Breaking News

ಜಿಲ್ಲೆ

25 ಲಕ್ಷ ಮನೆಗಳಿಗೆ ನಲ್ಲಿಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಬೆಂಗಳೂರು: ಈ ವರ್ಷ ‘ಜಲಜೀವನ್‌ ಮಿಷನ್‌’ ಯೋಜನೆಯಡಿ ಗ್ರಾಮೀಣ ಪ್ರದೇಶದ 25 ಲಕ್ಷ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ‘ಜಲಜೀವನ್‌ ಮಿಷನ್‌’ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಜ್ಯದಲ್ಲಿ 91.91 ಲಕ್ಷ ಗ್ರಾಮೀಣ ಕುಟುಂಬಗಳಿದ್ದು, ಈಗಾಗಲೇ 28 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. 2021-22 ನೇ ಸಾಲಿನಲ್ಲಿ …

Read More »

ಯಾರನ್ನು ಯಾರು ಬೆತ್ತಲೆ ಮಾಡುತ್ತಾರೋ?: ಕಾರಜೋಳ ವ್ಯಂಗ್ಯ

ಬೆಳಗಾವಿ: ‘ಅವ್ರು ಗೆದ್ದು ಬರಬೇಕಲ್ಲ. ಗೆದ್ದರೂ ಒಂದಾಗಬೇಕಲ್ಲ? ಎಲ್ಲರೂ ಕುಸ್ತಿ ಅಖಾಡದಲ್ಲಿದ್ದಾರೆ. ಒಬ್ಬನ ಚಡ್ಡಿ ಇನ್ನೊಬ್ಬನ ಕೈಯಲ್ಲಿದೆ. ಯಾರು ಯಾರನ್ನು ಬೆತ್ತಲೆ ಮಾಡುತ್ತಾರೋ ಗೊತ್ತಿಲ್ಲ. ಕುಸ್ತಿಯನ್ನು ನೋಡೋಣ’. – ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ‘ಮುಂದಿನ ಮುಖ್ಯಮಂತ್ರಿ’ ಚರ್ಚೆ ಬಗ್ಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವ್ಯಂಗ್ಯವಾಡಿದ್ದು ಹೀಗೆ. ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ-ಡಾ.ಜಿ. ಪರಮೇಶ್ವರ ಸೇರಿ ಮೂರು ಪ್ರಬಲ ಗುಂಪುಗಳಿವೆ. …

Read More »

ರಾಜಾಪೂರ ಕೊಲೆ ಪ್ರಕರಣ ಭೇದಿಸಿದ ಘಟಪ್ರಭಾ ಪೋಲಿಸರು, ಮೂವರು ಆರೋಪಿಗಳ ಬಂಧನ

ಘಟಪ್ರಭಾ: ಜೂನ್ 10 ರಂದು ರಾಜಾಪೂರ ಗ್ರಾಮದಲ್ಲಿ ನಡೆದ ಮಹಾಯುದ್ಧ ಯೂಟ್ಯೂಬ ಚಾನಲ್ ಸಂಪಾದಕ ಶಿವಾನಂದ ಬಸಪ್ಪಾ ಕಾಚಾಗೋಳ (27) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಮೂವರು ಆರೋಪಿಗಳನ್ನು ಘಟಪ್ರಭಾ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರಾದ ಜೋತೆಪ್ಪಾ ವಿಠ್ಠಲ ಮಗದುಮ್ (27) , ಬೀರಪ್ಪಾ ನಿಂಗಪ್ಪಾ ಬಾನಸಿ (27) , ವಸಂತ ಬಮ್ಮಪ್ಪಾ ಬಮ್ಮವ್ವಗೋಳ (27) ಮೂವರು ರಾಜಾಪೂರ ಗ್ರಾಮದ ನಿವಾಸಿಯಾಗಿದ್ದು, ಕೊಲೆಯಾದ ಶಿವಾನಂದನ ಪರಿಚಯಸ್ಥರಾಗಿದ್ದಾರೆ. ಕೊಲೆಗೆ ನಿಖರವಾರದ ಕಾರಣ …

Read More »

ಅಕ್ರಮ ಸಂಗ್ರಹ: 2261 ಚೀಲ ರಸಗೊಬ್ಬರ ಪತ್ತೆ

ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಕಮತಗಿಯಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿದ್ದ ₹11.05 ಲಕ್ಷ ಮೌಲ್ಯದ 2261 ಚೀಲ ವಿವಿಧ ಬಗೆಯ ರಸಗೊಬ್ಬರವನ್ನು ಕೃಷಿ ಇಲಾಖೆಯ ವಿಚಕ್ಷಣಾ ತಂಡದವರು ಸೋಮವಾರ ವಶಪಡಿಸಿಕೊಂಡಿದ್ದಾರೆ ಕಮತಗಿಯ ವಿನಾಯಕ ಕೃಷಿ ಕೇಂದ್ರ ಹಾಗೂ ಅನ್ನದಾನೇಶ್ವರಿ ಕೃಷಿ ಸೇವಾ ಕೇಂದ್ರಗಳ ಹೆಸರಿನ ಉಗ್ರಾಣಗಳಲ್ಲಿ ರಸಗೊಬ್ಬರದ ಚೀಲಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ವಿಚಕ್ಷಣಾ ತಂಡದ ಸಹಾಯಕ ನಿರ್ದೇಶಕರಾದ ಬಿ.ಜಿ.ಮಾಳೇದ, …

Read More »

ಶೀಲ ಶಂಕಿಸಿ ಪತ್ನಿ ಹತ್ಯೆ

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ನಗರದ ಹುಳಿಮಾವು ಸಮೀಪದ ಅರಕೆರೆ ಬಿಟಿಎಸ್ ಲೇಔಟ್ ನಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಆಶಾ ಎಂದು ಗುರುತಿಸಲಾಗಿದ್ದು, ಆರೋಪಿ ಮಣಿ ತನ್ನ ಪತ್ನಿಯನ್ನು ಕೊಂದ ಪತಿರಾಯ. ಆಶಾ ಹಾಗೂ ಮಣಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಅದೇ ರೀತಿ ನಿನ್ನೆ ರಾತ್ರಿಯೂ ಪತಿ, ಪತ್ನಿ ನಡುವೆ ಗಲಾಟೆಯಾಗಿದೆ. ಮಣಿ ಇತ್ತೀಚೆಗೆ ವಿಪರೀತ ಮದ್ಯ ಕುಡಿಯಲು …

Read More »

‘KPSC’ ಗೆ ಇಬ್ಬರು ಸದಸ್ಯರುಗಳನ್ನು ನೇಮಿಸಿ ರಾಜ್ಯಪಾಲ ವಜೂಭಾಯಿ ವಾಲಾ ಆದೇಶ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿಯಿರುವ ಸದಸ್ಯರುಗಳ ಸ್ಥಾನಕ್ಕೆ ಇಬ್ಬರನ್ನು ನೇಮಿಸಿ ರಾಜ್ಯಪಾಲ ವಜೂಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ. ಅಧಿಕಾರಿ ಸದಸ್ಯರಾಗಿ ಡಾ. ಶಾಂತಾ ಹೊಸಮನಿ, ರಕ್ತನಿಧಿ ವೈದ್ಯಾಧಿಕಾರಿ, ಕೆ ಸಿ ಜನರಲ್ ಆಸ್ಪತ್ರೆ ಇವರನ್ನು, ಅಧಿಕಾರೇತರ ಸದಸ್ಯರಾಗಿ ಡಾ. ಹೆಚ್ ಎಸ್ ನರೇಂದ್ರ ಇವರನ್ನು ನೇಮಕಗೊಳಿಸಿ ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಡಾ, ಆನಂದ್ ಕೆ ಸುತ್ತೋಲೆ …

Read More »

ಜೈಲಲ್ಲಿರುವ ರೌಡಿಯ ಪತ್ನಿಯ ಜತೆ ಅಕ್ರಮ ಸಂಬಂಧ: ರೌಡಿಶೀಟರ್‌ನ ಕುತ್ತಿಗೆ ಸೀಳಿ ಬರ್ಬರ ಕೊಲೆ!

ಬೆಂಗಳೂರು: ರಶೀದ್ ಮಲಬಾರಿ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದವನ ಕುಖ್ಯಾತ ರೌಡಿ ಶೀಟರ್‌ ಸೈಯದ್ ಕರೀಂ ಅಲಿ ಎಂಬಾತನನ್ನು ನಗರದಲ್ಲಿ ಕೊಲೆ ಮಾಡಲಾಗಿದೆ. ಬೇರೊಬ್ಬನ ಪತ್ನಿಯ ಜತೆ ಈತ ಅಕ್ರಮ ಸಂಬಂಧ ಹೊಂದಿದ್ದು ಅದೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ಸೈಯದ್‌ನನ್ನು ಚಾಕುವಿನಿಂದ ಚುಚ್ಚಿ, ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಗೋವಿಂದ ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೈಯದ್‌ ಇನ್ನೋರ್ಚ ರೌಡಿ ಅನೀಸ್ ಎಂಬಾತನ …

Read More »

NCB ಅಧಿಕಾರಿಗಳಿಂದ ಭರ್ಜರಿ ಬೇಟೆ: 2 ಟನ್​ಗೂ ಹೆಚ್ಚು ಗಾಂಜಾ ವಶಕ್ಕೆ

ಬೆಂಗಳೂರು: ಬೆಂಗಳೂರು ವಲಯ ಎನ್​ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ ₹15 ಕೋಟಿ ಬೆಲೆಬಾಳುವ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್​ನ ಪೆದ್ದ ಅಂಬರ್​ಪೇಟ್ ಟೋಲ್ ಪ್ಲಾಜಾ ಬಳಿ ಟ್ರಕ್​ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದ್ದು 2 ಟನ್​ಗಿಂತಲೂ ಹೆಚ್ಚಿನ ಗಾಂಜಾವನ್ನ ಸೀಜ್ ಮಾಡಲಾಗಿದೆ. ಒಟ್ಟು 1,080 ಪ್ಯಾಕೆಟ್​ಗಳಲ್ಲಿ ಗಾಂಜಾವನ್ನ ಸಾಗಾಟ ಮಾಡಲಾಗ್ತಿತ್ತು.. ಒಂದೊಂದು ಪ್ಯಾಕೆಟ್​ನಲ್ಲಿ 2 ಕೆ.ಜಿ ಗಾಂಜಾ ಶೇಖರಿಸಲಾಗಿತ್ತು ಎನ್ನಲಾಗಿದೆ. ಹೈದರಾಬಾದ್​ನಿಂದ …

Read More »

ಹಂತ ಹಂತವಾಗಿ ಶಾಲಾ ಕಾಲೇಜು ತೆರೆಯಲು ತಜ್ಞರ ಸಮಿತಿ ಸೂಚನೆ: ಸಿಎಂ ಬಿಎಸ್ ವೈ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಶಾಲೆ- ಕಾಲೇಜು ತೆರೆಯಲು ತಜ್ಞರ ಸಮಿತಿ ಸಲಹೆ ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ತಜ್ಞರ ಸಮಿತಿಯ ಸಭೆಯ ಬಳಿಕ ಮಾತನಾಡಿದ ಸಿಎಂ, ಕೊವಿಡ್ ನಂತರ ಆರೊಗ್ಯ ಸಮಸ್ಯೆ ಕಡೆಗೆ ಗಮನ ಹರಿಸಬೇಕು. 18 ವರ್ಷಕ್ಕಿಂತ ಹಿರಿಯ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಿ ನಂತರ ಹಂತ ಹಂತವಾಗಿ ಕಾಲೇಜು ತೆರೆಯಲು ಸೂಚನೆ ನೀಡಿದ್ದಾರೆ ಎಂದರು. ಕೋವಿಡ್ ಮೂರನೇ ಅಲೆ …

Read More »

ಕೋವಿಡ್‌ 3ನೇ ಅಲೆ- ಮಕ್ಕಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆಗೆ ಚಿಂತನೆ: ಶಶಿಕಲಾ ಜೊಲ್ಲೆ

ಬೆಂಗಳೂರು: ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಆತಂಕ ಇರುವುದರಿಂದ ಬೆಂಗಳೂರಿನಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಕೋವಿಡ್ ಆಸ್ಪತ್ರೆ ನಿರ್ಮಿಸುವಂತೆ ಸಲಹೆ ಬಂದಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ‘ಈ ಕುರಿತು ಮುಖ್ಯಮಂತ್ರಿಯನ್ನು ಶೀಘ್ರದಲ್ಲೇ ಭೇಟಿ ಮಾಡಿ ಮಾತುಕತೆ ನಡೆಸಲಿದ್ದು, ಅವರ ಅಂತಿಮ ಆದೇಶದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಮುದಾಯ ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ …

Read More »