Breaking News

ಜಿಲ್ಲೆ

ವರದಕ್ಷಿಣೆ ಕಿರುಕುಳ: ತಾಯಿಯ ಜೊತೆ 2 ವರ್ಷದ ಮಗುವನ್ನೂ ಹೊರದಬ್ಬಿದ ಕಿರಾತಕರು..

ಬೆಂಗಳೂರು: 2 ವರ್ಷದ ಮಗುವಿನ ಜೊತೆ ಮಹಿಳೆಯನ್ನು ಹೊರಹಾಕಿ ಪತಿ ವರದಕ್ಷಿಣೆ ಕಿರುಕುಳ ನೀಡಿರುವ ಅಮಾನವೀಯ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ. ಪತಿಯ ಕುಟುಂಬಸ್ಥರ ವಿರುದ್ಧ ಪತ್ನಿ ವಾದಿಕಾ ಜತ್ಲಾ ದೂರು ನೀಡಿದ್ದಾರೆ. ನಿನ್ನೆ ಇದೇ ರೀತಿ ವರದಕ್ಷಿಣೆಗಾಗಿ ಪತ್ನಿಯನ್ನೇ ಸುಡಲು ಯತ್ನಿಸಿದ್ದ ಪತಿ ಬಗ್ಗೆ ಕೇಳಿದ್ವಿ. ಈಗ ಇಂತಹದ್ದೇ ಮತ್ತೊಂದು ಘಟನೆ ಮರುಕಳಿಸಿದೆ. ಪತಿರಾಯ ಚಳಿ, ಮಳೆಯನ್ನು ಲೆಕ್ಕಿಸದೆ ತನ್ನ 2 ವರ್ಷದ ಪುಟ್ಟ ಕಂದಮ್ಮನ ಜೊತೆ ತಾಯಿಯನ್ನೂ ಮನೆಯಿಂದ …

Read More »

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 7 ಲಕ್ಷ ದಾಟಿತು!

ಕರ್ನಾಟಕದಲ್ಲಿ ಕೊವಿಡ್ -19 ಸೋಂಕಿತರ ಸಂಖ್ಯೆ ಇಂದು 7 ಲಕ್ಷ ದಾಟಿದೆ . ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಸಾಯಂಕಾಲ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 102 ಜನ ಸೋಂಕಿಗೆ ಬಲಿಯಾಗಿದ್ದಾರೆ ಮತ್ತು ಹೊಸದಾಗಿ 10,517 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ . ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 9,891 ಜನರ ಸಾವನ್ನಪ್ಪಿದ್ದಾರೆ , ಒಟ್ಟು ಸೋಂಕಿತರ ಸಂಖ್ಯೆ 7,00,786 ಕ್ಕೇರಿದೆ . ಸೋಂಕಿತರಲ್ಲಿ 5,69,947 …

Read More »

ಜಂಬೂ ಸವಾರಿಯನ್ನು ಮಾವುತರೇ ಮಾಡುತ್ತಾರೆ ಅದಕ್ಕೆ ಏಕೆ ಜನ ಬೇಕು? ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ:ಎಸ್.ಎಲ್.ಭೈರಪ್ಪ

ಮೈಸೂರು: ಜಂಬೂ ಸವಾರಿಯನ್ನು ಮಾವುತರೇ ಮಾಡುತ್ತಾರೆ ಅದಕ್ಕೆ ಏಕೆ ಜನ ಬೇಕು? ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ ಎಂದು ಕಳೆದ ವರ್ಷ ದಸರಾ ಉದ್ಘಾಟಿಸಿದ್ದ ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದ್ದಾರೆ. ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಜಂಬೂಸವಾರಿಯನ್ನು ಮಾವುತರು ಮಾಡುತ್ತಾರೆ. ಇದಕ್ಕೆ ಜನ ಯಾಕೆ ಬೇಕು ಬೇಕು? ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ. ಎಲ್ಲರೂ ಅವರ ಮನೆಯಲ್ಲೇ ದಸರಾ ಪೂಜೆ ಮಾಡಿಲಿ. ಬೆಟ್ಟದಲ್ಲಿ ಪೂಜೆ …

Read More »

ಸರಕಾರವು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘ:ಶಾಸಕ ಮಹೇಶ್ ಕುಮಟಳ್ಳಿ ಮನವಿ

ಅಥಣಿ : ಭೂಸುಧಾರಣೆ ಕಾಯಿದೆ 79 ಎ ಬಿ ಸಿ ಮತ್ತು 80 ನೇ ಕಾಲಂಗಳನ್ನು ರದ್ದುಗೊಳಿಸಿ ಸರಕಾರವು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘವು ಸನ್ಮಾನ್ಯ ಶ್ರೀ ಮಹೇಶ್ ಕುಮಟಳ್ಳಿ ಶಾಸಕರ ಅಥಣಿ ಅವರಿಗೆ ಮನವಿ ಸಲ್ಲಿಸಿದರು ಈ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಿ ಬಂಡವಾಳ ಕಾಯ್ದೆ ಮತ್ತು ನಮ್ಮ ದೇಶದ ಬೃಹತ್ ಕಾರ್ಪೊರೇಟರ್ ಗಳ ಹಿತಾಸಕ್ತಿಗಳಿಗೆ ಮಣಿದು ರೈತರ ಜಮೀನನ್ನು ಕಬಳಿಸಲು ರತ್ನ …

Read More »

ಡಿಕೆ ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆದಾಗಲ್ಲ -ಸಂಸದೆ ಶೋಭಾ

ಉಡುಪಿ: RR ನಗರದಿಂದ ದಿ. ಡಿಕೆ ರವಿ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಸ್ಪರ್ಧೆಗೆ ಇಳಿದಿರುವ ವಿಚಾರಕ್ಕೆ ಸಂಬಂಧಿಸಿ ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆದಾಗಲ್ಲ ಎಂದು ಸಂಸದೆ ಶೋಭಾ ಕೆರಂದ್ಲಾಜೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಶೋಭಾ ಡಿಕೆ.ರವಿ ವಿಚಾರ ಚರ್ಚೆಯ ವಿಷಯವೇ ಅಲ್ಲ. ಡಿಕೆ ರವಿ ಓರ್ವ ದಕ್ಷ ಅಧಿಕಾರಿಯಾಗಿದ್ರು, ಆದ್ರೆ ಇಂದು ಅವರು ನಮ್ಮ ಜೊತೆಯಲಿಲ್ಲ. ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ …

Read More »

ಬೆಳಗಾವಿ, ಕಲಬುರಗಿ ಸೇರಿ ದೇಶದ 6 ಆಯ್ದ ವಿಮಾನ ನಿಲ್ದಾಣದಲ್ಲಿ ಪ್ಲೈಯಿಂಗ್ ಸ್ಕೂಲ್ ತೆರೆಯಲು ನಿರ್ಧರಿಸಿದೆ.

ಬೆಳಗಾವಿ : ಜಿಲ್ಲೆಗೆ ಕೇಂದ್ರ ಸರ್ಕಾರ ಕೊಡುಗೆಯನ್ನು ನೀಡಿದ್ದು,  ಬೆಳಗಾವಿ, ಕಲಬುರಗಿ ಸೇರಿ ದೇಶದ 6 ಆಯ್ದ ವಿಮಾನ ನಿಲ್ದಾಣದಲ್ಲಿ ಪ್ಲೈಯಿಂಗ್ ಸ್ಕೂಲ್ ತೆರೆಯಲು ನಿರ್ಧರಿಸಿದೆ. ಬೆಳಗಾವಿ, ಕಲಬುರಗಿ, ಜಲಗಾಂವ್, ಖಜುರಾಹೊ, ಲೀಲಬಾರಿ ಮತ್ತು ಸೇಲಂ ವಿಮಾನ ನಿಲ್ದಾಣಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಕೇಂದ್ರ  ಸರ್ಕಾರ ಪ್ರಸ್ತಾಪಿಸಿದೆ.  ಮುಂದಿನ 5 ವರ್ಷಗಳಲ್ಲಿ 9,488 ಪೈಲಟ್‌ಗಳ ಅಗತ್ಯವಿದೆ.  ಆದ್ದರಿಂದ ಆ ಮಟ್ಟಿಗೆ ಪೈಲಟ್ ನಿರ್ಮಿಸುವುದು ಅಗತ್ಯವಾಗಿರುತ್ತದೆ.  ಈಗಾಗಲೇ ಭಾರತದಲ್ಲಿ 9 ಸಾವಿರ ಪೈಲಟ್ಸ್ …

Read More »

: ಡ್ರಗ್ಸ್ ಡೀಲ್ ಪ್ರಕರಣಕ್ಕೆ ಶೀಘ್ರವೇ ಸ್ಫೋಟಕ ಟ್ವಿಸ್ಟ್ ದೊರೆಯಲಿದ್ದು, ಸ್ಯಾಂಡಲ್‍ವುಡ್‍ ಸ್ಟಾರ್ ನಟನಿಗೆ ದೊಡ್ಡ ಶಾಕ್ ಒಂದು ಕಾದಿದೆ.

ಬೆಂಗಳೂರು: ಡ್ರಗ್ಸ್ ಡೀಲ್ ಪ್ರಕರಣಕ್ಕೆ ಶೀಘ್ರವೇ ಸ್ಫೋಟಕ ಟ್ವಿಸ್ಟ್ ದೊರೆಯಲಿದ್ದು, ಸ್ಯಾಂಡಲ್‍ವುಡ್‍ಗೆ ಅತಿ ದೊಡ್ಡ ಶಾಕ್ ಒಂದು ಕಾದಿದೆ. ಇದು ಸಿಸಿಬಿ ಅಲ್ಲ, ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‍ಸಿಬಿ)ಯ ದೊಡ್ಡ ಕಾರ್ಯಾಚರಣೆಯಾಗಿದೆ. ಈ ಮೂಲಕ ಡ್ರಗ್ ಕೇಸಿನಲ್ಲಿ ಎನ್‍ಸಿಬಿ ಸೈಲೆಂಟ್ ಆಗಿ ಕೆಲಸ ಮಾಡುತ್ತಿದ್ದು, ಶೀಘ್ರವೇ ಸ್ಯಾಂಡ್‍ಲವುಡ್‍ನ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹೊರಬೀಳಲಿದೆ. ಕಾರ್ಪೊರೇಟರ್ ಮಗ ಯಶಸ್ ‘ಸ್ಟಾರ್ ನಟ’ನ ಹೆಸರು ಹೇಳಿದ್ದಾನೆ. ಹೀಗಾಗಿ ಸದ್ಯದಲ್ಲೇ ಕನ್ನಡದ ದೊಡ್ಡ ನಟನಿಗೆ …

Read More »

ಜನತಾ ಕಾಲೋನಿಯಲ್ಲಿ ಚಾಕುವಿನಿಂದ ಚುಚ್ಚಿ ಚುಚ್ಚಿ ವ್ಯಕ್ತಿಯ ಬರ್ಬರ ಕೊಲೆ

ಬೆಂಗಳೂರು ಗ್ರಾಮಾಂತರ: ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮದ ಜನತಾ ಕಾಲೋನಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಹರಿಯಾಣ ಮೂಲದ ಸಂಜಯ್ ಕುಮಾರ್ (38) ಎಂದು ಗುರುತಿಸಲಾಗಿದೆ. ಸಂಜಯ್​ ಹರಿಯಾಣದಿಂದ ಆಗಮಿಸಿ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ಸಂಜಯ್​ ಕಮಾರ್​ನನ್ನು ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಚಾಕುವಿನಿಂದ ಹಲ್ಲೆಯಾದ ಬಳಿಕ ಸಂಜಯ್ ಮೆಟ್ಟಿಲುಗಳನ್ನು ಹತ್ತಿ ತನ್ನ …

Read More »

ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದ:ಕೇಂದ್ರ ಸಚಿವರೊಂದಿಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ

  ಬೆಂಗಳೂರು,: ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಗೋವಾ ರಾಜ್ಯಗಳು ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಹೊಸ ವಿವಾದ ಸೃಷ್ಟಿಸಲು ಮುಂದಾಗಿದ್ದು, ಈ ವಿವಾದಗಳಿಂದ ರಾಜ್ಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಮತ್ತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ಮತ್ತು ನ್ಯಾಯಬದ್ಧ ವಾದವನ್ನು ಮಂಡಿಸಲಿದೆ ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರು ಭರವಸೆ ನೀಡಿದ್ದಾರೆ. ಕೇಂದ್ರ …

Read More »

ಇವತ್ತು ದೇವಸ್ಥಾನಕ್ಕೂ ಹೋಗಿಲ್ಲ, ಪೂಜೆನೂ ಮಾಡ್ಸಿಲ್ಲ’ ಮಗಳ ಹುಟ್ಟುಹಬ್ಬ ಆಚರಿಸಲಾಗದೆ ರೇಷ್ಮಾ ಗಲ್ರಾನಿ ಬೇಸರ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧಿಸಿ ನಟಿ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇಂದು ಅವರ ಜನುಮದಿನವಾಗಿದ್ದು ಅಬ್ಬರದ ಪಾರ್ಟಿಗಳಿಂದ ದೂರ ಇದ್ದಾರೆ. ಈ ಬಗ್ಗೆ ಸಂಜನಾ ತಾಯಿ ದುಃಖ ವ್ಯಕ್ತಪಡಿಸಿದ್ದಾರೆ. ಅಬ್ಬರದ ಪಾರ್ಟಿಗಳಿಲ್ಲ, ಕೇಕ್ ಕಟಿಂಗ್​ಗಳಿಲ್ಲ.. ವಿಷ್ ಗಳಿಲ್ಲ.. ಸ್ಟಾರ್ ನಟಿ ಸಂಜನಾ ತನ್ನ ಬರ್ತ್ ಡೇಯನ್ನು ಸ್ಟಾರ್ ಹೋಟೆಲ್​ಗಳಲ್ಲಿ, ನಗರದ ಹೊರವಲಯದ ರೆಸಾರ್ಟ್​ನಲ್ಲಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ …

Read More »