Breaking News

ಜಿಲ್ಲೆ

ಉಚಿತವಾಗಿ ಕೋಳಿ ಹಂಚಿಕೆ – ಭೀತಿ ನಡುವೆಯೂ ಕೋಳಿ ಒಯ್ಯಲು ಮುಗಿಬಿದ್ದ ಜನ

ಚಿಕ್ಕೋಡಿ/ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೊರೊನಾ ವೈರಸ್ ಭೀತಿಯಿಂದ ಕೋಳಿ ವ್ಯಾಪಾರ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಕೋಳಿಗಳ ಹಂಚಿಕೆ ಮಾಡಲಾಗಿದೆ. ಕೋಳಿಗಳ ಜೀವಂತ ಸಮಾಧಿ ಬಳಿಕ ಈಗ ಫಾರಂ ಮಾಲೀಕರು ಚಿಕನ್ ಪ್ರಿಯರಿಗೆ ಉಚಿತವಾಗಿ ಕೋಳಿಗಳನ್ನ ಹಂಚಿಕೆ ಮಾಡಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ಕಾಲೋನಿಗಳಲ್ಲಿ ಲಾರಿಗಳಲ್ಲಿ ಕೋಳಿ ತಂದು ಜನರಿಗೆ ಉಚಿತವಾಗಿ ನೀಡಲಾಗಿದೆ. ಕೊರೊನಾ ಭೀತಿ ನಡುವೆಯೂ ಉಚಿತ ಕೋಳಿ ತೆಗೆದುಕೊಂಡು ಹೋಗಲು ಜನ ಮುಗಿ ಬಿದ್ದಿದ್ದರು ಒಬ್ಬರು ಎರಡು …

Read More »

ಮಹಾಮಾರಿ ಕೊರೊನಾ ಭೀತಿ- ಮಣಿಪಾಲ ವಿವಿಗೆ 15 ದಿನ ರಜೆ

ಉಡುಪಿ: ಕರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರ ಹೈ ಅಲರ್ಟ್ ಘೋಷಿಸಿದೆ. ಇದೀಗ ಜಿಲ್ಲೆಯ ಮಣಿಪಾಲ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಎರಡು ವಾರಗಳ ಕಾಲ ರಜೆ ಘೋಷಿಸಿದೆ. ವಿವಿಯ ಸಾವಿರಾರು ವಿದ್ಯಾರ್ಥಿಗಳು ವಿದೇಶದ ಸಂಪರ್ಕ ಹೊಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶವನ್ನು ಹೊರಡಿಸಿದೆ. ಹೊರ ರಾಜ್ಯದ ವಿದ್ಯಾರ್ಥಿಗಳು ಮಣಿಪಾಲದಿಂದ ತಮ್ಮ ರಾಜ್ಯಗಳಿಗೆ ತೆರಳಿದ್ದು, ವಿದೇಶದ ವಿದ್ಯಾರ್ಥಿಗಳು ಮಣಿಪಾಲದಲ್ಲೇ ಉಳಿದುಕೊಳ್ಳುವ ಸೂಚನೆಯನ್ನು ವಿವಿ ಕೊಟ್ಟಿದೆ. ಇಂಗ್ಲಿಷ್ ಮಾತನಾಡುವ ಐವತ್ನಾಲ್ಕು …

Read More »

ಶಿಕ್ಷಣ ಸಚಿವರ ಸಂದೇಶ ದ್ವಿತೀಯ ಪಿಯುಸಿ ವಿದ್ಯಾಥಿಗಳಿಗೆ

ಬೆಂಗಳೂರು, ಮಾ.16- ಮಾರ್ಚ್ 4ರಿಂದ ಪ್ರಾರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆ ಈವರೆಗೆ ಸುಲಲಿತವಾಗಿ ನಡೆದಿದ್ದು, ಇನ್ನೂ ಏಳು ದಿನಗಳ ಕಾಲ ನಡೆಯಲಿರುವ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಎದುರಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿದ್ದಾರೆ. ಈಗಾಗಲೇ 39 ವಿಷಯಗಳ ಪರೀಕ್ಷೆ ಮುಗಿದಿದೆ. ಇನ್ನೂ 7 ಪರೀಕ್ಷೆಗಳು ನಡೆಯಬೇಕಿದೆ. ವಿದ್ಯಾರ್ಥಿಗಳು ನಿರ್ಭಯದಿಂದ ಪರೀಕ್ಷೆ ಬರೆಯಿರಿ. ವಿಜಯಪುರದಲ್ಲಿ ಯಾರೋ ಇಬ್ಬರು ಕಿಡಿಗೇಡಿಗಳು ಮಾಡಿದ ಕೃತ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಕೆಲವು ವದಂತಿ …

Read More »

ದೇಶದಲ್ಲಿ ಕೊರೊನಾ ಎಫೆಕ್ಟ್ ನಿಂದಾಗಿ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೂ ಕರಿಛಾಯೆ ಬೀರಿದೆ

ಹನೂರು, ಮಾ.16- ದೇಶದಲ್ಲಿ ಕೊರೊನಾ ಎಫೆಕ್ಟ್ ನಿಂದಾಗಿ ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೂ ಕರಿಛಾಯೆ ಬೀರಿದೆ. ಇದೇ ತಿಂಗಳು 21 ರಿಂದ 25ರ ವರೆಗೆ ಅದ್ಧೂರಿಯಾಗಿ ನಡೆಯಬೇಕಾಗಿದ್ದ ಯುಗಾದಿ ಹಬ್ಬದ ಜಾತಾ ಮಹೋತ್ಸವವನ್ನು ಸಂಪ್ರದಾಯದಂತೆ ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಿದೆ. ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಬರುತ್ತಿದ್ದ ಮಾದಪ್ಪನ ಭಕ್ತರು ಮ.ಬೆಟ್ಟಕ್ಕೆ ಬಾರದಂತೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಿರ್ಬಂಧ ಹೇರಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ …

Read More »

ಕೊರೊನಾ ಹರಡದಂತೆ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿ ವೇತನ

ಬೆಂಗಳೂರು, ಮಾ.16- ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಾಮಾರಿ ಕೊರೊನಾ ಸೋಂಕು ಹಬ್ಬದಂತೆ ಹಗಲಿರುಳು ಯೋಧರ ರೀತಿ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿ ವೇತನ ಹಾಗೂ ಪಾಲಿಸಿ (ವಿಮೆ) ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸರ್ಕಾರಿ ವೈದ್ಯರು ಯೋಧರ ರೀತಿ ಕೊರೊನಾ ವೈರಸ್ ತಡೆಗಟ್ಟಲು ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ನಾನು ಅವರಿಗೆ ವಿಶೇಷವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಸಿಬ್ಬಂದಿಗಳಿಗೆ ಆರ್ಥಿಕ ಬೆಂಬಲ ಹೆಚ್ಚಿಸುವ ನಿಟ್ಟಿನಲ್ಲಿ ವೇತನ ಹೆಚ್ಚಳ …

Read More »

ಖಾನಾಪುರ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕರಡಿ ದಾಳಿಯಿಂದ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವೀಸ್ಟ್

ಖಾನಾಪುರ: ವಾರದ ಹಿಂದೆ ಖಾನಾಪುರ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕರಡಿ ದಾಳಿಯಿಂದ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವೀಸ್ಟ್ ದೊರೆತಿದ್ದು, ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖಾನಾಪುರ ತಾಲೂಕಿನ ಅಮಟೆ ಗ್ರಾಮದ ದೇವಿದಾಸ ಗಾವಕರ್, ಸಂತೋಷ ಸೋಮಾ ಗಾವಕರ, ವಿಠ್ಠಲ ನಾಯಕ, ವಿಠ್ಠಲ ಗಣಪತಿ ನಾಯಕ, ರಾಮಾ ಗಣಪತಿ ನಾಯಕ, ಪ್ರಶಾಂತ ಗಣಪತಿ ಸುತಾರ ಬಂಧಿತರು. ಮಾ. 11 ರಂದು ಅಮಟೆ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ …

Read More »

ದಾವಣಗೆರೆಯಲ್ಲಿ ಕರೋನಾಕ್ಕೆ ಲಸಿಕೆ, ಹಾಕಿಸಿಕೊಂಡವರೇ ಪುಣ್ಯವಂತರು!

ದಾವಣಗೆರೆ ಖಾಸಗಿ ಶಾಲೆಯೊಂದರಲ್ಲಿ ಕರೋನಾಕ್ಕೆ ಲಸಿಕೆ ಸಿಕ್ಕಿದೆ. ಆಯುರ್ವೇದ ವೈದ್ಯರೊಬ್ಬರು ಅನೇಕ ಜನರಿಗೆ ಲಸಿಕೆ ಹಾಕಿದ್ದಾರೆ.ಜಿಲ್ಲಾಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಇದಾದ ಮೇಲೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಒಟ್ಟಿನಲ್ಲಿ ಕರೋನಾ ಭೀತಿ ನಡುವೆ ಇದೊಂದು ಸುದ್ದಿ ಒಂದಿಷ್ಟು ಹಲ್ ಚಲ್ ಗೆ ಕಾರಣವಾಗಿತ್ತು.

Read More »

ಮೊದಲು ₹18 ಕೋಟಿ, ನಂತರ 12 ಕೋಟಿಗೆ ಮನವಿ; ಸುನೀಲ್​ ಪುರಾಣಿಕ್​ಗೆ ಸಿಎಂ ತರಾಟೆ

ಕರ್ನಾಟಕ ಚಲನಚಿತ್ರ ಅಕಾಡೆಮಿ ಒಂದಕ್ಕೇ ಬರೋಬ್ಬರಿ 18 ಕೋಟಿ ರೂಪಾಯಿ ಅನುದಾನ ಕೇಳಿದ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್‌ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತರಾಟೆ ತೆಗೆದುಕೊಂಡಿದ್ದಾರೆ. ಸುನೀಲ್ ಪುರಾಣಿಕ್ ಸಿಎಂ ಬಳಿ ಒಂದು ವರ್ಷಕ್ಕೆ ₹18 ಕೋಟಿಯನ್ನ ಚಲನಚಿತ್ರ ಅಕಾಡೆಮಿಗೆ ಬಿಡುಗಡೆ ಮಾಡಿ ಎಂದು ಕೇಳಿದ್ದಾರಂತೆ.. 18 ಕೋಟಿ ರೂಪಾಯಿಗಳ ಮನವಿ ಪತ್ರ ತೆಗೆದುಕೊಂಡು ಸಿಎಂ ಬಳಿ ಹೋದ ಸುನೀಲ್ ಪುರಾಣಿಕ್ ಅದಕ್ಕೂ ಮುನ್ನ ಬಿಎಸ್​ವೈ ಪುತ್ರ ಬಿ.ವೈ ವಿಜಯೇಂದ್ರರನ್ನು ಭೇಟಿ …

Read More »

‘ದಿಯಾ’ ಚಿತ್ರಕ್ಕೆ ಆನ್ ಲೈನ್ ನಲ್ಲಿ ಮುಗಿಬಿದ್ದ ಜನ: ರಿ-ರಿಲೀಸ್ ಮಾಡುವಂತೆ ಪ್ರೇಕ್ಷಕರ ಮನವಿ

‘ದಿಯಾ’ ಚಿತ್ರಕ್ಕೆ ಆನ್ ಲೈನ್ ನಲ್ಲಿ ಮುಗಿಬಿದ್ದ ಜನ: ರಿ-ರಿಲೀಸ್ ಮಾಡುವಂತೆ ಪ್ರೇಕ್ಷಕರ ಮನವಿ ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ರಿಲೀಸ್ ಆದ ದಿಯಾ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕನ್ನಡ ಚಿತ್ರ ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾ ನೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಡಿಹೊಗಳುತ್ತಿದ್ದಾರೆ. ಚಿತ್ರಮಂದಿರಗಳ ಸಮಸ್ಯೆಯ ನಡುವೆಯೂ ಗೆದ್ದು ಬೀಗಿರುವ ದಿಯಾ ಇತ್ತೀಚಿಗೆ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಮಾಡಲಾಗಿದೆ. ಆನ್ ಲೈನಲ್ಲಿ ರಿಲೀಸ್ ಆಗುತ್ತಿದ್ದಂತೆ …

Read More »

ಕವಟಗಿಮಠ ಪುತ್ರಿ ವಿವಾಹ: ಸಿಎಂ ಭೇಟಿಗೂ ಮುನ್ನವೇ ಕಾಲ್ಕಿತ್ತ ಉಮೇಶ ಕತ್ತಿ

ಬೆಳಗಾವಿ: ಸಚಿವ ಸ್ಥಾನದ ಬಹು ನೀರಿಕ್ಷೆಯಲ್ಲಿದ್ದ ಬಿಜೆಪಿಯ ಹಿರಿಯ ಶಾಸಕ ಉಮೇಶ ಕತ್ತಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಯಾಗದೆ ಹೊಗಿರುವುದು ಚರ್ಚೆಗೆ ಕಾರಣವಾಗಿದೆ. ಸರ್ಕಾರ ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ ನೀಡಿದೆ. ಇದರ ನಡುವೆಯೂ ಸಹ ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಪುತ್ರಿಯ ಮದುವೆ ಬೆಳಗಾವಿಯಲ್ಲಿ ನಡೆದಿದೆ. ಈ ಸಮಾರಂಭಕ್ಕೆ ಆಗಮಿಸಿದ ಉಮೇಶ ಕತ್ತಿ ಅವರು, ಸಿಎಂ ಅವರು ಬರುವುದಕ್ಕೂ …

Read More »