Breaking News

ರಾಜ್ಯ

ಸೆಪ್ಟಂಬರ್ 3ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳ ಚುನಾವಣೆಗೆ ಒಟ್ಟೂ 385 ಜನರು ಕಣದಲ್ಲಿ

ಬೆಳಗಾವಿ – ಸೆಪ್ಟಂಬರ್ 3ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳ ಚುನಾವಣೆಗೆ ಒಟ್ಟೂ 385 ಜನರು ಕಣದಲ್ಲಿದ್ದಾರೆ. ಬಿಜೆಪಿ 55, ಕಾಂಗ್ರೆಸ್ 45, ಜೆಡಿಎಸ್ 11, ಆಮ್ ಆದ್ಮಿ 27, ಎಐಎಂಐಎಂ 7, ಉತ್ತಮ ಪ್ರಜಾಕೀಯ ಪಾರ್ಟಿ 1, ಎಸ್ ಡಿ ಪಿಐ 1 ಮತ್ತು ಪಕ್ಷೇತರರು 238 ಜನರು ಕಣದಲ್ಲಿದ್ದಾರೆ. for more details click the link New-doc-Aug-26-2021-9.12-PM

Read More »

ಗ್ಯಾಂಗ್‍ರೇಪ್ ಆರೋಪಿಗಳನ್ನು ಗಲ್ಲಿಗೇರಿಸಬೇಕು: ಯತ್ನಾಳ್

ಚಾಮರಾಜನಗರ: ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ, ಗಲ್ಲಿಗೇರಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ. – ಮಲೆಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕು. ಇಂತಹವನ್ನು ಯಾವುದೇ ಪರಿಸ್ಥಿತಿಯಲ್ಲಿ ಸಹಿಸಬಾರದು. ನ್ಯಾಯಂಗ ವ್ಯವಸ್ಥೆಯಲ್ಲಿ ಸಹ ಶೀಘ್ರ ನ್ಯಾಯ ನೀಡುವಂತಾಗಬೇಕು. ಹತ್ತಾರು ವರ್ಷಗಳ ಕಾಲ ಮುಂದೂಡಿದರೆ ಸಾಕ್ಷ್ಯ ನಾಶ, ಬೆದರಿಕೆ ಹಾಕುವ ಕೃತ್ಯ ನಡೆಸುತ್ತಾರೆ. ಹೀಗಾಗಿ …

Read More »

ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು: ಉಮೇಶ್ ಕತ್ತಿ

ಚಾಮರಾಜನಗರ: ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು, ಅದನ್ನು ನಾವು ಆಹಾರ ಭದ್ರತೆಯಡಿ 4.1 ಕೋಟಿ ಫಲಾನುಭವಿಗಳಿಗೆ ವಿತರಿಸುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದರು. ಬಂಡೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು. ಆದರೆ ರಾಜಕೀಯ ಕಾರಣದಿಂದ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡುತ್ತೇನೆ ಎನ್ನುತ್ತಿದ್ದಾರೆ ಅಷ್ಟೇ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. …

Read More »

ಗೃಹ ಸಚಿವರ ಮೇಲೆ ರೇಪ್ ಮಾಡಿರುವವರನ್ನು 376 ಸೆಕ್ಷನ್ ಕೇಸ್ ಹಾಕಿ ಬಂಧಿಸಲಿ: ಡಿ.ಕೆ ಶಿ.

ಬೆಂಗಳೂರು: ಮೈಸೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, 48 ಗಂಟೆಗಳಾದರೂ ಯಾರ ವಿರುದ್ಧವೂ ಎಫ್‍ಐಆರ್ ದಾಖಲಾಗದಿರುವುದು ನಾಚಿಕೆಗೇಡಿನ ವಿಚಾರ. ಆದಷ್ಟು ಬೇಗ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ. ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಮಾಧ್ಯಮದವರ ಜೊತೆ ಮಾತನಾಡಿ, ಗೃಹ ಮಂತ್ರಿಗಳು ತಮ್ಮ ಮೇಲೆ ಕಾಂಗ್ರೆಸ್ ನಾಯಕರು ರೇಪ್ ಮಾಡುತ್ತಿದ್ದಾರೆ ಎಂಬ …

Read More »

ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೇ ಸಂಚಾರ, ಮಹಾರಾಷ್ಟ್ರ ಗಡಿಯಲ್ಲಿ ಕಾಟಾಚಾರದ ಚೆಕಿಂಗ್

ಚಿಕ್ಕೋಡಿ: ಶೀಘ್ರದಲ್ಲೇ ಕೊರೊನಾ ಮೂರನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರ ಮಹಾರಾಷ್ಟ್ರ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ, ಕೊರೊನಾ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶಿಸಲು ಬಿಡಬೇಕೆಂದು ಆದೇಶಿಸಿದೆ. ಆದರೆ ಚೆಕ್ ಪೋಸ್ಟ್‍ಗಳಲ್ಲಿ ಕಾಟಾಚಾರಕ್ಕೆ ಚೆಕ್ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರ ವಲಯದಲ್ಲಿ ಮಹಾರಾಷ್ಟ್ರದ ಗಡಹಿಂಗ್ಲಜ್ ತಾಲೂಕಿನ ಗಡಿಯಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್‍ನಲ್ಲಿ ಅಧಿಕಾರಿಗಳು ಕಾಟಾಚಾರಕ್ಕೆ ಎನ್ನುವಂತೆ …

Read More »

Bagalkot 105 ಕೆ.ಜಿ.ಯ ಚೀಲ ಹೊತ್ತು 1 ಕಿ.ಮೀ. ದೀರ್ಘದಂಡ ನಮಸ್ಕಾರ ಹಾಕಿದ 19ರ ಯುವಕ

ಬಾಗಲಕೋಟೆ: ಕುರಿಗಾಹಿ 19 ವರ್ಷದ ಯುವಕ ಬರೋಬ್ಬರಿ 105 ಕೆ.ಜಿ.ತೂಕದ ಚೀಲವನ್ನು ಬೆನ್ನ ಮೇಲೆ ಹೊತ್ತು 1 ಕಿ.ಮೀ.ವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹುಬ್ಬೇರಿಸುವಂತೆ ಮಾಡಿದ್ದಾನೆ. ಜಿಲ್ಲೆಯ ಬಾದಾಮಿ ತಾಲೂಕಿನ ಕರಡಿಗುಡ್ಡ ಎಸ್.ಎ ಗ್ರಾಮದ 19 ವರ್ಷದ ಕುರಿಗಾಹಿ ಯುವಕ ಆನಂದ್ ಗಳಕ್ಕನವರ್ ವಿಶಿಷ್ಟ ಸಾಧನೆ ಮಾಡಿ ಜನರ ಮನಸ್ಸನ್ನ ಗೆದ್ದಿದ್ದಾರೆ. ಯುವಕ ಬರೋಬ್ಬರಿ 105 ಕೆ.ಜಿ. ತೂಕದ ಚೀಲವನ್ನು ಬೆನ್ನ ಮೇಲೆ ಹೊತ್ತು, ಯಾರ ಸಹಾಯವೂ ಇಲ್ಲದೆ, ದಾರಿಯುದ್ದಕ್ಕೂ …

Read More »

ಒಂದೇ ಕುಟುಂಬದ ನಾಲ್ವರು ಕಾರು ಸಮೇತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಕಾರಿನ ಜೊತೆಗೆ ನೀರಿಗೆ ಹಾರಿ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಸಂಭವಿಸಿದೆ. ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಅದರಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ. ಇನ್ನಿಬ್ಬರು ಪಾರಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ ಭದ್ರಾವತಿ ತಾಲೂಕಿನ ಹಳೇ ಜೆ.ಡಿ.ಕಟ್ಟೆಯವರು. ಸದ್ಯ ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಾಲ್ವರು ಸ್ವಿಫ್ಟ್ ಕಾರಿನ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಲ್ಲಿ ಪತಿ ಮಂಜು, ಅತ್ತೆ ಸುನಂದಮ್ಮ ನೀರು …

Read More »

ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್‌ ವಂಚನೆ ಪ್ರಕರಣ ಅಧಿಕೃತವಾಗಿ ಸಿಐಡಿಗೆ ಹಸ್ತಾಂತರ

ಕಳೆದ 10 ವರ್ಷಗಳಿಂದ ಈ ಸೊಸೈಟಿ ಚಾಲ್ತಿಯಲ್ಲಿತ್ತು. ಅದರ ನಂಬಿಕೆ ಆಧಾರದ ಮೇಲೆ ಜನ ಹೆಚ್ಚು ಹೆಚ್ಚಾಗಿ ಇತ್ತೀಚೆಗೆ ಠೇವಣಿಗಳನ್ನು ಇಡತೊಡಗಿದ್ದರು. ಜನರ ಆ ಅಮಾಯಕ ನಂಬಿಕೆಯನ್ನೇ ಆಧಾರವಾಗಿಸಿಕೊಂಡು ಹಣ ಕ್ರೋಢೀಕರಣವಾಗುತ್ತಿದ್ದಂತೆ ಸೊಸೈಟಿ ಕಡೆಯಿಂದ ವಂಚನೆ ನಡೆದಿದ್ದು, ಇಬ್ಬರು ಪರಾರಿಯಾಗಿದ್ದರು. ಬೆಂಗಳೂರು: ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್‌ ವಂಚನೆ ಪ್ರಕರಣದ ತನಿಖೆ ಸಿಐಡಿಗೆ ಅಧಿಕೃತ ಹಸ್ತಾಂತರವಾಗಿದೆ. ಹನುಮಂತನಗರ ಠಾಣೆ ಪೊಲೀಸರು ಸಿಐಡಿಗೆ ಇಂದು (ಆಗಸ್ಟ್ 26) ಅಧಿಕೃತವಾಗಿ ಪ್ರಕರಣದ ತನಿಖೆಯನ್ನು ಮುಂದುವರೆಸುವಂತೆ …

Read More »

ರಾಯಚೂರಿನಲ್ಲಿ ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ 59 ಮಕ್ಕಳ ರಕ್ಷಣೆ

ಕೂಲಿ ಕೆಲಸಕಕ್ಕೆ ಕರೆದೊಯ್ಯುತ್ತಿದ್ದ ಸುಮಾರು 59 ಮಕ್ಕಳನ್ನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಮತ್ತು ಸಿರವಾರ ಕ್ರಾಸ್ ಬಳಿ ರಕ್ಷಣೆ ಮಾಡಲಾಗಿದೆ. ಜೊತೆಗೆ ಬಾಲ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ 5 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ರಾಯಚೂರು: ಸರ್ಕಾರ 14 ವರ್ಷದವರೆಗೆ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕು. ಜೊತೆಗೆ ಈ ಅವಧಿಯಲ್ಲಿ ಮಕ್ಕಳು ದುಡಿಯುವಂತಿಲ್ಲ ಎಂದು ಭಾರತ ಸಂವಿಧಾನ ತಿಳಿಸಿದೆ. ತಮ್ಮ ತಮ್ಮ ಮನೆಗಳಲ್ಲಿ ಕೆಲಸಗಳನ್ನು ಮಾಡಬಹುದು. ಆದರೆ ಒತ್ತಾಯದಿಂದ ಕೆಲಸಕ್ಕೆ …

Read More »

ಕಾರಾಗೃಹಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ದ ಕಠಿಣ ಕ್ರಮ: ಆರಗ ಜ್ಞಾನೇಂದ್ರ

ಬೆಂಗಳೂರು: ಕಾರಾಗೃಹಗಳಲ್ಲಿ ಯಾವುದೇ ತರಹದ ಅಕ್ರಮ ಚಟುವಟಿಕೆಗಳು ಹಾಗೂ ಭ್ರಷ್ಟಾಚಾರ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಕಾರಾಗೃಹ ಕಚೇರಿಗೆ ಇಂದು ಭೇಟಿ ನೀಡಿ ಕಾರಾಗೃಹ ಗಳ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರಾಗೃಹಗಳಲ್ಲಿ ಅನಧಿಕೃತವಾಗಿ ಹಾಗೂ ಕಾನೂನುಬಾಹಿರವಾಗಿ ಕೈದಿಗಳು ಮಾದಕ ವಸ್ತುಗಳ ನ್ನು ಪಡೆದುಕೊಳ್ಳುತ್ತಿರುವ ಹಾಗೂ ಹೊರ ಜಗತ್ತಿನೊಂದಿಗೆ ವ್ಯವಹರಿಸಲು ಫೋನ್ ಸೌಲಭ್ಯ …

Read More »