ಅಭಿವೃದ್ಧಿ? ಪ್ರಗತಿಗೆ ಉಪಚುನಾವಣೆ ಮುಹೂರ್ತವಾಗಿತ್ತೇ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಪ್ರಚಾರ ಸಭೆಯಲ್ಲಿ ಹೇಳಿರುವುದು ಗಮನಕ್ಕೆ ಬಂತು. ಬಿಎಸ್‌ವೈ …
Read More »ದುಬೈನಿಂದ ಬಂದ ಪ್ರಯಾಣಿಕನ ವಿಗ್‍ನಲ್ಲಿತ್ತು 5.55 ಕೆಜಿ ಚಿನ್ನ..!
ಚೆನ್ನೈ,ಮಾ.22- ಚಿನ್ನ ಕಳ್ಳಸಾಗಾಣೆಯ ಒಂದು ದೊಡ್ಡ ಜಾಲ ಭಾರತದಲ್ಲಿ ನಡೆಯುತ್ತಿದೆ ಎಂಬುದಕ್ಕೆ ಪದೇ ಪದೇ ಹಲವು ನಿದರ್ಶನಗಳು ಸಿಗುತ್ತವೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಕಳ್ಳ ಮಾರ್ಗದಲ್ಲಿ ತರಲು ಯತ್ನಿಸಿದ್ದ, ಸುಮಾರು 5.55 ಕೆಜಿ ಚಿನ್ನ ಹಾಗೂ ವಿದೇಶಿ ಕರೆನ್ಸಿಗಳನ್ನು ವಾಯುಯಾನ ಕಸ್ಟಮ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಈ ಸಂಬಂಧ ಆರು ಮಂದಿಯನ್ನು ಬಂಸಲಾಗಿದ್ದು, ವಿಚಿತ್ರವೆಂದರೆ ತಮ್ಮ ಬೋಳು ತಲೆಯನ್ನು ಮುಚ್ಚಿಕೊಳ್ಳಲು ವಿಗ್‍ನಲ್ಲಿ , ಕಾಲಚೀಲದಲ್ಲಿ, ಒಳಉಡುಪಿನಲ್ಲಿ ಈ ಚಿನ್ನ ಪತ್ತೆಯಾಗಿದ್ದರೆ …
Read More »ವಿಧಾನ ಪರಿಷತ್ ನಲ್ಲಿ ಮುಂದುವರಿದ ಗದ್ದಲ: ಸದನದ ಸಮಿತಿ ರಚಿಸಲು ಪ್ರತಿಪಕ್ಷ ಪಟ್ಟು
ವಿಧಾನ ಪರಿಷತ್: ರಾಜ್ಯದ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿರುವುದರಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದ ತನಿಖೆಗೆ ಸದನ ಸಮಿತಿ ರಚಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಧರಣಿ ಮುಂದುವರಿಸಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರೂ ಜೆಡಿಎಸ್ ಸದಸ್ಯರು ಒಪ್ಪಲಿಲ್ಲ. ಸದನ ಸಮಿತಿ ರಚಿಸಲೇ ಬೇಕು ಎಂದು ಪಟ್ಟು ಹಿಡಿದರು. ಈ ವೇಳೆ …
Read More »
Laxmi News 24×7