Breaking News

ರಾಜಕೀಯ

“ಗೃಹಲಕ್ಷ್ಮೀ ಹಣ ಮಂಗಮಾಯಕ್ಕೆ ಕೊನೆಗೂ ಮುಕ್ತಿ”

“ಗೃಹಲಕ್ಷ್ಮೀ ಹಣ ಮಂಗಮಾಯಕ್ಕೆ ಕೊನೆಗೂ ಮುಕ್ತಿ” ಫೆಬ್ರುವರಿ ಹಾಗೂ ಮಾರ್ಚ ತಿಂಗಳಿನ ಗ್ರಹಣ ಹಿಡಿದಿದ್ದ ಗೃಹಲಕ್ಷ್ಮೀಗೆ ಗ್ರಹಣ ಬಿಡಿಸಿ ಇಡೀ ಸದನದಲ್ಲಿ ಬಹಿರಂಗವಾಗಿ ತಪ್ಪೊಪ್ಪಿಗೆ ಮೂಲಕ ಕ್ಷಮೆಯಾಚಿಸುವಂತೆ ಮಾಡಿದ ಹುಬ್ಬಳ್ಳಿಯ ಜನಪ್ರೀಯ ಶಾಸಕ ಮಹೇಶ ಟೆಂಗಿನಕಾಯಿ. ಹೌದು 2 ತಿಂಗಳ ಗೃಹಲಕ್ಷ್ಮೀ ಹಣ ಹಾಕದೇ ಜನರ ಕಣ್ಣಿಗೆ ಮಣ್ಣು ಎರೆಚಲು ಯತ್ನಿಸಿದ ರಾಜ್ಯ ಕಾಂಗ್ರೇಸ್ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸದನಕ್ಕೆ ಸುಳ್ಳು ಮಾಹಿತಿ ನೀಡಿ ಸದನಕ್ಕೆ ಅಗೌರವ ತೋರಿದ ಮಹಿಳಾ …

Read More »

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಪತ್ತೆಯಾದ ಮೊಬೈಲ್ ಫೋನ್‌

ಬೆಂಗಳೂರು: ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿಯಾಗಿ‌ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿದ ಬೆನ್ನಲ್ಲೆ ರಾಜ್ಯದ ಜೈಲುಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ಮಂಗಳೂರು, ಮೈಸೂರು, ವಿಜಯಪುರ, ಬೆಳಗಾವಿ ಜಿಲ್ಲಾ ಕಾರಾಗೃಹಗಳಲ್ಲಿ 36 ಗಂಟೆಗಳ ಕಾಲ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಕೈದಿಗಳ ಬಳಿ ಮೊಬೈಲ್ ಫೋನ್‌ಗಳು, ಚಾಕು, ಮಾದಕ ಪದಾರ್ಥಗಳು ಪತ್ತೆಯಾಗಿವೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 6 ಮೊಬೈಲ್ …

Read More »

ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಬಂಧನ

ಬಾಗಲಕೋಟೆ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮ್ಯೂಸಿಕ್ ಮೈಲಾರಿ ಎಂದೇ ಖ್ಯಾತಿ ಪಡೆದಿರುವ ಜಾನಪದ ಕಲಾವಿದ ಮೈಲಾರಿಯನ್ನು ಪೋಕ್ಸೋ ಪ್ರಕರಣದಲ್ಲಿ ಪೊಲೀಸರು ಬಂಧನ ಮಾಡಿದ್ದಾರೆ. 2025ರ ಅಕ್ಟೋಬರ್​ 10ರಂದು 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಈತನ ವಿರುದ್ಧ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ಈ ಸಂಬಂಧ ಮೈಲಾರಿ ಸೇರಿದಂತೆ ಏಳು ಜನರ ಮೇಲೆ ಪ್ರಕರಣ ದಾಖಲಾಗಿದೆ. ಸದ್ಯ …

Read More »

ಸಚಿವರ ಶಿಫಾರಸಿನ ಮೇಲೆ ಶಾಸಕರ ಸಂಬಂಧಿಯ ವರ್ಗಾವಣೆ: ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಸಹೋದರ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಐಎಂಎಸ್) ಪ್ರಾಧ್ಯಾಪಕ ಡಾ.ಕೇಶವ ಅಬ್ಬಯ್ಯ ಅವರನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಸೂಚನೆ ಮೇರೆಗೆ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಕಿಮ್ಸ್) ದಂತ ಚಿಕಿತ್ಸಾ ವಿಭಾಗಕ್ಕೆ ವರ್ಗಾವಣೆ ಮಾಡಿರುವ ಕ್ರಮಕ್ಕೆ ಹೈಕೋರ್ಟ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕ್ರಿಯೆ ಸಂಪೂರ್ಣ ನಿಯಮಗಳ ಉಲ್ಲಂಘನೆಯಾಗಿದೆ …

Read More »

‘ಗೃಹ ಲಕ್ಷ್ಮಿ’ ಬಾಕಿ ಗದ್ದಲ; ಸಚಿವೆ ಹೆಬ್ಬಾಳ್ಕರ್ ವಿಷಾದ, ವಿಪಕ್ಷಗಳಿಂದ ಸಭಾತ್ಯಾಗ

ಬೆಳಗಾವಿ: ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ವಿಚಾರವು ವಿಧಾನಸಭೆಯಲ್ಲಿಂದು ಭಾರಿ ಗದ್ದಲ, ಕೋಲಾಹಲ ಸೃಷ್ಟಿಸಿ ಅರ್ಧ ದಿನದ‌ ಕಲಾಪವನ್ನೇ ನುಂಗಿ ಹಾಕಿತು. ಕೊನೆಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ಬಂದು ವಿಷಾದ ಮತ್ತು ಕ್ಷಮೆ‌‌ ಕೇಳುವಂತೆ ಬಿಜೆಪಿ ಮಾಡಿದ್ದಲ್ಲದೇ, ಎರಡು ತಿಂಗಳ ಗೃಹಲಕ್ಷ್ಮಿ ಬಾಕಿ ವ್ಯತ್ಯಯದ ಬಗ್ಗೆಯೂ ಸದನದಲ್ಲಿ ಸಚಿವೆ ಹೆಬ್ಬಾಳ್ಕರ್ ಒಪ್ಪಿಕೊಂಡರು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ, ವಿಪಕ್ಷ ನಾಯಕ‌ ಆರ್.ಅಶೋಕ್, ಮೂರು ದಿನಗಳಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Read More »

ವಿಜಯಪುರ ಜಿಲ್ಲೆಯ ಮುಳವಾಡ ಹಾಗೂ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ – ಸಚಿವ ಎಂ.ಬಿ. ಪಾಟೀಲ

ವಿಜಯಪುರ ಜಿಲ್ಲೆಯ ಮುಳವಾಡ ಹಾಗೂ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ – ಸಚಿವ ಎಂ.ಬಿ. ಪಾಟೀಲ ರಾಜ್ಯದಲ್ಲಿ ಸಮತೋಲಿತ ಹಾಗೂ ಭವಿಷ್ಯಮುಖಿ ಕೈಗಾರಿಕಾ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರ ಕ್ರಮ ಕೈಗೊಂಡಿದ್ದು, ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿ ಹಾಗೂ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ಮುಳವಾಡದಲ್ಲಿ 200 ಎಕರೆ ವಿಸ್ತೀರ್ಣದಲ್ಲಿ ಹಾಗೂ ಮಂಗಳೂರಿನಲ್ಲಿ ಅತ್ಯಾಧುನಿಕ ಪ್ಲಾಸ್ಟಿಕ್ ಪಾರ್ಕ್‌ಗಳನ್ನು …

Read More »

ದಲಿತ ಸಂಘಟನೆಗಳ ಒಕ್ಕೂಟದಿಂದ ಸುವರ್ಣ ಸೌಧ ಚಲೋ: ಅಂಬೇಡ್ಕರ್ ಪ್ರತಿಮೆ ರೇಸ್’ಕೋರ್ಸ್’ಗೆ ಸ್ಥಳಾಂತರ,

ದಲಿತ ಸಂಘಟನೆಗಳ ಒಕ್ಕೂಟದಿಂದ ಸುವರ್ಣ ಸೌಧ ಚಲೋ: ಅಂಬೇಡ್ಕರ್ ಪ್ರತಿಮೆ ರೇಸ್’ಕೋರ್ಸ್’ಗೆ ಸ್ಥಳಾಂತರ, ‘ಸ್ಪೂರ್ತಿ ಭವನ’ ಕಾಮಗಾರಿ ಆರಂಭ ಸೇರಿದಂತೆ 20 ಬೇಡಿಕೆಗಳಿಗೆ ಆಗ್ರಹ. ಅಂಬೇಡ್ಕರ್ ಪ್ರತಿಮೆ ರೇಸ್ ಕೋರ್ಸ್’ನಲ್ಲಿ ಸ್ಥಾಪಿಸಲು ಒಕ್ಕೂಟ ಆಗ್ರಹ ಸ್ಪೂರ್ತಿ ಭವನ’ ಕಾಮಗಾರಿ ವಿಳಂಬ: ಕೂಡಲೇ ಆರಂಭಕ್ಕೆ ಒತ್ತಾಯ ಎಸ್.ಸಿ.ಪಿ. ಹಣ ದುರ್ಬಳಕೆ ತನಿಖೆ: ಇಲ್ಲದಿದ್ದರೆ ಉಗ್ರ ಹೋರಾಟ ವಸತಿ ಶಾಲಾ ಅಕ್ರಮ ತನಿಖೆ, ಹಾಸ್ಟೆಲ್ ಸಿಬ್ಬಂದಿ ಖಾಯಂಗೊಳಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಬೆಂಗಳೂರಿನಲ್ಲಿ …

Read More »

ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಪಡೆಯಿತೇ ಹೊರತು ಜನಾರ್ಶೀವಾದದಿಂದಲ್ಲ

ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಪಡೆಯಿತೇ ಹೊರತು ಜನಾರ್ಶೀವಾದದಿಂದಲ್ಲ 140 ಶಾಸಕರು ನಮ್ಮೊಂದಿಗಿದ್ದು, ವಿರೋಧಪಕ್ಷದವರು ಹುಳಿಹಿಂಡುವ ಅಗತ್ಯವಿಲ್ಲ; ಸಿಎಂ ಸಿದ್ಧರಾಮಯ್ಯ ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದ್ದಾರೆ; ಸಿಎಂ ಸಿದ್ದರಾಮಯ್ಯ 2023 ರಂತೆ 2028 ರಲ್ಲಿಯೂ ಜನಾರ್ಶೀವಾದದೊಂದಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಸದಸ್ಯ ರಂಗನಾಥ್ …

Read More »

ಛತ್ರಪತಿ ಸಂಭಾಜಿ ಮಹಾರಾಜರು ಇರದಿದ್ದರೆ ನಾವೆಲ್ಲರೂ ಹಿಂದೂಗಳಾಗಿ ಇರುತ್ತಿರಲಿಲ್ಲ

ಛತ್ರಪತಿ ಸಂಭಾಜಿ ಮಹಾರಾಜರು ಇರದಿದ್ದರೆ ನಾವೆಲ್ಲರೂ ಹಿಂದೂಗಳಾಗಿ ಇರುತ್ತಿರಲಿಲ್ಲ ಜಾತಿ ಭಾಷೆಯನ್ನು ಬದಿಗಿಟ್ಟು ಹಿಂದೂಗಳೆಲ್ಲರೂ ಒಂದಾಗಿ; ಎಂ.ಎಲ್.ಸಿ ಸಿ.ಟಿ. ರವಿ ಛತ್ರಪತಿ ಸಂಭಾಜಿ ಮಹಾರಾಜರು ಇರದಿದ್ದರೆ ನಾವೆಲ್ಲರೂ ಹಿಂದೂಗಳಾಗಿ ಇರುತ್ತಿರಲಿಲ್ಲ. ಜಾತಿ ಭಾಷೆಯನ್ನು ಬದಿಗಿಟ್ಟು ನಾವೆಲ್ಲರೂ ಹಿಂದೂ ಎಂದು ಒಗ್ಗೂಡಬೇಕು. ನಮ್ಮೆಲ್ಲರ ಜಾತಿ ಬೇರೆ ಇದ್ದರು ಸಂಸ್ಕೃತಿ ಒಂದೇ ಆಗಿದೆ. ಬಟೆಂಗೆ ತೋ ಕಟೆಂಗೆ ಏಕ ರಹೇಂಗೇ ತೋ ಸೆಫ ರಹೇಂಗೇ ಎಂದು ಎಂ.ಎಲ್.ಸಿ ಸಿ.ಟಿ ರವಿ ಹೇಳಿದರು. ಬೆಳಗಾವಿಯ …

Read More »

ವೋಟ್ ಚೋರಿ ಹೋರಾಟ ಯಶಸ್ವಿ ಆಗಿದ್ದು, ದೇಶಕ್ಕೆ ಒಂದು ಸಂದೇಶ ಹೋಗಿದೆ: ಡಿ.ಕೆ. ಶಿವಕುಮಾರ್

ವೋಟ್ ಚೋರಿ ಹೋರಾಟ ಯಶಸ್ವಿ ಆಗಿದ್ದು, ದೇಶಕ್ಕೆ ಒಂದು ಸಂದೇಶ ಹೋಗಿದೆ: ಡಿ.ಕೆ. ಶಿವಕುಮಾರ್ ಬೆಳಗಾವಿ: ಪಕ್ಷದ ಸಂಸದೆ ಪ್ರಿಯಾಂಕಾ ಗಾಂಧಿ ಅವರು ವಿವಿ ಪ್ಯಾಟ್​ ಬದಲು ಮತ್ತೆ ಬ್ಯಾಲೆಟ್ ಪೇಪರ್‌ಗೆ ಹೋಗಬೇಕು ಎಂದು ಆಗ್ರಹಿಸಿದರು.‌ ಅದರ ಮುಖಾಂತರ ಗೊತ್ತಾಗುತ್ತದೆ. ನಿನ್ನೆಯ ವೋಟ್ ಚೋರಿ ಹೋರಾಟ ಬಹಳ ಯಶಸ್ವಿಯಾಗಿದೆ. ನಮ್ಮ ಪ್ರತಿಭಟನೆ ದೇಶಕ್ಕೆ ಒಂದು ಸಂದೇಶ ಕೊಟ್ಟಿದೆ. ರಾಜ್ಯದ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್​ …

Read More »