Breaking News

ಜಿಲ್ಲೆ

ಜಾರಕಿಹೊಳಿ ಟೀಂ ಹತ್ತಿಕ್ಕುವ ಯೋಜನೆ ಬಿಜೆಪಿಯದ್ದು, ಸಿಎಂ ಮೌನ ಮುರಿಯಲಿ: ಮೋಟಮ್ಮ, ಜಯಮಾಲ, ಉಮಾಶ್ರೀ ಆಗ್ರಹ

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವರಾದ ಮೊಟಮ್ಮ, ಜಯಮಾಲ ಮತ್ತು ಉಮಾಶ್ರೀ, ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ ಸಂಬಂಧ ಸಿಎಂ ವಿರುದ್ಧ ಕಿಡಿಕಾರಿದ್ದಾರೆ. 27 ದಿನದ ಹಿಂದೆ ಸಿಡಿ ಕೇಸ್​ ಬೆಳಕಿಗೆ ಬಂತು. ಅಂದಿನಿಂದಲೂ ಸುದ್ದಿ ಆಗುತ್ತಿದೆ. ಆದ್ರೆ ಆ ಹೆಣ್ಣು ಮಗಳನ್ನು ರಕ್ಷಣೆ ಮಾಡಬೇಕಾದ ಸರ್ಕಾರ ಒಂದೇಒಂದು ಹೇಳಿಕೆಯನ್ನೂ ಕೊಡ್ತಿಲ್ಲ. ಸಿಎಂ ಯಡಿಯೂರಪ್ಪ ಮೌನ ವಹಿಸಿದ್ದಾರೆ. ಮಾತ್ತೆತ್ತಿದ್ರೆ ರಾಮರಾಜ್ಯ ಎಂದು ಹೇಳ್ತಾರೆ. ಆದ್ರೆ ಹೆಣ್ಣು …

Read More »

ಸಾರಿಗೆ ನೌಕರರು ಪ್ರತಿಭಟನೆ ಮಾಡಿದ್ರೆ ಖಾಸಗಿ ಬಸ್ ಬಳಕೆ ಮಾಡುತ್ತೇವೆ : ಡಿಸಿಎಂ

ಬೆಂಗಳೂರು: ಸಾರಿಗೆ ಇಲಾಖೆಗೆ ಬರುವ ಆದಾಯ ಇಂಧನ, ವೇತನಕ್ಕೆ ಸಾಲುತ್ತಿಲ್ಲ. ಇಂತಹ ಕಷ್ಟಕಾಲದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸದೇ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಇಲಾಖೆಯ ಹಣಕಾಸು ವೃದ್ಧಿಯಾಗುತ್ತಿದ್ದಂತೆಯೇ ಸಾರಿಗೆ ನೌಕರರ ಬೇಡಿಕೆ ಈಡೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದ್ದಾರೆ. ಏಪ್ರಿಲ್ 7 ರಿಂದ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದು, ಈ ಹಿನ್ನಲೆಯಲ್ಲಿಂದು ಸಚಿವ ಲಕ್ಷ್ಮಣ್ ಸವದಿ ಮುಖ್ಯಮಂತ್ರಿ …

Read More »

ಉಪ ಚುನಾವಣೆ ಹೊಸ್ತಿಲಲ್ಲಿ ಲಿಂಗಾಯತ ಮುಖಂಡನ ಸೆಳೆದ ಸತೀಶ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ಹಾಗೂ ಲಿಂಗಾಯತ ಸಮಾಜದ ಮುಖಂಡ ಅಶೋಕ ಪೂಜಾರಿ ಅವರನ್ನು ಪಕ್ಷದತ್ತ ಸೆಳೆಯುವಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಅವರು ನೀಡಿದ ಆಹ್ವಾನ ಮನ್ನಿಸಿರುವ ಪೂಜಾರಿ, ಕಾಂಗ್ರೆಸ್‌ ಸೇರ್ಪಡೆ ಆಗುವುದಾಗಿ ಪ್ರಕಟಿಸಿದ್ದಾರೆ. ಇಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಹಾಗೂ …

Read More »

ಉಪಚುನಾವಣೆಯಿಂದ ದೂರ ಉಳಿಯುವರೇ ಸಿಡಿ ಭಯದಲ್ಲಿರುವ 6 ಸಚಿವರು..?

ಬೆಂಗಳೂರು,ಮಾ.29- ನ್ಯಾಯಾಲಯದಿಂದ ತಡೆ ತಂದು ಸರ್ಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದ ಕಾರಣ ಉಪಚುನಾವಣೆಯಲ್ಲಿ ಆರು ಸಚಿವರು ಪ್ರಚಾರದಿಂದ ದೂರ ಉಳಿಯುವ ಸಾಧ್ಯತೆ ಇದೆ. ಈ ಸಚಿವರು ಪ್ರಚಾರಕ್ಕೆ ಬಂದರೆ ಪ್ರತಿಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಬಹುದೆಂಬ ಭೀತಿಯಿಂದಾಗಿ ಸದ್ಯಕ್ಕೆ ದೂರ ಉಳಿಯುವಂತೆ ಪಕ್ಷ ಸೂಚಿಸಿದೆ ಎನ್ನಲಾಗುತ್ತಿದೆ. ಸಚಿವರಾದ ಬಿ.ಸಿ.ಪಾಟೀಲ್, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಭೈರತಿ ಬಸವರಾಜ್ ಸೇರಿದಂತೆ ಒಟ್ಟು 6 ಸಚಿವರು ಪ್ರಚಾರದಿಂದ ದೂರ ಉಳಿಯಲಿದ್ದಾರೆ …

Read More »

ಸಿಡಿ ಲೇಡಿ ಪೋಷಕ’ರಿಂದ ‘ಡಿಕೆ ಶಿವಕುಮಾರ್’ ಮೇಲೆ ಗಂಭೀರ ಆರೋಪ :

ಬೆಳಗಾವಿ : ನಮ್ಮ ಮಗಳು ಯಾವುದೇ ತಪ್ಪು ಮಾಡಿಲ್ಲ. ಅವಳಿಂದ ಮಾಡಿಸಿದ್ದಾರೆ. ಇದರ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ. ನಮ್ಮ ಮಗಳನ್ನು ಒತ್ತಾಯ ಪೂರ್ವಕವಾಗಿ ಬಂಧನದಲ್ಲಿ ಇಟ್ಟುಕೊಂಡು ಹೇಳಿಕೆ ಕೊಡಿಸ್ತಾ ಇದ್ದಾರೆ. ದಿನಕ್ಕೊಂದು ವೀಡಿಯೋ ಹೇಳಿಕೆಯನ್ನು ಅವರಿಂದ ಕೊಡಿಸ್ತಾ ಇದ್ದಾರೆ. ಡಿಕೆ ಶಿವಕುಮಾರ್ ಅವರೇ ದುಡ್ಡು ಕೊಟ್ಟು, ಗೋವಾ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳೋದಕ್ಕೆ ಕಳುಹಿಸಿದ್ದಾರೆ ಎಂಬುದಾಗಿ ಸಿಡಿ ಲೇಡಿಯ ಪೋಷಕರು ಗಂಭೀರವಾಗಿ ಆರೋಪ ಮಾಡಿದ್ದಾರೆ.   ನಗದಲ್ಲಿ ಸಿಡಿ …

Read More »

ವಾಹನ ಸವಾರ’ರೆಲ್ಲರೂ ತಿಳಿದಿರಲೇ ಬೇಕಾದ ವಿಷಯಗಳು ಇವು.!

ನಾವು ವಾಹನಗಳ ಬಗ್ಗೆ ಗಮನ ಕೊಡುತ್ತೇವೆ ವಿನಹ, ಬಹುತೇಕ ಸಂದರ್ಭದಲ್ಲಿ ನಮ್ಮ ವಾಹನ ತಡೆಯುವಂತ, ತಡೆದು ವಿಚಾರಣೆ, ಮಾಹಿತಿ ಕೇಳುವಂತ ಸಂದರ್ಭದಲ್ಲಿ ನಾವು ಅವರನ್ನು ಪ್ರಶ್ನಿಸಬಹುದು. ಕೆಲ ದಾಖಲೆ, ಮಾಹಿತಿಯನ್ನು ಅವರಿಂದಲೂ ಪಡೆದ ನಂತ್ರ, ನಮ್ಮ ವಾಹನದ ಮಾಹಿತಿ ಅವರಿಗೆ ನೀಡಬಹುದು ಎನ್ನುವ ಬಗ್ಗೆ ತಿಳಿದೇ ಇರೋದಿಲ್ಲ. ಹಾಗಾದ್ರೇ.. ವಾಹನ ಸವಾರರೆಲ್ಲರೂ ತಿಳಿದಿರಲೇ ಬೇಕಾದ ವಿಷಯಗಳು ಏನ್ ಅಂತ ಮುಂದೆ ಓದಿ..   ಹೌದು.. ವಾಹನ ಸವಾರರಾದಂತ ನಾವು ಸಂಚಾರಿ …

Read More »

ಯುವತಿ ಪತ್ತೆ ಹಚ್ಚಿ, ಜನರಿಗೆ ಸತ್ಯ ತಿಳಿಸಲಿ: ಸತೀಶ ಜಾರಕಿಹೊಳಿ

ಬೆಳಗಾವಿ: ‘ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣದಿಂದಾಗಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ಲಸ್‌ ಆಗುವುದಿಲ್ಲ. ಬಿಜೆಪಿಗೆ ಮೈನಸ್‌ ಕೂಡ ಆಗುವುದಿಲ್ಲ. ಎರಡೂ ಪಕ್ಷಗಳಲ್ಲೂ ಅವರವರದೆ ಆದ ಕಾರ್ಯಕರ್ತರು ಇದ್ದಾರೆ. ಅವರು ಬೆಂಬಲಿಸುತ್ತಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿ.ಡಿ. ಕೇಸ್ ಬಗ್ಗೆ ಪೊಲೀಸರು ತನಿಖೆ ನಡೆಸಿ ಹೇಳುವವರೆಗೂ ನಾವು ಏನನ್ನೂ ಹೇಳಲಾಗುವುದಿಲ್ಲ. ಪ್ರಕರಣ ದಿನಕ್ಕೊಂದು …

Read More »

ಶೀಘ್ರವೇ ಅಸಮಾಧಾನ ಶಮನ

ಅಥಣಿ: ಬಸವಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಅಕಾಂಕ್ಷಿಗಳು ಹಾಗೂ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು. ಇದು ಪಕ್ಷದಲ್ಲಿ ಸಹಜವಾಗಿಯೇ ನಡೆಯುವ ಪ್ರಕ್ರಿಯೆ ಎಲ್ಲವೂ ಸರಿಯಾಗುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರಿಗೆ ಟಿಕೆಟ್‌ ನೀಡಿದ್ದಕ್ಕೆ ಕೆಲವರು ಸಹಜವಾಗಿ ರಾಜಕಾರಣದಲ್ಲಿ ಸ್ವಲ್ಪ ಮಟ್ಟಿಗೆ ಅಸಮಾಧಾನ ಮೂಡುವುದು ಸಹಜ. ಶರಣು ಸಲಗರ ಅ ಧಿಕ …

Read More »

ಬೆಂಗಳೂರಿನಲ್ಲಿ ಕೊರೊನಾ ಅಬ್ಬರ : ಒಂದೇ ಪಬ್ ನ 16 ಸಿಬ್ಬಂದಿಗೆ ಕೊರೊನಾ ಸೋಂಕು

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದ್ದು, ಬೆಂಗಳೂರು ನಗರದ ಪಬ್ ನಲ್ಲಿ 16 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ನಗರದ ನ್ಯೂ ಬಿಇಎಲ್ ರಸ್ತೆಯಲ್ಲಿನ ಪಬ್ 16 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪಬ್ ನ 86 ಜನರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. 86 ಸಿಬ್ಬಂದಿ ಪೈಕಿ 16 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಮತ್ತೆ …

Read More »

‘1 ರಿಂದ9 ತರಗತಿ ಪರೀಕ್ಷೆ ರದ್ದು ಮಾಡುವ ಕುರಿತು ಸಿಎಂ ಜತೆ ಚರ್ಚೆ

ಬೆಂಗಳೂರು,ಮಾ.28- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 1ರಿಂದ 9ನೇ ತರಗತಿವರೆಗೆ ಕಳೆದ ಬಾರಿಯಂತೆ ಪರೀಕ್ಷೆಗಳನ್ನು ರದ್ದು ಮಾಡುವ ಬಗ್ಗೆ ನಾಳೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಈ ಮೂಲಕ ಕಳೆದ ಬಾರಿಯಂತೆ ಈ ಬಾರಿಯೂ 1ರಿಂದ 9ನೇ ತರಗತಿವರೆಗೆ ಪರೀಕ್ಷೆಗಳು ರದ್ದಾಗುವ ಸಾಧ್ಯತೆಯಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, …

Read More »