ಬೆಂಗಳೂರು: ಇಂದು ಕೂಡ ಫ್ರೀಡಂ ಪಾರ್ಕ್ನಲ್ಲಿ ಪಂಚಮಸಾಲಿ ಮೀಸಲಾತಿ ಕೂಗು ಕೇಳಿಬರುತ್ತಿದ್ದು ಮತ್ತೊಮ್ಮೆ ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಮುಂದುವರಿದ ಧರಣಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸಮುದಾಯದ ಜನರು, ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಮೀಸಲಾತಿ ಸಿಗುವರೆಗೂ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಯತ್ನಾಳ್ ಎಚ್ಚರಿಕೆ ಕೂಡ ನೀಡಿದ್ದಾರೆ. ಇಂದಿನ ಪ್ರತಿಭಟನೆಯಲ್ಲಿ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಕೂಡ ಭಾಗವಹಿಸುವ …
Read More »5ಜಿ ಕಾಲದಲ್ಲೂ ಹಿಂಡಲಗಾ ಜೈಲಿನಲ್ಲಿ 2ಜಿ ಜಾಮರ್!
ಬೆಳಗಾವಿ: 5G ಕಾಲಕ್ಕೆ ನಾವೆಲ್ಲ ಬಂದಿದ್ದರೂ, ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಮಾತ್ರ ಇನ್ನೂ 2ಜಿ ಜಾಮರ್ ಕಾರ್ಯನಿರ್ವಹಿಸುತ್ತಿದೆ. ತಂತ್ರಜ್ಞಾನ ಅಪ್ಡೇಟ್ ಮಾಡದ ಕಾರಣ ಖೈದಿಗಳು ಅಕ್ರಮ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಹೋದ ಹಿನ್ನೆಲೆಯಲ್ಲಿ ತನಿಖೆ ನಡೆದಾಗ ಈ ಸ್ಫೋಟಕ ಮಾಹಿತಿ ಹೊರಬಿದ್ದು ಎಲ್ಲರನ್ನೂ ಆಶ್ಚರ್ಯಕ್ಕೆ ಈಡು ಮಾಡಿದೆ. ಜೈಲಿನಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮಂಗಳೂರು ಮೂಲದ …
Read More »ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಆಗಮನ; ಕಾಂಗ್ರೆಸ್ನಿಂದ ಭರ್ಜರಿ ಘೋಷಣೆ ಸಾಧ್ಯತೆ
ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್ ಈಗ ಯೋಜನೆಗಳ ಮಹಾಪೂರವನ್ನೇ ಹರಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತೀ ಮನೆಗೂ 200 ಯೂನಿಟ್ ವಿದ್ಯುತ್ಅನ್ನು ಉಚಿತವಾಗಿ ನೀಡುವ ಬಗ್ಗೆ ಘೋಷಣೆ ಮಾಡಿದೆ. ಇದೀಗ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದು ಈ ಹಿನ್ನೆಲೆಯಲ್ಲಿ ಭರ್ಜರಿ ಘೋಷಣೆಗಳನ್ನು ಮಾಡಲು ಕಾಂಗ್ರೆಸ್ ಸಿದ್ಧವಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಹಲವು ಯೋಜನೆ ಘೋಷಣೆ ಮಾಡಲು ಸಿದ್ಧವಾಗಿರುವ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬಂದ …
Read More »ಸಂಕ್ರಾಂತಿ ಪ್ರಯುಕ್ತ ನಡೆದ ಹೋರಿ ಹಬ್ಬದಲ್ಲಿ ಅವಘಡ: ಇಬ್ಬರು ದುರ್ಮರಣ
ಶಿವಮೊಗ್ಗ: ಮಕರ ಸಂಕ್ರಾಂತಿ ಪ್ರಯುಕ್ತ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಹೋರಿ ಹಬ್ಬದಲ್ಲಿ ದುರಂತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಮತ್ತು ಶಿಕಾರಿಪುರ ತಾಲೂಕಿನ ಆವನಟ್ಟಿ ಸಮೀಪದ ಮಾಳ್ಳೂರು ಗ್ರಾಮದಲ್ಲಿ ಸಂಭವಿಸಿದ ಪ್ರತ್ಯೇಕ ಅವಘಡದಲ್ಲಿ ಶಿವಮೊಗ್ಗ ಆಲ್ಕೊಳದ ನಿವಾಸಿ ಲೋಕೇಶ್ (32) ಮತ್ತು ಮಾಳ್ಳೂರು ಗ್ರಾಮದ ರಂಗನಾಥ (24) ಎಂಬುವರು ಮೃತಪಟ್ಟಿದ್ದಾರೆ. ಹೋರಿಗಳ ಕಾಲಡಿ ಸಿಲುಕಿ ಆರು ಮಂದಿ ಗಾಯಗೊಂಡಿದ್ದಾರೆ. ಜ.14ರಂದು ಮಳ್ಳೂರಿನಲ್ಲಿ ನಡೆದಿದ್ದ ಹೋರಿ ಹಬ್ಬದಲ್ಲಿ ರಂಗನಾಥ್ ಗಂಭೀರವಾಗಿ …
Read More »ಸ್ಯಾಂಟ್ರೋ ರವಿಗೆ ಜನವರಿ 25ರವರೆಗೆ ನ್ಯಾಯಾಂಗ ಬಂಧನ
ಮೈಸೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮಂಜುನಾಥ ಅಲಿಯಾಸ್ ಸ್ಯಾಂಟ್ರೊ ರವಿಗೆ ಜ.25ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನಗರದ ಆರನೇ ಹೆಚ್ಚುವರಿ ಮತ್ತು ಸೆಶೆನ್ಸ್ ನ್ಯಾಯಾಲಯವು ಸೋಮವಾರ ಆದೇಶ ನೀಡಿತು. ಜಾಮೀನು ಮತ್ತು ಇತರ ಆಕ್ಷೇಪಣೆಗಳಿಗೆ ಜ.18ರಂದು ಮನವಿ ಸಲ್ಲಿಸಬಹುದು ಎಂದು ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್ ಆದೇಶಿಸಿದರು. ಅವರ ಮುಂದೆ ಬೆಳಿಗ್ಗೆ 11:10ಕ್ಕೆ ಬಿಗಿ ಭದ್ರತೆಯೊಂದಿಗೆ ಸ್ಯಾಂಟ್ರೊ ರವಿಯನ್ನು ಹಾಜರುಪಡಿಸಲಾಯಿತು. ಸರ್ಕಾರಿ ವಕೀಲರು ವಾದಿಸಿ, ‘ಸ್ಯಾಂಟ್ರೊ ರವಿ …
Read More »ಅಂಬೇಡ್ಕರ್ ಸ್ಪರ್ಧಾ ಪರೀಕ್ಷೆ ಪೋಸ್ಟರ್ ಬಿಡುಗಡೆ ಗೊಳಿಸಿ ಸತೀಶ್ ಜಾರಕಿಹೊಳಿ : ಪ್ರಥಮ ಬಹುಮಾನ 5 ಲಕ್ಷ ರೂ
ಬೆಳಗಾವಿ : ಡಾ. ಬಿ ಆರ್ ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆಯ ಅಂಗವಾಗಿ ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ) ಡಾ.ಬಿ.ಆರ್ ಅಂಬೇಡರ್ ಕುರಿತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಿದೆ. ಸದರಿ ಪರೀಕ್ಷೆಯ ಪೋಸ್ಟರ್ ಅನ್ನು ಬೆಳಗಾವಿ ನಗರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಶಾಸಕರಾದ ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿ, ಪರೀಕ್ಷೆಗೆ ಶುಭ ಕೋರುತ್ತ “ಎಲ್ಲರೂ ಈ ವಿಶೇಷ ಪರೀಕ್ಷೆಯ ಸದುಪಯೋಗ ಪಡೆದುಕೊಳ್ಳಬೇಕು” ಎಂದರು. ಈ ಬಗ್ಗೆ ಮಾತನಾಡಿದ ಪರಿಷತ್ ರಾಜ್ಯ …
Read More »2 ಎ ಮೀಸಲಾತಿಗಾಗಿ ರಾಜಧಾನಿಯಲ್ಲಿ
ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ, ರಾಜಧಾನಿಯಲ್ಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಶನಿವಾರದಿಂದ ಮತ್ತೊಂದು ಸುತ್ತಿನ ಹೋರಾಟ ಆರಂಭವಾಗಿದೆ. ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದ ಪ್ರತಿಭಟನಕಾರರು ಅಲ್ಲಿಂದ ಶನಿವಾರ ಬೆಂಗಳೂರಿಗೆ ಬಂದರು. ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ‘ಮುಖ್ಯಮಂತ್ರಿ ಕ್ಷೇತ್ರದಲ್ಲಿಯೇ ಪಂಚಮಸಾಲಿ ಸಮುದಾಯಕ್ಕೆ ಆಗಿರುವ ಅನ್ಯಾಯ ಖಂಡಿಸಿದ್ದೇವೆ. ಅಂತಿಮ …
Read More »ವಿವಾದಾತ್ಮಕ ಹೇಳಿಕೆ ನೀಡದಂತೆ ಸೂಚನೆ: ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ‘ಯಾವುದೇ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡದಂತೆ ವರಿಷ್ಠರು ಭಾನುವಾರ ಬೆಳಿಗ್ಗೆ ಫೋನ್ ಮಾಡಿ ತಿಳಿಸಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಿಷಯವಾಗಿ ಚರ್ಚಿಸುವ ಸಂಬಂಧ ದೆಹಲಿಗೆ ಬರುವಂತೆಯೂ ಪಕ್ಷದ ವರಿಷ್ಠರು ನನಗೆ ಆಹ್ವಾನಿಸಿದ್ದಾರೆ. ಮೀಸಲಾತಿ ಕುರಿತಂತೆ ಕೇಂದ್ರದಿಂದ ಸಿಹಿ ಸುದ್ದಿ ಸಿಗುವ ಆಶಾಭಾವ ಇದೆ’ ಎಂದು ಹೇಳಿದರು. ‘ಪಕ್ಷದಲ್ಲಿ ಇರಲು ಸಾಧ್ಯವಿಲ್ಲದಿದ್ದರೆ …
Read More »ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ: ಕೈದಿ ವಿಚಾರಣೆ
ಬೆಳಗಾವಿ: ಭೂಗತಪಾತಕಿ ದಾವೂದ್ ಇಬ್ರಾಹಿಂ ತಂಡದ ಸದಸ್ಯ ಎಂದು ಹೇಳಿಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಕೈದಿಯನ್ನು, ಮಹಾರಾಷ್ಟ್ರದ ಪೊಲೀಸರು ಭಾನುವಾರ ಇಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದರು. ತನಿಖೆಗೆ ಮಹಾರಾಷ್ಟ್ರದ ಎಟಿಎಸ್ ಮತ್ತು ನಾಗ್ಪುರದ ಪೊಲೀಸರ ತಂಡ ಧಾವಿಸಿದ್ದು, ಕೈದಿಯಿಂದ ಮಾಹಿತಿ ಕಲೆ ಹಾಕಿತು. ಆತನಿಂದ ಡೈರಿ ಜಪ್ತಿ ಮಾಡಿದೆ. ಆದರೆ, ಕರೆ ಮಾಡಲು ಬಳಸಿದ್ದ ಮೊಬೈಲ್ ಸಿಕ್ಕಿಲ್ಲ. ಕೊಲೆ ಸೇರಿ …
Read More »2ಎ ಮೀಸಲಾತಿ ಸಿಗುವವರೆಗೂ ಸಿಂಹಾಸನದಲ್ಲಿ ಕೂರುವುದಿಲ್ಲ: ವಚನಾನಂದ ಸ್ವಾಮೀ
ದಾವಣಗೆರೆ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಬೆಳ್ಳಿ ಸಿಂಹಾಸನದಲ್ಲಿ ಕೂರುವುದಿಲ್ಲ’ ಎಂದು ಪೀಠಾಧಿಪತಿ ವಚನಾನಂದ ಸ್ವಾಮೀಜಿ ಪ್ರಕಟಿಸಿದರು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಕ್ಷೇತ್ರದಲ್ಲಿ ಭಾನುವಾರ ನಡೆದ ಹರಜಾತ್ರೆ ಹಾಗೂ ‘ಪಂಚಮ ಪೀಠಾರೋಹಣ’ ಸಮಾರಂಭದಲ್ಲಿ ಅವರು ಸಿಂಹಾಸನದಲ್ಲಿ ಕೂರಲು ನಿರಾಕರಿಸಿದರು. ‘ಸಮುದಾಯಕ್ಕೆ ಮೀಸಲಾತಿ ಸಿಗುವಂತೆ ಮಾಡಿ ಜನರ ಹೃದಯ ಸಿಂಹಾಸನದಲ್ಲಿ ಕೂರಲು ಇಚ್ಛೆ ಪಡುತ್ತೇನೆ. ಪಂಚಮ ಪೀಠಾರೋಹಣ ಮಾಡುವುದಿಲ್ಲ’ ಎಂದು …
Read More »
Laxmi News 24×7