Breaking News

ಜಿಲ್ಲೆ

ಈ ಬಾರಿ ಬಳ್ಳಾರಿ ಗ್ರಾಮೀಣದಿಂದ ಸ್ಪರ್ಧೆ: ಸಚಿವ ಶ್ರೀರಾಮುಲು

ಬಳ್ಳಾರಿ: ಈ ಬಾರಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪ ರ್ಧಿಸುತ್ತೇನೆಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಿದ್ದೇನೆ. ಇದೀಗ ಮತ್ತೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಈ ಕುರಿತು ಪಕ್ಷದ ಹೈಕಮಾಂಡ್‌ ಗಮನಕ್ಕೂ ತಂದಿದ್ದೇನೆ. ಸಂಡೂರು ಅಥವಾ ಬಳ್ಳಾರಿ ಗ್ರಾಮೀಣ ಕ್ಷೇತ್ರ ಎಂಬ ಆಯ್ಕೆಯಿತ್ತು. ಆದರೆ, ಬಹುತೇಕ ಎಲ್ಲರ ಅಪೇಕ್ಷೆಯ ಮೇರೆಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು. ಮಾಜಿ …

Read More »

ತನ್ನ 15 ವರ್ಷದ ಮಗನ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ದಾನಮಾಡಿದ ತಾಯಿ

ಬೆಳಗಾವಿ: ತನ್ನ 15 ವರ್ಷದ ಮಗನ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ದಾನಮಾಡಿದ ತಾಯಿ ಈಗ ಆರ್ಥಿಕ ನೆರವು ನೀಡುವ ದಾನಿಗಳತ್ತ ಮುಖ ಮಾಡಿದ್ದಾರೆ. ದುಡಿದು ಮಗನನ್ನು ಸಲಹುವ ತಾಯಿಯ ಸಂಕಟಕ್ಕೀಗ ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚುವ ಉದಾರ ಹೃದಯಿಗಳ ಅಗತ್ಯ ಬಂದೊದಗಿದೆ. ಅಥಣಿ ತಾಲೂಕಿನ ಮದಬಾವಿಯ ಪ್ರಜ್ವಲ್ ಮಹಾದೇವ ನಿವಾಲಗಿ 9ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ಬಾಲಕ. ಈತ ಶೋಭಾ- ಮಹಾದೇವ ದಂಪತಿಯ ಏಕಮಾತ್ರ ಪುತ್ರ. ಶೋಭಾ ಅವರು …

Read More »

ಗಡಿ ಭಾಗದವರಿಗೆ ಮಹಾರಾಷ್ಟ್ರ ಸರ್ಕಾರದ ವಿಮೆ; ಹೇಗೆ ತಡೆಯಬೇಕು ಯೋಚಿಸುತ್ತೇನೆ:ಸಿಎಂ

ಬೆಳಗಾವಿ: ‘ಕರ್ನಾಟಕ ಗಡಿ ಭಾಗದ 865 ಹಳ್ಳಿಗಳಿಗೂ ಅನ್ವಯ ಆಗುವಂತೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ನೀಡಿದ್ದರೆ, ಅದನ್ನು ಪರಿಶೀಲಿಸಿ ಹೇಗೆ ತಡೆಯಬೇಕು ಯೋಚಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.   ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ನೀಡಿದ್ದಕ್ಕೆ ನಾನೇಕೆ ರಾಜೀನಾಮೆ ಕೊಡಬೇಕು. ನಾಡು, ನುಡಿ, ಗಡಿ ಜನರ ರಕ್ಷಣೆ ವಿಚಾರದಲ್ಲಿ ನಾನು ಡಿ.ಕೆ.ಶಿವಕುಮಾರ ಅವರಿಂದ ಪಾಠ ಕಲಿಯಬೇಕಾಗಿಲ್ಲ’ ಎಂದರು. ‘ನಾವು ಕೂಡ …

Read More »

ಕೆಕೆ ಕೊಪ್ಪ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಬೈಕ್ ಸವಾರನನ್ನು ಬಲಿತೆಗೆದುಕೊಂಡಿದೆ.

ಬೆಳಗಾವಿ: ಇಲ್ಲಿನ ಕೆಕೆ ಕೊಪ್ಪ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಬೈಕ್ ಸವಾರನನ್ನು ಬಲಿತೆಗೆದುಕೊಂಡಿದೆ. ಸುಳೇಬಾವಿ ಗ್ರಾಮದ ರಾಮು ನಾರಾಯಣ ಬಂಗೋಡಿ (54) ಮೃತಪಟ್ಟವರು. ಅವರು ವಡಗಾವಿ ದೇವಾಂಗನಗರ ನಿವಾಸಿ, ಗೋಪಾಲ ಬಸಪ್ಪ ತಾಳೂಕರ (58) ಅವರೊಂದಿಗೆ ಬುಧವಾರ ಮಧ್ಯಾಹ್ನ ಹಿರೇಬಾಗೇವಾಡಿಯಿಂದ ಬೈಕ್ ನಲ್ಲಿ ಬರುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ವಾಹನ ಗುದ್ದಿದೆ. ಗೋಪಾಲ ತಾಳೂಕರ ಅವರಿಗೆ ಗಾಯಗಳಾಗಿದ್ದು ತಲೆ ಹಾಗೂ ಮುಖಕ್ಕೆ ತೀವ್ರ ಏಟು ತಗುಲಿದ ರಾಮು ಬಂಗೋಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. …

Read More »

ಮುಖ್ಯಮಂತ್ರಿ ಭೇಟಿಗಾಗಿ ಒಂದು ಗಂಟೆ ಕಾದು ವಾಪಸ್‌ ಆದ ಶಾಸಕಿ ಕುಸುಮಾವತಿ ಶಿವಳ್ಳಿ

ಹುಬ್ಬಳ್ಳಿ: ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಮುಖ್ಯಮಂತ್ರಿಗಳ ಭೇಟಿಗಾಗಿ ಸುಮಾರು ಒಂದು ಗಂಟೆ ಕಾದರೂ ಭೇಟಿಯಾಗದ ಹಿನ್ನೆಲೆಯಲ್ಲಿ ವಾಪಸ್ಸು ತೆರಳಿದ ಘಟನೆ ನಡೆಯಿತು. ಇಲ್ಲಿನ ಆದರ್ಶ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಶಾಸಕಿ ಕುಸುಮಾವತಿ ತೆರಳಿದ್ದರು. ಸುಮಾರು ಒಂದು ಗಂಟೆ ಕಾಲ ಕಾದರು ಕುಳಿತರು. ಆದರೆ ಬೆಳಗಾವಿಗೆ ತೆರಳುವ ಭರದಲ್ಲಿ ಭೇಟಿಯಾಗದೆ ಸಿಎಂ ಬೊಮ್ಮಾಯಿ ಹೊರಟು ಹೋದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಕುಸುಮಾವತಿ ಶಿವಳ್ಳಿ, ಕ್ಷೇತ್ರದ …

Read More »

ನೀರು ಕೊಟ್ಟ ಶಾಸಕನಿಗೆ ಹಾಲು ಕುಡಿಸಿದ ರೈತ!

ವಿಜಯಪುರ: ನೀರಾವರಿ ಸೇರಿದಂತೆ ಇತರೆ ಯೋಜನೆ, ಸೌಲಭ್ಯ ನೀಡಿದ ಜನಪ್ರತಿನಿಧಿಗಳಿಗೆ ವೈವಿಧ್ಯಮಯ ವಸ್ತುಗಳ ಹಾರ, ತುರಾಯಿ ಹಾಕುವುದು ಸಾಮಾನ್ಯವಾಗಿದೆ. ಆದರೆ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಯುವರೈತರೊಬ್ಬರು ತಮ್ಮ ಜಮೀನಿಗೆ ನೀರು ಹರಿಸಿದ ಶಾಸಕನಿಗೆ ತಾನೇ ಸಾಕಿದ ಆಕಳ ಹಾಲು ಕುಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿ ಗಮನ ಸೆಳೆದಿದ್ದಾರೆ.   ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸಿದ್ದಾಪುರ ಕೆ. ಗ್ರಾಮದ ಯುವ ರೈತ ವೃಷಭನಾಥ ಯಶವಂತ ಘೋಸರವಾಡ ಬುಧವಾರ …

Read More »

ಬೆಲೆ ಕುಸಿತಕ್ಕೆ ಕಂಗಾಲಾಗಿ ಗಿಡದಿಂದ ಹತ್ತಿ ಬಿಡಿಸದ ರೈತ.

ಧಾರವಾಡ: ರೈತರ ಪಾಲಿನ ಬಿಳಿ ಬಂಗಾರ ಅಂತಲೇ ಹೆಸರುವಾಸಿಯಾಗಿರುವ ಮತ್ತು ವರ್ಷದಿಂದ ವರ್ಷಕ್ಕೆ ಏರುತ್ತ ಹೊರಟಿದ್ದ ಹತ್ತಿ ಯ ಬೆಲೆ ಈ ಬಾರಿ ಏಕಾಏಕಿಯಾಗಿ ಕುಸಿದಿದ್ದು, ಇದರಿಂದಾಗಿ ರೋಸಿ ಹೋದ ರೈತರು ಇದೀಗ ಹತ್ತಿಯನ್ನು ಬಿಡಿಸದೇ ಗದ್ದೆಯಲ್ಲಿ ಹಾಗೆಯೇ ಬಿಡುತ್ತಿದ್ದು, ಬೆಳೆದು ನಿಂತಲ್ಲಿಯೇ ಹತ್ತಿಯೆಲ್ಲವೂ ಹಾಳಾಗಿ ಹೋಗುತ್ತಿದೆ.   ಧಾರವಾಡ, ನವಲಗುಂದ, ಅಣ್ಣಿಗೇರಿ ತಾಲೂಕಿನ ಭಾಗದಲ್ಲಿ ಹತ್ತಿ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಳೆದ ವರ್ಷ ಒಂದು ಕ್ವಿಂಟಾಲ್​ ಹತ್ತಿಗೆ 12 ಸಾವಿರ …

Read More »

ಕಣ್ಣೀರು ಹಾಕಿ ಮಾತನಾಡಿದ C.M.ಬೊಮ್ಮಾಯಿ!

ಹುಬ್ಬಳ್ಳಿ: ತಮ್ಮ ಹಳೆ ಸ್ನೇಹಿತರು ಸಂಬಂಧಿಕರನ್ನು ನೋಡಿ ಭಾವುಕಾರದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಹುಟ್ಟೂರಿನಲ್ಲಿ ಕಣ್ಣೀರು ಹಾಕಿದರು. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿರುವ ತಮ್ಮ ತಂದೆ ತಾಯಿ ಜನಿಸಿದ ಬಾಳಿ ಬದುಕಿದ ಕಮಡೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದು ಆ ಸಂದರ್ಭ ತಮ್ಮ ಬಾಲ್ಯದ ನೆನಪು ಮೆಲುಕು ಹಾಕಿ ಕಣ್ಣೀರಿಟ್ಟರು. ಇದೇ ಸಂದರ್ಭ ಅವರು ಸಿಎಂ ಹುದ್ದೆಗೆ ಏರಲು ಸ್ನೇಹಿತರ ಸಹಾಯವನ್ನು ಸಿಎಂ ಬೊಮ್ಮಾಯಿ ನೆನೆದರು. ಇದೇ ಸಂದರ್ಭ ಮುಖ್ಯಮಂತ್ರಿ ಬೊಮ್ಮಾಯಿ …

Read More »

ಎಂಎಲ್‌ಸಿ ಆರ್​.ಶಂಕರ್ ಮನೆ ಮೇಲೆ ದಾಳಿ: 8 ಕೋಟಿ ರೂ. ಮೌಲ್ಯದ ಸೀರೆ, ತಟ್ಟೆ-ಲೋಟಾ, ಬ್ಯಾಗ್‌ ಪತ್ತೆ

ಹಾವೇರಿ : ಬಿಜೆಪಿ ವಿಧಾನಪರಿಷತ್ ಸದಸ್ಯ ಆರ್​.ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಬೀರಲಿಂಗೇಶ್ವರ ನಗರದಲ್ಲಿರುವ ಶಂಕರ್​ ಮನೆ ಮೇಲೆ ನಿನ್ನೆ ತಡರಾತ್ರಿ ದಾಳಿಯಾಗಿದ್ದು, ಈ ವೇಳೆ ಆರ್.ಶಂಕರ್ ಗೃಹಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಹಂಚಲು ತಂದಿದ್ದ ಹಲವು ವಸ್ತುಗಳು ಪತ್ತೆಯಾಗಿವೆ.   ಆರ್.ಶಂಕರ್ ಭಾವಚಿತ್ರ ಇರುವ ಸೀರೆ ಬಾಕ್ಸ್, ತಟ್ಟೆ, ಲೋಟಾ ಹಾಗೂ ಎಲ್.ಕೆ.ಜಿಯಿಂದ ಪದವಿ ಕಾಲೇಜು ಮಕ್ಕಳ ತನಕ ಹಂಚಲು …

Read More »

ಕಾಡುಕೋಣ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ತಂಡ ಬಂಧಿಸಿದೆ.

ಖಾನಾಪುರ: ತಾಲೂಕಿನ ನಂದಗಡದಲ್ಲಿ ಕಾಡುಕೋಣ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ತಂಡ ಬಂಧಿಸಿದೆ. ಡೆವಿಡ್ ಫಿಗೇರ್ ಮತ್ತು ಹಸನ್ ಬೇಪಾರಿ ಬಂಧಿತರು. ಇವರಿಂದ 11 ಕೆಜಿ ಕಾಡುಕೋಣದ ಮಾಂಸ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ೆರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.     ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.     ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಅವರ …

Read More »