ರಾಜ್ಯದಲ್ಲಿ ಸದ್ಯ ಲಾಕ್ಡೌನ್ ವಿಸ್ತರಣೆಯದ್ದೇ ಚರ್ಚೆ. ಟ್ವಿಟರ್ನಲ್ಲಿ ಸದಾ ಲಾಕ್ಡೌನ್ ವಿಸ್ತರಣೆಯ ಆಗ್ರಹ ಮಾಡುತ್ತಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇದೀಗ ಮತ್ತೆ ತಮ್ಮ ಹೇಳಿಕೆಯನ್ನ ಪುನರುಚ್ಛರಿಸಿದ್ದಾರೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಲಾಕ್ಡೌನ್ ವಿಸ್ತರಣೆ ಮಾಡದೇ ಹೋದಲ್ಲಿ ದೊಡ್ಡ ಅನಾಹುತವೇ ಕಾದಿದೆ ಎಂದು ಹೇಳಿದ್ರು.
ರಾಜ್ಯದ ಸದ್ಯದ ಪರಿಸ್ಥಿತಿಯನ್ನ ನೋಡ್ತಿದ್ರೆ ಲಾಕ್ಡೌನ್ ವಿಸ್ತರಣೆ ಮಾಡದೇ ಬೇರೆ ವಿಧಿ ಇಲ್ಲ ಎಂದೆನಿಸುತ್ತಿದೆ. ಹೀಗಾಗಿ ಜನರ ಜೀವದ ಜೊತೆ ಆಟವಾಡಬೇಡಿ. ಕನಿಷ್ಟ 1 ತಿಂಗಳುಗಳ ಕಾಲ ಲಾಕ್ಡೌನ್ನ್ನು ವಿಸ್ತರಣೆ ಮಾಡಿ.
ಲಾಕ್ಡೌನ್ ವಿಸ್ತರಣೆಯ ಜೊತೆಯಲ್ಲಿ ಬಡ ಜನತೆಯ ಮೇಲೆ ಗಮನ ಹರಿಸಿ. ಅವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ. ಮನೆ ಮನೆಗೆ ದಿನಸಿ ವಸ್ತುಗಳನ್ನ ತಲುಪಿಸುವ ಕೆಲಸ ಮಾಡಿ. ಜನರ ಊಟಕ್ಕೆ ಸರಿಯಾಗಿ ದಾರಿ ಮಾಡಿಕೊಟ್ಟು ಲಾಕ್ಡೌನ್ ವಿಸ್ತರಣೆ ಮಾಡಿ ಎಂದು ಆಗ್ರಹಿಸಿದ್ದಾರೆ.
Laxmi News 24×7