Breaking News

ಬಿಜೆಪಿ ಭಸ್ಮಾಸುರ ಆದರೆ, ಮಮತಾ ಬ್ಯಾನರ್ಜಿ ದುರ್ಗೆ ಇದ್ದಂತೆ’- ಹೀಗಂದಿದ್ಯಾರು?

Spread the love

ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ದುರ್ಗೆ ಹಾಗೂ ಬಿಜೆಪಿ ಸರ್ಕಾರ ಭಸ್ಮಾಸುರ ಇದ್ದಂತೆ. ಕರಾವಳಿ ರಾಜ್ಯದಿಂದ ಭಸ್ಮಾಸುರನ ನಿರ್ಮೂಲನೆ ಮಾಡುವುದು ಖಚಿತ ಅಂತ ಗೋವಾ ಫಾರ್ವರ್ಡ್ ಪಾರ್ಟಿ ನಾಯಕ ಕಿರಣ್‌ ಖಂಡೋಲ್ಕರ್‌ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಿರ್ಮೂಲನೆ ಮಾಡಲು ಪಶ್ಚಿಮ ಬಂಗಾಳದಿಂದ ದುರ್ಗೆಯನ್ನು ಕರೆತರುವುದು ಅನಿವಾರ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಟಿಎಂಸಿ ಜೊತೆಗೆ ಮೈತ್ರಿ ಹೊಂದುವ ಬಗ್ಗೆ ಮಾತುಕತೆ ನಡೆದಿದೆ ಅಂತ ಅವರು ಹೇಳಿದರು.

ಈ ಮಾತಿಗೆ ಸಿಎಂ ಪ್ರಮೋದ್‌ ಸಾವಂತ್‌ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ನೀವು ಶಾಂತದುರ್ಗೆಯನ್ನು ಮನುಷ್ಯರ ಜೊತೆಗೆ, ಅದು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶದ ನಂತರ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರಿಗೆ ಹೋಲಿಕೆ ಮಾಡಲಾಗದು ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ