Breaking News

ಐ ಲವ್​ ಯೂ, ಯೂ ಮಸ್ಟ್​ ಲವ್​ ಮೀ ಅಂತ ಯುವತಿ ಮೇಲೆ ಹಲ್ಲೆ ಮಾಡಿದ ಮ್ಯಾನೇಜರ್​

Spread the love

ಬೆಂಗಳೂರ: ಪಿಜ್ಜಾಹಟ್​ನಲ್ಲಿ ಯುವತಿ ಮೇಲೆ ಹಲ್ಲೆ ನಡೆಸಿರೋ ಘಟನೆ ಬಸವನಗುಡಿಯ ರಾಮಕೃಷ್ಣ ಆಶ್ರಮದ ಬಳಿ ನಡೆದಿದೆ.

ರಾಮಕೃಷ್ಣ ಆಶ್ರಮದ ರಸ್ತೆಯಲ್ಲಿರೋ ಪಿಜ್ಜಾ ಹಟ್ನಲ್ಲಿ ಮ್ಯಾನೇಜರ್​ ಯುವತಿಯ ಕಪಾಳಕ್ಕೆ ಮನಸೋ ಇಚ್ಚೆ ಥಳಿಸಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಸಂತ್ರಸ್ತೆಯನ್ನ ಲವ್ ಮಾಡುವಂತೆ ಮ್ಯಾನೇಜರ್ ಪೀಡಿಸ್ತಿದ್ದ, ಆದ್ರೆ ಯುವತಿ ನಿರಾಕರಿಸಿ ಮತ್ತೊಬ್ಬ ಯುವಕನನ್ನ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಷಯ ತಿಳಿದು ಯುವತಿ ಮೇಲೆ ಮ್ಯಾನೇಜರ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ, ಯುವತಿಗೆ ಕೆಲಸ ಹೋಗುತ್ತೆ ಎನ್ನುವ ಭಯದಲ್ಲಿ ಕಂಪ್ಲೆಂಟ್ ನೀಡೋದಕ್ಕು ಯುವತಿ ಹಿಂದೆ ಮುಂದೆ ನೋಡಿದ್ದಾರೆ. ಸದ್ಯ, ಪಿಜ್ಜಾ ಹಟ್​ನಲ್ಲಿ ಯುವತಿಗೆ ಹಲ್ಲೆ ಮಾಡಲಾಗಿದೆ ಅನ್ನೋ ವಿಡಿಯೋ ವೈರಲ್ ಆಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ