Breaking News

ಜಿಲ್ಲೆ

ಮನೆಗೆ ನುಗ್ಗಿ ₹ 23.60 ಲಕ್ಷ ದರೋಡೆ

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬನ್ನೂರು ತಾಂಡಾದಲ್ಲಿ ಮಂಗಳವಾರ ನಸುಕಿನಲ್ಲಿ ಮನೆಗೆ ನುಗ್ಗಿದ ಎಂಟು ಮಂದಿಯ ಗುಂಪು, ಕುಟುಂಬದ ಮೇಲೆ ಹಲ್ಲೆ ಮಾಡಿ, ನಗ- ನಾಣ್ಯ ದರೋಡೆ ಮಾಡಿದೆ. ಬನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಶಂಕರ ರಜಪೂತ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಟ್ರಜರಿಯಲ್ಲಿದ್ದ ಚಿನ್ನಾಭರಣ, ಹಣ ಸೇರಿ ₹ 23.60 ಲಕ್ಷದ ವಸ್ತುಗಳನ್ನು ಕದ್ದಿದ್ದಾರೆ ಎಂದು ಮನೆಯವರು ದೂರು ನೀಡಿದ್ದಾರೆ. ಗ್ರಾಮದ ಹೊರವಲಯದ …

Read More »

ಬೆಳಗಾವಿಯಲ್ಲಿ ಕಸಾಪದಿಂದ ಸರ್ ಮಿರ್ಜಾ ಇಸ್ಮಾಯಿಲ್ ಜನ್ಮದಿನಾಚರಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜನ್ಮದಿನಾಚರಣೆಯನ್ನು ಬೆಳಗಾವಿಯಲ್ಲಿ ಆಚರಿಸಲಾಯಿತು. ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಸರ್.ಮಿರ್ಜಾ ಇಸ್ಮಾಯಿಲ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು. ಈ ವೇಳೆ ಮೈಸೂರಿನ ನಲ್ವಡಿ ಕೃಷ್ಣರಾಜ್ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಸರ್ ಇಸ್ಮಾಯಿಲ್ ಮಿರ್ಜಾ ಅವರ ಭಾವಚಿತ್ರಗಳಿಗೆ ಗಣ್ಯರು ಪೂಜೆ ಸಲ್ಲಿಸಿದರು. ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ …

Read More »

ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆ- ಅತ್ಯಾಚಾರ ಎಂದು ಗ್ರಾಮಸ್ಥರಿಂದ ಆರೋಪ

ಚಿಕ್ಕೋಡಿ: ಕಳೆದ ನಾಲ್ಕು ಹಿಂದೆ ವೃದ್ಧೆಯನ್ನು (OldWoman) ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಸ್ಥರು ಪ್ರತಿಭಟನೆ (Protest) ನಡೆಸಿದರು. ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಬೇವನೂರು ಗ್ರಾಮದಲ್ಲಿ ಬೇವನೂರು ಗ್ರಾಮದ ಫುಲಾಭಾಯಿ ಲಕ್ಷ್ಮಣ ಯಮಗಾರ(65)ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಬಾಯಿಗೆ ಬಟ್ಟೆ ಹಾಕಿ ಕಿರುಚದಂತೆ ಮಾಡಿ ಕೊಲೆ ಮಾಡಿ ಮೈಮೇಲಿದ್ದ ಆಭರಣಗಳನ್ನು ದೋಚಿ ಗುಂಪೊಂದು ಪರಾರಿಯಾಗಿತ್ತು.ಸದ್ಯ ಅಥಣಿ ಪೊಲೀಸರು ಪ್ರಕರಣಕ್ಕೆ ಸಂಬಧಿಸಿದಂತೆ ಅದೇ ಗ್ರಾಮದ ಸಂಘರ್ಷ ಕಾಂಬಳೆ ಎಂಬಾತನನ್ನು …

Read More »

ಸೈಕ್ಲಿಂಗ್‍: ಲಾಯಪ್ಪ, ಪ್ರೀತಿ ಪ್ರಥಮ

ಚನ್ನಮ್ಮನ ಕಿತ್ತೂರು: ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಮಂಗಳವಾರ ನಡೆದ ರಾಜ್ಯಮಟ್ಟದ ಸೈಕ್ಲಿಂಗ್‍ನ ಪುರುಷರ ವಿಭಾಗ(24 ಕಿ.ಮೀ.)ದಲ್ಲಿ ಲಾಯಪ್ಪ ಮುಧೋಳ ಪ್ರಥಮ ಸ್ಥಾನ ಗಳಿಸಿದರು. ಪ್ರಭು ಕಾಲತಿಪ್ಪಿ, ಯಲ್ಲೇಶ ಹುಡೇದ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದ(14 ಕಿ.ಮೀ.) ಸ್ಪರ್ಧೆಯಲ್ಲಿ ಪ್ರೀತಿ ಹಳಬರ ಮೊದಲ ಸ್ಥಾನ ಗಳಿಸಿದರೆ, ಅಮೂಲ್ಯ ಪೂಜೇರಿ ದ್ವಿತೀಯ, ಕಾವೇರಿ ಕಾರದಗಿ ತೃತೀಯ ಸ್ಥಾನ ಪಡೆದುಕೊಂಡರು. ಪುರುಷರ ಇಂಡಿಯನ್ ಮೇಡ್ ಸೈಕ್ಲಿಂಗ್(24 ಕಿ.ಮೀ.) ಸ್ಪರ್ಧೆಯಲ್ಲಿ …

Read More »

ಸೂರ್ಯಗ್ರಹಣ: ಹಲವೆಡೆ ದೇವರ ದರ್ಶನ ಬಂದ್‌

ಬೆಳಗಾವಿ: ಕೇತುಗ್ರಸ್ಥ ಖಂಡಗ್ರಾಸ (ಖಗ್ರಾಸ) ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದ ಮೂರ್ತಿಗಳ ದರ್ಶನ ಬಂದ್‌ ಮಾಡಲಾಯಿತು. ದೀಪಾವಳಿ ಹಬ್ಬದ ಕಾರಣ ದೇವಸ್ಥಾನಗಳನ್ನು ಮುಚ್ಚಲಿಲ್ಲ. ಆದರೆ, ಮೂರ್ತಿಗಳ ಮೇಲೆ ಬಿಲ್ವಪತ್ರಿ, ಶಾಲುಗಳನ್ನು ಹೊದಿಸಿ ಮರೆ ಮಾಟಲಾಯಿತು. ಸಂಜೆ 4.30ಕ್ಕೆ ಸರಿಯಾಗಿ ಬೆಳಗಾವಿಯಲ್ಲಿ ಸೂರ್ಯಗ್ರಹಣ ಗೋಚರವಾಗಲಿದೆ ಎಂದು ಅರ್ಚಕರು ಮಾಹಿತಿ ನೀಡಿದರು. ಸೋಮವಾರವೇ ಹಲವು ದೇವಸ್ಥಾನಗಳಲ್ಲಿ ಗ್ರಹಣ ಮಾಹಿತಿ ಹಾಗೂ ದೋಷ ನಿವಾರಣಾ ವಿಧಾನಗಳ ಬಗ್ಗೆ ವಿವರ …

Read More »

ಬಿಜೆಪಿಯ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳುವುದಕ್ಕೆ ಮಾತ್ರ ಮೀಸಲು: ಕಾಂಗ್ರೆಸ್ ಟೀಕೆ

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ವಪಕ್ಷದ ನಾಯಕರ ವಿರುದ್ಧವೇ ನಡೆಸುವ ಟೀಕೆಗಳನ್ನು ಕಾಂಗ್ರೆಸ್ ಅಸ್ತ್ರ ಮಾಡಿಕೊಳ್ಳುತ್ತಿದೆ. ಇದೀಗ ‘ನನ್ನ ತಂಟೆಗೆ ಬಂದರೆ ಹಾವು ಬಿಡುತ್ತೇನೆ’ ಎಂದು ಯತ್ನಾಳ್ ಹೇಳಿಕೆ ಬಳಸಿಕೊಂಡು ಕಾಂಗ್ರೆಸ್ ವ್ಯಂಗ್ಯವಾಡಿದೆ.   ಕಾಂಗ್ರೆಸ್ ಕಿಟಿಕಿ ಇಣುಕುವುದರಲ್ಲೇ ನಿರತರಾಗಿದ್ದ ಬಿಜೆಪಿಗೆ ತಮ್ಮಲ್ಲಿನ ಬಿಜೆಪಿ ವರ್ಸಸ್ ಬಿಜೆಪಿ ಕದನದಲ್ಲಿ ಬಿಜೆಪಿಗರೆಲ್ಲ ಈಗ ಹಾವಾಡಿಗರಾಗಿದ್ದಾರೆ, ಅವರ ಹಾವುಗಳು ಎಲ್ಲೆಲ್ಲಿರುತ್ತವೆ, ಎಲ್ಲೆಲ್ಲಿ ಹೆಡೆ ಎತ್ತುತ್ತವೆ ಎಂಬುದು ಸ್ವತಃ ಬಿಜೆಪಿಗೇ ತಿಳಿಯುತ್ತಿಲ್ಲ! …

Read More »

ದೀಪಾವಳಿ ಹಬ್ಬದ ಪ್ರಯುಕ್ತ ಹಚ್ಚಿದ ಪಟಾಕಿ ಕಿಡಿ ಸಿಡಿದು ಕುಶನ್ ಅಂಗಡಿಗೆ ಬೆಂಕಿ

ದೀಪಾವಳಿ ಹಬ್ಬದ ಪ್ರಯುಕ್ತ ಹಚ್ಚಿದ ಪಟಾಕಿ ಕಿಡಿ ಸಿಡಿದು ಕುಶನ್ ಅಂಗಡಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ಹೌದು ಕಿತ್ತೂರು ಪಟ್ಟಣದ ಶಬ್ಬೀರ ಬೀಡಿ ಎಂಬುವವರಿಗೆ ಸೇರಿದ ಕುಶನ್ ಅಂಗಡಿಗೆ ನಿನ್ನೆ ತಡರಾತ್ರಿ ಬೆಂಕಿ ತಗುಲಿದೆ. ಪಟಾಕಿ ಕಿಡಿ ಸಿಡಿಯುತ್ತಿದ್ದಂತೆ ಧಗಧಗನೇ ಕುಶನ್ ಅಂಗಡಿ ಹೊತ್ತಿ ಉರಿದಿದೆ. ಅಂದಾಜು 3 ಲಕ್ಷ ಮೌಲ್ಯದ ಸಿದ್ಧಗೊಂಡಿದ್ದ ಕುಶನ್, ಪೀಠೋಪಕರಣ ಬೆಂಕಿಗಾಹುತಿಯಾಗಿವೆ. ಶಬ್ಬೀರ …

Read More »

ಸ್ಥಾನ ಹೋದರೂ ಅಡ್ಡಿಯಿಲ್ಲ,ಕಿತ್ತೂರಿಗೆ ಎರಡು ಸಲ ಬಂದೆ: ಸಿಎಂ

ಬೆಳಗಾವಿ (ಚನ್ನಮ್ಮನ ಕಿತ್ತೂರು): ಮುಖ್ಯಮಂತ್ರಿ ಸ್ಥಾನ ಹೋದರೂ ಅಡ್ಡಿಯಿಲ್ಲ. ಕಿತ್ತೂರು ಚನ್ನಮ್ಮನ ಪವಿತ್ರ ಭೂಮಿಗೆ ಸತತ ಎರಡು ಸಲ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಕಿತ್ತೂರು ಉತ್ಸವಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬ ಮೂಢನಂಬಿಕೆ ಇದೆ. ಸ್ಥಾನ ಕಳೆದುಕೊಳ್ಳುವ ಭಯ ದಿಂದ ಬಹಳಷ್ಟು ಮುಖ್ಯಮಂತ್ರಿಗಳು ಕಿತ್ತೂರಿಗೆ …

Read More »

ಅಬಕಾರಿ ಅಧಿಕಾರಿಗಳ ಭರ್ಜರಿ ದಾಳಿ: 909 ಲೀಟರ್ ಗೋವಾ ಸಾರಾಯಿ ಜಪ್ತಿ

ಅಕ್ರಮವಾಗಿ ಗೂಡ್ಸ ಕ್ಯಾರಿಯರ್‍ನಲ್ಲಿ ಗೋವಾ ಸಾರಾಯಿಯನ್ನು ಸಾಗಿಸುತ್ತಿದ್ದ ಓರ್ವ ಆರೋಪಿಯನ್ನು ಮಾಲು ಸಮೇತ ಬಂಧಿಸುವಲ್ಲಿ ಖಾನಾಪುರ ಅಬಕಾರಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಸೋಮವಾರ ಮಧ್ಯರಾತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಇಲಾಖೆ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಟಾಟಾ ಟರ್ಬೋ ಎಕ್ಸ-1109 ಗೂಡ್ಸ ಕ್ಯಾರಿಯರ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 909 ಲೀಟರ್ ವಿವಿಧ ಕಂಪನಿಯ ಗೋವಾ ಸಾರಾಯಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ …

Read More »

ಸುವರ್ಣಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ನಿಪ್ಪಾಣಿ ಹಾಗೂ ಗೋಕಾಕ್ ರೈತ ಮುಖಂಡರು ಪೊಲೀಸರ ವಶಕ್ಕೆ

ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ನೀಡುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ನಿಪ್ಪಾಣಿ ಹಾಗೂ ಗೋಕಾಕ್ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೌದು ಕಬ್ಬಿನ ಬೆಲೆ ನಿಗದಿ ಪಡಿಸುವಂತೆ ಸಿಎಂ ಬೊಮ್ಮಾಯಿ ವಿರುದ್ಧ ಬೆಳಗಾವಿ ಜಿಲ್ಲೆಯ ರೈತರು ಸಮರ ಸಾರಿದ್ದಾರೆ. ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಅಹೋರಾತ್ರಿ ಧರಣಿ ಆರಂಭವಾಗಿದೆ. ಮತ್ತೊಂದು …

Read More »