ಬೆಳಗಾವಿ: ಪೊಲೀಸರ ಕಣ್ಣುತಪ್ಪಿಸಿ ಎನ್‌ಸಿಪಿ ಮಹಿಳಾ ಘಟಕದ ರೂಪಾಲಿ ಚಾಕನಕರ ಬೆಳಗಾವಿಗೆ ಆಗಮಿಸಿ ಎಂಇಎಸ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದ್ದಾರೆ. ಎಂಇಎಸ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿರುವ ಮಹಾರಾಷ್ಟ್ರ ಎನ್‌ಸಿಪಿ ನಾಯಕಿ ರೂಪಾಲಿ ಕರ್ನಾಟಕದ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಎನ್‌ಸಿಪಿ ವರಿಷ್ಠ ಶರದ್ ಪವಾರ್ ಆದೇಶ ಮೇರೆಗೆ ಸಭೆಗೆ ಬಂದಿದ್ದೇನೆ. ಕರ್ನಾಟಕ ಸರ್ಕಾರ ಕರಾಳ ದಿನ ನಿಷೇಧಿಸಿದ್ದರೂ ನಾವು ಮಹಾರಾಷ್ಟ್ರದಲ್ಲಿ ಆಚರಿಸುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ನಾವು ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸುತ್ತಿದ್ದೇವೆ. …
Read More »ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದ ಯುವಕ ಮೇಲೆ ಪೊಲೀಸರ ಲಾಠಿ ಚಾರ್ಜ್
ಬೆಳಗಾವಿ: ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದ ಯುವಕ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಮಹಾರಾಷ್ಟ್ರ ಬಸ್ ಗೆ ಕೆಲವು ಕಿಡಿಗೇಡಿಗಳು ಕಲ್ಲು ತೂರಿದ ಹಿನ್ನೆಲೆಯಲ್ಲಿ ಚನ್ನಮ್ಮ ವೃತ್ತದಲ್ಲಿ ರಾಜ್ಯೋತ್ಸವ ಆಚರಿಸುತ್ತಿದ್ದ ಗುಂಪು ಗುಂಪಾಗಿ ಸೇರಿದ ಯುವಕರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಪೊಲೀಸ್ ಲಾಠಿ ಏಟು ಬೀಳುತ್ತಿದ್ದಂತೆ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪೊಲೀಸರ ನಡೆಗೆ ಕರವೇ ಜಿಲ್ಲಾಧ್ಯಕ್ಷ ಅಸಮಧಾನ ವ್ಯಕ್ತವಾಡಿಸಿದ್ದು, ಎಂಇಎಸ್ ಮುಖಂಡರು ಪ್ರತಿಭಟನಾ ಸಭಾ ನಡೆಸಿದರು ಅದಕ್ಕೆ …
Read More »ಸಿದ್ದರಾಮಯ್ಯ ಮನೆಯಿಂದ ಹಣ ತಂದು ಕೊಟ್ಟಿಲ್ಲ: ಎಸ್.ಟಿ ಸೋಮಶೇಖರ್
ಮೈಸೂರು: ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಶೇ.100 ರಷ್ಟು ಮುನಿರತ್ನ ಗೆಲ್ಲುತ್ತಾರೆ. ಆರ್‍ಆರ್ ನಗರ ಕ್ಷೇತ್ರವನ್ನು ಮುನಿರತ್ನ ಅಭಿವೃದ್ಧಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದರು. ನಗರದ ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಆದಾಯ ಹೆಚ್ಚಿದೆ. ಹೀಗಾಗಿ ಅಭಿವೃದ್ಧಿ ಹಣ ಬಿಡುಗಡೆಯಾಗಿದೆ. ಬಜೆಟ್ ನಲ್ಲಿ ಕೊಟ್ಟ ಹಣವನ್ನು ಮುನಿರತ್ನ ಸರಿಯಾಗಿ ಅವರ ಕ್ಷೇತ್ರಕ್ಕೆ ಬಳಸಿದ್ದಾರೆ. ಕ್ಷೇತ್ರದ …
Read More »ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ: ಲಕ್ಷಣ ಸವದಿ
ರಾಯಚೂರು: ಸಿಎಂ ಬದಲಾವಣೆ ಹೇಳಿಕೆ ವಿಚಾರ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಉಪಮುಖ್ಯಮಂತ್ರಿ ಲಕ್ಷಣ ಸವದಿ ಹೇಳಿದ್ದಾರೆ .ನಗರದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಬಳಿಕ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಆ ಬಗ್ಗೆ ಸೂಕ್ತ ಸಂದರ್ಭದಲ್ಲಿ ಕ್ರಮಕೈಗೊಳ್ಳುತ್ತಾರೆ ಎಂದರು. ಕಳೆದ ವರ್ಷದ ಬೆಳೆ ವಿಮೆಯ ಹಣ ರೈತರಿಗೆ ಸಿಗದೆ ಹೋಗಿದೆ. ಈ ಬಗ್ಗೆಯೂ ಪರಿಶೀಲಿಸಲಾಗುವುದು. ಭತ್ತ, ತೊಗರಿ, ಉದ್ದು …
Read More »ಕರ್ನಾಟಕ ರಾಜ್ಯೋತ್ಸವದ ಹಿನ್ನಲೆಯಲ್ಲಿ ರಿಯಾಜ್ ಚೌಗಲಾ ನಿರ್ದೇಶನದಲ್ಲಿ ಮೂಡಿದ ಕನ್ನಡ ಆಲ್ಬಮ್ ಸಾಂಗ್ ಗಳನ್ನು ರಾಹುಲ್ ಜಾರಕಿಹೊಳಿ ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಇಂದು ಬಿಡುಗಡೆಗೊಳಿಸಿದರು.
ಗೋಕಾಕ : ಕರ್ನಾಟಕ ರಾಜ್ಯೋತ್ಸವದ ಹಿನ್ನಲೆಯಲ್ಲಿ ರಿಯಾಜ್ ಚೌಗಲಾ ನಿರ್ದೇಶನದಲ್ಲಿ ಮೂಡಿದ ಕನ್ನಡ ಆಲ್ಬಮ್ ಸಾಂಗ್ ಗಳನ್ನು ರಾಹುಲ್ ಜಾರಕಿಹೊಳಿ ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಇಂದು ಬಿಡುಗಡೆಗೊಳಿಸಿದರು. ‘ನಾಡ ತಾಯಿಯ ಉತ್ಸವ ನೋಡ ಬನ್ನಿ, ವೈಭವ. ಕನ್ನಡ ಕೀರ್ತಿ ಬೆಳೆಸುವ ಉತ್ಸವ’ ಹಾಗೂ ‘ಬದುಕು ಕಲಿಸಿದ ಭಾಷೆ ಕನ್ನಡ, ಹೃದಯ ತಟ್ಟಿದ ಭಾಷೆ ಕನ್ನಡ’ ಎಂಬ ಎರಡು ಕನ್ನಡ ಆಲ್ಬಮ್ ಸಾಂಗ್ ಗಳನ್ನು ಉತ್ತಮ ತಂಡ ರಚಿಸಿದ್ದಾರೆ. …
Read More »ಕೋವಿಡ್ -19 ರ ಸಂಕಷ್ಟದ ಸಂದರ್ಭದಲ್ಲಿ ವಿರೇಶ್ ಕಿವಡಸಣ್ಣವರ್ ಯಾವುದೇ ಪ್ರಚಾರ ಬಯಸದೆ ಸೈಲೆಂಟ್ ಆಗಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ.
ಬೆಳಗಾವಿ : ಸಮರ್ಥನಂ ಅಂಥ ಮಕ್ಕಳ ಸಂಸ್ಥೆ ಮತ್ತು ಸಮೃದ್ಧಿ ಸೇವಾ ಸಂಸ್ಥೆಯ ಮುಖ್ಯಸ್ಥ ವಿರೇಶ ಕಿವಡಸಣ್ಣವರಗೆ ಜಿಲ್ಲಾಡಳಿತ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕೋವಿಡ್ -19 ರ ಸಂಕಷ್ಟದ ಸಂದರ್ಭದಲ್ಲಿ ವಿರೇಶ್ ಕಿವಡಸಣ್ಣವರ್ ಯಾವುದೇ ಪ್ರಚಾರ ಬಯಸದೆ ಸೈಲೆಂಟ್ ಆಗಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ. ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿ ಮೂಲೆ ಮೂಲೆಗೆ ತೆರಳಿ ಅಗತ್ಯ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಜನರಿಗೆ …
Read More »ಡಿಸಿಸಿ ಬ್ಯಾಂಕ್ ಚುನಾವಣೆ ಯಾವುದೇ ಪಕ್ಷದ ಆಧಾರಿತವಲ್ಲ, ಬದಲಾಗಿ ಕೆಲವರ ವೈಯಕ್ತಿಕವಾಗಿ ಮೂರು ಸ್ಥಾನಗಳಿಗೆ ಸ್ಪರ್ಧೆ ನಡೆಯುತ್ತಿದೆ:ಸತೀಶ ಜಾರಕಿಹೊಳಿ
ಗೋಕಾಕ: ಡಿಸಿಸಿ ಬ್ಯಾಂಕ್ ಚುನಾವಣೆ ಯಾವುದೇ ಪಕ್ಷದ ಆಧಾರಿತವಲ್ಲ, ಬದಲಾಗಿ ಕೆಲವರ ವೈಯಕ್ತಿಕವಾಗಿ ಮೂರು ಸ್ಥಾನಗಳಿಗೆ ಸ್ಪರ್ಧೆ ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ತಮ್ಮ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಈಗಾಗಲೇ ಸಂಘ- ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿದವರು ಅವಿರೋಧವಾಗಿ ಆಯ್ಕೆಯಾಗಿದೆ. ಮೂರಕ್ಕೆ ಚುನಾವಣೆ ನಡೆಯುತ್ತಿದೆ. ಅದು ಅವರವರ ವೈಯಕ್ತಿಕವಾಗಿದೆ ಎಂದಷ್ಟೇ ಹೇಳಿದರು. ಕರ್ನಾಟಕದಲ್ಲಿ ಕನ್ನಡ-ಮರಾಠಿ ಸಮಸ್ಯೆ ಇಲ್ಲ: ಹಾದಿ ಬೀದಿಯಲ್ಲಿ ನಿಂತು …
Read More »ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ, ಪ್ರತ್ಯೇಕ ರಾಜ್ಯದ ಧ್ವಜಾರೋಹಣ ನೆರವೇರಿಸಲು ಯತ್ನಿಸಿದ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ: ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ, ಪ್ರತ್ಯೇಕ ರಾಜ್ಯದ ಧ್ವಜಾರೋಹಣ ನೆರವೇರಿಸಲು ಯತ್ನಿಸಿದ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಸೇರಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸದಸ್ಯರು ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿದರು. ತಕ್ಷಣ ಎಚ್ಚೆತ್ತುಕೊಂಡು ಪೊಲೀಸರು ಧ್ವಜಾರೋಹಣ 10 ಜನರ ವಶಕ್ಕೆ ಪಡೆದರು. ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಕಲ್ಯಾಣ ಕರ್ನಾಟಕ ಭಾಗವನ್ನು ಪದೇ ಪದೇ ನಿರ್ಲಕ್ಷಿಸಲಾಗುತ್ತಿದೆ. ನಮಗೆ ಪ್ರತ್ಯೇಕ …
Read More »ಸಚಿವ ರಮೇಶ್ ಸಿಪಿಎಡ್ ಮೈದಾನದಲ್ಲಿ ರಾಜ್ಯೋತ್ಸವದ ಧ್ವಜಾರೋಹಣ ವೀರರಾಣಿ ಕಿತ್ತೂರು ಚನ್ನಮ್ಮ ಪತ್ರಿಮೆಗೆ ಮಾಲಾರ್ಪಣೆ
ಬೆಳಗಾವಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಕೋವಿಡ್ ಸೋಂಕು ಸಂದರ್ಭದಲ್ಲಿಯೂ ಜನಪರ ಕಾರ್ಯಕ್ರಮಗನ್ನು ರೂಪಿಸುವುದರ ಜತೆಗೆ ಪ್ರವಾಹ ಸಂತ್ರಸ್ತರಿಗೆ ಬದುಕು ಕಟ್ಟಿಕೊಡುವ ದೃಢ ಸಂಕಲ್ಪ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ನಗರದ ಸಿಪಿಎಡ್ ಮೈದಾನದಲ್ಲಿ ರಾಜ್ಯೋತ್ಸವದ ಧ್ವಜಾರೋಹಣ ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆ ಅತ್ಯಂತ ಸರಳ ರೀತಿಯಲ್ಲಿ …
Read More »ಆರ್.ಆರ್.ನಗರದಲ್ಲಿ ಕಾಂಗ್ರೆಸ್‍ನಿಂದ ಹಣ ಹಂಚಿಕೆ ಹಣ ಹಂಚೋದರಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಫಾಸ್ಟ್: H.D.K.
ಬೆಂಗಳೂರು: ಉಪ ಚುನಾವಣೆ ಕ್ಷೇತ್ರ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಇಂದು ನಗರದ ಪೀಣ್ಯದಲ್ಲಿ ತುರ್ತುಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು ಹಣ ಹಂಚಿಕೆಯ ಆರೋಪವನ್ನ ಮಾಡಿದರು. ಮನೆಯಲ್ಲಿ ಎಷ್ಟು ಮತಗಳಿವೆ ಎಂದು ಲಿಸ್ಟ್ ಮಾಡಿಕೊಂಡು ಹಣ ಹಂಚಿಕೆ ಮಾಡಲಾಗುತ್ತಿದೆ. ಕನಕಪುರದಿಂದ ಬಂದಿರುವ ಅರ್ಜುನ್ ಮತ್ತು ಅರುಣ್ ಎಂಬವರು ಹಣ ಹಂಚುವ ವೇಳೆ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರಸ್ ನವರು ದೊಡ್ಡ ಮಟ್ಟದಲ್ಲಿ ಹಣ ಹಂಚುವ …
Read More »
Laxmi News 24×7