Breaking News

ಜಿಲ್ಲೆ

ಅದ್ದೂರಿಯಾಗಿ ನೆನವೆರಿತು ಬೀಷ್ಠಾದೇವಿ ಜಾತ್ರಾ ಮಹೋತ್ಸವ..!!

ಬೆಳಗಾವಿ :   ವಿಜಯದಶಮಿ ದಿನ ಬೆಳಗಾವಿಯ ಬುರುಡ ಗಲ್ಲಿಯಲ್ಲಿ ಆಯೋಸಿದ್ದ ಭಿಷ್ಠಾದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೆರಿತು.ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.    ಬೆಳಗಾವಿ ನಗರದಲ್ಲೇ ಅತಿ ವಿಜೃಂಭಣೆಯಿಂದ ಆಚರಿಸುವ ಶ್ರೀ ಭಿಷ್ಠಾದೇವಿ ದಸರಾ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.ಕೋರೊನಾ ಕಾಲದಲ್ಲಿ ಸರಳವಾಗಿ ಆಚರಿಸಲ್ಪಟ್ಟಿದ್ದರಿಂದ ಈ ವರ್ಷ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ಕೈಗೊಳ್ಳಲಾಗಿತ್ತು.ನವರಾತ್ರಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿಸಿ ವಿಜಯದಶಮಿ ದಿನ ಮಹಾಪೂಜೆ …

Read More »

ಸಂಚಾರಿ ಪಶು ಚಿಕಿತ್ಸಾಲಯ ವಾಹನಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

  ಗೋಕಾಕ*: ರೈತರ ಜಾನುವಾರುಗಳು ಅನಾರೋಗ್ಯಕ್ಕೀಡಾದಾಗ ರೈತರು ಟೋಲ್ ಫ್ರೀ 1962 ಕ್ಕೆ ಕರೆ ಮಾಡಿದಲ್ಲಿ ಸಂಚಾರಿ ಪಶು ಚಿಕಿತ್ಸಾಲಯ ವಾಹನ ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲಿದೆ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಮ್ಮ ಗೃಹ ಕಛೇರಿಯಲ್ಲಿ ಪಶು ಪಾಲನಾ ಇಲಾಖೆಯಿಂದ ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ …

Read More »

ಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚನೆ: ಆರೋಪಿ ಬಂಧನ

ಚಿಕ್ಕೋಡಿ(ಬೆಳಗಾವಿ): ಎಟಿಎಂನಲ್ಲಿ ಹಣ ತೆಗೆಯುವಾಗ ಸಹಾಯದ ನೆಪದಲ್ಲಿ ವಂಚನೆ ಮಾಡುತ್ತಿದ್ದ ವ್ಯಕ್ತಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಆತನ ಬಳಿಯಿದ್ದ 51 ವಿವಿಧ ಬ್ಯಾಂಕ್​ಗಳ ಎಟಿಎಂ ಕಾರ್ಡ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ಅಮುಲ್ ದಿಲೀಪ್ ಸಖಟೆ (30) ಬಂಧಿತ ಆರೋಪಿ. ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ಗೋಕಾಕ್ ಹಾಗೂ ಬಾಗಲಕೋಟೆ ಸೇರಿದಂತೆ ಇತರ ರಾಜ್ಯಗಳಲ್ಲಿನ ಎಟಿಎಂನಲ್ಲಿ ಹಣ ತೆಗೆಯುವಾಗ ಸಹಾಯ ಮಾಡುವುದಾಗಿ ಹೇಳಿ, ಬಳಿಕ ಎಟಿಎ ಕಾರ್ಡ್ ಬದಲಿಸಿ ವಂಚನೆ …

Read More »

ಅಣ್ಣನೊಂದಿಗೆ ಗಾಳಿಪಟ ಹಾರಿಸುವ ವೇಳೆ ಮೇಲಿಂದ ಬಿದ್ದು ಬಾಲಕ ಸಾವು..!

ಬೆಳಗಾವಿ: ಗಾಳಿಪಟ ಹಾರಿಸುವಾಗ ಆಯತಪ್ಪಿ ಕಟ್ಟಡ ಮೇಲಿಂದ ಬಿದ್ದು 11 ವರ್ಷದ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಉಜ್ವಲ್ ನಗರದ ಸೆಕೆಂಡ್ ಕ್ರಾಸ್ ತಿರಂಗಾ ಕಾಲೋನಿಯ ಅರ್ಮಾನ್ ದಫೆದಾರ್(11) ಮೃತ ಬಾಲಕ. ನಿನ್ನೆ ಅಶೋಕ ನಗರದ ತಮ್ಮ ಸಂಬಂಧಿಕರ ಮನೆಗೆ ಕುಟುಂಬಸ್ಥರ ಜೊತೆಗೆ ಬಾಲಕ ಬಂದಿದ್ದನು. ಈ ವೇಳೆ ಉಪಹಾರ ಮಾಡಿದ ಬಳಿಕ ತನ್ನ ಅಣ್ಣನ ಜೊತೆಗೆ ಗಾಳಿಪಟ ಹಾರಿಸಲು ಕಟ್ಟಡದ ಟೆರಸ್ ಮೇಲೆ ಹೋಗಿದ್ದಾನೆ. …

Read More »

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ

ಬೆಳಗಾವಿ: ಬೆಳ್ಳಂಬೆಳಗ್ಗೆ ಯರಗಟ್ಟಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಲಾರಿ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದು, ಕಾರಿನಲ್ಲಿದ್ದ ತಂದೆ-ಮಗ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ರಾಮದುರ್ಗ ತಾಲೂಕಿನ‌ ಹುಲಕುಂದ ಗ್ರಾಮದ ರಂಗಪ್ಪ ಗುರುಸಿದ್ದಪ್ಪ ಪಾಟೀಲ (30) ಮೃತ ವ್ಯಕ್ತಿ. ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಭೀರೇಶ್ವರ ಬ್ಯಾಂಕ್ ಎದುರಿನ ರಸ್ತೆ ಪಕ್ಕದಲ್ಲಿ ಮೃತ ಲಾರಿ ಚಾಲಕ ಲಾರಿಯನ್ನು ಸೈಡ್​​ಗೆ ಹಾಕಿದ್ದರು. ಸರಕಿಗೆ ಹಗ್ಗ ಕಟ್ಟಿ ಪ್ಯಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಕಾರು ನಿಯಂತ್ರಣ …

Read More »

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಈ ಬಾರಿ ನಡೆದ ದಸರಾ ವೈಭವಕ್ಕೆ ಅದ್ಧೂರಿ ತೆರೆ ಬಿದ್ದಿದೆ.

ಬೆಳಗಾವಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಈ ಬಾರಿ ನಡೆದ ದಸರಾ ವೈಭವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಜೊತೆಗೆ ನಗರದ ಕ್ಯಾಂಪ್‌ ಪ್ರದೇಶದ ವಿದ್ಯಾನಿಕೇತನ ಶಾಲೆ ಮೈದಾನದಲ್ಲಿ ಗುರುವಾರ ಸಂಜೆ ವಿಜಯದಶಮಿ ಪ್ರಯುಕ್ತ ಅದ್ಧೂರಿಯಾಗಿ ಸೀಮೋಲ್ಲಂಘನೆ ಕಾರ್ಯಕ್ರಮ ಜರುಗಿತು. ಇಲ್ಲಿನ ಪಾಟೀಲ ಗಲ್ಲಿಯ ವತನದಾರ್‌ ಪಾಟೀಲ(ಪೊಲೀಸ್‌ಪಾಟೀಲ) ಮನೆತನದ ನೇತೃತ್ವದಲ್ಲೇ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಈ ವೇಳೆ ಶಾಸಕ ಅನಿಲ‌ ಬೆನಕೆ, ಪೊಲೀಸ್ ಕಮೀಷನರ್ ಡಾ.ಎಂ‌.ಬಿ.ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ, ರಮಾಕಾಂತ ಕುಡೋಸ್ಕರ …

Read More »

ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಸಂಪೂರ್ಣ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ : ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಂಚಮಸಾಲಿ ಸಮಾಜದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಕೂಡಲ ಸಂಗಮ ಪೀಠದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮಿಗಳೊಂದಿಗೆ ಮಂಗಳವಾರ ರಾತ್ರಿ …

Read More »

ಸಿಇಟಿ ಕೋಟಾ ಸೀಟು ಆಕಾಂಕ್ಷಿಗಳಿಗೆ ನಿರಾಸೆ

ಬೆಂಗಳೂರು: ಎಂಜಿನಿಯರಿಂಗ್‌ ಸೇರಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಈಗಾಗಲೇ ವಿಳಂಬ ಮಾಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಈಗ ಸೀಟು ಹಂಚಿಕೆ ಯಲ್ಲಿಯೂ ವಿಳಂಬ ನೀತಿ ಅನುಸರಿಸುವ ಮೂಲಕ ಬಡ ವಿದ್ಯಾರ್ಥಿಗಳ ಸರಕಾರಿ ಕೋಟ ಸೀಟು ದೊರೆಯದಂತೆಯೂ ನಿರಾಸೆ ಮೂಡಿಸಿದೆ.   ಸುಮಾರು 10 ದಿನಗಳ ಮೊದಲೇ ಕಾಮೆಡ್‌-ಕೆ ಸೀಟುಗಳ ಹಂಚಿಕೆ ವೇಳಾಪಟ್ಟಿಯನ್ನು ಕಾಮೆಡ್‌-ಕೆ ಪ್ರಕಟಿಸಿದ್ದು ಇದಕ್ಕೂ ಮೊದಲೇ ಸಿಇಟಿ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸಬಹುದಿತ್ತು. ಆದರೂ ಕಾಮೆಡ್‌-ಕೆ ಬಳಿಕ ಸೀಟು …

Read More »

ಇಂದು ಭಾರತ್‌ ಜೋಡೋಗೆ ಸೋನಿಯಾ ಸಾಥ್‌; ಮೇಲುಕೋಟೆಯಿಂದ ರಾಹುಲ್‌ ಗಾಂಧಿ ಯಾತ್ರೆ ಆರಂಭ

ಬೆಂಗಳೂರು: ಎರಡು ದಿನಗಳ ವಿರಾಮದ ನಂತರ ಗುರುವಾರದಿಂದ ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆ ಮುಂದುವರಿಯಲಿದ್ದು ಸೋನಿಯಾಗಾಂಧಿ ಹೆಜ್ಜೆ ಹಾಕಲಿದ್ದಾರೆ. ರಾಹುಲ್‌ಗಾಂಧಿ ಅವರು ಮೇಲುಕೋಟೆಯಿಂದ ಬೆಳಗ್ಗೆ ಯಾತ್ರೆ ಆರಂಭಿಸಲಿದ್ದು, ಜಕ್ಕನಹಳ್ಳಿ-ನಾಗಮಂಗಲ ಮಾರ್ಗದಲ್ಲಿ ಸೋನಿಯಾಗಾಂಧಿ ಜತೆಗೂಡಲಿದ್ದಾರೆ. ಸೋನಿಯಾಗಾಂಧಿ ಅವರು ಬೆಳಗ್ಗೆ ಯಾತ್ರೆಯಲ್ಲಿ ಪಾಲ್ಗೊಂಡು ಮಧ್ಯಾಹ್ನ 12.30 ಕ್ಕೆ ದೆಹಲಿಗೆ ವಾಪಸ್ಸಾಗಲಿದ್ದಾರೆ. ಪ್ರಿಯಾಂಕ ಭೇಟಿ ಅ.8 ಕ್ಕೆ : ಈ ಮಧ್ಯೆ, ಅ.6 ರಂದು ನಿಗದಿಯಾಗಿದ್ದ ಪ್ರಿಯಾಂಕ ಗಾಂಧಿ ಭೇಟಿ ಅ.8 ಕ್ಕೆ ಮುಂದೂಡಿಕೆಯಾಗಿದೆ. ಅಂದು …

Read More »

ನವರಾತ್ರಿ ದಾಂಡಿಯಾ ಉತ್ಸವದಲ್ಲಿ ಶಶಿಕಲಾ ಜೊಲ್ಲೆ ಸಕತ್ ಸ್ಟೆಪ್ಸ್

ಚಿಕ್ಕೋಡಿ: ನವರಾತ್ರಿ (Navaratri) ಹಿನ್ನೆಲೆಯಲ್ಲಿ ಆಯೋಜಿಸಿದ್ದ ದಾಂಡಿಯಾ (Dandiya) ಉತ್ಸವ ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಸಕತ್ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ. ಬೆಳಗಾವಿ (Belgavi) ಜಿಲ್ಲೆಯ ನಿಪ್ಪಾಣಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹದಿಂದ ಆಯೋಜಿಸಿದ್ದ ದಾಂಡಿಯಾ ಉತ್ಸವದಲ್ಲಿ ಮಹಿಳೆಯರು ಹಾಗೂ ಕುಟುಂಬಸ್ಥರೊಂದಿಗೆ ಶಶಿಕಲಾ ಜೊಲ್ಲೆ ದಾಂಡಿಯಾ ನೃತ್ಯ ಮಾಡಿದ್ದಾರೆ. ರಾಜಸ್ಥಾನಿ ವೇಷಭೂಷಣ ತೊಟ್ಟು ಮಿಂಚಿದ್ದಾರೆ. ಶಶಿಕಲಾ ಜೊತೆಗೆ ಅವರ ಪತಿ ಸಂಸದ ಅಣ್ಣಾಸಾಹೇಬ ಜೊಲ್ಲೆ (Annasaheb Jolle) ಅವರ ಪುತ್ರ …

Read More »