Breaking News

ರಾಜ್ಯ

ಏಕಲವ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ದೇವನಹಳ್ಳಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2020ನೇ ಸಾಲಿನ ಏಕಲವ್ಯ ಪ್ರಶಸ್ತಿ ಮತ್ತು ನಗದು ಪುರಸ್ಕಾರಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಏಕಲವ್ಯ ಪ್ರಶಸ್ತಿಗೆ ಕಳೆದ 5 ವರ್ಷದಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಜಿಲ್ಲೆಯ ಕ್ರೀಡಾಪಟುಗಳು ಹಾಗೂ 2020ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ರಾಜ್ಯ ಪ್ರತಿನಿಧಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ …

Read More »

ಬೀದಿಯಲ್ಲಿ ಫೋಟೋ ಹಾಕಿ ಪೋಸ್ ಕೊಡುವ ಮೋದಿಗೆ ಲಸಿಕೆ ಪೂರೈಸುವ ಜ್ಞಾನವಿಲ್ಲವೆ : ಗುಂಡೂರಾವ್

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಭೀತಿ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ರಾಜ್ಯದ ಬಹುತೇಕ ಕಡೆ ಕೋವಿಡ್ ಲಸಿಕೆಯ ಅಭಾವವಿದೆ. ರಾಜ್ಯಗಳಿಗೆ ಅಗತ್ಯ ಪ್ರಮಾಣದ ಲಸಿಕೆ ಒದಗಿಸುವುದು ಕೇಂದ್ರದ ಜವಬ್ಧಾರಿ. ಆದರೆ ಕೇಂದ್ರ ಲಸಿಕೆ ಪೂರೈಸುವಲ್ಲಿ ವಿಫಲವಾಗಿದೆ‌ ಎಂದು ಕೇಂದ್ರದ ವಿರುದ್ಧ ಗುಡುಗಿದ್ದಾರೆ. ಲಸಿಕಾ ಅಭಿಯಾನದ ಬಗ್ಗೆ ಹಾದಿ ಬೀದಿಯಲ್ಲಿ ಫೋಟೋ ಹಾಕಿಕೊಂಡು ಪೋಸ್ ಕೊಡುವ …

Read More »

ಮೃತ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಬಿಎಸ್‌ವೈ

ಗುಂಡ್ಲುಪೇಟೆ: ಸಿಎಂ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬೊಮ್ಮಲಾಪುರ ರವಿ ಅವರ ಕುಟುಂಬದವರಿಗೆ ಯಡಿಯೂರಪ್ಪ ಅವರು ಶುಕ್ರವಾರ ಸಾಂತ್ವನ ಹೇಳಿ ವೈಯಕ್ತಿಕವಾಗಿ 5 ಲಕ್ಷ ರೂ. ನೆರವು ನೀಡಿದರು. ರವಿ ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಯಡಿಯೂರಪ್ಪ ಸಾಂತ್ವನ ಹೇಳಿದರು. ಮನೆಯವರು ಸಂಕಷ್ಟದಲ್ಲಿರುವುದನ್ನು ಅರಿತು ಮನೆ ನಿರ್ಮಾಣಕ್ಕೂ ಮುಂದೆ 5 ಲಕ್ಷ ರೂ. ನೆರವು ನೀಡುವುದಾಗಿ ಭರವಸೆ ನೀಡಿದರು. ಗುಂಡ್ಲುಪೇಟೆಗೆ ಹೆಲಿಕಾಪ್ಟರ್ ಮುಖಾಂತರ ಆಗಮಿಸಿದ್ದ …

Read More »

ಐ ಲವ್​ ಯೂ, ಯೂ ಮಸ್ಟ್​ ಲವ್​ ಮೀ ಅಂತ ಯುವತಿ ಮೇಲೆ ಹಲ್ಲೆ ಮಾಡಿದ ಮ್ಯಾನೇಜರ್​

ಬೆಂಗಳೂರ: ಪಿಜ್ಜಾಹಟ್​ನಲ್ಲಿ ಯುವತಿ ಮೇಲೆ ಹಲ್ಲೆ ನಡೆಸಿರೋ ಘಟನೆ ಬಸವನಗುಡಿಯ ರಾಮಕೃಷ್ಣ ಆಶ್ರಮದ ಬಳಿ ನಡೆದಿದೆ. ರಾಮಕೃಷ್ಣ ಆಶ್ರಮದ ರಸ್ತೆಯಲ್ಲಿರೋ ಪಿಜ್ಜಾ ಹಟ್ನಲ್ಲಿ ಮ್ಯಾನೇಜರ್​ ಯುವತಿಯ ಕಪಾಳಕ್ಕೆ ಮನಸೋ ಇಚ್ಚೆ ಥಳಿಸಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಸಂತ್ರಸ್ತೆಯನ್ನ ಲವ್ ಮಾಡುವಂತೆ ಮ್ಯಾನೇಜರ್ ಪೀಡಿಸ್ತಿದ್ದ, ಆದ್ರೆ ಯುವತಿ ನಿರಾಕರಿಸಿ ಮತ್ತೊಬ್ಬ ಯುವಕನನ್ನ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಷಯ ತಿಳಿದು ಯುವತಿ ಮೇಲೆ ಮ್ಯಾನೇಜರ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ, ಯುವತಿಗೆ …

Read More »

ರಸ್ತೆ ಅಪಘಾತ: ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಸಾವು

ಮಡಿಕೇರಿ : ಕಾರು ಅಪಘಾತದಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರವೀಂದ್ರನ್ ಮೃತಪಟ್ಟಿರುವ ಘಟನೆ ಹುಣಸೂರು ಸಮೀಪದ ಚಿಲ್ಕುಂದ ಗ್ರಾಮದ ಸಮೀಪ ನಡೆದಿದೆ. ಕರ್ತವ್ಯಕ್ಕಾಗಿ ತಮ್ಮ ಕಾರಿನಲ್ಲಿ ಮೈಸೂರಿನಿಂದ ಸೋಮವಾರಪೇಟೆಗೆ ತೆರಳುತ್ತಿದ್ದ ಸಂದರ್ಭ ಚಿಲ್ಕುಂದ ಗ್ರಾಮದ ಸಮೀಪ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಪರಿಣಾಮ ತೀವ್ರಗಾಯ ಗೊಂಡಿದ್ದರು. ತಕ್ಷಣವೇ ಮೈಸೂರಿನ ಅಪಲೋ ಆಸ್ಪತ್ರೆಗೆ ಸಾಗಿಸಲಾಯಿತಾದರು ದಾರಿ ಮಧ್ಯೆ ಮೃತಪಟ್ಟಿದ್ದರು. ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ತಂಗಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ …

Read More »

ಪದವಿ ಕಾಲೇಜುಗಳ ಪ್ರವೇಶಾತಿ ಹೆಚ್ಚಳ ನಿರೀಕ್ಷೆ

ಭದ್ರಾವತಿ: ಇಲ್ಲಿನ ಸರ್ಕಾರಿ ಪದವಿ ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶಾತಿ ಕೊರತೆ ಎದುರಿಸುತ್ತಿದ್ದವು. ಆದರೆ, ಈ ಬಾರಿಯ ಪಿಯು ಫಲಿತಾಂಶ ಆ ಕೊರತೆಯನ್ನು ನೀಗಿಸುತ್ತಿದ್ದು, ಸದ್ಯ 400 ಪ್ರವೇಶಾತಿ ಅರ್ಜಿಗಳು ಖಾಲಿಯಾಗಿವೆ. ಈ ಬೆಳವಣಿಗೆ ಪ್ರವೇಶ ಹೆಚ್ಚಳದ ನಿರೀಕ್ಷೆ ಹುಟ್ಟಿಸಿದೆ. ತಾಲ್ಲೂಕಿನ ಸರ್ಕಾರಿ ಪದವಿ ಕಾಲೇಜುಗಳು ಸುಸಜ್ಜಿತ ಕಟ್ಟಡ, ಮೂಲ ಸೌಲಭ್ಯ, ಲೈಬ್ರರಿ, ಲ್ಯಾಬ್ ಸೇರಿ ಉತ್ತಮ ಅಧ್ಯಾಪಕ ವೃಂದ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ಹೊಂದಿದ್ದರೂ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದವು. …

Read More »

ಪ್ರವಾಸಿಗರಿಗೆ ಸುರಕ್ಷತೆಯ ಕೊರತೆ

ರಬಕವಿ ಬನಹಟ್ಟಿ: ತಾಲ್ಲೂಕಿನ ಹಿಪ್ಪರಗಿ ಜಲಾಶಯ ಈಗ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರತಿನಿತ್ಯ ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಅಥಣಿ ತಾಲ್ಲೂಕಿನ ನೂರಾರು ಜನರು ವೀಕ್ಷಣೆ ಮಾಡಲು ಬರುತ್ತಿದ್ದಾರೆ. ಆದರೆ ಜಲಾಶಯದ ಸುತ್ತಮುತ್ತ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದರಿಂದ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ವೀಕ್ಷಣೆ ಮಾಡಲು ಬಂದ ಜನರು ಜಲಾಶಯದ ಎಲ್ಲ ಕಡೆಗೂ ಓಡಾಡುತ್ತಾರೆ. ಇಲ್ಲಿ ಹಾಕಲಾದ ಕಬ್ಬಿಣ …

Read More »

ಶರಾವತಿಗೆ ಕೆಪಿಸಿಯಿಂದ ಬಾಗಿನ ಅರ್ಪಣೆ

ಕಾರ್ಗಲ್: ನಾಡಿಗೆ ಬೆಳಕು ನೀಡಲು ಲಿಂಗನಮಕ್ಕಿ ಅಣೆಕಟ್ಟೆಯ ಒಡಲಿನಲ್ಲಿ ಭರ್ತಿಯಾಗುವ ಶರಾವತಿಗೆ ಸೋಮವಾರ ಕೆಪಿಸಿ ಇಲಾಖೆಯ ಪರವಾಗಿ ಬಾಗಿನ ಸಮರ್ಪಿಸಲಾಗುತ್ತಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ನಾರಾಯಣ ಗಜಕೋಶ್ ತಿಳಿಸಿದರು. ಇಲ್ಲಿಗೆ ಸಮೀಪದ ಲಿಂಗನಮಕ್ಕಿ ಜಲಾಶಯದಲ್ಲಿ ಸೋಮವಾರ ಶರಾವತಿ ನದಿಗೆ ಬಾಗಿನ ಸಮರ್ಪಿಸಿ ಅವರು ಮಾತನಾಡಿದರು. ‘ಸಮುದ್ರ ಮಟ್ಟದಿಂದ ಗರಿಷ್ಠ 1,819 ಅಡಿ ಎತ್ತರದವರೆಗೂ ಜಲಸಂಗ್ರಹ ಸಾಮರ್ಥ್ಯವಿರುವ ಲಿಂಗನಮಕ್ಕಿ ಜಲಾಶಯದಲ್ಲಿ, 1,795 ಅಡಿ ನೀರು ಭರ್ತಿಯಾದಾಗ ಜಲಾಶಯದ ಅರ್ಧ ಭಾಗ …

Read More »

ಕಾಫಿ ವ್ಯಾಪಾರದಲ್ಲಿ 1 ಕೋಟಿ ನಷ್ಟ: ಚಿಕ್ಕಮಗಳೂರಿನ ವ್ಯಾಪಾರಿ ಬೆಂಗಳೂರಿನಲ್ಲಿ ಆತ್ಮಹತ್ಯೆ

ಬೆಂಗಳೂರು: ಕಾಫಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಕಾರಣ ಶಾಕೀರ್ ಅಹ್ಮದ್(28) ಎಂಬ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ನಿವಾಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಖಾಸಗಿ ಲಾಡ್ಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 1 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದ ಶಾಕೀರ್ ಅಹ್ಮದ್ ಜುಲೈ 13ರಿಂದ ನಾಪತ್ತೆಯಾಗಿದ್ದಾರೆಂದು ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜುಲೈ 29ರಿಂದ ವಜ್ರೇಶ್ವರಿ ಲಾಡ್ಜ್ನಲ್ಲಿ ತಂಗಿದ್ದ ಶಾಕೀರ್, ಇಂದು ಮಧ್ಯಾಹ್ನ ಊಟಕ್ಕೆ ಹೊರ ಬರದಿದ್ದಾಗ ಲಾಡ್ಜ್ ಸಿಬ್ಬಂದಿ …

Read More »

ಹೆಂಡತಿಯೊಂದಿಗೆ ಜಗಳವಾಡಿ, ಕುತ್ತಿಗೆಗೆ ಇರಿದು ಕೊಂದ ಗಂಡ..

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚೂರಿಯಿಂದ ಪತ್ನಿಯ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ ಪತಿಯನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಚಂದ್ರ ಲೇಔಟ್‌ನ ಗಂಗೊಂಡನಹಳ್ಳಿ ನಿವಾಸಿ ಸೈಯದ್ ಶಕೀರ್ (25) ಬಂಧಿತ. ಆತನ ಪತ್ನಿ ಬೇಬಿ ಆಯೇಷಾ (20) ಹತ್ಯೆಯಾದ ಮಹಿಳೆ. ಆರೋಪಿ ಸೈಯದ್​ ಕೆಲ ವರ್ಷಗಳ ಹಿಂದೆ ಆಯೇಷಾಳನ್ನು ವಿವಾಹವಾಗಿದ್ದ. ದಂಪತಿಗೆ 3 ಹಾಗೂ 5 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರು ಕೋಲಾರದ ಬಾಗೆಪಲ್ಲಿಯಿಂದ ಕೆಲ ಸಮಯದ …

Read More »