Breaking News

ಜಿಲ್ಲೆ

: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ಕೊಲೆ ಪ್ರಕರಣ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಲಾಗುತ್ತೆ :B.S.Y.

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ಕೊಲೆ ಪ್ರಕರಣ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಲಾಗುತ್ತೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ರೈಲಿನ ಮೂಲಕವೇ ದ್ವಿಪಥ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ಈಗಾಗಲೇ ನಗರ ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದೇನೆ. ಈ ಹಿಂದೆ ಅವರ ಪತಿಯನ್ನೂ ಇದೇ ರೀತಿ ಬರ್ಬರವಾಗಿ ಹತ್ಯೆ …

Read More »

1 ರೂಪಾಯಿ ನಾಣ್ಯ ಮಾರಾಟಕ್ಕಿಟ್ಟು ₹1 ಲಕ್ಷ ಕಳೆದುಕೊಂಡ ಶಿಕ್ಷಕಿ

ಬೆಂಗಳೂರು: 1 ರೂಪಾಯಿ ನಾಣ್ಯವನ್ನು ಓಎಲ್‌ಎಕ್ಸ್ ನಲ್ಲಿ ಮಾರಾಟಕ್ಕಿಟ್ಟ ಶಿಕ್ಷಕಿಯೊಬ್ಬರು 1 ಲಕ್ಷ ರೂಪಾಯಿ ಕಳೆದುಕೊಂಡು ವಂಚನೆಗೆ ಒಳಗಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಸರ್ಜಾಪುರ ರಸ್ತೆ ವಿಪ್ರೋ ಗೇಟ್​ನ 38 ವರ್ಷದ ಶಿಕ್ಷಕಿ ವಂಚನೆಗೊಳಗಾಗಿದ್ದಾರೆ. ಒಂದು ಕೋಟಿ ರೂಪಾಯಿ ಕೊಡುತ್ತೇನೆಂದು ನಂಬಿಸಿದ್ದ ವಂಚಕ, 1 ಲಕ್ಷ ರೂಪಾಯಿಯನ್ನು ತನ್ನ ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಡೆದಿದ್ದೇನು..? ಜೂ.15 ರಂದು ಓಎಲ್‌ಎಕ್ಸ್ ನಲ್ಲಿ ಶಿಕ್ಷಕಿ ಓಎಲ್​​​​​ಎಕ್ಸ್​​​ನಲ್ಲಿ 1947ರ …

Read More »

ಗೋಕಾಕ ನಗರದ ನಿವಾಸಿ ಸುರೇಶ ಶಾ ಅವರ ಮನೆಯಲ್ಲಿ ಗ್ಯಾಸ್ ಬ್ಲಾಸ್ಟ್ ಆಗಿದೆ. ಸ್ಥಳಕ್ಕೆ ದಾವಿಸಿದ ಗೋಕಾಕ ಅಗ್ನಿಶಾಮಕ ದಳದ ಸಿಬ್ಬಂಧಿ ಬೆಂಕಿ ನಂದಿಸಿದ್ದಾರೆ..

ಗೋಕಾಕ: ಇಲ್ಲಿನ ಬಸವ ನಗರದಲ್ಲಿ ಗೀಜರ್ ಬ್ಲಾಸ್ಟ್ ಆಗಿ ಮನೆ ಹೊತ್ತಿ ಉರಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ಬೆಂಕಿ ಆರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಗುರುವಾರ ಬೆಳಗಿನ ಜಾವ ರಾಠೋಡ ಎಂಬುವರಿಗೆ ಸೇರಿದ ಮನೆಯ ಎರಡನೇ ಮಹಡಿಯಲ್ಲಿ ಏಕಾಏಕಿ ಗೀಜರ್ ಬ್ಲಾಸ್ಟ್ ಆಗಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಮಾತ್ರದಲ್ಲೇ ಬೆಂಕಿಯ ಕೆನ್ನಾಲಿಗೆ ಮನೆಯಲ್ಲೆಲ್ಲ ವ್ಯಾಪಿಸಿದೆ. ಹೊತ್ತಿ …

Read More »

ರಾತ್ರಿ ಸೋಂಕಿತೆ ಸಾವು, 26 ಲಕ್ಷ ರೂ ಬಿಲ್ ಪಾವತಿಸಿದ್ದರೂ ಇನ್ನೂ 5 ಲಕ್ಷ ಕಟ್ಟಿದರೆ ಮಾತ್ರ ಬಾಡಿ ಎಂದು ಪೀಡಿಸುತ್ತಿರುವ ಖಾಸಗಿ ಆಸ್ಪತ್ರೆ!

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿನ ಅಟ್ಟಹಾಸ ತಗ್ಗುತ್ತಾ ಬಂದಿದೆಯಾದರೂ ಖಾಸಗಿ ಆಸ್ಪತ್ರೆಗಳ ಧನ ದಾಹ ತಗ್ಗಿಲ್ಲ. ಸರ್ಕಾರವೂ ಹಣಕ್ಕಾಗಿ ಪೀಡಿಸುವ ಅಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರೂ ಇವು ಡೋಂಟ್​ ಕೇರ್​ ಅನ್ನುತ್ತಿವೆ. ಬೆಂಗಳೂರಿನ ಹ್ಯಾಮಿಲ್ಟನ್ ಆಸ್ಪತ್ರೆಯ ಹಣದ ದಾಹ ಇತ್ತೀಚಿನ ಪ್ರಕರಣವಾಗಿದೆ. ಬಾಕಿ ಬಿಲ್ ನೀಡದ ಹಿನ್ನೆಲೆ ಮೃತದೇಹ ನೀಡಲು ಆಸ್ಪತ್ರೆ ನಿರಾಕರಿಸಿದೆ ಎಂದು ದೂರಲಾಗಿದೆ. ಹ್ಯಾಮಿಲ್ಟನ್ ಆಸ್ಪತ್ರೆಯ ಆಡಳಿತ ಮಂಡಳಿ ಈ ಅಮಾನವೀಯ ನಡೆಗೆ ಸಾಕ್ಷಿಯಾಗಿದೆ. ರಾಜ್ಯ …

Read More »

ಕಾಂಗ್ರೆಸ್‍ನಲ್ಲಿ ಹೆಚ್ಚಾದ ‘ಸಿಎಂ’ ಸೀಟ್ ಫೈಟ್-

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಸ್ಫೋಟಕ ಬೆಳವಣಿಗೆಗಳು ನಡೆಯುತ್ತಿದೆ. ಎಲೆಕ್ಷನ್ ಗೆಲ್ಲುವ ಮೊದಲೇ ಕೈ ಪಾಳಯದಲ್ಲಿ ಮುಂದಿನ ಸಿಎಂ ಯಾರು ಎಂಬ ಫೈಟ್ ಶುರುವಾಗಿದೆ. ಹೌದು. ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಲೇ ಇದೆ. ಕಮಲ ಪಾಳಯಲ್ಲಿ ನಾಯಕತ್ವ ಫೈಟ್ ಮಧ್ಯೆಯೇ ಇದೀಗ ಕಾಂಗ್ರೆsಸ್ಸಿನಲ್ಲಿ ಎಲೆಕ್ಷನ್ ಗೆಲ್ಲುವ ಮೊದಲೇ ಮುಂದಿನ ಸಿಎಂ ಯಾರು ಎಂಬ ಫೈಟ್ ಜೋರಾಗಿದೆ. ಹೈಕಮಾಂಡ್ ಎಂಟ್ರಿ ಬಳಿಕವೂ ತಣ್ಣಗಾಗಬೇಕಿದ್ದ ಬಣ ಬಡಿದಾಟ ಮತ್ತಷ್ಟು ಜೋರಾಗಿದೆ. ಸಿದ್ದರಾಮಯ್ಯ …

Read More »

ಪತ್ನಿ ಮಾತು ಕೇಳಿ ಮಕ್ಕಳಿಗೆ ಮೈತುಂಬಾ ಬರೆ! ಸುಟ್ಟುಹೋದ ಶರೀರ- ನೋಡಲಾಗುತ್ತಿಲ್ಲ ಕಂದಮ್ಮಗಳ ಕಣ್ಣೀರು

ಬೆಂಗಳೂರು: ಎರಡನೇ ಪತ್ನಿ ಜತೆ ಸೇರಿಕೊಂಡು ತನ್ನ ಮೂವರು ಮಕ್ಕಳ ಮೇಲೆ ತಂದೆಯೇ ಪೈಶಾಚಿಕ ಕೃತ್ಯ ಎಸಗಿದ್ದು, ಈ ಸಂಬಂಧ ದಂಪತಿಯನ್ನು ಬಂಧಿಸಲಾಗಿದೆ. ರಾಗಿಗುಡ್ಡ ನಿವಾಸಿ ತಮಿಳು ಸೆಲ್ವನ್‌ (45) ಮತ್ತು ಆತನ 2ನೇ ಪತ್ನಿ ಸತ್ಯಾ (35)ಬಂಧಿತರು. ಗಾಯಗೊಂಡಿರುವ ಸೌಮ್ಯಾ(3), ರಾಘವನ್‌ (4) ಹಾಗೂ ನಿತೇಶ್‌(6) ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ರೂಸರ್‌ ವಾಹನ ಚಾಲಕನಾಗಿ ರುವ ತಮಿಳುನಾಡು …

Read More »

ಗಾಳಿಪಟದ ದಾರ ಕುತ್ತಿಗೆಗೆ ಉರುಳು: ತಪ್ಪಿಸಿಕೊಳ್ಳಲು ಹೋದ ಬೈಕ್‌ ಸವಾರನ ಬೆರಳುಗಳು ಕಟ್‌!

ಬೆಂಗಳೂರು: ಆಡುಗೋಡಿ ಸಂಚಾರ ಠಾಣೆ ಬಳಿಯ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಸವಾರರೊಬ್ಬರ ಕತ್ತಿಗೆ ಗಾಳಿಪಟದ ದಾರ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ದಾರವನ್ನು ಬಿಡಿಸಲು ಹೋಗಿ 2 ಬೆರಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ವ್ಯಕ್ತಿಯೊಬ್ಬರು ಬುಧವಾರ ಆಡುಗೋಡಿ ಸಮೀಪದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಡೆಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದರು. ಆಡುಗೋಡಿ ಸಂಚಾರ ಠಾಣೆ ಮುಂಭಾಗದ ರಸ್ತೆಯಲ್ಲಿ ಏಕಾಏಕಿ ಗಾಳಿಪಟದ ದಾರ ಆ ವ್ಯಕ್ತಿಯ ಕತ್ತಿಗೆ ಸಿಕ್ಕಿಹಾಕಿಕೊಂಡಿತ್ತು. ಪರಿಣಾಮ ಕತ್ತಿನ ಭಾಗಕ್ಕೆ ಗಾಯವಾಗಿ ರಕ್ತಸ್ರಾವ ಉಂಟಾಗಿದೆ. …

Read More »

ಮೋಟಾರು ವಾಹನಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ! : ಲಕ್ಷ್ಮಣ ಸವದಿ

ಬೆಂಗಳೂರು: ಕೊರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ಮೋಟಾರು ವಾಹನಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕ ವಾಹನ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸಿ ಆದೇಶಿಸಿರುವುದರಿಂದ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ರ ಕಲಂ 16(1) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯದಲ್ಲಿ ನೊಂದಾಯಿಸಿರುವ (ಹೊಸ ವಾಹನಗಳ …

Read More »

ರೈತರಿಗೆಸಾಕಷ್ಟು ಪ್ರಮಾಣದಲ್ಲಿ ನಷ್ಟ ಶಾಸಕ ಅನಿಲ ಬೆನಕೆ ಅವರು ಡ್ರೋಣ್ ಮೂಲಕ ಸರ್ವೆ

ಬೆಳಗಾವಿ –  ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಬಳ್ಳಾರಿ ನಾಲೆಯಿಂದ ಸಾಕಷ್ಟು ಪ್ರಮಾಣದಲ್ಲಿ ರೈತರಿಗೆ ಹಾನಿ ಉಂಟಾಗುತ್ತದೆ. ಅದೇ ರೀತಿ ಈ ವರ್ಷವು ಬಳ್ಳಾರಿ ನಾಲೆಯ ನೀರಿನಿಂದ ರೈತರಿಗೆಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಶಾಸಕ ಅನಿಲ ಬೆನಕೆ ಅವರು ಡ್ರೋಣ್ ಮೂಲಕ ಸರ್ವೆ ನಡೆಸಿದರು.           ಕೆಲ ದಿನಗಳ ಹಿಂದೆ ಶಾಸಕ ಅನಿಲ ಬೆನಕೆ ಅವರು, ಅಧಿಕಾರಿಗಳ ಜೊತೆ ಬಳ್ಳಾರಿ ನಾಲೆಯನ್ನು …

Read More »

ಗೋಕಾಕ ಮೂಡಲಗಿ ರಸ್ತೆಯಲ್ಲಿ ಚಹಾ ಪುಡಿ ವ್ಯಾಪಾರಿ ಧಾರುಣ ಸಾವು

ಮೂಡಲಗಿ: ಬಡ ಚಹಾಪುಡಿ ವ್ಯಾಪಾರಿಯೊಬ್ಬ ಮೂಡಲಗಿಯಿಂದ ಗೋಕಾಕಕ್ಕೆ ದ್ವಿಚಕ್ರ ವಾಹನದ ಮೇಲೆ ಹೋಗುವಾಗ ಹಿಂದಿನಿಂದ ಬಂದ ಟಿಪ್ಪರ ಲಾರಿ (MH-10) ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಆತನ ರುಂಡವೇ ಬೇರ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಕಲ್ಲೋಳ್ಳಿ ಬಳಿ ನಡೆದಿದೆ. ಶಕೀಲ ಜಮಾದಾರ (೫೦) ಮೃತಪಟ್ಟ ದುರ್ದೈವಿ. ಘಟನೆ ನಡೆದ ಬೆನ್ನಲ್ಲೇ ಸ್ಥಳೀಯರು ಟಿಪ್ಪರ್ ಅನ್ನೋ ಬೆನ್ನಟ್ಟಿದ್ದಾರೆ. ಕೂಡಲೇ ಲಾರಿ ಚಾಲಕ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಮೂಲಗಳು ಜನಜೀವಾಳ ಕ್ಕೆ …

Read More »