Breaking News

ರಾಜಕೀಯ

ಗಾಂಧಿ-ಗೋಡ್ಸೆ ಟ್ರೇಲರ್ ಬಿಡುಗಡೆ; ಕುತೂಹಲ ಮೂಡಿಸಿರುವ ರಾಜ್​ಕುಮಾರ್ ಸಂತೋಷಿ ಸಿನಿಮಾ

ಘಾಯಲ್’, ‘ದಾಮಿನಿ’, ‘ಬರ್ಸಾತ್’, ‘ಖಾಕೀ’ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳನ್ನು ನಿರ್ದೇಶಿಸಿರುವ ರಾಜ್​ಕುಮಾರ್ ಸಂತೋಷಿ ಆಕ್ಷನ್ ಕಟ್ ಹೇಳಿರುವ ಸಿನಿಮಾ ‘ಗಾಂಧಿ ಗೋಡ್ಸೆ : ಏಕ್ ಯುದ್ಧ್’. ಕೆಲವು ದಿನಗಳ ಹಿಂದಷ್ಟೇ ಟೀಸರ್ ಮೂಲಕ ಸದ್ದು ಮಾಡಿದ್ದ ಈ ಚಿತ್ರ, ಇದೀಗಿ ಟ್ರೇಲರ್ ಮುಖೇನ ಮತ್ತೊಮ್ಮೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ, ಚಿತ್ರದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ನಾಥೂರಾಮ್ ಗೋಡ್ಸೆ ನಡುವಿನ ಸೈದ್ಧಾಂತಿಕ ಸಂಘರ್ಷ, ವೈಚಾರಿಕ ಭಿನ್ನಾಭಿಪ್ರಾಯಗಳ ಬಗ್ಗೆ ನೇರವಾಗಿ ಬೆಳಕು …

Read More »

ಮಟಮಟ ಮಧ್ಯಾಹ್ನ ಮಲಗಿದ ಸ್ಥಿತಿಯಲ್ಲೇ ಹೆಣವಾದ ಕೊಪ್ಪಳದ ಪ್ರೇಮಿಗಳು! ಬೆಚ್ಚಿಬಿದ್ದ ಸ್ಥಳೀಯರು

ಕೊಪ್ಪಳ: ಕುಕನೂರು ತಾಲೂಕಿನ ಬಳಗೇರಿ ಗ್ರಾಮದ ಮನೆಯೊಂದರಲ್ಲಿ ಚಾಪೆ ಮೇಲೆ ಮಲಗಿದ ಸ್ಥಿತಿಯಲ್ಲೇ ರಕ್ತದ ಮಡುವಿನಲ್ಲಿ ಯುವಕ ಮತ್ತು ಯುವತಿ ಶವ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಬಳಿಗೇರಿ ಗ್ರಾಮದ ಸುಮಾ ಮತ್ತು ಪ್ರಕಾಶ ಭಜಂತ್ರಿ ಮೃತ ದುರ್ದೈವಿಗಳು. ಇಂದು(ಶನಿವಾರ) ಮಧ್ಯಾಹ್ನ ಇವರಿಬ್ಬರೂ ದುರಂತ ಅಂತ್ಯ ಕಂಡಿದ್ದಾರೆ. ಪ್ರೀತಿ ಮಾಡುವಂತೆ ಸುಮಾಳ ಹಿಂದೆ ಪ್ರಕಾಶ ಭಜಂತ್ರಿ ದುಂಬಾಲು ಬಿದ್ದಿದ್ದ. ಈ ವಿಷಯ ಹುಡುಗಿ ಮನೆಯವರಿಗೂ ತಿಳಿದಿತ್ತು. ಇದಕ್ಕೆ ಮನೆಯವರು …

Read More »

ವೇಷದ ಜತೆಗೆ ಭಾಷೆಯನ್ನೂ ಬದಲಾಯಿಸಿದ್ದ ಸ್ಯಾಂಟ್ರೋ ರವಿ! ಈತನ ಮಾತು ಕೇಳಿ ಪೊಲೀಸರೇ ಅರೆಕ್ಷಣ ಗಲಿಬಿಲಿ

ಮೈಸೂರು: ಅತ್ಯಾಚಾರ, ಪತ್ನಿಗೆ ವಂಚನೆ ಪ್ರಕರಣದ ಆರೋಪಿ ಸ್ಯಾಂಟ್ರೋ ರವಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಗುಜರಾತ್​ನ ಅಹಮದಾಬಾದ್​ನಲ್ಲಿ ತಲೆಮರೆಸಿಕೊಂಡಿದ್ದ. 11 ದಿನದ ಬಳಿಕ ಪೊಲೀಸರು ಆತನನ್ನು ಪತ್ತೆ ಮಾಡಿ ಮೈಸೂರಿಗೆ ಕರೆತಂದಿದ್ದಾರೆ. ಬಂಧನದ ವೇಳೆಯೂ ಅಹಮದಾಬಾದ್​ನಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದ. ಪೊಲೀಸರಿಗೆ ತನ್ನ ಗುರುತು ಸಿಗಬಾರದು ಎಂಬ ಕಾರಣಕ್ಕೆ ಆತ ತನ್ನ ವೇಷ ಬದಲಾಯಿಸಿದ್ದು ಮಾತ್ರವಲ್ಲದೆ ಭಾಷೆಯನ್ನೂ ಬದಲಾಯಿಸಿದ್ದ! ತಲೆಯ ವಿಗ್​ ತೆಗೆದು ಮೀಸೆ ಬೋಳಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ ಗುರುತಿರುಸುವುದು ಕಷ್ಟವಾಗಿತ್ತು. …

Read More »

ಸ್ಯಾಂಟ್ರೋ ರವಿ ಸೇರಿ ಮೂವರು ಜೈಲುಪಾಲು

ಮೈಸೂರು: ಅತ್ಯಾಚಾರ, ಪತ್ನಿಗೆ ವಂಚನೆ ಪ್ರಕರಣದ ಆರೋಪಿ ಸ್ಯಾಂಟ್ರೋ ರವಿ ಅಲಿಯಾಸ್​ ಮಂಜುನಾಥ್​ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸ್ಯಾಂಟ್ರೋ ರವಿ ಜೊತೆಗೆ ಸಹಚರರಾದ ರಾಮ್ ಜೀ ಸತೀಶ್ ಕೂಡ ಜೈಲು ಪಾಲಾಗಿದ್ದಾರೆ. ಎಫ್​ಐಆರ್​ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಲ್ಲಿ ಗುಜರಾತ್​ನ ಅಹಮದಾಬಾದ್​ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ 11 ದಿನದ ಬಳಿಕ ಅಂದರೆ ನಿನ್ನೆ(ಜ.13) ಕರ್ನಾಟಕ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿ ಮೈಸೂರಿಗೆ ಕರೆತಂದಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿ …

Read More »

ಸರ್ವಾಧಿಕಾರಿ ಶಕ್ತಿಗಳಿಗೆ ಸೋಲಾಗಲಿ. ಎನ್ನುತ್ತಲೇ ಕಾಂಗ್ರೆಸ್​ ಸೇರ್ಪಡೆಯಾದ ವೈಎಸ್‌ವಿ ದತ್ತ, ಎಚ್​.ನಾಗೇಶ್​

ಬೆಂಗಳೂರು: ಜೆಡಿಎಸ್​ನ ಮಾಜಿ ಶಾಸಕ ವೈಎಸ್‌ವಿ ದತ್ತಾ, ಪಕ್ಷೇತರ ಶಾಸಕ ಎಚ್.ನಾಗೇಶ್, ‌ಮೈಸೂರು ಮೂಡ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಅವರು ಶನಿವಾರ ಕಾಂಗ್ರೆಸ್ ಸೇರ್ಪಡೆಯಾದರು. ಇವರನ್ನು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.   ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಕೂಗಿದರು. ವೈಎಸ್​ವಿ ದತ್ತ ಮಾತನಾಡಿ, ಇದು ಮಾತನಾಡುವ ಸಮಯವಲ್ಲ, ಕೆಲಸ ಮಾಡುವ ಸಮಯ. ಕಳೆದ ಹಲವು …

Read More »

ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರತಂಡದಿಂದ ಸಂಕ್ರಾಂತಿಗೆ ಡಿಫರೆಂಟ್ ವಿಷ್!

ಬೆಂಗಳೂರು: ಯಾವಾಗಲೂ ತನ್ನ ವೈಶಿಷ್ಟ್ಯದೊಂದಿಗೇ ಗಮನ ಸೆಳೆಯುವ ನಟ-ನಿರ್ದೇಶಕ ಉಪೇಂದ್ರ, ಇದೀಗ ತಮ್ಮ ನಿರ್ದೇಶನದ ಹೊಸ ಸಿನಿಮಾ ‘ಯುಐ’ ತಂಡದಿಂದ ಸಂಕ್ರಾಂತಿ ಶುಭಾಶಯ ಕೋರುವುದರಲ್ಲೂ ಡಿಫರೆಂಟ್ ಎನಿಸಿಕೊಂಡಿದ್ದಾರೆ. ರಿಯಲ್​ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾದ ಟೈಟಲ್​ಗಳೇ ಡಿಫರೆಂಟ್ ಆಗಿರುತ್ತವೆ. ಅದೇ ರೀತಿ ಅವರು ನಿರ್ದೇಶನ ಮಾಡುತ್ತಿರುವ ನೂತನ ಸಿನಿಮಾ ಹೆಸರೇ ‘ನಾಮ’ದ ರೂಪದಲ್ಲಿದ್ದು ಘೋಷಣೆ ಆದಾಗಲೇ ಭಾರಿ ಗಮನ ಸೆಳೆಯಲಾಗಿತ್ತು. ದೇವರ ನಾಮದ ರೂಪದಲ್ಲಿ ವಿನ್ಯಾಸ ಮಾಡಲಾಗಿರುವ ಈ ಚಿತ್ರದ ಶೀರ್ಷಿಕೆಯನ್ನು …

Read More »

2024ರಲ್ಲಿ ಮೋದಿ ಸರ್ಕಾರಕ್ಕೆ ಬಹುಮತ ಪಡೆಯುವುದೂ ಕಷ್ಟವಾಗಬಹುದು: ಶಶಿ ತರೂರ್

ಕೋಯಿಕ್ಕೋಡ್: 2019ರ ಲೋಕಸಭಾ ಚುನಾವಣೆಯಲ್ಲಿನ ವಿಜಯವನ್ನು 2024 ರಲ್ಲಿ ಪುನರಾವರ್ತಿಸಲು ಬಿಜೆಪಿಗೆ ಅಸಾಧ್ಯ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. ಲೋಕಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿಯು 50 ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ.   ಶುಕ್ರವಾರ ಇಲ್ಲಿ ನಡೆದ ಕೇರಳ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ತಿರುವನಂತಪುರಂ ಸಂಸದರು, ಬಿಜೆಪಿಯ ಪ್ರಾಬಲ್ಯದ ಬಗ್ಗೆ ಮಾತನಾಡುವ ವೇಳೆ ಅವರು ಅನೇಕ ರಾಜ್ಯಗಳನ್ನು ಕಳೆದುಕೊಂಡಿರುವುದು ಸಹ ಸತ್ಯ. ಕೇಂದ್ರದಲ್ಲಿ ಅಧಿಕಾರವನ್ನು ಕಳೆದುಕೊಳ್ಳುವುದು ಅಸಾಧ್ಯವೇನಲ್ಲ …

Read More »

ದೇವರ ಹುಡುಕಾಟದಲ್ಲಿ ಗುರು-ಶಿಷ್ಯರ ಪಾತ್ರ ಮಹತ್ವವಾದದ್ದು: ಕೋಡಿಮಠದ ಶ್ರೀಗಳು

ಕುರುಗೋಡು : ಪ್ರತಿಯೊಬ್ಬರು ಪ್ರಜಾಪ್ರಭುತ್ವದಲ್ಲಿ ವಿದ್ಯಾ ಪಡಿಯಬೇಕು ಅಂದ್ರೆ ಮೊದಲು ಮಾನವೀಯತೆ ಹೊಂದಿರಬೇಕು ಎಂದು ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಅಭಿಮತ ವ್ಯಕ್ತಪಡಿಸಿದರು.   ಸಮೀಪದ ಬಾದನಹಟ್ಟಿ ಗ್ರಾಮದ ಯಲ್ಲಾಪುರ ರಸ್ತೆಯ ಶ್ರೀ ನಂದಿ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಶ್ರೀ ನಂದಿ ಚಿತ್ತಾರ 5ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಶ್ರಿವಚನ ನೀಡಿ ಮಾತನಾಡಿದ ಅವರು, ದೇವರ ಹುಡುಕಾಟದಲ್ಲಿ ಹಾದಿ …

Read More »

ಯತ್ನಾಳ್ ರನ್ನು ಸಹಿಸಿಕೊಂಡಾಯ್ತು, ಇನ್ನು ನಿರ್ಧಾರ ಮಾಡಬೇಕಿದೆ: ಕಿಡಿಕಾರಿದ ನಿರಾಣಿ

ದಾವಣಗೆರೆ: ‘ಪಿಂಪ್ ಸಚಿವ’ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಚಿವ ಮುರುಗೇಶ ನಿರಾಣಿ ನೊಂದುಕೊಂಡ ಘಟನೆ ನಡೆಯಿತು. ಯತ್ನಾಳ್ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ನಿರಾಣಿ ಭಾವುಕರಾದರು. ಬಿಜೆಪಿ ಸಂಸ್ಕೃತಿ ಹೊಂದಿರುವ ಪಕ್ಷ, ನಮ್ಮ ಸಮುದಾಯವೂ ಸಂಸ್ಕೃತಿ ಹೊಂದಿದೆ. ಶಾಸಕ ಯತ್ನಾಳ ಅಸಂವಿಧಾನಿಕ ಮಾತುಗಳನ್ನು ಆಡುತ್ತಾರೆ ಸಿದ್ದೇಶ್ವರ ಸ್ವಾಮೀಜಿ ಅವರ ಸನ್ನಿಧಿಯಲ್ಲಿ ಬೆಳೆದವರು ನಾವು. ಅವರನ್ನು 0.5 ರಷ್ಟು ನಾವು ಅನುಕರಣೆ ಮಾಡಿದರೂ ಸಾಕು ಎಂದರು. \ …

Read More »

ತಮಿಳುನಾಡು ಮಾದರಿಯಲ್ಲಿ ಮೀಸಲಾತಿ ಜಾರಿ: ಸಿಎಂ ಬೊಮ್ಮಾಯಿ

ದಾವಣಗೆರೆ: ಮೀಸಲಾತಿ ವಿಚಾರವಾಗಿ ಈಗಾಗಲೇ ಕೆಲಸ ಮಾಡಿದ್ದೇವೆ. ಕ್ಯಾಬಿನೆಟ್ ನಲ್ಲಿ ಪಾಸ್ ಮಾಡಿದ್ದೇವೆ. ತಮಿಳುನಾಡು ಮಾದರಿಯಲ್ಲಿ ನಾವು ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಉಚಿತ ವಿದ್ಯುತ್ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಜನರನ್ನು ಮರಳು ಮಾಡುತ್ತಿದೆ. ಕಾಂಗ್ರೆಸ್ ನವರು ಕ್ರೇಜಿವಾಲ್ ದಾರಿಯಲ್ಲಿ ಹೋಗುತ್ತಿದ್ದಾರೆ. ಕಾಂಗ್ರೆಸ್ ನವರು ಹತಾಶರಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ …

Read More »