Breaking News

ರಾಜಕೀಯ

ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಭೂ ಕಂಪನ: ಆತಂಕದಲ್ಲಿ ಜನತೆ

ಕಲಬುರಗಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಮತ್ತು ತೇಗಲತಿಪ್ಪಿ ಗ್ರಾಮದಲ್ಲಿ ಲಘು ಭೂಕಂಪನವಾಗಿತ್ತು. ಗಡಿಕೇಶ್ವರ ಗ್ರಾಮದಲ್ಲಿ ಅನೇಕ ತಿಂಗಳಿಂದ ಭೂಮಿಯಿಂದ …

Read More »

ಭಾರಿ ಮಳೆಗೆ ಮುಳುಗಿದ ಸೇತುವೆ

ಭಾರತೀನಗರ: ಭಾರಿ ಮಳೆಯಿಂದಾಗಿ ಹನುಮಂತನಗರ ಸಮೀಪವಿರುವ ಹೆಬ್ಬಾಳ ಚನ್ನಯ್ಯನಾಲೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಭಾನುವಾರ ಸುರಿದ ಭಾರಿ ಮಳೆಗೆ ಹನುಮಂತನಗರ ಸಮೀಪದ ಹೆಬ್ಬಾಳ ಚನ್ನಯ್ಯ ನಾಲೆ ಸೇತುವೆ ಮೇಲೆ ಮಳೆಯ ನೀರು ನಿಂತಿದ್ದರಿಂದ ಸಾರ್ವಜನಿಕರು ವಾಹನಗಳಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಶತತ 2 ಗಂಟೆಗಳ ಸುರಿದ ಭಾರಿ ಮಳೆಗೆ ಭಾರತೀನಗರ-ಮಂಡ್ಯ ರಸ್ತೆ ಮಾರ್ಗವಾಗಿ ಬರುವ ಹನುಮಂತನಗರ ರಸ್ತೆ ಸಮೀಪದಲ್ಲಿರುವ ಹೆಬ್ಬಾಳ ಚನ್ನಯ್ಯನಾಲೆ ಸೇತುವೆ ಮೇಲೆ ಮಳೆ ನೀರು …

Read More »

ಜೆಡಿಎಸ್ ಬಗ್ಗೆ ಮಾತನಾಡುವುದೇ ಇಲ್ಲ , ಆದ್ರೂ ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ: ಸಿದ್ದರಾಮಯ್ಯ

ಮಂಡ್ಯ: ನಾನು ಜೆಡಿಎಸ್ ಬಗ್ಗೆ ಮಾತನಾಡುವುದೇ ಇಲ್ಲ. ಆದರೆ ಎಚ್.ಡಿ.ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರುತ್ತಾರೆ. ನಾನು ಏನು ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಗ್ಗೆ ಮಾತನಾಡದಿದ್ದರೆ ಸಿದ್ದರಾಮಯ್ಯಗೆ ನಿದ್ರೆ ಬರಲ್ಲ ಎಂದು ಎಚ್‌ಡಿಕೆ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡುವುದನ್ನು ಬಿಟ್ಟಿದ್ದೇನೆ. ಏಕೆಂದರೆ ನನ್ನ ಮಾತುಗಳನ್ನು ಕೋಮುವಾದಿ ಬಣ್ಣ ಕಟ್ಟಿ ತಿರುಚುತ್ತಾರೆ. ಟೀಕೆ ಮಾಡಿದರೆ …

Read More »

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಕಬ್ಬು ನುರಿಸಲೂ ಪ್ರಾರಂಭ

ಗೋಕಾಕ: ಕಬ್ಬಿನ ಒಂದು ಹಂಗಾಮಿ ಶುರು ಆಗುತ್ತಿದ್ದಂತೆ ಸುಮಾರು ಕಡೆ ಕಬ್ಬಿನ ಕಟಾವು, ಗಾಡಿ ಗಳ ಸದ್ದು , ರೈತರ ಮುಖದಲ್ಲಿ ಒಂದು ಆಶಾದಾಯಕ ಕಳೆ ಶುರು ಆಗುತ್ತೆ. ಮೊನ್ನೆ ಯಾಷ್ಟೆ ಬಾಯ್ಲರ್ ಪೂಜೆ ಮಾಡಿದ ಹಿರೆನಂದಿ ಯಲ್ಲಿರುವ ಶ್ರೀ ಸಂತೋಷ್ ಜಾರಕಿಹೊಳಿ ಅವರ ನೇತೃತ್ವ ದ ಸೌಭಾಗ್ಯ ಲಕ್ಷ್ಮಿ ಕಾರ್ಖಾನೆ ಕಬ್ಬನ್ನು ನುರಿಸುವುದಕ್ಕೆ ಮುಂದಾಗಿದೆ ಬಹುಶಃ ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಇದು ಪ್ರಥಮ್ ಕಾರ್ಖಾನೆ ಇರಬಹುದು ಕಬ್ಬನ್ನು ನುರಿಸಲು …

Read More »

ಕಾಮುಕ ಯುವಕನೋರ್ವ ಯುವಕನನ್ನು ರೇಪ್ ಮಾಡಿರುವ ವಿಲಕ್ಷಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ.

ಚಿಕ್ಕೋಡಿ: ಇಲ್ಲೊಬ್ಬ ಕಾಮುಕ ಯುವಕನೋರ್ವ ಯುವಕನನ್ನು ರೇಪ್ ಮಾಡಿರುವ ವಿಲಕ್ಷಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ. ಬಸ್ ಗಾಗಿ ಕಾಯುತ್ತಿದ್ದ ಯುವಕನನ್ನು ಬೈಕ್ ಮೇಲೆ ಹತ್ತಿಸಿಕೊಂಡು ಕರೆದೊಯ್ದು ನಿರ್ಜನ ಪ್ರದೇಶ ನೋಡಿ ಅನೈಸರ್ಗಿಕ ಸಂಭೋಗ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಯುವಕ ಅಥಣಿ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ಈ ಬಗ್ಗೆ ನೊಂದ ಯುವಕನಿಂದ ದೂರು ದಾಖಲಿಸಿಕೊಂಡ ಅಥಣಿ ಪೊಲೀಸ್ ಠಾಣೆಯ ಪೊಲೀಸರು ಅತ್ಯಾಚಾರಿ ಆರೋಪಿ …

Read More »

ವರ್ಷದ ಹಿಂದೆ ​ ವ್ಹೀಲ್​ಚೇರ್​ ಮೇಲೆ ಸತ್ಯಜಿತ್ ನಮ್ಮನೆಗೆ ಬಂದಿದ್ದರು; ಪುನೀತ್​ ರಾಜ್​ಕುಮಾರ್​

ಸತ್ಯಜಿತ್​ ​ ಅವರಿಗೆ ಈ ಮೊದಲು ಗ್ಯಾಂಗ್ರಿನ್​ ಆಗಿತ್ತು. ಹೀಗಾಗಿ, ಅವರ ಕಾಲನ್ನು ಕತ್ತರಿಸಲಾಗಿತ್ತು. ಹೀಗಾಗಿ, ವ್ಹೀಲ್​ಚೇರ್​ ಮೇಲೆಯೇ ಅವರು ಕುಳಿತಿರುತ್ತಿದ್ದರು. ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟನಾಗಿದ್ದ ಸತ್ಯಜಿತ್​ ಅವರು ಇಂದು (ಅ.10) ಕೊನೆಯುಸಿಳೆದಿದ್ದಾರೆ. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಪುನೀತ್​ ರಾಜ್​ಕುಮಾರ್​ ನಟನೆಯ ಕೆಲ ಸಿನಿಮಾಗಳಲ್ಲೂ ಸತ್ಯಜಿತ್​ ಅವರು ಕಾಣಿಸಿಕೊಂಡಿದ್ದರು. ಹೀಗಾಗಿ, ಪುನೀತ್​ ಮತ್ತು ಸತ್ಯಜಿತ್​ ನಡುವೆ ಒಳ್ಳೆಯ ಪರಿಚಯವಿತ್ತು. ಈಗ ಸತ್ಯಜಿತ್​ ಅವರು ಮೃತಪಟ್ಟ …

Read More »

ಕೋಟಿಗೊಬ್ಬ 3 ಟ್ರೈಲರ್: ಸುದೀಪ್ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಮ್ಯಾ

ಮೋಹಕ ತಾರೆ ರಮ್ಯಾ ಚಿತ್ರರಂಗದಿಂದ ದೂರ ಇದ್ದಾರೆ. ಹೊಸ ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಆದರೆ, ಚಿತ್ರರಂಗದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಗಮನಿಸುತ್ತಲೇ ಇರ್ತಾರೆ. ಯಾವ ಸಿನಿಮಾ ಬಂತು, ಯಾವ ಟ್ರೈಲರ್ ಬಂತು, ಯಾವ ಪೋಸ್ಟರ್ ಬಂತು ಎಂದು ಗಮನಿಸುವ ರಮ್ಯಾ ಇಷ್ಟವಾದರೆ ಆ ಚಿತ್ರದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಶುಭಹಾರೈಸುತ್ತಾರೆ. ಇದೀಗ, ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರದ ಟ್ರೈಲರ್ ಬಗ್ಗೆ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಕೋಟಿಗೊಬ್ಬ …

Read More »

ಮೈಸೂರಿನಲ್ಲಿ ಬೆಳಕಿನ ಹಬ್ಬ; ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ ರಾತ್ರಿ 10 ಗಂಟೆಯವರೆಗೆ ಮಾತ್ರ ವಿದ್ಯುತ್ ದೀಪಾಲಂಕಾರ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2021 ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ವಿಶೇಷ ವಿಭಿನ್ನವಾದ ದೀಪಾಲಂಕಾರ ಮಾಡಲಾಗಿದೆ. ರಾತ್ರಿ 10ರವರೆಗೆ ವಿದ್ಯುತ್ ದೀಪಾಲಂಕಾರದ ಸಮಯ ವಿಸ್ತರಿಸಲಾಗಿತ್ತು. 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಾಗುವ ಹಿನ್ನೆಲೆ ರಾತ್ರಿ 10 ಗಂಟೆಯವರೆಗೆ ಮಾತ್ರ ವಿದ್ಯುತ್ ದೀಪಾಲಂಕಾರಕ್ಕೆ ಅನುಮತಿ ನೀಡಲಾಗಿದೆ. ಈ ದೀಪಾಲಂಕಾರ ವ್ಯವಸ್ಥೆ 102.9 ಕಿಲೋ ಮೀಟರ್ ಮಾಡಲಾಗಿದೆ. ಬರೋಬ್ಬರಿ 40 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ರಾತ್ರಿ 6.30 ರಿಂದ ರಾತ್ರಿ …

Read More »

ರಿಂದ 15 ರೂಪಾಯಿ ಇದ್ದ ಟೊಮೆಟೊ ಬೆಲೆ. ಈಗ ಬರೋಬ್ಬರಿ 60 ರಿಂದ 70 ರೂಪಾಯಿಗೆ

  ಬೆಂಗಳೂರು: ಟೊಮ್ಯಾಟೊ ಸೇರಿದಂತೆ ತರಕಾರಿಗಳ ಬೆಲೆ ದಿಢೀರ್ ಏರಿಕೆ ಕಂಡಿದೆ. ರಾಜ್ಯದ ಹಲವೆಡೆ ಭಾರಿ ಮಳೆ ಹಿನ್ನೆಲೆ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು,ಟೊಮ್ಯಾಟೊ, ಕ್ಯಾರೆಟ್ ಬೆಲೆಗಳು ಏರಿಕೆಯಾಗಿವೆ. ಪ್ರತೀ ತರಕಾರಿ ಮೇಲೆ 10 ರಿಂದ 20 ರೂಗಳಷ್ಟು ಹೆಚ್ಚಳವಾಗಿದ್ದು ಯಾವ ತರಕಾರಿ ಬೆಲೆ ಎಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ. ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 30 ರಿಂದ 40 ರೂ. ಗೆ ಏರಿಕೆ ಹಸಿ ಮೆಣಸಿನಕಾಯಿ ಕೆ.ಜಿ 50 …

Read More »

ಕಾಂಗ್ರೆಸ್​ನಲ್ಲಿ ಅಲ್ಪಸಂಖ್ಯಾತ ನಾಯಕರ ನಡುವೆ ಸಮರ: ಶಾಸಕ ಶಾಸಕ ಜಮೀರ್ ಅಹ್ಮದ್​ಗೆ ಮಣೆ; ಸಿ ಎಂ ಇಬ್ರಾಹಿಂ ದೂರ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರ ನಡುವೆ ಶೀತಲ ಸಮರ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನವನ್ನು ಪಕ್ಷದ ವರಿಷ್ಠರ ಬಳಿ ಬೇಡಿಕೆಯಿಟ್ಟಿದ್ದರು. ಆದರೆ ಸಿ.ಎಂ.ಇಬ್ರಾಹಿಂ ಬೇಡಿಕೆಯನ್ನು ಈವರೆಗೂ ಕಾಂಗ್ರೆಸ್ ನಾಯಕರು ಅಷ್ಟಾಗಿ ಪರಿಗಣಿಸಿಲ್ಲ. ಹೀಗಾಗಿ ಸಿ.ಎಂ.ಇಬ್ರಾಹಿಂ ನಿಧಾನವಾಗಿ ಕಾಂಗ್ರೆಸ್​ನಿಂದ ದೂರ ಸರಿಯುತ್ತಿದ್ದಾರೆ ಎಂದ ಹೇಳಲಾಗಿದೆ. ಅಲ್ಲದೇ ಅವರು ಇತ್ತೀಚಿಗೆ ಜೆಡಿಎಸ್ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಸಹ …

Read More »