Breaking News

ಜಿಲ್ಲೆ

ಕ್ಲಾಸ್ ಬಳಿಕ ಕ್ಷಮೆಯಾಚಿಸಿದ ಉಡಾಫೆ ಮಂತ್ರಿ ಉಮೇಶ್ ಕತ್ತಿ

ಬೆಂಗಳೂರು: ರೈತನ ಜೊತೆಗೆ ಬಾಯಿಗೆ ಬಂದಂತೆ ಮಾತನಾಡಿ ಟೀಕೆಗೆ ಗುರಿಯಾಗಿದ್ದ ಉಮೇಶ್ ಕತ್ತಿ ಈಗ ಕ್ಷಮೆಯಾಚಿಸಿದ್ದಾರೆ. ರೈತನ ಜೊತೆಗಿನ ಮಾತುಕತೆಯ ಆಡಿಯೋ ವೈರಲ್ ವಿಚಾರ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಲಾಸ್ ತೆಗೆದುಕೊಂಡ ಬಳಿಕ ಇದೀಗ ಉಮೇಶ್ ಕತ್ತಿ ಅವರು ಹೇಳಿಕೆ ವಿಚಾರವಾಗಿ ಕ್ಷಮೆಯಾಚಿಸಿದ್ದಾರೆ. ಆಡಿಯೋ ವೈರಲ್ ಆಗುತ್ತಿದ್ದಂತೆ ಉಮೇಶ್ ಕತ್ತಿ ವಿರುದ್ಧ ಸಿಎಂ ಯಡಿಯೂರಪ್ಪ ಅಸಮಾಧಾನ ಹೊರಹಾಕಿದರು. ಉಮೇಶ್ ಕತ್ತಿ ಆಹಾರ ಮತ್ತು ನಾಗರೀಕ ಖಾತೆ ಸಚಿವರು, ರೈತನೊಬ್ಬ 5 …

Read More »

ಅಕ್ಕಿ ಕೇಳಿದಕ್ಕೆ ಸಾಯಿ’ ಅಂದು ಟೀಕೆಗೆ ಗುರಿಯಾದ ‘ಸಚಿವ ಉಮೇಶ್ ಕತ್ತಿ’ ರಾಜ್ಯದ ‘ಜನರ ಕ್ಷಮೆ’

ಬೆಂಗಳೂರು : ಅಕ್ಕಿ ಕಡಿತದ ಬಗ್ಗೆ ಬಾಯಿಗೆ ಬಂದಂತೆ ರೈತನ ಜೊತೆಗೆ ಮಾತನಾಡಿದ್ದಂತ ಸಚಿವ ಉಮೇಶ್ ಕತ್ತಿ, ಟೀಕೆಗೆ ಗುರಿಯಾಗಿದ್ದರು. ಈ ಬಗ್ಗೆ ಸ್ವತಹ ಸಿಎಂ ಯಡಿಯೂರಪ್ಪ ಅವರೇ ವಿಷಾದ ವ್ಯಕ್ತ ಪಡಿಸಿದ್ದರು. ಈ ಎಲ್ಲಾ ಘಟನೆ ನಂತ್ರ, ಸಚಿವ ಉಮೇಶ್ ಕತ್ತಿ ರಾಜ್ಯದ ಜನರ ಕ್ಷಮೆಯನ್ನು ಕೇಳಿದ್ದಾರೆ. ರೈತನ ಜೊತೆಗೆ ಮಾತನಾಡಿದಂತ ಆಡಿಯೋ ವೈರಲ್ ಆಗುತ್ತಿದ್ದಂತೆ, ಸಚಿವ ಉಮೇಶ್ ಕತ್ತಿ ಅಕ್ಕಿ ಕೇಳಿದ ರೈತನಿಗೆ ಸಾಯಲಿ ಅಂತ ಹೇಳಿದ್ದು …

Read More »

ರಾಜ್ಯಾದ್ಯಂತಶೇ.50ರಷ್ಟು ನೌಕರರೊಂದಿಗೆ ಗಾರ್ಮೆಂಟ್ಸ್ ಓಪನ್ -ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜ್ಯಾದ್ಯಂತ ಗಾರ್ಮೆಂಟ್ಸ್‌ ನಲ್ಲಿ ಶೇ.50ರಷ್ಟು ನೌಕರರು ಕೆಲಸ ಮಾಡುವುದಕ್ಕೆ ರಾಜ್ಯ ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿದೆ. ಇದೇ ವೇಳೆ ಆದೇಶದಲ್ಲಿ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಎಲ್ಲಾ ರೀತಿ ಕ್ರಮಗಳನ್ನು ತೆಗೆದುಕೊಂಡು ಬೆಂಗಳೂರು ನಗರದಲ್ಲಿರುವ ಗಾರ್ಮೆಂಟ್ಸ್‌ ಶೇ.50ರಷ್ಟು ನೌಕರರು ಕೆಲಸ ಮಾಡಲು ಅವಕಾಶ ನೀಡಲಾಗಿದೆ ಅಂತ ಹೇಳಲಾಗಿದೆ. ಕೆಲಸಕ್ಕೆ ತೆರಳುವವರು ಸೂಕ್ತವಾದ ದಾಖಲೆಗಳನ್ನು ಕೂಡ ಹೊಂದಿರಬೇಕು ಅಂತ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಹೀಗಾಗಿ ಗಾರ್ಮೆಂಟ್ಸ್‌ ಕೆಲಸಕ್ಕೆ ತೆರಳುವವರು ಸೂಕ್ತವಾದ ದಾಖಲೆಗಳನ್ನು …

Read More »

ಭೀಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ ವಿರುದ್ಧ ಡಿಸಿಎಂ ಲಕ್ಷ್ಮಣ ಸವದಿ ಕೆಂಡಾಮಂಡಲ

ಬೆಳಗಾವಿ-ಭೀಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ ವಿರುದ್ಧ ಡಿಸಿಎಂ ಲಕ್ಷ್ಮಣ ಸವದಿ ಕೆಂಡಾಮಂಡಲವಾಗಿದ್ದು,ಡಾ. ವಿನಯ್ ದಾಸ್ತಿಕೊಪ್ಪ ಎಲ್ಲಿದ್ದಾರೆ? ಕರೆಸಿ ಇಲ್ಲಾವಾದರೆಅರೆಸ್ಟ್ ಮಾಡಿ ತಂದು ಇಲ್ಲಿ ಕೂಡ್ರಿಸಿ ಎಂದು ಸಭೆಯಲ್ಲಿಯೇ ಡಿಸಿಎಂ ಲಕ್ಷ್ಮಣ ಸವದಿ ಗುಡುಗಿದ್ದಾರೆ.ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ನಡೆದ ಕೋವೀಡ್ ನಿರ್ವಹಣೆ ಪ್ರಗತಿ ಪರಶೀಲನಾ ಸಭೆಯಲ್ಲಿ, ಎಸ್ಪಿಗೆ ಸೂಚನೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ. ಭೀಮ್ಸ್ ನಿರ್ದೇಶಕ ದಾಸ್ತಕೊಪ್ಪ ವಿರುದ್ಧ ಗರಂ ಆದ್ರು. ಡಿಸಿಎಂ ಲಕ್ಷ್ಮಣ ಸವದಿ ಭೀಮ್ಸ್ …

Read More »

ತಲಾ 10 ಕೆ.ಜಿ ಉಚಿತ ಅಕ್ಕಿ, ಬಡ ಕುಟುಂಬಗಳಿಗೆ ₹10,000 ಕೊಡಬೇಕು: ಪ್ರಧಾನಿಗೆ ಸಿದ್ದರಾಮಯ್ಯ ಸಲಹೆ

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊರೊನಾದಿಂದ ಜನರನ್ನ ರಕ್ಷಣೆ ಮಾಡಲು ಅಗತ್ಯವಾದ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪಗೆ ಸಲಹೆ ನೀಡಿದ ಬೆನ್ನಲ್ಲೇ, ಪ್ರಧಾನಿ ಮೋದಿಗೂ ಪತ್ರದ ಮೂಲಕ ಹಲವು ಸಲಹೆಗಳನ್ನ ನೀಡಿದ್ದಾರೆ. ಭಾರತ ಪ್ರತಿದಿನ 3.5 ಲಕ್ಷಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳನ್ನು ದಾಖಲಿಸುತ್ತಿದೆ. ತಜ್ಞರು ಮೇ ಮಧ್ಯದ ವೇಳೆಗೆ ಪ್ರಕರಣಗಳು ಹೆಚ್ಚುವ ಮುನ್ಸೂಚನೆ ನೀಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 35 ಲಕ್ಷಕ್ಕೆ ತಲುಪಬಹುದು. ದೈನಂದಿನ ಪ್ರಕರಣಗಳು …

Read More »

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊರೊನಾ ಸೋಂಕಿನ ಭೀತಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊರೊನಾ ಸೋಂಕಿನ ಭೀತಿ ಎದುರಾಗಿದೆ. ಹೀಗಾಗಿ ಸೋಂಕು ಹರಡದಂತೆ ತಡೆಯಲು ಜೈಲಿನಲ್ಲಿ ಸುರಕ್ಷತೆಗೆ ಪೂರಕ ವ್ಯವಸ್ಥೆ ಮಾಡಲಾಗಿದೆ. ಕೈದಿಗಳಿಗೆ ಕೊರೊನಾ ನೆಗಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಪ್ರತಿದಿನ ಬರುವ ಕೈದಿಗಳಿಗೆ ಕೊರೊನಾ ಟೆಸ್ಟ್​ ಮಾಡಲಾಗ್ತಿದೆ. ಈವರೆಗೆ ಒಟ್ಟು 44 ಕೈದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದ್ರೆ ಬಹುತೇಕ ಕೈದಿಗಳಿಗೆ ಏಸಿಂಪ್ಟಮ್ಯಾಟಿಕ್ ಇದೆ. ಅಂದ್ರೆ ಅವರಿಗೆ ರೋಗಲಕ್ಷಣ ಕಾಣಿಸಿಕೊಂಡಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಟ್ಟು 5,062 …

Read More »

ಕೊರೊನಾ ರೋಗಿಯನ್ನ ಕೊಲೆಗೈದಿದ್ದಾರೆಂದು ಫೇಕ್ ವಿಡಿಯೋ ಅಪ್ಲೋಡ್ ಮಾಡಿದ ಯುವಕನಿಂದ ಕ್ಷಮೆ ಯಾಚನೆ

ಬೆಂಗಳೂರು: ಕೊರೊನಾ ಸೋಂಕು ಪ್ರಕರಣಗಳ ಏರಿಕೆ ಜನರನ್ನ ಆತಂಕಕ್ಕೀಡುಮಾಡಿದೆ. ಇಂಥ ಹೊತ್ತಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳನ್ನ ಹರಿಬಿಟ್ಟು ಜನರ ದಾರಿ ತಪ್ಪಿಸುತ್ತಿರೋದು ಬೆಳಕಿಗೆ ಬಂದಿದೆ. ಕೊರೊನಾ ಆಸ್ಪತ್ರೆಯೊಂದರಲ್ಲಿ ದುಡ್ಡಿಗಾಗಿ ರೋಗಿಯ ಕತ್ತುಹಿಸುಕು ಸಾಯಿಸಿದ್ದಾರೆ ಎನ್ನಲಾದ ವಿಡಿಯೋ, ಮತ್ತೊಂದು ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ರೋಗಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ವಿಡಿಯೋ ತುಣುಕು ಜೊತೆಗೆ ಯುವತಿಯೊಬ್ಬಳು ತನ್ನ ತಂದೆಯನ್ನ ಕಳೆದುಕೊಂಡು ರೋಧಿಸಿದ್ದ ವಿಡಿಯೋವನ್ನ ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, …

Read More »

ರೈತನಿಗೆ ನೀನು ಸತ್ತು ಹೋಗಿ ಬಿಡುವುದು ಒಳ್ಳೆಯದು ಎಂದ್ರಾ ಉಮೇಶ್​ ಕತ್ತಿ? ಆಡಿಯೋ ವೈರಲ್

ಬೆಳಗಾವಿ: ರಾಜ್ಯ ಸರ್ಕಾರ ಪಡಿತರ ವಿತರಣೆಯಲ್ಲಿ 2 ಕೆ.ಜಿ. ಅಕ್ಕಿ ಕಡಿತಗೊಳಿಸಿರುವ ವಿಚಾರಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್​ ಕತ್ತಿ ರೈತ ಸಂಘದ ಕಾರ್ಯಕರ್ತರೊಂದಿಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಸಚಿವರು ಮಾತನಾಡಿದ್ದರೆ ಎನ್ನಲಾದ ಆಡಿಯೋದಲ್ಲಿ ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ನಿವಾಸಿ, ರೈತ ಸಂಘದ ಕಾರ್ಯಕರ್ತ ಈಶ್ವರ್ ಎಂಬುವರು ಪಡಿತರ ಕಡಿತ ಕುರಿತಂತೆ ಸಚಿವರಿಗೆ ಕರೆ ಮಾಡಿ ತರಾಟೆ ತೆಗೆದುಕೊಂಡಿದ್ದು, ಎರಡು …

Read More »

ಲಾಕ್‌ಡೌನ್: ಆಟೋ, ಟ್ಯಾಕ್ಸಿ ಇಲ್ಲ, 150 ಬಿಎಂಟಿಸಿ ಬಸ್ ಸಂಚಾರ

ಬೆಂಗಳೂರು: ಲಾಕ್‌ಡೌನ್ ಇದ್ದರೂ ಕಾರ್ಯನಿರ್ವಹಿಸುವ ಜನರ ಸಂಚಾರಕ್ಕೆ ಅನುಕೂಲ ಆಗುವಂತೆ 150 ಬಸ್‌ಗಳನ್ನು ರಸ್ತೆಗಳಿಸಲು ಬಿಎಂಟಿಸಿ ನಿರ್ಧರಿಸಿದೆ. ಬೆಳಿಗ್ಗೆ 6ರಿಂದ ರಾತ್ರಿ 7 ಗಂಟೆ ತನಕ ಈ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಕೆಂ‍ಪೇಗೌಡ ಬಸ್‌ ನಿಲ್ದಾಣದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆ ಮಾಡುವ 6 ಬಸ್‌ಗಳು ದಿನದ 24 ಗಂಟೆಯೂ ಕಾರ್ಯಾಚರಣೆ ಮಾಡಲಿವೆ ಎಂದು ಬಿಎಂಟಿಸಿ ತಿಳಿಸಿದೆ. ಸಾಮಾನ್ಯ ಬಸ್‌ಗಳು ಶಿವಾಜಿನಗರ, ಕೆಂಪೇಗೌಡ ಬಸ್ ನಿಲ್ದಾಣ, ಮಲ್ಲೇಶ್ವರ, ಹಂಪಿನಗರ, ಬನಶಂಕರಿ, …

Read More »

ಕರ್ನಾಟಕ ಲಾಕ್‌ಡೌನ್; ಜನರಿಗೆ ಮತ್ತೊಮ್ಮೆ ಮನವಿ ಮಾಡಿದ ಸಿಎಂ

ಬೆಂಗಳೂರು, ಏಪ್ರಿಲ್ 28: ಮಂಗಳವಾರ ರಾತ್ರಿಯಿಂದ ರಾಜ್ಯದಲ್ಲಿ ಹದಿನಾಲ್ಕು ದಿನಗಳ ಅವಧಿಯ ಲಾಕ್‌ಡೌನ್ ಆರಂಭವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಕೊರೊನಾ ಸರಪಳಿಯನ್ನು ಮುರಿಯಲು ಎರಡು ವಾರಗಳ ಕಠಿಣ ಲಾಕ್‌ಡೌನ್ ಹೇರಲಾಗಿದೆ. ರಾಜ್ಯದ ಪ್ರತಿಯೊಬ್ಬರಿಗೂ ನಾನು ಕೇಳಿಕೊಳ್ಳುತ್ತೇನೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ. ಸರ್ಕಾರಕ್ಕೆ ಬೆಂಬಲ ನೀಡಿ. ಮನೆಯೊಳಗೇ ಇರಿ. ನಾವೆಲ್ಲರೂ ಒಟ್ಟಾದರೆ ಕೊರೊನಾವನ್ನು ಸೋಲಿಸುವುದು ಸುಲಭವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ …

Read More »