Breaking News

ರಾಜ್ಯ

ರಾಜ್ಯದಲ್ಲಿ ಸಿಎಂ ಬದಲಾಗ್ತಾರಾ? ಯಡಿಯೂರಪ್ಪಗೆ ಹೈಕಮಾಂಡ್ ಶಾಕ್ ಕೊಡುತ್ತಾ?

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾಗ್ತಾರಾ? ಯಡಿಯೂರಪ್ಪಗೆ ಹೈಕಮಾಂಡ್ ಶಾಕ್ ಕೊಡುತ್ತಾ? ಅಥವಾ ಅವರ ವಿರೋಧಿ ಬಣಕ್ಕೆ ಶಾಕ್ ಕೊಡುತ್ತಾ? ರಾಜ್ಯ ಬಿಜೆಪಿಯಲ್ಲಿ ಮುಂದೇನು? ಭಿನ್ನಮತ ಶಮನವಾಗುತ್ತಾ ಇಲ್ವಾ? ಈ ಎಲ್ಲಾ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಪ್ರತಿನಿಧಿ ಅರುಣ್ ಸಿಂಗ್ ಈಗಾಗಲೇ ಹೇಳಿದ್ದಾರೆ. ಯಡಿಯೂರಪ್ಪ ಕೂಡ ಇನ್ನು ಎರಡು ವರ್ಷವೂ ನಾನೇ ಸಿಎಂ ಎನ್ನುತ್ತಿದ್ದಾರೆ. ಆದರೆ ಬಿಎಸ್‍ವೈ ವಿರೋಧಿಗಳು …

Read More »

ಬೆಳಗಾವಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಪಾಸಿಟಿವ್ ಪ್ರಕರಣ : 95 ಮಂದಿಯಲ್ಲಿ ಸೋಂಕು ದೃಢ

ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಸೋಮವಾರ ಕೊರೊನಾ ಸೋಂಕಿನ ಪ್ರಮಾಣ ಎರಡಂಕಿಗೆ ಬಂದಿದ್ದು, ಸಕ್ರಿಯ ಪ್ರಕರಣಗಳು ಇಳಿಕೆ ಆಗಿದೆ. ಮಂಗಳವಾರ ಒಂದೇ ದಿನ ಕೇವಲ 95 ಜನರಿಗೆ ಸೋಂಕು ತಗುಲಿದೆ. 797 ಜನ ಗುಣಮುಖರಾಗಿದ್ದಾರೆ. ಸೋಂಕಿನ ಪ್ರಮಾಣ ಇಳಿಮುಖ ಆಗುತ್ತಿರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಈವರೆಗೆ 73687 ಜನರಿಗೆ ಸೋಂಕು ತಗುಲಿದಂತಾಗಿದ್ದು, 68465 ಜನ ಚೇತರಿಸಿಕೊಂಡ0ತಾಗಿದೆ. ಸದ್ಯ 4515 ಸಕ್ರಿಯ ಪ್ರಕರಣಗಳು ಇವೆ. ಬೆಳಗಾವಿ …

Read More »

ಕೊರೋನಾ ಲಸಿಕೆ ಪಡೆಯಲು ಆನ್ಲೈನ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಕಡ್ಡಾಯವಲ್ಲ : ಅರೋಗ್ಯ ಸಚಿವಾಲಯ ಸ್ಪಷ್ಟನೆ

ನವದೆಹಲಿ : ಕೋವಿಡ್-19 ಲಸಿಕೆಗೆ ಆನ್ ಲೈನ್ ನೋಂದಣಿ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಯಾವುದೇ ವಯಸ್ಕರು ಹತ್ತಿರದ ಲಸಿಕೆ ಕೇಂದ್ರಕ್ಕೆ ಹೋಗಿ, ಸ್ಥಳದಲ್ಲೇ ನೋಂದಣಿ ಮಾಡಬಹುದು ಮತ್ತು ಅದೇ ಭೇಟಿಯಲ್ಲಿ ಲಸಿಕೆಯನ್ನು ಪಡೆಯಬಹುದು ಎಂದು ಅದು ಹೇಳಿದೆ. ಪಿಐಬಿ ಹೊರಡಿಸಿದ ಹೇಳಿಕೆಯು, ಕೋವಿನ್ ಪ್ಲಾಟ್ ಫಾರ್ಮ್ ವಾಕ್-ಇನ್ ಗಳನ್ನು ಹೊರತುಪಡಿಸಿ ಲಸಿಕೆಗಳಿಗೆ ನೋಂದಣಿಯ ಅನೇಕ ವಿಧಾನಗಳಲ್ಲಿ ಒಂದಾಗಿದೆ ಎಂದು ಹೇಳಿತು. ಆರೋಗ್ಯ ಕಾರ್ಯಕರ್ತರು ಅಥವಾ …

Read More »

ಕೊವಿಡ್ ಮೂರನೇ ಅಲೆ: ಗರಿಷ್ಠ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮಹಿಳಾ ಇಲಾಖಾ ಅಧಿಕಾರಿಗಳಿಗೆ ಶಶಿಕಲಾ ಜೊಲ್ಲೆ ತಾಕೀತು

ಹಾವೇರಿ: ಮಕ್ಕಳ ಮೇಲೆ ಕೊವಿಡ್ ಮೂರನೇ ಅಲೆಯ ಸಂಭಾವ್ಯ ಪರಿಣಾಮ ನಿಯಂತ್ರಣದ ನಿಟ್ಟಿನಲ್ಲಿ ಸೋಂಕಿನಿಂದ ಮಕ್ಕಳ ರಕ್ಷಣೆ, ಮುನ್ನೆಚ್ಚರಿಕೆ, ಜಾಗೃತಿ, ಪ್ರತ್ಯೇಕ ಕೋವಿಡ್ ವಾರ್ಡ್‍ಗಳ ಸಿದ್ಧತೆ, ಪಾಲಕರಿಗೆ ವ್ಯವಸ್ಥೆ ಕುರಿತಂತೆ ಶಿಶು ಅಭಿವೃದ್ಧಿ ಅಧಿಕಾರಿಗಳು ಕ್ಷೇತ್ರಮಟ್ಟಕ್ಕೀಳಿದು ಕಾರ್ಯನಿರ್ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ತಾಕೀತು ಮಾಡಿದರು. ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಕೊರೊನಾ ಸಂಭಾವ್ಯ …

Read More »

100 ಹೆಚ್ಚುವರಿ ರೈಲು ಸಂಚಾರ ಆರಂಭಿಸಲು ಸಿದ್ಧತೆ

ನವದೆಹಲಿ: ಹಲವಾರು ರಾಜ್ಯಗಳು ಲಾಕ್‌ಡೌನ್‌ ಸಡಿಲಿಕೆ ಮಾಡುತ್ತಿದ್ದು, ಪ್ರಯಾಣಿಕರ ಬೇಡಿಕೆ ಪೂರೈಸುವುದಕ್ಕಾಗಿ ಹೆಚ್ಚು ರೈಲುಗಳ ಕಾರ್ಯಾಚರಣೆ ಮಾಡಲು ಭಾರತೀಯ ರೈಲ್ವೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸುಮಾರು 100 ಹೆಚ್ಚುವರಿ ರೈಲುಗಳನ್ನು ಈ ವಾರವೇ ಓಡಿಸಲು ನಿರ್ಧರಿಸಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಮುಂಗಡವಾಗಿ ಕಾಯ್ದಿರಿಸುವ ದರ್ಜೆಗೆ ಪ್ರಯಾಣಿಕರು ಹೆಚ್ಚು ಟಿಕೆಟ್‌ ಪಡೆಯುತ್ತಿದ್ದಾರೆ. ಇದರಿಂದಾಗಿ ಹೆಚ್ಚು ಅಂತರದ ಸ್ಥಳಗಳ ನಡುವೆ ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳ ಚಾಲನೆ ಮಾಡಲಾಗುವುದು ಎಂದು ಅಧಿಕಾರಿಗಳು …

Read More »

ಅಧಿಕಾರ ಬಿಟ್ಟು ತೊಲಗಲಿ: ಪ್ರತಿಭಟನೆ

ಮಂಡ್ಯ: ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಏರಿಕೆಖಂಡಿಸಿ 3ನೇ ದಿನವಾದ ಭಾನುವಾರ ಹೋಬಳಿವ್ಯಾಪ್ತಿಯ ತಗ್ಗಹಳ್ಳಿ ಜಿಲ್ಲಾ ಪಂಚಾಯತ್‌ ಕ್ಷೇತ್ರದ ಕಾಂಗ್ರೆಸ್‌ಪದಾ ಧಿಕಾರಿಗಳು ಪ್ರತಿಭಟನೆ ನಡೆಸಿದರು. ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿರುವ ಭಾರತ್‌ಪೆಟ್ರೋಲಿಯಂ ಬಂಕ್‌ ಬಳಿ ಜಮಾವಣೆಗೊಂಡಪ್ರತಿಭಟನಾಕಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಜನರ ಶೋಷಣೆ ಮಾಡುವುದೇ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ನೀತಿಯಾಗಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಪ್ರತಿದಿನ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಏರಿಕೆಮಾಡಿಕೊಂಡು, ಜನರ …

Read More »

ಕರೆಂಟ್ ಬಿಲ್, ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಮಾಡುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ: ಡಿ.ಕೆ. ಸುರೇಶ್

ಚನ್ನಪಟ್ಟಣ (ಜೂನ್ 14): ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದಕ್ಕೆ ಏರಿಕೆಯಾಗುತ್ತಲೇ ಇದೆ. ಕೊರೋನಾ ಸಂಕಷ್ಟ ಮತ್ತು ಲಾಕ್​ಡೌನ್ ಸಮಸ್ಯೆಯ ನಡುವೆಯೂ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಹೆಚ್ಚಿಸುತ್ತಲೇ ಇದೆ. ಪರಿಣಾಮ ದಿನೋಪಯೋಗಿ ವಸ್ತುಗಳ ಬೆಲೆಯೂ ಏರುತ್ತಲೇ ಇದ್ದು, ಜನ ಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ವಿರೋಧ ಪಕ್ಷಗಳು ಸತತ ವಾಗ್ದಾಳಿ ನಡೆಸುತ್ತಲೇ ಇದೆ. ಈ ನಡುವೆ ಇಂದು ರಾಮನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಂಸದ …

Read More »

ಅಬಕಾರಿ ಪೊಲೀಸರ ದಾಳಿ 15 ಲಕ್ಷ ಮೌಲ್ಯದ ಗೋವಾ ಮದ್ಯ , ನಾಲ್ವರ ಬಂಧನ..!

ಸಹಾಯಕ ಅಬಕಾರಿ ಕಮಿಷನರ್ ಬೆಳಗಾವಿ ಇವರ ಮಾರ್ಗದರ್ಶನ ಅದರ ಅನ್ವಯ ಗೋಕಾಕ್ ವಲಯದ ಮೂಡಲಗಿ ತಾಲ್ಲೂಕಿನ ಸಂಗನಕೇರಿ ಬಳಿ ಅಬಕಾರಿ ದಾಳಿ ಮಾಡಲಾಗಿದೆ.   ಈ ದಾಳಿಯಲ್ಲಿ 9ಬಾಕ್ಸ್ 76.62 ಲೀ. ಸುಮಾರು ಹದಿನೈದು ಲಕ್ಷ ರೂ ಮೊತ್ತದ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟಾಟಾ ಹೆಕ್ಸಾ ಕಾರ್ ಅನ್ನು ಕೂಡ ಸೀಜ್ ಮಾಡಲಾಗಿದೆ.   ವಶಪಡಿಸಿಕೊಂಡ ಒಟ್ಟು ಮೌಲ್ಯ ರೂ .15,35,000..ಈ ಪ್ರಕರಣವನ್ನು ಶಂಕರ್ ಗೌಡ …

Read More »

5 ಲಕ್ಷ ಲಂಚ ಸ್ವೀಕರಿಸಿದ್ದ ಏಎಸ್‌ಐ ಮನೆ ಮೇಲೆ ಏಸಿಬಿ ದಾಳಿ

ಬೆಂಗಳೂರು : ಲಂಚದ ಪಡೆದ ಆರೋಪದಡಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ದಯಾನಂದ ಸ್ವಾಮಿ ಅಮಾನತುಗೊಂಡ ಬೆನ್ನಲೇ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿರುವ ಮನೆ ಮೇಲೆ 15 ಮಂದಿ ಅಧಿಕಾರಿಗಳ ತಂಡವು ದಾಳಿ ನಡೆಸಿದೆ‌. ಮನೆಯಲ್ಲಿ ದೊರೆತ ದಾಖಲಾತಿ ಪತ್ರಗಳನ್ನು ಪರಿಶೀಲಿಸುತ್ತಿದೆ. ಚರಾಸ್ತಿ ಹಾಗೂ ಸಿರಾಸ್ತಿ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಸುಮಾರು 6 ಕೋಟಿ ರೂ. …

Read More »

ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಶೇ.3.05ಕ್ಕೆ ಇಳಿಕೆ

ಬೆಂಗಳೂರು: ಕೊರೊನಾದಿಂದ ಸಂಕಷ್ಟದಿಂದ ಸಿಲುಕಿದ್ದ ಬೆಂಗಳೂರಿಗರಿಗೆ ಸಿಹಿ ಸುದ್ದಿ ಮಧ್ಯೆ ಆತಂಕ ಸುದ್ದಿ ಎದುರಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಕಡಿಮೆ ಆಗಿದೆ. ಆದರೆ ಪಾಸಿಟಿವಿಟಿ ಪ್ರಮಾಣದಲ್ಲಿ ಏರಿಳಿಕೆ ಆಗ್ತಿದೆ. 5% ಒಳಗಡೆಯೇ ಏರಿಳಿಕೆ ಆಗ್ತಿದೆ. ನಿನ್ನೆ ಬೆಂಗಳೂರಿನಲ್ಲಿ 3.05% ಗೆ ಪಾಸಿಟಿವಿಟಿ ರೇಟ್ ಇಳಿಕೆಯಾಗಿದೆ. ಕಳೆದ 10 ದಿನಗಳಿಂದ ಪಾಸಿಟಿವಿಟಿ ರೇಟ್ ಒಂದೊಂದೆ ಪರ್ಸೆಂಟ್ ಇಳಿಕೆಯಾಗುತ್ತಿದೆ. ಇಂದು ಕೂಡ ಬೆಂಗಳೂರಿನಲ್ಲಿ ಕಡಿಮೆ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ …

Read More »