Breaking News

ರಾಜಕೀಯ

ಗೋವಾದಲ್ಲಿ ಅಪರಿಚಿತರಿಂದ ಕರ್ನಾಟಕ ಮೂಲದ ಅರ್ಚಕನ ಮೇಲೆ ಹಲ್ಲೆ, ಜೀವ ಬೆದರಿಕೆ

ಪಣಜಿ: ಗೋವಾ ವಾಸ್ಕೊದ ಮುರಗಾಂವ ಕೇಸರವಾಲ್ ಗಣೇಶ ಮಂದಿರದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಬಸವರಾಜ್ ಹೊಸ್ಮಠ ಎಂಬ ಕರ್ನಾಟಕದ ವಿಜಯಪುರ ಜಿಲ್ಲೆಯ ಮೂಲದ ಅರ್ಚಕರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅರ್ಚಕ ಬಸವರಾಜ್ ಹೊಸ್ಮಠ ರವರು ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.   ಕರ್ನಾಟಕದ ವಿಜಯಪುರ ಮೂಲದ ಅರ್ಚಕರಾದ ಬಸವರಾಜ್ ರವರು ಕಳೆದ ಅನೇಕ ವರ್ಷಗಳಿಂದ ಗೋವಾದ ಮುರಗಾಂವ ಗಣೇಶ ಮಂದಿರದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ …

Read More »

ಗೋವಾಕ್ಕೆ ಬರುವ ಪ್ರವಾಸಿಗರು ಕೂಡ ಕಾನೂನು ಪಾಲಿಸಬೇಕು : ಸಿಎಂ ಸಾವಂತ್

ಪಣಜಿ: ”ಗೋವಾದ ಹಣಜುಣದಲ್ಲಿ ಪ್ರವಾಸಿ ಕುಟುಂಬದ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ಪೊಲೀಸರ ನಿರ್ಲಕ್ಷ್ಯದಿಂದ ರಾಜ್ಯಕ್ಕೆ ದೇಶಾದ್ಯಂತ ಅಪಖ್ಯಾತಿಯಾಗುತ್ತಿದೆ. ಗೋವಾ ರಾಜ್ಯವು ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತರುವವರ ಕೃತ್ಯ ಸಹಿಸಲಾಗುವುದಿಲ್ಲ. ಪ್ರವಾಸಿಗರು ಕೂಡ ಕಾನೂನು ಪಾಲಿಸಬೇಕು” ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ. ಮುಖ್ಯಮಂತ್ರಿಗಳು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಗೃಹ, ಕಾರ್ಮಿಕ ಮತ್ತು ಪ್ರವಾಸೋದ್ಯಮ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಘಟನೆಯ ಸಂಪೂರ್ಣ ತನಿಖೆಯ ನಂತರ ದಾಳಿಕೋರನ …

Read More »

5 ಮತ್ತು 8 ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ

ಬೆಂಗಳೂರು : ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶದ ಮೂಲಕ ಎರಡು ವಾರಗಳ ನಂತರ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ರಾಜ್ಯ ಮಂಡಳಿಗೆ ಅನುಮತಿ ನೀಡಿ, ರಾಜ್ಯ ಸರಕಾರದ ಮೂರು ಸುತ್ತೋಲೆಗಳನ್ನು ರದ್ದುಗೊಳಿಸಿದ ಏಕ ಪೀಠದ ಆದೇಶಕ್ಕೆ ತಡೆ ನೀಡಿದೆ.   ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರ ವಿಭಾಗೀಯ ಪೀಠವು ಮಾರ್ಚ್ 10 ರ ಆದೇಶಕ್ಕೆ ತಡೆ …

Read More »

ನೌಕರರ ಮುಷ್ಕರ: ನಾಳೆಯಿಂದ ಕೆಪಿಟಿಸಿಎಲ್​, ಎಸ್ಕಾಂ, ಬೆಸ್ಕಾಂ ಎಲ್ಲವೂ ಬಂದ್!

ಬೆಂಗಳೂರು: ಸರ್ಕಾರಿ ನೌಕರರ ಸಂಘದ ಬಳಿಕ ವೇತನ ಪರಿಷ್ಕರಣೆಗೆ ಸಿಡಿದೆದ್ದ KPTCL ನೌಕರರ ಸಂಘ ನಾಳೆಯಿಂದ ಕೆಪಿಟಿಸಿಎಲ್​, ಎಸ್ಕಾಂ, ಬೆಸ್ಕಾಂ ಎಲ್ಲವೂ ಬಂದ್​ ಮಾಡಿ ಮುಷ್ಕರ ಮಾಡಲಿದೆ. ಇದೀಗ ಮಾರ್ಚ್​ 21ರಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿದ್ದು ಅದರ ಜತೆಗೆ ಈಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಒಕ್ಕೂಟ ಅನಿರ್ದಿಷ್ಟವಧಿ ಮುಷ್ಕರ ಮಾಡುವುದಾಗಿ ಕರೆ ಕೊಟ್ಟು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.   ‘ನಾಳೆಯಿಂದ ರಾಜ್ಯಾದ್ಯಂತ ಕೆಲಸಕ್ಕೆ …

Read More »

ರಟ್ಟಿಹಳ್ಳಿಯಲ್ಲಿ ಕೋಮು ಗಲಭೆ, ಕಲ್ಲು ತೂರಾಟ; ಇಂದು ಎಡಿಜಿಪಿ ಅಲೋಕ್ ಕುಮಾರ್​ ಭೇಟಿ.

ಹಾವೇರಿ: ನಿನ್ನೆ ರಟ್ಟಿಹಳ್ಳಿಯಲ್ಲಿ ಕೋಮು ಗಲಭೆ ಮತ್ತು ಕಲ್ಲು ತೂರಾಟ ನಡೆದಿದೆ. ಈ ಘಟನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಮಧ್ಯರಾತ್ರಿ ಮೂರು ಗಂಟೆಗೆ ರಟ್ಟಿಹಳ್ಳಿ ಪಟ್ಟಣದಲ್ಲಿ ಗಸ್ತು ಹಾಕಿದ್ದಾರೆ.   ಕಲ್ಲು ತೂರಾಟ ಮಾಡಿದ್ದ ಪರಾರಿಯುಗಿದ್ದ ಯುವಕರ ಮನೆಗೆ ಪೊಲಿಸರು ಭೇಟಿ ನೀಡಿದ್ದು ಈ ಸಂದರ್ಭ ಮನೆಗೆ ಬಂದ ಯುವಕರನ್ನು ಬಂಧಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪರಾರಿಯಾಗಿದ್ದ ಯುವಕರಲ್ಲಿ ಯಾರೂ ನಿನ್ನೆ ರಾತ್ರಿ ಅವರ ಮನೆಗೆ ಹೋಗಿಲ್ಲ …

Read More »

ಉದ್ಘಾಟನೆಗೊಂಡ ಎರಡೇ ದಿನಗಳಲ್ಲಿ ಕಿತ್ತುಬಂದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ ಎರಡೇ ದಿನಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮೂಲಗಳ ಪ್ರಕಾರ, ಬೀಳಗಿ ಬೈಪಾಸ್ ನ ಕೊನೆಯಲ್ಲಿ ಗುಂಡಿಗಳು ಕಂಡುಬಂದಿವೆ.   ಈಗ, ಎನ್‌ಎಚ್‌ಎಐ ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಇದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿರುವ ಈ 9,000 ಕೋಟಿ ರೂ.ಗಳ ಕೆಲಸದ ಸಾಲದ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಭ್ರಷ್ಟಾಚಾರದ ಆರೋಪದ ಬಗ್ಗೆ …

Read More »

ಬೆಳಗಾವಿ ನಗರದ ಕ್ಲಬ್ ರೋಡ್ ನಲ್ಲಿರುವ ಸಿಪಿಇಡಿ ಗ್ರೌಂಡ್‌ನಲ್ಲಿ17ರಂದು ಅಪ್ಪು ಜನ್ಮದಿನೋತ್ಸವ

ಬೆಳಗಾವಿ: ಡಾ. ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 17ರಂದು  ‘ಅಪ್ಪು ಜನ್ಮದಿನೋತ್ಸವ’  ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಕ್ಲಬ್ ರೋಡ್ ನಲ್ಲಿರುವ ಸಿಪಿಇಡಿ ಗ್ರೌಂಡ್‌ನಲ್ಲಿ ಅದ್ಧೂರಿ ಸಮಾರಂಭವನ್ನು ಅಪ್ಪು ಅಭಿಮಾನಿ ಬಳಗ ಅಯೋಜಿಸಿದೆ. ಅಂದು ಸಂಜೆ 4.30ರಿಂದ ಕಾರ್ಯಕ್ರಮಗಳು ಆರಂಭವಾಗಲಿದ್ದು, ಈ ಶುಭ ಸಂದರ್ಭದಲ್ಲಿ ಮಮತ ಕ್ರಿಯೇಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪರ್ಯಾಯ ಕನ್ನಡ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗುವುದು ಎಂದು ಅಪ್ಪು ಜನ್ಮದಿನೋತ್ಸವ ದ ಸಂಘಟಕ …

Read More »

ಮತ್ತೊಮ್ಮೆ ಮುಂದೂಡಲ್ಪಟ್ಟ ಪ್ರಜಾಧ್ವನಿ ಕಾರ್ಯಕ್ರಮ

ಬೆಳಗಾವಿ: ಬೆಳಗಾವಿ ಜಿಲ್ಲೆಯ ವಿವಿಧೆಡೆ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ಇದೇ 20ರಂದು ರಾಹುಲ್ ಗಾಂಧಿ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ತಿಳಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಇದೇ 17ರಿಂದ ಗೋಕಾಕ, ಹಾರೂಗೇರಿ, ಅಥಣಿ, ಕಾಗವಾಡ (ಮದಬಾವಿ), ಕಂಕನವಾಡಿ, ಕಾಕತಿ ಮೊದಲಾದ ಕಡೆಗಳಲ್ಲಿ ಪ್ರಜಾ ಧ್ವನಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ರಾಹುಲ ಗಾಂಧಿ ಭೇಟಿ ನಿಗದಿಯಾಗಿದ್ದರಿಂದ ಎಲ್ಲವನ್ನೂ …

Read More »

ಬಸನಗೌಡ ಪಾಟೀಲ ಯತ್ನಾಳ ಮತ್ತು ನಾವು ಆತ್ಮೀಯ ಸ್ನೇಹಿತರು:B.S.Y.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ನಾವು ಆತ್ಮೀಯ ಸ್ನೇಹಿತರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೋ ಒಂದೆರಡು ಸಂದರ್ಭದಲ್ಲಿ ಹೇಳಿಕೆ ನೀಡಿರುವುದನ್ನು ನಾವು ಅಪರಾಧ ಎಂದು ಪರಿಗಣಿಸುವುದಿಲ್ಲ. ನಮ್ಮ ಮಧ್ಯದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಟ್ಟಾಗಿ ಹೋಗುತ್ತೇವೆ ಸ್ಪಷ್ಟಪಡಿಸಿದರು. ವಿಜಯೇಂದ್ರ ಹಾಗೂ ರಾಜ್ಯದ ಯಾವುದೇ ಬಿಜೆಪಿ ಶಾಸಕರ ಟಿಕೆಟ್‌ ನಿರ್ಧಾರವನ್ನು ಚುನಾವಣಾ ಸಮಿತಿ ಮಾಡುತ್ತದೆ. ನಾವು ಕೇವಲ ಸಲಹೆ ಕೊಡಬಹುದು. ಅಂತಿಮ …

Read More »

ರೈತರ ಹೆಸರಿನಲ್ಲಿ ಬಿ.ಸಿ.ಪಾಟೀಲರಿಂದ ಲೂಟಿ: ಸಿದ್ದರಾಮಯ್ಯ

ಹಾವೇರಿ: ‘ಶಾಸಕ ಮಾಡಾಳ್‌ ವಿರೂಪಾಕ್ಷಪ್ಪನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದಾಗ ₹8 ಕೋಟಿ ಸಿಕ್ಕಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮನೆ ಮೇಲೆ ದಾಳಿ ಮಾಡಿದರೆ ಕನಿಷ್ಠ ₹1 ಸಾವಿರ ಕೋಟಿ ಸಿಗುತ್ತದೆ. ರೈತರ ಹೆಸರು ಹೇಳುವುದು ಲೂಟಿ ಹೊಡೆಯುವುದು ಇದೇ ಪಾಟೀಲರ ಕಸುಬಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.   ಹಿರೇಕೆರೂರು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ’ ಸಮಾವೇಶದಲ್ಲಿ …

Read More »