Breaking News
Home / ಜಿಲ್ಲೆ / ಹಾವೇರಿ / ಎಂಎಲ್‌ಸಿ ಆರ್​.ಶಂಕರ್ ಮನೆ ಮೇಲೆ ದಾಳಿ: 8 ಕೋಟಿ ರೂ. ಮೌಲ್ಯದ ಸೀರೆ, ತಟ್ಟೆ-ಲೋಟಾ, ಬ್ಯಾಗ್‌ ಪತ್ತೆ

ಎಂಎಲ್‌ಸಿ ಆರ್​.ಶಂಕರ್ ಮನೆ ಮೇಲೆ ದಾಳಿ: 8 ಕೋಟಿ ರೂ. ಮೌಲ್ಯದ ಸೀರೆ, ತಟ್ಟೆ-ಲೋಟಾ, ಬ್ಯಾಗ್‌ ಪತ್ತೆ

Spread the love

ಹಾವೇರಿ : ಬಿಜೆಪಿ ವಿಧಾನಪರಿಷತ್ ಸದಸ್ಯ ಆರ್​.ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಬೀರಲಿಂಗೇಶ್ವರ ನಗರದಲ್ಲಿರುವ ಶಂಕರ್​ ಮನೆ ಮೇಲೆ ನಿನ್ನೆ ತಡರಾತ್ರಿ ದಾಳಿಯಾಗಿದ್ದು, ಈ ವೇಳೆ ಆರ್.ಶಂಕರ್ ಗೃಹಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಹಂಚಲು ತಂದಿದ್ದ ಹಲವು ವಸ್ತುಗಳು ಪತ್ತೆಯಾಗಿವೆ.

 

ಆರ್.ಶಂಕರ್ ಭಾವಚಿತ್ರ ಇರುವ ಸೀರೆ ಬಾಕ್ಸ್, ತಟ್ಟೆ, ಲೋಟಾ ಹಾಗೂ ಎಲ್.ಕೆ.ಜಿಯಿಂದ ಪದವಿ ಕಾಲೇಜು ಮಕ್ಕಳ ತನಕ ಹಂಚಲು ತಂದಿದ್ದ ಸ್ಕೂಲ್ ಬ್ಯಾಗ್ ಸಿಕ್ಕಿದೆ.

ಸುಮಾರು 8 ಕೊಟಿ ರೂಪಾಯಿ ವೆಚ್ಚದ ವಸ್ತುಗಳು ಪತ್ತೆಯಾಗಿವೆ ಎಂದು ಅಂದಾಜಿಸಲಾಗಿದ್ದು, ಈ ಎಲ್ಲ ವಸ್ತುಗಳ GST ಬಿಲ್ ಕೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಆರ್ ಶಂಕರ್, ಬಿಲ್ ಕೊಡಲು ಅವಕಾಶ ಕೇಳಿದ್ದಾರೆ. ಒಂದು ವೇಳೆ ಸರಿಯಾದ ಜಿಎಸ್‌ಟಿ ಬಿಲ್ ಇಲ್ಲದಿದ್ರೆ ದಂಡ ವಿಧಿಸುವ ಸಾಧ್ಯತೆ ಇದೆ.


Spread the love

About Laxminews 24x7

Check Also

ಡಿ.ಕೆ.ಶಿ ಸಂಜೆ ಡಬಲ್ ಆಗ್ತಾರೆ; ಕಾಂಗ್ರೆಸ್ ಮುಳುಗುತ್ತಿರುವ ಹಡಗು ಆ ಪಕ್ಷಕ್ಕೆ ಯಾರು ಹೋಗ್ತಾರೆ; ಶಾಸಕ ವಿರೂಪಾಕ್ಷಪ್ಪ ತಿರುಗೇಟು

Spread the love ಹಾವೇರಿ: ಹಾವೇರಿ ಶಾಸಕರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ