Breaking News

ರಾಜಕೀಯ

ಮನಮೋಹನ್ ಸಿಂಗ್, ಚಿದಂಬರಂ ಸೇರಿ 16 ಸಂಸದರು ಅಧಿವೇಶನಕ್ಕೆ ಗೈರು

ನವದೆಹಲಿ,  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸೇರಿದಂತೆ 16 ರಾಜ್ಯಸಭಾ ಸಂಸದರು ಸಂಸತ್ ಮುಂಗಾರು ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ಮೇಲ್ಮನೆಗೆ ಮಾಹಿತಿ ನೀಡಿದ್ದಾರೆ. ಇಂದು ಸದನವು 14 ಸಂಸದರಿಗೆ ರಜೆ ಅನುಮೋದನೆ ನೀಡಿದ್ದರೆ, ಸೋಮವಾರ ತೃಣಮೂಲ ಕಾಂಗ್ರೆಸ್ ಸುಖೇಂಡು ಶೇಖರ್ ರಾಯ್ ಮತ್ತು ಸುಭಾಶಿಶ್ ಚಕ್ರವರ್ತಿ ಎಂಬ ಇಬ್ಬರು ಸಂಸದರಿಗೆ ರಜೆ ನೀಡಿತ್ತು. ಮನ್‍ಮೋಹನ್ ಸಿಂಗ್, ಚಿದಂಬರಂ ಮತ್ತು ಆಸ್ಕರ್ ಫರ್ನಾಂಡಿಸ್ (ಕಾಂಗ್ರೆಸ್), …

Read More »

ಶಿರಾ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ ಕಣಕ್ಕೆ

ಬೆಂಗಳೂರು,  ಶಿರಾ ಕ್ಷೇತ್ರದ ವಿಧಾನಸಭೆ ಉಪಚುನಾವಣೆಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಅಭ್ಯರ್ಥಿಯಾಗಬೇಕೆಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಸೂಚಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ತುಮಕೂರು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಕೆ.ಎನ್.ರಾಜಣ್ಣ ಅವರ ಉಪಾಧ್ಯಕ್ಷತೆಯಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಕೆ.ಎನ್.ರಾಜಣ್ಣ ಅವರು ಜಯಚಂದ್ರ ಅವರ ಅಭ್ಯರ್ಥಿಗಳಾಗಬೇಕೆಂದು …

Read More »

ಸರ್ಕಾರದ ವಿವಾದಿತ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧಾರ

ಬೆಂಗಳೂರು,  ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ಭೂಸುಧಾರಣ, ಎಪಿಎಂಸಿ, ಕೈಗಾರಿಕೆ ಸುಧಾರಣಾ ಕಾಯ್ದೆಗಳನ್ನು ಹಿಂಪಡೆಯುವಂತೆ ಪಟ್ಟುಹಿಡಿಯಲು ಕಾಂಗ್ರೆಸ್ ಶಾಸಕಾಂಗ ಸಭೆ ನಿರ್ಧರಿಸಿದೆ. ಕೊರೊನಾ, ಡ್ರಗ್ಸ್ ಹಾವಳಿ ಮತ್ತು ಡಿಜೆಹಳ್ಳಿ ಪ್ರಕರಣಗಳನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಪ್ರಸ್ತಾವನೆ ಮಂಡಿಸಲು ನಿರ್ಧರಿಸಲಾಗಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿಂದು ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಸಿದ್ದರಾಮಯ್ಯನವರು ಭೂ …

Read More »

ಕೊರೊನಾ ಜೊತೆ ಬದುಕೋಣ: ‘ಲೇ… ಮಾಸ್ಕ್‌ ಹಾಕೊ ತಮ್ಮಾ…’

ಬೆಂಗಳೂರು: ‘ನೀವೆಲ್ಲ ಎಚ್ಚರಿಕೆಯಾಗಿ ಇರ‍್ರಯ್ಯಾ …ಮಾಸ್ಕ್‌ ಹಾಕೊ ತಮ್ಮಾ… ಲೇ.. ಮಾಸ್ಕ್‌ ಹಾಕೊ…’ ‘ಇದನ್ನು ನಿರ್ಲಕ್ಷ್ಯ ಮಾಡೋಕೆ ಹೋಗಬೇಡಿ. ನೋಡೋಕೆ ಇದು ತುಂಬ ಸಿಂಪಲ್‌. ನಿಮಗೆ ಆಸ್ಪತ್ರೆಗೆ ಹೋದರೆ ಗೊತ್ತಾಗುತ್ತೆ ಕಥೆ. ನಿಮ್ಮನ್ನು ಯಾರೂ, ನಿಮ್ಮ ಮನೆಯವರೂ ಬಂದು ನೋಡುವಂಗಿಲ್ಲ. ನಿಮಗೆ ಯಾರೂ ಬಂದು ಊಟ ಕೊಡುವವರಿಲ್ಲ. ಕಷ್ಟ ಸುಖ ವಿಚಾರಿಸುವವರಿಲ್ಲ. ಬರದೇ ಇರಲಿ ಪಾಪ… ಯಾರಿಗೂ ಬರಬಾರದು’   – ಕೋವಿಡ್ ದೃಢಪಟ್ಟು 10 ದಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ, …

Read More »

ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಈಗಾಗಲೇ ರಣತಂತ್ರ ಆರಂಭವಾಗಿದೆ. ಶಾಸಕ ಬಿ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಕಾಂಗ್ರೆಸ್‌ ಪಣತೊಟ್ಟಿದೆ.

ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಈಗಾಗಲೇ ರಣತಂತ್ರ ಆರಂಭವಾಗಿದೆ. ಶಾಸಕ ಬಿ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಕಾಂಗ್ರೆಸ್‌ ಪಣತೊಟ್ಟಿದೆ. ಈ ಹಿನ್ನೆಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆಯೊಂದು ನಡೆದಿದೆ. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ …

Read More »

ಉಪ ಮುಖ್ಯಮಂತ್ರಿ ಸ್ಥಾನಕೆ ಜಲಸಂಪನ್ಮೂಲ ಸಚಿವರು ರಮೇಶ್ ಜಾರಕಿಹೊಳಿ‌ ಕಸರತ್ತು.

ಹೊಸದಿಲ್ಲಿ: ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರದ ವಿರುದ್ಧ ಬಂಡೆದ್ದು ಸರ್ಕಾರ ಪತನಗೊಳಿಸವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಮತ್ತೆ ಉಪ ಮುಖ್ಯಮಂತ್ರಿ ಸ್ಥಾನ ಪಡೆಯುವ ಕಸರತ್ತು ಆರಂಭಿಸಿದ್ದಾರೆ. ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ರಮೇಶ್ ಜಾರಕಿಹೊಳಿ‌ ಉಪ ಮುಖ್ಯಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸಿದ್ದರು. ಆದರೆ ಇವರದೇ ನಾಯಕ ಸಮುದಾಯದ ಬಿ. ಶ್ರೀರಾಮುಲು ಅವರನ್ನು ಬಿಜೆಪಿ ಚುನಾವಣೆಗೂ ಮುನ್ನವೇ ಉಪಮುಖ್ಯಮಂತ್ರಿ …

Read More »

ಏಕಕಾಲದಲ್ಲಿ ಎರಡೂ ಕೈಯಲ್ಲಿ ವಿಭಿನ್ನ ಬರಹ- ದಾಖಲೆ ಬರೆದ ಮಂಗ್ಳೂರು ಬಾಲಕಿ

ಮಂಗಳೂರು: ಮಾಮೂಲಿಯಾಗಿ ಎಲ್ಲರೂ ಒಂದು ಕೈಯಲ್ಲಿ ಬರೆಯೋದು ನಾವೆಲ್ಲ ನೋಡಿದ್ದೇವೆ, ನಾವೂ ಬರೆಯುತ್ತೇವೆ. ಆದರೆ ಮಂಗಳೂರಿನ ಬಾಲಕಿಯೋರ್ವಳು ಎರಡು ಕೈಗಳಲ್ಲಿಯೂ ಏಕಕಾಲದಲ್ಲಿ ಬೇರೆ ಬೇರೆ ವಿಚಾರಗಳನ್ನು ಬರೆಯುತ್ತಾಳೆ. ಅದು ಉಲ್ಟಾ ಬರವಣಿಗೆಯೂ ಇರಲಿ, ಮಿರರ್ ಏಫೆಕ್ಟ್ ರೈಟಿಂಗೂ ಇರಲಿ ಎಲ್ಲವನ್ನೂ ಆಕೆ ಸಲೀಸಾಗಿ ಬರೆಯುತ್ತಾಳೆ. ಏಕಕಾಲಕ್ಕೆ ಎರಡು ಕೈಗಳಿಂದ ಬರೆಯುವ ಅದ್ಭುತ ಕಲೆ ಹೊಂದಿರುವ ಬಾಲಕಿ ಹೆಸರು ಆದಿ ಸ್ವರೂಪ. ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್-ಸುಮಾಡ್ಕರ್ ದಂಪತಿಯ ಪುತ್ರಿಯಾಗಿರುವ …

Read More »

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಅದೃಷ್ಟವೇ ಸರಿ ಇಲ್ಲ ಅನಿಸುತ್ತೆ.

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಅದೃಷ್ಟವೇ ಸರಿ ಇಲ್ಲ ಅನಿಸುತ್ತೆ. ಕಳೆದ ಮೂರು ತಿಂಗಳಿನಿಂದ ಸರ್ಕಾರದ ವಿರುದ್ಧ ಒಂದಾದ ಮೇಲೊಂದರಂತೆ ಆರೋಪ ಕೇಳಿ ಬರ್ತಿದೆ. ಸುಶಾಂತ್ ಸಿಂಗ್ ಪ್ರಕರಣದಿಂದ ಹಿಡಿದು ನೌಕಾಪಡೆಯ ಮಾಜಿ ಅಧಿಕಾರಿ ಮೇಲಿನ ಹಲ್ಲೆವರೆಗೆ ಸಾಕಷ್ಟು ಘಟನೆಗಳು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸುವಂತೆ ಮಾಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋ ಆರೋಪಗಳನ್ನ ಮಾಡಲಾಗ್ತಿದೆ. ಇದೆಲ್ಲದರ ನಡುವೆ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಶರ್ಮಾ ಇವತ್ತು ಮಹಾರಾಷ್ಟ್ರ ರಾಜ್ಯಪಾಲ …

Read More »

ನಾಲ್ವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು  : ರಾಜ್ಯ ಸರ್ಕಾರವು ಸೋಮವಾರ ಎಂ.ಎಸ್‌. ಶ್ರೀಕರ, ಟಿ.ಎಚ್‌.ಎಂ. ಕುಮಾರ್‌ ಸೇರಿದಂತೆ ನಾಲ್ಕು ಮಂದಿ ಐಎಎಸ್‌ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಾಣಿಜ್ಯ ತೆರಿಗೆಗಳ ಆಯುಕ್ತರಾಗಿದ್ದ ಎಂ.ಎಸ್‌. ಶ್ರೀಕರ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕೆಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಹಾಗೂ ಉಳಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಟಿ.ಎಚ್‌.ಎಂ. ಕುಮಾರ್‌ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು …

Read More »

ಭಾರತ-ಚೀನಾ ಗಡಿ ಸಂಘರ್ಷ: ‘ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ’ ಎಂದ ಕೇಂದ್ರ ಸಚಿವ ರಾಜನಾಥ್​​ ಸಿಂಗ್​​

ನವದೆಹಲಿ : ಎಂದಿನಂತೆಯೇ ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಮುಂದುವರಿದಿದೆ. ಅದನ್ನು ಬಗೆಹರಿಸಲು ಆಗುತ್ತಿಲ್ಲ. ಪರಸ್ಪರ ಎರಡೂ ದೇಶಗಳು ಪರಿಹಾರ ಕಂಡುಕೊಂಡಿಲ್ಲ. ಗಡಿಯಲ್ಲಿ ಚೀನಾ ಸೈನಿಕರು ತೀವ್ರ ಅಸಮ್ಮತಿ ತೋರುತ್ತಿದ್ದಾರೆ ಎಂದೇಳಲಾಗುತ್ತಿತ್ತು. ಈ ಮಧ್ಯೆಯೇ ಭಾರತ ಮತ್ತು ಚೀನಾ ಗಡಿ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತಾಡಿದ್ದಾರೆ. ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ. ದ್ವಿಪಕ್ಷೀಯ ಸಂಬಂಧಗಳ …

Read More »