ಘಟಪ್ರಭ; ನದಿಪಾತ್ರದ ಜನರಿಗೆ ಸುಳ್ಳು ಸುದ್ದಿ ಕೊಡುತ್ತಿರುವ ವಾಟ್ಸಪ್ ಸಂದೇಶಗಳು ಶುದ್ಧ ಸುಳ್ಳು ಎಂದು ಹುಕ್ಕೇರಿ ತಹಸಿಲ್ದಾರ ಡಿ.ಎಚ್.ಹೂಗಾರ ತಿಳಿಸಿದ್ದಾರೆ. ಪ್ರಸ್ತುತ ಹುಕ್ಕೇರಿ ತಾಲೂಕಿನಲ್ಲಿ ಅತಿಯಾಗಿ ಮಳೆ ಸುರಿಯುತ್ತಿದ್ದು ಕಾರಣ ಹುಕ್ಕೇರಿ ತಾಲೂಕಿನ ಯರನಾಳ ಮದಮಕನಾಳ ಗ್ರಾಮಗಳ ಮಧ್ಯೆ ಇರುವ ಸೇತುವೆ ಹಾಗೂ ಪಾಶ್ಚಪೂರ ಕುಂದರಗಿ ಗ್ರಾಮಗಳ ಮಧ್ಯೆ ಇರುವ ಸೇತುವೆಗಳು ಸಂಪೂರ್ಣವಾಗಿ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಹಾಗೂ ಸದರಿ ಗ್ರಾಮಗಳಿಗೆ ತೆರಳಲು ಪರ್ಯಾಯ ಮಾರ್ಗಗಳು ಲಭ್ಯವಿರುತ್ತವೆ …
Read More »2023ರ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ , ಮತ್ತೆ ಸಿಎಂ ನಾವೇ: H.D.K.
ಮಂಡ್ಯ: 2023ರ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾವು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದೇವೆ. ಜೆಡಿಎಸ್ ಪಕ್ಷ ಹೋರಾಡುತ್ತಿರುವುದು ಅಧಿಕಾರಕ್ಕಾಗಿ ಅಲ್ಲ, ನಿಮ್ಮ ಗೌರವಯುತ ಬದುಕು, ನಾಡಿನ ಸಮಸ್ಯೆ ಬಗೆಹರಿಸಲು. ರಾಷ್ಟ್ರೀಯ ಪಕ್ಷಗಳು ಕಿತ್ತಾಟದಲ್ಲಿ ತೊಡಗಿದ್ದು, ರಾಜ್ಯದ ಸಂಪತ್ತು ಲೂಟಿ ಮಾಡಲು ಹೊರಟಿವೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯ ಬಿಜೆಪಿ …
Read More »ಹಳ್ಳಿಗಳ ಜನರಿಗೆ ಲಸಿಕೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಪ್ರಿಯಾಂಕ್ ಖರ್ಗೆ ಕಿಡಿ
ಕಲಬುರ್ಗಿ: ‘ಜಿಲ್ಲೆಯ ಜನಸಂಖ್ಯೆಯಲ್ಲಿ ಇನ್ನೂ ಕೇವಲ ಶೇ 10ರಷ್ಟು ಮಂದಿಗೆ ಮಾತ್ರ ಕೋವಿಡ್ ಲಸಿಕೆ ನೀಡಲಾಗಿದೆ. ಅದರಲ್ಲೂ ಹಳ್ಳಿಗಳ ಜನರಿಗೆ ಲಸಿಕೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದರು. ‘ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸೇನಾನಿಗಳಿಗೇ ಪೂರ್ಣವಾಗಿ ಲಸಿಕೆ ನೀಡಿಲ್ಲ. ಇನ್ನು ನಾಗರಿಕರಿಗೆ ಯಾವಾಗ ನೀಡುತ್ತಾರೆ? ಲಸಿಕೆ ನೀಡುವಲ್ಲಿ ರಾಜ್ಯ ಸರ್ಕಾರ ಕಲಬುರ್ಗಿ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತಾಳಿದ್ದೇ ಈ ಹಿನ್ನಡೆಗೆ ಕಾರಣ’ …
Read More »ನಾಯಕತ್ವ ಬದಲಾವಣೆ ಧ್ವನಿ ಎತ್ತಿ ಉಸ್ತುವಾರಿ ಬಂದ್ರೂ ಭೇಟಿಯಾಗದ ಯತ್ನಾಳ್
ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಭೇಟಿಗೆ ನಾನು ಅವಕಾಶ ಕೇಳಿಲ್ಲ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿರುವ ಅರುಣ್ ಸಿಂಗ್ ಬಿಜೆಪಿ ಕಚೇರಿಯಲ್ಲಿ ಪಕ್ಷದ ಶಾಸಕರು, ಸಚಿವರು, ನಾಯಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅನೇಕರು ಅವರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ಹೇಳಿದ್ದು, ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಾತ್ರ ಅರುಣ್ ಸಿಂಗ್ ಭೇಟಿಗೆ ಸಮಯವನ್ನು ಕೇಳಿಲ್ಲ. ನಾಯಕತ್ವ ಬದಲಾವಣೆ …
Read More »ಮೂಡಲಗಿ-ಧರ್ಮಟ್ಟಿ-ಮಸಗುಪ್ಪಿ ರಸ್ತೆ ಸುಧಾರಣೆಗೆ 7.86 ಕೋಟಿ ರೂ, ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಸುಗಮ ಸಂಚಾರಕ್ಕಾಗಿ ಮೂಡಲಗಿಯಿಂದ ಧರ್ಮಟ್ಟಿ ಮಾರ್ಗವಾಗಿ ಮಸಗುಪ್ಪಿ ರಸ್ತೆ ಸುಧಾರಣೆಗೆ ಪಿ.ಎಂ.ಜಿ.ಎಸ್.ವಾಯ್ ಯೋಜನೆಯಡಿ 7.86 ಕೋಟಿ ರೂಪಾಯಿ ಮೊತ್ತ ಬಿಡುಗಡೆಯಾಗಿದ್ದು, ಎರಡು ತಿಂಗಳೊಳಗೆ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಕೈಗೊಳ್ಳುವಂತೆ ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರದಂದು ತಾಲೂಕಿನ ಮಸಗುಪ್ಪಿ ಕ್ರಾಸ್ ಬಳಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 7.86 ಕೋಟಿ …
Read More »ಮನೆ ಕಾಂಪೌಂಡ್ನಲ್ಲಿದ್ದ ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ, ಸ್ಥಳೀಯರಲ್ಲಿ ಆತಂಕ
ಹಾಸನ: ಮನೆಯ ಕಾಂಪೌಂಡ್ನಲ್ಲಿದ್ದ ಸಾಕುನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಭೈರನಾಯಕನಹಳ್ಳಿಯಲ್ಲಿ ನಡೆದಿದೆ. ತಡರಾತ್ರಿ 2.30ರ ಸಮಯದಲ್ಲಿ ಗ್ರಾಮದೊಳಗೆ ಬಂದಿರುವ ಚಿರತೆ ಗರುಡನಗಿರಿ ರಸ್ತೆಯ ಮಲ್ಲೇಗೌಡ ಎಂಬುವವರ ಮನೆಯ ಕಾಂಪೌಂಡ್ ಒಳಗೆ ಮಲಗಿದ್ದ ನಾಯಿಯನ್ನು ಎಳೆದೊಯ್ದಿದೆ. ಬೆಳಗ್ಗೆ ನಾಯಿ ಕಾಣಿಸದಿದ್ದಾಗ ಮಲ್ಲೇಗೌಡರು ಸಿಸಿಟಿವಿ ಪರಿಶೀಲಿಸಿದ್ದಾರೆ. ಚಿರತೆ ನಾಯಿಯನ್ನು ಹೊತ್ತೊಯ್ಯವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಹಾಗಾಗಿ ಕೂಡಲೇ ಚಿರತೆಯನ್ನು …
Read More »ಮಂತ್ರಾಲಯ: ಜೂ. 22ರಿಂದ ರಾಯರ ದರ್ಶನ ಪುನಾರಂಭ
ರಾಯಚೂರು: ಕೋವಿಡ್-19 ಎರಡನೇ ಅಲೆ ಹೆಚ್ಚಾಗಿದ್ದ ಕಾರಣ ಸ್ಥಗಿತಗೊಂಡಿದ್ದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ಜೂ.22ರಿಂದ ಪುನಾರಂಭಗೊಳ್ಳಲಿದೆ. ಸರ್ಕಾರದ ಮಾರ್ಗಸೂಚಿಗಳನ್ವಯ ದರ್ಶನಕ್ಕೆ ಶ್ರೀ ಮಠದ ಆಡಳಿತ ಮಂಡಳಿ ಅವಕಾಶ ಮಾಡಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಠಕ್ಕೆ ಬರಲಾಗದ ಭಕ್ತರು https://www.srsmatha.org/online ಮೂಲಕ ರಾಯರ ದರ್ಶನ ಪಡೆಯಬಹುದು ಎಂದು ಮಠದ …
Read More »ಹೊಳೆ ಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಬಂಧನ
ಬಾಗಲಕೋಟೆ: ಬೆಳಗಾವಿ ಜಿಲ್ಲೆಯ ಖಾನಾಪುರ ಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಘಟಪ್ರಭಾ ನದಿಯಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಪರಿಣಾಮ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಜಲದಿಗ್ಬಂಧನ ಎದುರಿಸುವಂತಾಗಿದೆ. ಒಳಹರಿವಿನ ಪ್ರಮಾಣ ಹೆಚ್ಚಾದ ಪರಿಣಾಮದಿಂದಾಗಿ ಭಕ್ತರಿಗೆ ದೇವರ ಪೂಜೆ ದರ್ಶನ ಭಾಗ್ಯ ಇಲ್ಲದಂತಾಗಿದ್ದು, ದೇಗುಲದ ಮುಂಭಾಗದ ಮೆಟ್ಟಿಲು, ಕಟ್ಟೆಯವರೆಗೆ ಎರಡು ಅಡಿಯಷ್ಟು ನೀರು ನಿಂತಿದೆ. ಇದೇ ರೀತಿ ನೀರಿನ ಪ್ರಮಾಣ ಹೆಚ್ಚಾದರೆ …
Read More »ಜೈಲಿನಲ್ಲಿರುವ ವಂಚಕ ಯುವರಾಜ ಸ್ವಾಮಿಯಿಂದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಗೆ ದೂರವಾಣಿ ಕರೆ?
ಬೆಂಗಳೂರು: ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಅರವಿಂದ ಬೆಲ್ಲದ ಅವರದ್ದು. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಅರವಿಂದ ಬೆಲ್ಲದ ಅವರನ್ನು ಕೆಲವರು ಮುಂದಿನ ಮುಖ್ಯಮಂತ್ರಿ ಎಂದೂ ಬಿಂಬಿಸುತ್ತಿದ್ದಾರೆ. ದೆಹಲಿ ಭೇಟಿ- ಆರ್ ಎಸ್‌ಎಸ್ ನಾಯಕ ಭೇಟಿ ಎಂದು ಸದ್ಯ ಕೆಲವು ದಿನಗಳಿಂದ ಪ್ರಚಾರದಲ್ಲಿರುವ ಬೆಲ್ಲದ ಅವರಿಗೆ ವಂಚಕ ಜೈಲಿನಲ್ಲಿರುವ ವಂಚಕ ಯುವರಾಜ್ ಸ್ವಾಮಿಯಿಂದ ಕರೆಗಳು ಬರುತ್ತಿದೆಯಂತೆ! ಈ ಬಗ್ಗೆ ಸ್ವತಃ ಶಾಸಕ …
Read More »B.S.Y. ಉತ್ತಮ ಕೆಲಸ ಮಾಡಿದ್ದಾರೆ ; ಅರುಣ್ ಸಿಂಗ್
ಬೆಂಗಳೂರು: ಪಕ್ಷ ಸಂಘಟನೆ ಹಾಗೂ ಕೊವಿಡ್ ಸಂಬಂಧ ನಾನು ಇಲ್ಲಿ ಚರ್ಚೆ ಮಾಡಲಿದ್ದೇನೆ. ರಾಜ್ಯ ಸರ್ಕಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿಯ ಉಸ್ತುವಾರಿಯೂ ಆಗಿರುವ ಅರುಣ್ ಸಿಂಗ್ ತಿಳಿಸಿದ್ದಾರೆ. ರಾಜ್ಯಕ್ಕೆ ಭೇಟಿ ನೀಡಿರುವ ಉದ್ದೇಶವನ್ನು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟ ಪಡಿಸಿದ್ದಾರೆ. ರಾಜ್ಯ ಸರ್ಕಾರ ಎರಡು ಪ್ಯಾಕೇಜ್ಗಳನ್ನು ಘೋಷಿಸಿದೆ. ಆ ಮೂಲಕ, ಸಂಕಷ್ಟದಲ್ಲಿ ಇರುವವರಿಗೆ ನೆರವಾಗಿದೆ. …
Read More »
Laxmi News 24×7