Breaking News

ಯುವತಿಯರೊಂದಿಗೆ ಯುವಕರು ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೋಜು-ಮಸ್ತಿ

Spread the love

ಮಂಡ್ಯ: ಲಾಕ್‍ಡೌನ್ ಅನ್ನು ಲೆಕ್ಕಿಸದೆ ಯುವಕರು ಕೆಆರ್‌ಎಸ್‌ ಹಿನ್ನೀರಿನಲ್ಲಿ ಯುವತಿಯರೊಂದಿಗೆ ಪಾರ್ಟಿ ನಡೆಸಲು ಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

 
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೈಸೂರು ಮೂಲದ ಯುವಕರು-ಯುವತಿಯರನ್ನು ಕರೆದುಕೊಂಡು ಮೋಜು-ಮಸ್ತಿ ಮಾಡಲು ಬಂದಿದ್ದಾರೆ. ಈ ವೇಳೆ ಇದನ್ನು ಕಂಡ ಸ್ಥಳೀಯರು ಇದನ್ನು ಪ್ರಶ್ನೆ ಮಾಡಿದ್ದಾರೆ. ಆಗ ಯುವಕರು ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಕೆಆರ್‍ಎಸ್ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್‌ ನೀರಿನಲ್ಲಿ ಮೋಜು-ಮಸ್ತಿ: ಭದ್ರತೆ ಲೆಕ್ಕಿಸದೆ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ಉದ್ಯಮಿ

ಸ್ಥಳಕ್ಕೆ ಬಂದ ಕೆಆರ್‌ಎಸ್‌ ಪೊಲೀಸರು ಯುವಕರಿಗೆ ಬೈದು ಬುದ್ಧಿ ಹೇಳುವ ಬದಲು ಸ್ಥಳೀಯರು ಮತ್ತು ಯುವಕರ ನಡುವೆ ರಾಜಿ ಮಾಡಿಸಲು ಮುಂದಾಗಿದ್ದಾರೆ. ಈ ಪ್ರಕರಣವನ್ನು ರಾಜಿ ಮಾಡಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾಜಿ ಮಾಡಿಸುವಂತೆ ಸ್ಥಳೀಯ ಪೊಲೀಸರಿಗೆ ಒತ್ತಡ ಹಾಕಿದ ಪರಿಣಾಮ ಪೊಲೀಸರು ಹೀಗೆ ವರ್ತನೆ ಮಾಡಿದ್ದಾರೆ ಎನ್ನಲಾಗಿದೆ.

 

ಕೆಆರ್‌ಎಸ್‌ ಹಿನ್ನೀರಿನಲ್ಲಿ ನಿರ್ಬಂಧ ಇದ್ದರು ಸಹ ಪದೇ ಪದೇ ಈ ಸ್ಥಳದಲ್ಲಿ ಉಳ್ಳವರು ಮೋಜು-ಮಸ್ತಿ ಮಾಡುವ ಪ್ರಸಂಗಗಳು ನಡೆಯುತ್ತಲೇ ಇವೆ. ಪೊಲೀಸರು ಈ ಬಗ್ಗೆ ಶಿಸ್ತು ಕ್ರಮ ವಹಿಸುವ ಬದಲಿಗೆ ಉಳ್ಳವರ ಬೆನ್ನಿಗೆ ನಿಂತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ