Breaking News

ಜಿಲ್ಲೆ

ನಿರ್ದಿಷ್ಟ ಗುರಿ- ಕಾರಣ ಇಲ್ಲದ, ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್: ಪರಮೇಶ್ವರ್ ಟೀಕೆ

ಬೆಂಗಳೂರು: ಯಾವುದೇ ನಿರ್ದಿಷ್ಟ ಗುರಿ, ಕಾರಣ ಇಲ್ಲದಿರುವ ಬಜೆಟ್ ನ್ನು ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಿದ್ದಾರೆ. ಇದು ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್ ಎಂದು ಮಾಜಿ ಸಚಿವ ಪರಮೇಶ್ವರ್ ಟೀಕಿಸಿದ್ದಾರೆ. ಸಿಎಂ ಬಿಎಸ್ ವೈ, 71 ಸಾವಿರ ಕೋಟಿ ಸಾಲ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ. ಫಿಸಿಕಲ್ ಆಕ್ಟ್ ತಂದಿದ್ದರು. ಅವರ ಪ್ರಕಾರ ಸಾಲ 25 ರಷ್ಟು ಮೇಲೆ ಹೋಗದಂತೆ ಸೂಚಿಸಲಾಗಿತ್ತು. ಅದನ್ನು ಮೀರಿ 26% ಸಾಲ ಪಡೆದಿದ್ದಾರೆ. ಮುಂದಿನ ದಿನದಲ್ಲಿ …

Read More »

ಹೊಸ ತೆರಿಗೆ ಇಲ್ಲ, ಪೆಟ್ರೋಲ್ ತೆರಿಗೆ ಕಡಿತವೂ ಇಲ್ಲ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದ ಸಂಕಷ್ಟಕ್ಕೀಡಾಗಿರುವ ಜನತೆಗೆ ಸಿಹಿ ಸುದ್ದಿ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ವರ್ಷ ಯಾವುದೇ ಹೊಸ ತೆರಿಗೆ ವಿಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಬಜೆಟ್‌ ಮಂಡನೆ ವೇಳೆ ಈ ವಿಚಾರ ಬಹಿರಂಗಪಡಿಸಿರುವ ಅವರು, ‘ಕೋವಿಡ್‌ನಿಂದಾಗಿ ಜನ ಈಗಾಗಲೇ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಮತ್ತಷ್ಟು ತೆರಿಗೆ ಹೊರೆ ವಿಧಿಸುವುದಿಲ್ಲ ಎಂದು ತಿಳಿಸಿದರು. ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ಮಾರಾಟ ತೆರಿಗೆಯು ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲೇ …

Read More »

ಪಾಲಿಕೆ ಎದುರು ಭಗವಾ ಧ್ವಜ ಹಾರಿಸಲು ಯತ್ನ,ಎಂಈಎಸ್ ಕಾರ್ಯಕರ್ತೆಯರ ವಶಕ್ಕೆ

ಬೆಳಗಾವಿ- ಮಹಾನಗರ ಪಾಲಿಕೆಯ ಎದರು ಭಗವಾ ಧ್ವಜ ಹಾರಿಸಲು ಯತ್ನಿಸಿದ ಐವರು ಮಹಿಳಾ ಕಾರ್ಯಕರ್ತೆಯರನ್ನು ಪೋಲೀಸರು ವಶಕ್ಕೆ ಪಡೆದಿದಿದ್ದಾರೆ.     ಬೆಳಗಾವಿ ಮಹಾನಗರ ಪಾಲಿಕೆಯ ಎದರು ಕನ್ನಡಿಗರು ಕನ್ನಡ ಧ್ವಜ ಹಾರಿಸಿದ್ದನ್ನು ವಿರೋಧಿಸಿ,ಎಂಈಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಬೆಳಗಾವಿಯ ಕಾಲೇಜು ರಸ್ತೆಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸುತ್ತಿರುವಾಗ,ಇನ್ನೊಂದೆಡೆ ಮಹಿಳಾ ಕಾರ್ಯಕರ್ತೆಯರು ಪಾಲಿಕೆ ಎದರು ಭಗವಾ ಧ್ವಜ ಹಾರಿಸುವ ವಿಫಲ ಯತ್ನ ನಡೆಸಿದ್ದಾರೆ. ಸುಮಾರು ಐದು ಜನ ಮಹಿಳಾ ಕಾರ್ಯಕರ್ತೆ ಯರು …

Read More »

ಬಿಲ್ಲವರ ಸಮಾಜದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ …

ಬೆಳಗಾವಿ: ಬಡಮಕ್ಕಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಹಾಗೂ ಉನ್ನತ ಮಟ್ಟಕ್ಕೆ ಪ್ರೋತ್ಸಾಹ ನೀಡುತ್ತಿರುವ ಬಿಲ್ಲವರ ಸಮಾಜದ ಕಾರ್ಯ ಮೆಚ್ಚುಂವತದ್ದು, ಮಕ್ಕಳಿಗೆ ಶಿಕ್ಷಣ ಪ್ರಮುಖವಾಗಿದೆ. ಏಕಾಗ್ರತೆಯಿಂದ ಓದಿನತ್ತ ಗಮನ ಹರಿಸಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂದು ಧಾರವಾಡ ೨ ನೇ ಜಿಲ್ಲಾ ಸತ್ರ ನ್ಯಾಯಾಧೀಶೆ ಪಂಚಾಕ್ಷರಿ ಎಮ್.ಸುವರ್ಣ ಹೇಳಿದರು. ಇಲ್ಲಿನ ಶಹಾಪುರ ವಿಜಯಲಕ್ಷ್ಮಿ ಸಭಾ ಭವನದಲ್ಲಿ ರವಿವಾರ ೭ ರಂದು ಬಿಲ್ಲವರ ಅಸೋಸಿಯೇಶನ್ ಸಂಘದಿಂದ ಆಯೋಜಿಸಿದ ಬಿಲ್ಲವರ ಸಂಘದ …

Read More »

ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು

ಬೆಂಗಳೂರು: ರಮೇಶ್‌ ಜಾರಕಿಹೊಳಿಯ ಅಶ್ಲೀಲ ವೀಡಿಯೋದಲ್ಲಿದ್ದ ಯುವತಿಯ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಆಕೆಯನ್ನು ಹುಡುಕಿ ಕರೆತಂದು, ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಯುವತಿಯು ಮಾ.1ರವರೆಗೂ ಬೆಂಗಳೂರಿನಲ್ಲಿದ್ದು, ಬಳಿಕ ನಾಪತ್ತೆಯಾಗಿಯಾಗಿದ್ದಾಳೆ. ಬಳಿಕ, ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅಶ್ಲೀಲ ವಿಡಿಯೋ(ಸಿ.ಡಿ) ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವತಿ, ನಗರದಲ್ಲಿ ವಾಸವಿದ್ದಳು ಎಂಬ ಮಾಹಿತಿ ಮೇರೆಗೆ ಪೊಲೀಸರು, ಹಲವು ಪಿ.ಜಿ (ಪೇಯಿಂಗ್‌ ಗೆಸ್ಟ್‌)ಗಳನ್ನು ಪರಿಶೀಲಿಸಿದ್ದು, ಆಗ ಆಕೆಯ ವಿಳಾಸದ ಬಗ್ಗೆ ಖಚಿತ …

Read More »

ಕರ್ನಾಟಕ ಬಜೆಟ್ 2021

ಬೆಂಗಳೂರು, ಮಾರ್ಚ್ 08: ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 2021ನೇ ಸಾಲಿನ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಪ್ರತ್ಯೇಕವಾಗಿ ಕೃಷಿ ಬಜೆಟ್ ಮಂಡನೆ ಮಾಡದಿದ್ದರೂ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಮಧ್ಯಾಹ್ನ 12 ಗಂಟೆಗೆ ವಿಧಾನಸಭೆಯಲ್ಲಿ 2021ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗಿದೆ. ಹಣಕಾಸು ಸ್ಥಿತಿ ಸುಧಾರಿಸಲು ಯಾವ ಕ್ರಮ ಕೈಗೊಂಡಿದ್ದಾರೆ? …

Read More »

12 ಮಹಿಳೆಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗಳನ್ನು ನೀಡಿ ಶ್ಲಾಘಿಸಿದ ನಿಯತಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್

ನಿಯತಿ ಫೌಂಡೇಶನ್ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ 12 ಮಹಿಳೆಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗಳನ್ನು ನೀಡಿತು. ಈಫಾ ಹೊಟೆಲ್ ಸಭಾಂಗಣದಲ್ಲಿ ಭಾನುವಾರ ಕಾರ್ಯಕ್ರಮ ನಡೆಯಿತು. ಅರ್ಚನಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಜಾನಪದ ನೃತ್ಯ ‘ಮುಲಗಿ ಜಲಿ ಹೋ’ ಪ್ರದರ್ಶಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಸಿದ್ಧ ಉದ್ಯಮಿ ಶ್ರೀಮತಿ ರೋಹಿಣಿ ಗೋಗ್ಟೆ ಮತ್ತು ಜಿ ಜಿ ಚಿಟ್ನಿಸ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ನವೀನಾ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿಯತಿ …

Read More »

ಮಹಿಳಾ ದಿನಾಚರಣೆ ವಿಶೇಷ; ಮಹಿಳೆಯರಿಗಿಂದು ತಾಜ್​ಮಹಲ್ ಪ್ರವೇಶ ಫ್ರೀ

ಲಖನೌ:  ಮಹಿಳಾ ದಿನಾಚರಣೆಯ ಅಂಗವಾಗಿ ಉತ್ತರ ಪ್ರದೇಶದ ಲಖನೌ ಜಿಲ್ಲಾಡಳಿತ ಇಂದು ಮಹಿಳೆಯರಿಗೆ ಹಲವು ಪ್ರವಾಸಿ ತಾಣಗಳಿಗೆ ಉಚಿತ ಪ್ರವೇಶ ಘೋಷಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಲಖನೌ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಪ್ರಕಾಶ್, ಮಿಷನ್ ಶಕ್ತಿ ಯೋಜನೆಯಡಿ ಉಚಿತ ಪ್ರವೇಶದ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ. ಚೋಟಾ ಇಮಾಂಬರ, ಬಡಾ ಇಮಾಂಬರಾ ಮತ್ತು ಪಿಕ್ಚರ್ ಗ್ಯಾಲರಿಗೆ ಮಹಿಳೆಯರಿಗೆ ಇಂದು ಉಚಿತ ಪ್ರವೇಶ ಘೋಷಿಸಲಾಗಿದೆ. ಇತ್ತ ಪುರಾತತ್ವ ಇಲಾಖೆ …

Read More »

ಕ್ರೀಡಾ ಮನೋಭಾವದಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೋಳಿ : ಜಾವೇದ ಇನಾಮದಾರ

ಗೋಕಾಕ:ಕ್ರೀಡಾ ಮನೋಭಾವದಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೋಳಿ : ಜಾವೇದ ಇನಾಮದಾರ ಸೋಲು ಗೆಲುವಿಗೆ ಮಹತ್ವ ನೀಡದೆ ಕ್ರೀಡಾ ಮನೋಭಾವದಿಂದ ಈ ಕ್ರೀಡಾಕೂಟದಲ್ಲಿ ಪಾಲ್ಗೋಳುವಂತೆ ಡಿ.ವಾಯ್.ಎಸ್.ಪಿ ಜಾವೇದ ಇನಾಮದಾರ ಹೇಳಿದರು ರವಿವಾರದಂದು ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಜೆಸಿಐ ಸಂಸ್ಥೆಯವರು ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರು ಇಂದು ಮನೆಗೆ ಸಿಮಿತವಾಗದೆ ಎಲ್ಲ ಕ್ಷೇತ್ರಗಳಲೂ ಮಾದರಿಯಾಗಿ ಕಾರ್ಯನಿರ್ವಸುತ್ತಿದ್ದಾರೆ. ಇಂತಹ ವೇದಿಕೆಗಳ ಸದುಪಯೋಗದಿಂದ ತಮ್ಮಲ್ಲಿಯ ಪ್ರತಿಭೆ ಹಾಗೂ …

Read More »

ಉಡುಪಿ ಪೇಜಾವರ ಮಠದಲ್ಲಿ ಬೆಂಕಿ ಅವಘಡ

ಉಡುಪಿ : ಉಡುಪಿಯ ಪೇಜಾವರ ಮಠದಲ್ಲಿ ಎಸಿಯ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದ್ದು, ಈ ಸಂದರ್ಭದಲ್ಲಿ ಯಾವುದೇ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ. ಈ ಅಗ್ನಿ ಅನಾಹುತ ವೇಳೆ ಪೇಜಾವರ ಶ್ರೀಗಳು ಮಠದಲ್ಲಿರಲಿಲ್ಲ . ಅಷ್ಟೇ ಅಲ್ಲದೆ, ಅವಘಡದಿಂದ ಮಠದ ಪೀಠೋಪಕರಣಗಳಿಗೆ ಹಾನಿಯಾಗಿಲ್ಲ ಎಂದೂ ತಿಳಿದುಬಂದಿದೆ . ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಉಡುಪಿ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read More »