Breaking News

ರಾಜ್ಯ

ಯಾರಿಗೆ, ಯಾವ ಖಾತೆ? ಎಲ್ಲ 77 ಸಚಿವರ ಖಾತೆಗಳ ವಿವರ

ನವದೆಹಲಿ – ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಕರ್ನಾಟಕದ ರಾಜೀವ ಚಂದ್ರಶೇಖರ್ ಗೆ ಕೌಶಲ್ಯಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ, ಶೋಭಾ ಕರಂದ್ಲಾಚೆಗೆ ಕೃಷಿ ಹಾಗೂ ರೈತರ ಕಲ್ಯಣ, ನಾರಾಯಣ ಸ್ವಾಮಿಗೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮತ್ತು ಭಗವಂತ ಖೂಬಾಗೆ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿದೆ.   Narendra Modi Prime Minister and also in-charge of:Ministry of Personnel, …

Read More »

ಕೋವಿಡ್ ನಿಯಮ ಪಾಲಿಸಿಲ್ಲ ಅಂದ್ರೆ ಈಗಿರುವ ವಿನಾಯ್ತಿ ರದ್ದು – ಮತ್ತೆ ಲಾಕ್‍ಡೌನ್ ಬಗ್ಗೆ ಸಿಎಂ ಮಾತು

ಬೆಂಗಳೂರು: ಅನ್‍ಲಾಕ್ ಬಳಿಕ ಸೋಂಕಿನ ಪ್ರಮಾಣ ಏರುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಬಿಗಿಕ್ರಮದ ಬಗ್ಗೆ ಮಾತು ಆಡಿದ್ದಾರೆ. ಒಂದು ವೇಳೆ ಕೋವಿಡ್ ನಿಯಮಗಳನ್ನು ಪಾಲಿಸದೇ ಹೋದರೆ ಈಗ ನೀಡಲಾಗಿರುವ 15 ದಿನಗಳ ವಿನಾಯ್ತಿಯನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಜುಲೈ 3ರಂದು 15 ದಿನಗಳವರೆಗೆ ಅಂದರೆ ಜುಲೈ 19ರವರೆಗೆ ಅನ್‍ಲಾಕ್ ಘೋಷಣೆ ಮಾಡಿದ್ದಾಗಲೂ ಕೋವಿಡ್ ನಿಯಮ ಪಾಲಿಸಿಲ್ಲ ಎಂದರೆ ಮತ್ತೆ ಬಿಗಿಕ್ರಮದ ಎಚ್ಚರಿಕೆ ನೀಡಿದ್ದರು. ಈಗ ರಾಜ್ಯದಲ್ಲಿ ಮತ್ತೆ …

Read More »

IMA: ಐಎಂಎ ಪ್ರಕರಣ- ಮಾಜಿ ಸಚಿವ ರೋಷನ್​ ಬೇಗ್​ ಆಸ್ತಿ ಜಪ್ತಿ ಮಾಡಿದ ಸರ್ಕಾರ

ಬೆಂಗಳೂರು: ಐಎಂಎ ಪ್ರಕರಣದಲ್ಲಿ ಕೇಳಿಬಂದಿದ್ದ ಪ್ರಮುಖ ಹೆಸರುಗಳಲ್ಲಿ ಮಾಜಿ ಸಚಿವ ರೋಷನ್​ ಬೇಗ್​ ಕೂಡ ಒಬ್ಬರು.  ಐಎಂಎ ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ ನಿಂದ ರೋಷನ್ ಬೇಗ್ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪದಡಿ 2020ರ ನವೆಂಬರ್ 22 ರಂದು ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು. ಆ ನಂತರ ಜಾಮೀನು ಪಡೆದು ಹೊರಗೆ ಬಂದಿದ್ದರು. ಪ್ರಮುಖ ಆರೋಪಿ ಮನ್ಸೂರ್​ ಅಲಿಖಾನ್​ನಿಂದ ಅಕ್ರಮವಾಗಿ ಹಣ ಪಡೆದಿದ್ದಾರೆ …

Read More »

ಮೋದಿ ಕ್ಯಾಬಿನೆಟ್​​ನಲ್ಲಿ ರಾಜ್ಯದಿಂದ 6 ಮಂದಿಗೆ ಸಚಿವ ಸ್ಥಾನ

ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆ ಹಿನ್ನೆಲೆ ರಾಜ್ಯದಿಂದ ಒಟ್ಟು 6 ಮಂದಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ಹೊರತಾಗಿಯೂ ರಾಜ್ಯದಿಂದ 6 ಮಂದಿ ಕೇಂದ್ರ ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಎನ್ನಲಾಗಿದೆ. ರಾಜ್ಯದಿಂದ ಒಟ್ಟು 6 ಮಂದಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನಮಾನ ಸಾಧ್ಯತೆ 1. ನಿರ್ಮಲಾ ಸೀತಾರಾಮನ್- ಕರ್ನಾಟಕದಿಂದ ಆಯ್ಕೆಯಾದ ರಾಜ್ಯಸಭಾ …

Read More »

ಸಿಎಮ್ ಕುಟುಂಬದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ : ಯತ್ನಾಳ್

ಸಿಎಮ್ ಕುಟುಂಬದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತುತ್ತಿಲ್ಲ ಎಂಬ ಯತ್ನಾಳ್ ಆರೋಪಕ್ಕೆ ಗದಗದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಎಸ್ ಆರ್ ಪಾಟೀಲ ಸಿಡಿಮಿಡಿ ವ್ಯಕ್ತಪಡಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಬೇಕೆಂದು ಹುಟ್ಟಿದ ಪಕ್ಷ ಕಾಂಗ್ರೆಸ್ ವಾಗಿದೆ. ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ನೀಡಿದವರು. ನಮಗೆ ಧ್ವನಿ ಎತ್ತುವಿದು ಗೊತ್ತಿಲ್ಲವೆ. ನಾನು ಭಾರತೀಯ ಅಂತಾ ಹೆಮ್ಮೆಯಿಂದ ಹೇಳುವಂತೆ ಮಾಡಿದ ಪಕ್ಷ ನಮ್ಮದು. 60 ವರ್ಷದಲ್ಲಿ ನಿರ್ಮಾಣ ಮಾಡಿದ ಶಕ್ತಿಶಾಲಿ ರಾಷ್ಟ್ರವನ್ನ ಬಿಜೆಪಿ …

Read More »

ಪ್ರಜ್ವಲ್ ಕೂಡ ದೇವೇಗೌಡರ ಪ್ರಾಡಕ್ಟೆ. ಸುಮಲತಾ ವಿರುದ್ಧ ಭುಗಿಲೆದ್ದ ಆಕ್ರೋಶ

ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನ ಡಿವೈಡಂಡ್ ರೂಲ್ ಮಾಡುವ ಪ್ರಯತ್ನವನ್ನ ಸಂಸದೆ ಸುಮಲತಾ ಮಾಡ್ತಿದ್ದಾರೆ. ಇಂತಹ ನೀಚ ರಾಜಕಾರಣವನ್ನು ಈ ಹಿಂದೆ ಬ್ರಿಟಿಷರು ಮಾಡಿದ್ದರು. ಅದೇ ಕೆಲಸವನ್ನು ನೀವೀಗ ಮಾಡ್ತಿದ್ದೀರಾ. ಪ್ರಜ್ವಲ್ ರೇವಣ್ಣರನ್ನು ನೋಡಿ ಕಲಿಯಿರಿ ಎನ್ನುತ್ತೀರಲ್ಲಾ… ಪ್ರಜ್ವಲ್ ಕೂಡ ದೇವೇಗೌಡರ ಪ್ರಾಡಕ್ಟೆ ಎಂದು ಸುಮಲತಾ ವಿರುದ್ಧ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ. ಸುಮಲತಾ ಮತ್ತು ಎಚ್​.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಇದೀಗ ಎಚ್​ಡಿಕೆ ಪರ ರವೀಂದ್ರ …

Read More »

ಕಾಂಗ್ರೆಸ್ ನಲ್ಲಿ ಮುಂದುವರಿದ ಸಿಎಂ ಫೈಟ್; ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಎಂದ ನಲಪಾಡ್

ಉಡುಪಿ: ಕಾಂಗ್ರೆಸ್ ಪಾಳಯದಲ್ಲಿ ಸ್ವಲ್ಪ ತಣ್ಣಗಾಗಿದ್ದ ಸಿಎಂ ಅಭ್ಯರ್ಥಿ ವಿಚಾರ ಇದೀಗ ಮತ್ತೆ ತಾರಕಕ್ಕೇರಿದೆ. ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಯೂತ್ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಹೇಳಿಕೆ ನೀಡಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ನಲಪಾಡ್, ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ನಿಮಗೆ ಯಾರೂ ಸಹಾಯ ಮಾಡಿಲ್ಲ ಕಾಂಗ್ರೆಸ್ ಮಾತ್ರ ನಿಮ್ಮ ಕಷ್ಟಕ್ಕೆ ಸ್ಪಂದಿಸಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ …

Read More »

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನವದೆಹಲಿ: ಇಂದು ಸಂಜೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುತ್ತಿರುವ ಬೆನ್ನಲ್ಲೇ ಹಲವು ಹಿರಿಯ ಸಚಿವರಿಗೆ ಕೊಕ್ ನೀಡಲಾಗಿದ್ದು, ಇದೀಗ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸ್ಥಾನಕ್ಕೆ ಸದಾನಂದಗೌಡರು ರಾಜೀನಾಮೆ ನೀಡಿದ್ದಾರೆ. ಸದಾನಂದಗೌಡರಿಗೆ ರಾಜ್ಯ ರಾಜಕರಣದತ್ತ ಗಮನ ಹರಿಸಲು ಸೂಚಿಸಲಾಗಿದೆ ಎನ್ನಲಾಗಿದೆ.   ಇನ್ನು ಸದಾನಂದಗೌಡರಿಂದ ತೆರವಾದ ಸ್ಥಾನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಆಯ್ಕೆ …

Read More »

ಕೇಂದ್ರ ಸಚಿವ ಸ್ಥಾನಕ್ಕೆ `ರಮೇಶ್ ಪೋಕ್ರಿಯಾಲ್ ನಿಶಾಂಕ್’ ರಾಜೀನಾಮೆ

ನವದೆಹಲಿ : ಇಂದು (ಬುಧವಾರ) ಸಂಜೆ ಕೇಂದ್ರ ಸಚಿವರ ಪರಿಷತ್ತಿನ ಪುನರ್ರಚನೆ ಮತ್ತು ವಿಸ್ತರಣೆಯ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವ್ರು ತಮ್ಮ ಅಧಿಕೃತ ನಿವಾಸದಲ್ಲಿ ಸಚಿವ ಹುದ್ದೆಯ ಸಂಭಾವ್ಯರನ್ನ ಭೇಟಿಯಾದರು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಧಾನಿ ನಿವಾಸದಲ್ಲಿ ಉಪಸ್ಥಿತರಿದ್ದರು.   …

Read More »

ಬಳ್ಳಾರಿ: ಭಾರೀ ಮಳೆಗೆ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋದ ದಂಪತಿ

ವಿಜಯನಗರ: ನಿನ್ನೆ ಸುರಿದ ಭಾರೀ ಮಳೆಗೆ ಗಂಡ ಹೆಂಡತಿಯಿಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಹೂವಿನಹಡಗಲಿಯಲ್ಲಿ ನಡೆದಿದೆ. ಹಗರಿ ಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಮೊತ್ಕೂರು ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ (55) ಹಾಗೂ ಅವರ ಪತ್ನಿ ಗದಗ ಜಿಲ್ಲೆಯಿಂದ ವಾಪಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೂವಿನಹಡಗಲಿ ತಾಲೂಕಿನ ಪೂರ್ವ ಮತ್ತು ಪಶ್ಚಿಮ ಕಾಲ್ವಿ ಗ್ರಾಮಗಳ ಬಳಿ ಇರುವ ಹಳ್ಳದಲ್ಲಿ ನಿನ್ನೆ ದಂಪತಿ ಕೊಚ್ಚಿಹೋಗಿದ್ದು, ಮಲ್ಲಿಕಾರ್ಜುನ ಇಂದು …

Read More »