ಬೆಳಗಾವಿ : ಗಾಂಧಿ ಜಯಂತಿ ನಾಡಿನ ಪಿತಾಮಹ ಗಾಂಧಿ ಇಂದು ಇಡೀ ನಮ್ಮ ರಾಷ್ಟ್ರವೇ ಈ ಒಂದು ದಿನವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತೆ . ಇಂದು ಸುಮಾರು ಜನ ಸುಮಾರು ಕೆಲಸ ಗಳನ್ನಾ ಮಾಡುತ್ತಾರೆ ಆದ್ರೆ ಇಂದು ಸುಮಾರು ಸಮಾಜ ಸೇವೆಗಳನ್ನು ಮಾಡಿದರು ತೆರೆ ಮೇಲೆ ಬರದ ಒಬ್ಬ ವ್ಯಕ್ತಿಯ ಪರಿಚಯ ವನ್ನಾ ಮಾಡಿ ಕೊಡ್ತೇವೆ ಇಂದು ಕಣಬರಗಿ ಮೂಲದ ಬಸವರಾಜ ಯಳ್ಳೂರು ಕರ ಅವರು ಶಂತಾಯಿ …
Read More »ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ: ಬೆನಕೆ
ಬೆಳಗಾವಿ: ಇಲ್ಲಿನ ಮಾರುತಿ ನಗರದಿಂದ ಶಿಂಧೊಳ್ಳಿ ಕ್ರಾಸ್‌ವರೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ₹21.82 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ರಾಯಚೂರು-ಬಾಚಿ ರಾಜ್ಯ ಹೆದ್ದಾರಿಯಲ್ಲಿನ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಭೂಮಿಪೂಜೆ ನೆರವೇರಿಸಿದರು. ಬಳಿಕ ಅವರು ಮಾತನಾಡಿ, ‘ಇದು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಗರದ ಮುಖ್ಯರಸ್ತೆಯಾಗಿದೆ. ಜನರಿಗೆ ಅನುಕೂಲವಾಗಲೆಂದು ಇದನ್ನು ಅಭಿವೃದ್ಧಿಪಡಿಸುತ್ತಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ನಿಗದಿತ ಕಾಲಮಿತಿಯಲ್ಲಿ …
Read More »194 ಕೋಟಿ ರೂ. ವೆಚ್ಚದ ಕೌಜಲಗಿ ಭಾಗದ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿ ರೈತರಿಗೆ ವರದಾನ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕೌಜಲಗಿ ಭಾಗದ ರೈತರ ಬಹು ವರ್ಷಗಳ ಬೇಡಿಕೆಯಾಗಿರುವ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದ್ದು, ರೈತರ ಎಫ್.ಐ.ಸಿ ಕಾಮಗಾರಿಗೆ 32 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಚಿಕ್ಕ ನೀರಾವರಿ ಇಲಾಖೆಯಿಂದ 162 ಕೋಟಿ ರೂ. ಮೊತ್ತದ ಕಲ್ಮಡ್ಡಿ ಏತ ನೀರಾವರಿ ಯೋಜನೆಯ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದೆ. ರೈತರ ಜಮೀನುಗಳಿಗೆ ಹೊಲಗಾಲುವೆ ಮೂಲಕ ನೀರು …
Read More »ಆಯುಧ ಪೂಜೆಗೆ ಕೇವಲ 50 ರೂ. ಕೊಟ್ಟ ರಾಜ್ಯ ಸರ್ಕಾರ..!
ಮಂಡ್ಯ : ದಸರಾ ಆಯುಧ ಪೂಜೆಗೆ ಕೇವಲ 50 ರೂ ಕೊಟ್ಟ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಕೋಟಿ ಕೋಟಿ ಬೊಕ್ಕಸಕ್ಕೆ ತುಂಬಿಕೊಳ್ಳುವ ಸರ್ಕಾರ ಚಿಲ್ಲರೆ ಕಾಸು ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಂಡ್ಯ ಘಟಕಗಳಲ್ಲಿನ ಪ್ರತಿ ವಾಹನಕ್ಕೆ ತಲಾ 50 ರೂಪಾಯಿ. ವಿಭಾಗೀಯ ಕಾರ್ಯಗಾರಕ್ಕೆ 1000 ರೂಪಾಯಿ. ಪ್ರಾದೇಶಿಕ ಕಾರ್ಯಾಗಾರಕ್ಕೆ 2000 ರೂಪಾಯಿ ಹೀಗೆ ಆಯುಧ ಪೂಜೆಗಾಗಿ ಕೆಎಸ್‌ಆರ್‌ಟಿಸಿಗೆ ಸರ್ಕಾರ ಚಿಲ್ಲರೆ ಕಾಸು ಕೊಟ್ಟಿದೆ …
Read More »ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್ನೋಟ್ನಲ್ಲಿತ್ತು ಈ ಕೊನೇ ಆಸೆ
ರಾಯಚೂರು: ಯುವತಿಯೊಬ್ಬಳು ಗಣೇಶ ವಿಸರ್ಜನೆಗಾಗಿ ನಿರ್ಮಿಸಿದ್ದ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮೊದಲು 4 ಪುಟಗಳ ಸುದೀರ್ಘ ಡೆತ್ನೋಟ್ ಕೂಡ ಬರೆದಿಟ್ಟಿದ್ದಳು. ಇದೀಗ ಆ ಡೆತ್ನೋಟ್ ಮಾಹಿತಿ ಬಹಿರಂಗಗೊಂಡಿದ್ದು, ಯುವತಿ ಅದರಲ್ಲಿ ತನ್ನ ಕೊನೆಯ ಆಸೆಯನ್ನೂ ಹೇಳಿಕೊಂಡಿದ್ದಾಳೆ. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಈ ಘಟನೆ ನಡೆದಿದೆ. ಹತ್ತನೇ ತರಗತಿ ವಿದ್ಯಾರ್ಥಿನಿ ಸಾರಿಕಾ (16) ಆತ್ಮಹತ್ಯೆ ಮಾಡಿಕೊಂಡವಳು. ನಾಲ್ಕು ಪುಟಗಳ ಡೆತ್ನೋಟ್ ಸಿಕ್ಕಿದ್ದರೂ ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ …
Read More »ರಸ್ತೆ ಸುಸ್ಥಿತಿಯಲ್ಲಿದ್ದರೂ ಮತ್ತೆ ಡಾಂಬರೀಕರಣ!
ಕಲಬುರಗಿ: ನಗರದ ಹಲವು ಕಡೆ ರಸ್ತೆಗಳು ಹದಗೆಟ್ಟಿವೆ. ದುರಸ್ತಿ ಪ್ರಕ್ರಿಯೆ ನಡೆಯುತ್ತಿಲ್ಲ. ಆದರೆ, ಸುಸ್ಥಿತಿಯಲ್ಲಿರುವ ರಸ್ತೆ ಮೇಲೆಯೇ ಶನಿವಾರ ಡಾಂಬರು ಹಾಕಲಾಗಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ ₹ 1.25 ಕೋಟಿ ಖರ್ಚು ಮಾಡಿದೆ! ಹೊಸ ಆರ್‌ಟಿಒ ಕಚೇರಿಯ ಗೇಟ್ ಸಮೀಪದ ಕುಸನೂರ ರಸ್ತೆಯ 3 ಕಿ.ಮೀ. ಉದ್ದ ಡಾಂಬರ್ ಹಾಕಲಾಗಿದೆ. ಆದರೆ, ಇಡೀ ರಸ್ತೆಯಲ್ಲಿ ಸಣ್ಣ ಪುಟ್ಟ ತಗ್ಗು, ಸ್ಪೀಡ್ ಬ್ರೇಕರ್ ಹೊರತುಪಡಿಸಿ ರಸ್ತೆ ಸುಸ್ಥಿತಿಯಲ್ಲಿದೆ. ಆರ್‌ಟಿಒ ಕಚೇರಿ ಎದುರಿನ ಈ …
Read More »ಪಂಜಾಬ್ ನಲ್ಲಿ ಹಾವೇರಿ ಮೂಲದ ಯೋಧ ಹುತಾತ್ಮ : ಸಿಎಂ ಬೊಮ್ಮಾಯಿ ಸಂತಾಪ
ಬೆಂಗಳೂರು : ಪಂಜಾಬ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೊಳಗಾಗಿ ಯೋಧ ಶಿವರಾಜ್ ಎಂಬುವವರು ಸಾವನ್ನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರದ ಯೋಧ ಶಿವರಾಜ್ ಹುತಾತ್ಮರಾಗಿದ್ದಾರೆ. ಈ ಹಿನ್ನೆಲೆ ಮೃತಪಟ್ಟ ಯೋಧನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಅಪಘಾತಕ್ಕೊಳಗಾಗಿ ವೀರಮರಣ ಹೊಂದಿದ ಹಾವೇರಿ ಜಿಲ್ಲೆಯ ನಮ್ಮ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರದ ವೀರ ಯೋಧ ಶಿವರಾಜ್ …
Read More »ತಡರಾತ್ರಿ ಹಿಂಡಲಗಾ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಳಗಾವಿ: ಇಲ್ಲಿನ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ 3 ತಿಂಗಳ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದ ಮಂಜುನಾಥ ಮಹಾಂತೇಶ ನಾಯ್ಕರ (20) ನೇಣಿಗೆ ಶರಣಾಗಿರುವ ಕೈದಿ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಕಳೆದ ಮೂರು ತಿಂಗಳಿಂದಲೂ ಆರೋಪಿ ಹಿಂಡಲಗಾ ಜೈಲಿನಲ್ಲಿದ್ದನು. …
Read More »A.I.C.C. ಅಧ್ಯಕ್ಷಗಾದಿ ಅಲಂಕರಿಸುತ್ತಾರಾ ಎರಡನೇ ಕನ್ನಡಿಗ, ದಲಿತ ನಾಯಕ ಖರ್ಗೆ !
ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಕೊನೆಗೂ ಗಾಂಧಿ ಕುಟುಂಬದ ಪ್ರಾಬಲ್ಯ ತಾತ್ಕಾಲಿಕವಾಗಿ ಅಂತ್ಯಕಾಣುವ ಸಾಧ್ಯತೆ ಗೋಚರಿಸುತ್ತಿದ್ದು, ಪಕ್ಷದ ಅಧ್ಯಕ್ಷಗಾದಿಗೆ ಸ್ಪರ್ಧಿಸಿದವರಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಸರ್ವೋಚ್ಛ ಸ್ಥಾನಕ್ಕೆ ಏರುವ ಸಾಧ್ಯತೆ ಹೆಚ್ಚಾಗಿ ಗೋಚರಿಸುತ್ತಿದೆ. ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಜತೆ ರಾಷ್ಟ್ರೀಯ ನಾಯಕ ಶಶಿ ತರೂರ್ ಸಹ ಪ್ರಬಲ ಸ್ಪರ್ಧಿ. ಖರ್ಗೆ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಕಡೆಯ ಕ್ಷಣದಲ್ಲಿ ಸ್ಪರ್ಧಾ …
Read More »ಅಥಣಿಯಲ್ಲಿ ಭಾರಿ ಮಳೆಗೆ ಕೊಚ್ಚಿಹೋದ ಸೇತುವೆ
ಅಥಣಿ(ಬೆಳಗಾವಿ): ಕಳೆದ ಎರಡು ದಿನದ ಹಿಂದೆ ಸುರಿದ ಧಾರಾಕಾರ ಮಳೆಗೆ ತೇಲಸಂಗ ಗ್ರಾಮದ ತೋಟದ ವಸ್ತಿ ಜನಕ್ಕೆ ಸಂಪರ್ಕ ಕಲ್ಪಿಸುವ ದೋಣಿಹಳ್ಳದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ಗ್ರಾಮಸ್ಥರು, ಶಾಲೆ ಮಕ್ಕಳು ಜೀವ ಪಣಕ್ಕಿಟ್ಟು ಹಳ್ಳ ದಾಟುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೇಲಸಂಗ- ಬಿಜ್ಜರಗಿ ರಸ್ತೆಯ ಡೋಣಿ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಭಾರಿ ಮಳೆಗೆ ಕೊಚ್ಚಿ ಹೋಗಿದ್ದು, ತೋಟದ ಕೆಲಸಕ್ಕೆ ಹೋದ ರೈತರು ಹಾಗೂ ಶಾಲೆ ಮಕ್ಕಳು ಹಗ್ಗ ಹಿಡಿದು ಹಳ್ಳ …
Read More »
Laxmi News 24×7