Breaking News

ಜಿಲ್ಲೆ

ಚಿಕ್ಕೋಡಿ ನಗರದಲ್ಲಿ ನಡೆದ ಆರ್ ಎಸ್ ಎಸ್ ಸ್ವಯಂಸೇವಕರ ಪಥ ಸಂಚಲನ

ಚಿಕ್ಕೋಡಿ ನಗರದಲ್ಲಿ ನಡೆದ ಆರ್ ಎಸ್ ಎಸ್ ಸ್ವಯಂಸೇವಕರ ಪಥ ಸಂಚಲದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ಖಾತೆ ಸಚಿವರಾದ ಸೌ.ಶಶಿಕಲಾ ಜೊಲ್ಲೆ,ಜಿ ಇವರೊಂದಿಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ,ಜಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಮತ್ತು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. …

Read More »

ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಆರೋಪ ಹೊತ್ತಿರುವ ಯುವತಿ ಪರ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ.

ಮೈಸೂರು,ಜ.20- ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಆರೋಪ ಹೊತ್ತಿರುವ ಯುವತಿ ಪರ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ. ನಳಿನಿ ಪರ ವಕಾಲತ್ತು ವಹಿಸಲು ಬೆಂಗಳೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಿಂದ ವಕೀಲರು ಆಗಮಿಸಿ 250ಕ್ಕೂ ಹೆಚ್ಚು ಸಹಿ ಇರುವ ವಕಾಲತ್ತು ಪತ್ರವನ್ನು ಇಂದು ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಿಗೆ ಸಲ್ಲಿಸಿದ್ದಾರೆ. ನಳಿನಿ ಪರ ವಕಾಲತ್ತು ವಹಿಸದಂತೆ ಮೈಸೂರಿನ …

Read More »

ಉಪಚುನಾ ವಣೆಯಲ್ಲಿ ಗೆದ್ದವರ ಪರಿಸ್ಥಿತಿ ಅಂತರಪಿಶಾ ಚಿಗಳಂತಾಗಿದೆ

ಬೆಂಗಳೂರು,ಜ.20- ಉಪಚುನಾ ವಣೆಯಲ್ಲಿ ಗೆದ್ದವರ ಪರಿಸ್ಥಿತಿ ಅಂತರಪಿಶಾ ಚಿಗಳಂತಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಸಚಿವಾಕಾಂಕ್ಷಿಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಭೇಟಿಗೂ ಅವಕಾಶ ಕೊಡಲಿಲ್ಲ. ಒಂದು ವೇಳೆ ಸಂಪುಟ ವಿಸ್ತರಣೆ ಯಾದರೆ ನನಗಿರುವ ಮಾಹಿತಿ ಪ್ರಕಾರ ಸರ್ಕಾರದಲ್ಲಿ ಸ್ಫೋಟವಾಗುತ್ತದೆ ಎಂದು ಹೇಳಿದರು. ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಸ್ಥಾನ ಕೊಡೊಲ್ಲ. ಕೊಡದಿದ್ದರೆ ನೋಡಿಕೊಳ್ಳಿ ಅಂತ ಈಗಾಗಲೇ ವಿಶ್ವನಾಥ್ ಹೇಳಿದ್ದಾರೆ. ಮುಂದಿನ …

Read More »

ನಡಿಗೆಯ ಮೂಲಕ ತಿರುಪತಿ ತಲುಪಿದ ಶಾಸಕಿ ನಿಂಬಾಳ್ಕರ್ ದಂಪತಿ

ಬೆಳಗಾವಿ, ಜ.20-ರಾಜ್ಯದ ಇತಿಹಾಸದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಶಾಸಕರಾದ ಅವರ ಪತ್ನಿ 9 ದಿನಗಳ ಪಾದಯಾತ್ರೆ ಮೂಲಕ ತೀರ್ಥಯಾತ್ರೆ ಮುಗಿಸಿ ಗಮನ ಸೆಳೆದಿದ್ದಾರೆ. ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾದ (ಆಡಳಿತ) ಹೇಮಂತ ನಿಂಬಾಳ್ಕರ್ ಮತ್ತು ಅವರ ಪತ್ನಿ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕಳೆದ ಜ. 11ರಂದು ಬೆಂಗಳೂರಿಂದ ಪಾದಯಾತ್ರೆ ಹೊರಟು ಸುದೀರ್ಘ 263 ಕಿಮೀ ನಡಿಗೆಯ 9 ದಿನಗಳ ನಂತರ ಇಂದು ತಿರುಪತಿ ತಿರುಮಲ …

Read More »

ಮುಗಳಖೋಡ ಮಠದಲ್ಲಿ ಭಜ೯ರಿಯಾಗಿ ನಡೆದ ‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆ’ : ಬ್ರಹ್ಮಾಂಡ ಗುರೂಜಿ ಉಪಸ್ಥಿತಿ

ಮುಗಳಖೋಡ ಮಠದಲ್ಲಿ ಭಜ೯ರಿಯಾಗಿ ನಡೆದ ‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆ’ : ಬ್ರಹ್ಮಾಂಡ ಗುರೂಜಿ ಉಪಸ್ಥಿತಿ ಬೆಳಗಾವಿ: ಇಂದು ರಾಯಬಾಗ ತಾಲೂಕಿನ ಮುಗಳಖೋಡದ ಜಿಡಗಾ ಮಠದಲ್ಲಿ, ಈ ವಷ೯ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆ’ ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಾಯಬಾಗ ತಾಲೂಕು ಸೇರಿದಂತೆ ಇತರೆಡೆಯಿಂದ ಸುಮಾರು ೧೦ ಸಾವಿರಕ್ಕೂ ಹೆಚ್ಚು ಭಕ್ತರು ರೊಟ್ಟಿ ಬುತ್ತಿಯನ್ನು ತಂದು ಮಠಕ್ಕೆ ಅಪಿ೯ಸಿದರು. ಮಠದ ಹೆಲಿಪ್ಯಾಡ ಆವರಣದಲ್ಲಿ ನಿಮಿ೯ಸಲಾಗಿದ್ದ ಮಂಟಪದಲ್ಲಿ ಹಳ್ಳಿ …

Read More »

ಕಾಂಗ್ರೆಸ್ ನಲ್ಲಿ ಮೂರು ಗುಂಪುಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ವಗ್ದಾಳಿ ನಡೆಸಿದ್ದಾರೆ.

ಕೋಲಾರ: ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳಿದ್ದು, ಈ ಗುಂಪುಗಾರಿಕೆಯೇ ಕೆಪಿಸಿಸಿಗೆ ಈವರೆಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗದ ಸ್ಥಿತಿಗೆ ತಲುಪಲು ಕಾರಣ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ವಗ್ದಾಳಿ ನಡೆಸಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ಹೈಕಮಾಂಡ್​ ಇದೀಗ ಶಕ್ತಿ ಕಳೆದುಕೊಂಡು ಲೋ ಕಮಾಂಡ್ ಆಗಿದೆ. ರಾಜ್ಯ ಕಾಂಗ್ರೆಸ್​ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ. ಶಿವಕುಮಾರ್ ಎಂಬ ಮೂರು ಗುಂಪುಗಳಿದ್ದು, ಅಕ್ಷರಶಃ ಮನೆಯೊಂದು …

Read More »

ನಮಗೆ ಯಡಿಯೂರಪ್ಪ ನಾಯಕತ್ವದಲ್ಲಿ ವಿಶ್ವಾಸವಿದೆ ಎಂದು ಹೇಳುವ ಮೂಲಕ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ಟಾಂಗ್ ನೀಡಿದರು.

ಹಾಸನ: ಸಿಎಂ ಬಿ ಎಸ್ ಯಡಿಯೂರಪ್ಪ ಮೂರುವರೆ ವರ್ಷದ ಬಳಿಕ ಚುನಾವಣಾ ನಿವೃತ್ತಿ ಹೊಂದುತ್ತಾರೆ ಎಂಬ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾನೂನು ಸಚಿವ ಮಾಧುಸ್ವಾಮಿ, ನಮ್ಮ ಬಳಿಯಾಗಲಿ ಅಥಾವ ಯಾವುದೇ ಸಭೆಯಲ್ಲಾಗಲಿ ಯಡಿಯೂರಪ್ಪ ಈ ರೀತಿಯ ಹೇಳಿಕೆಯನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ, ಯಡಿಯೂರಪ್ಪ ಯಾವ ಸಭೆಯಲ್ಲೂ ನಾನು ಕೇವಲ ಮೂರು ವರ್ಷ ಸಿಎಂ ಆಗಿ ನಂತರ …

Read More »

ವಿಷ್ಣುವರ್ಧನ್ ಪುಣ್ಯಸ್ಮರಣೆ ನಿಮಿತ್ಯ ಕರುನಾಡ ಸಿರಿ ಪ್ರಶಸ್ತಿ ಪ್ರಧಾನ ಹಾಗೂ 1001 ಸಸಿ ನೆಡುವ ಕಾರ್ಯಕ್ರಮ

ವಿಷ್ಣುವರ್ಧನ್ ಪುಣ್ಯಸ್ಮರಣೆ ನಿಮಿತ್ಯ ಕರುನಾಡ ಸಿರಿ ಪ್ರಶಸ್ತಿ ಪ್ರಧಾನ ಹಾಗೂ 1001 ಸಸಿ ನೆಡುವ ಕಾರ್ಯಕ್ರಮ ಜೇವರ್ಗಿ : ಸಹಾಹ ಸಿಂಹ ಡಾ|| ವಿಷ್ಣುವರ್ಧನರವರ 10ನೇ ಪುಣ್ಯಸ್ಮರಣೆ ನಿಮಿತ್ಯ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐದು ಜನ ಸಾಧಕರಿಗೆ ಹಾಗೂ 1001 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ|| ವಿಷ್ಣುಸೇನಾ ಸಮಿತಿ ತಾಲೂಕ ಅಧ್ಯಕ್ಷರಾದ ಬಸವರಾಜ ಬಾಗೇವಾಡಿ ಹೇಳಿದರು. ಪಟ್ಟಣದ ಪ್ರವಾಸಿ ಮಂದೀರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, …

Read More »

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ

; ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿದ್ದು, ಏರ್ ಪೋರ್ಟ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಮಾನ ನಿಲ್ದಾಣದ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಲ್ಯಾಪ್ ಟಾಪ್ ಬ್ಯಾಗ್ ಒಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಪತ್ತೆಯಾಗಿತ್ತು. ಈ ಬ್ಯಾಗ್ ನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಅದರಲ್ಲಿ ಸಜೀವ ಬಾಂಬ್ ಇರುವುದು ಗೊತ್ತಾಗಿದೆ. ತಕ್ಷಣ ಬ್ಯಾಗ್ ನ್ನು ವಿಮಾನ ನಿಲ್ದಾಣದ ಹೊರಗೆ ತಂದು ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದಾರೆ. …

Read More »

ದುನಿಯಾ ವಿಜಯ್ ಗೆ ಇಂದು 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ತಲ್ವಾರ್ ನಿಂದ ಕೇಕ್ ಕಟ್..ವಿಜಿ ವಿರುದ್ಧ ಕೇಸ್

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಗೆ ಇಂದು 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಸೇರಿ ತಲ್ವಾರ್ ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ತಲ್ವಾರ್ ನಲ್ಲಿ ಕೇಕ್ ಕತ್ತರಿಸೋ ಮೂಲಕ ದುನಿಯಾ ವಿಜಯ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕಾನೂನಿನ ಪ್ರಕಾರ ಯಾವುದೆ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ ಹಾಗೂ ಪ್ರದರ್ಶಿಸುವಂತಿಲ್ಲ. ಐದು ಇಂಚಿಗೂ ಉದ್ದದ ಕತ್ತಿಯನ್ನು …

Read More »