ಕೋಲಾರ: ಕೊರೊನಾ ಮಹಾಮಾರಿ ಹರಡುವ ನಿಟ್ಟಿನಲ್ಲಿ ಶಂಕಿತರನ್ನು ಹೋಂ ಕ್ವಾರಂಟೈನ್ ಮಾಡಿದ್ದಕ್ಕೆ ಆಕ್ರೋಶಗೊಂಡ ಕುಟುಂಬವೊಂದು ಪೆಟ್ರೋಲ್ ಬಾಟಲ್ ನೊಂದಿಗೆ ಗ್ರಾಮ ಪಂಚಾಯ್ತಿಯ ಒಳಗೆ ನುಗ್ಗಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಸಂತೆಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಾಟಲ್ ಹಿಡಿದು ಆತ್ಮಹತ್ಯೆ ಮಾಡುವ ಬೆದರಿಕೆ ಹಾಕಿದ್ದಾರೆ. ಸಂತೇಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಕುಟುಂಬದವರನ್ನು ಕಳೆದ ಎರಡು ದಿನದ ಹಿಂದೆ …
Read More »ಸೈಲೆಂಟಾಗಿದೆ ಪಾದರಾಯನಪುರ, ಸ್ಥಳದಲ್ಲಿ 800 ಪೊಲೀಸರ ಮೊಕ್ಕಾಂ
ಬೆಂಗಳೂರು, ಏ.22- ಪಾದರಾಯನಪುರ ಘಟನೆಗೆ ಸಂಬಂಧಿಸಿದಂತೆ ಈವರೆಗೂ 126 ಮಂದಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರದ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಅಂದಿನ ಘಟನೆಗೆ ಸಂಬಂಧಿಸಿದಂತೆ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ಮಾಡುತ್ತಿದ್ದೇವೆ ಎಂದು ಹೇಳಿದರು. ಅಂದಿನ ಘಟನೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸಂಘಟನೆಯೊಂದರ ಕಾರ್ಯಕರ್ತನಾಗಿದ್ದು, ಈತನಿಗಾಗಿ ವ್ಯಾಪಕ ಶೋಧ ಮಾಡಲಾಗುತ್ತಿದೆ. ಬಂಧಿತ ಆರೋಪಿಗಳಲ್ಲಿ ಮಹಿಳೆ …
Read More »ಕೋವಿಡ್-19ಗೆ ಸಂಬಂಧಿಸಿದಂತೆ ಆಪ್ತಮಿತ್ರ ಸಹಾಯವಾಣಿ ಮತ್ತು ಆ್ಯಪ್‍ಗೆ ಸಿಎಂ ಚಾಲನೆ …..
ಬೆಂಗಳೂರು,ಏ.22- ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ರೋಗ ಕೊರೊನಾ ವೈರಸ್ ಹರಡುವಿಕೆ ಶೀಘ್ರದ ಲ್ಲೇ ನಿಯಂತ್ರಣಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೋವಿಡ್-19ಗೆ ಸಂಬಂಧಿಸಿದಂತೆ ಆಪ್ತಮಿತ್ರ ಸಹಾಯವಾಣಿ ಮತ್ತು ಆ್ಯಪ್‍ಗೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು, ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕರಿಸಬೇಕು. ಕೊರೊನಾ ಹೋರಾಟದಲ್ಲಿ ಈಗ ಮತ್ತೊಂದು ಹೆಜ್ಜೆ ಇಡಲಾಗಿದೆ ಎಂದರು. ಸಹಾಯವಾಣಿಯ ಉದ್ದೇಶ ರಾಜ್ಯದ ಎಲ್ಲಾ ನಿವಾಸಿಗಳಿಗೆ …
Read More »ಲಾಕ್‍ಡೌನ್ ನಿಂದ ಕೆಎಸ್‌ಆರ್‌ಟಿಸಿಗೆ 816 ಕೋಟಿ ಲಾಸ್..!
ಬೆಂಗಳೂರು, ಏ.22- ಲಾಕ್‍ಡೌನ್ ಜಾರಿಯಾದ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 816 ಕೋಟಿ ಲಾಸ್ ಆಗಿದೆ. ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸುವ ಉದ್ದೇಶದಿಂದ ಸರ್ಕಾರ ಲಾಕ್‍ಡೌನ್ ಜಾರಿಗೆ ತಂದ ನಂತರ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ರಾಜ್ಯದಲ್ಲಿ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಇಲ್ಲಿಯವರೆಗೆ ಸಂಸ್ಥೆಗೆ 816.23 ಕೋಟಿ ನಷ್ಟ ಸಂಭವಿಸಿದೆ ಎಂದು ಕೆಎಸ್‍ಆರ್‍ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 314.89, ವಾಣಿಜ್ಯ …
Read More »ಆಹಾರದ ಕಿಟ್ ಹಂಚಿಕೆಯಲ್ಲೂ ತಾರತಮ್ಯ : ಸಿದ್ದರಾಮಯ್ಯ ಆರೋಪ
ಬೆಂಗಳೂರು, ಏ.22- ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ, ಕಾರ್ಮಿಕರಿಗೆ ಹಂಚುವ ಆಹಾರದ ಪೊಟ್ಟಣದಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಶಾಸಕ ರಾಮಲಿಂಗಾ ರೆಡ್ಡಿ ಅವರು ಬಡವರಿಗೆ ಹಂಚಲು ತಯಾರಿಸುತ್ತಿರುವ ಆಹಾರ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಆದಾಗಿನಿಂದ ಪ್ರತಿ ದಿನ 48 ಸಾವಿರ ನಿರ್ಗತಿಕ ಕಾರ್ಮಿಕ ವರ್ಗಕ್ಕೆ ಆಹಾರ ಮತ್ತು ದಿನ ನಿತ್ಯ ಆಹಾರ …
Read More »ಪೆನ್ಷನ್ ಹಣ ಸಿಗದೆ ಸಂಕಷ್ಟದಲ್ಲಿ ವಿಕಲಚೇತನೆ – ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಹಾಸನ: ಸರ್ಕಾರ ವಿಕಲಚೇತನರಿಗೆ ನೀಡುತ್ತಿದ್ದ 1400 ರೂಪಾಯಿ ಪೆನ್ಷನ್ ಹಣ 9 ತಿಂಗಳುಗಳಿಂದ ಬಾರದ ಕಾರಣ ಎರಡು ಕಾಲಿನಲ್ಲಿ ಸ್ವಾಧೀನವಿಲ್ಲದ ಮಹಿಳೆಯೊಬ್ಬಳು ಓರ್ವ ಮಗನೊಂದಿಗೆ ಸರಿಯಾಗಿ ಊಟವಿಲ್ಲದೆ ಸಂಕಟ ಪಡುತ್ತಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಮಲ್ಲೇಶ್ವರ ನಗರದಲ್ಲಿ ನಡೆದಿದೆ. ವಿಕಲಚೇತನೆ ಭಾಗ್ಯಲಕ್ಷ್ಮಿ ತನ್ನ ಮಗನೊಂದಿಗೆ ಅರಸೀಕೆರೆ ಪಟ್ಟಣದಲ್ಲಿ ವಾಸವಿದ್ದು ಹೂಕಟ್ಟಿ ಜೀವನ ಸಾಗಿಸುತ್ತಿದ್ದರು. ಕೊರೊನಾ ಲಾಕ್‍ಡೌನ್ ಆದ ನಂತರ ಹೂ ಕಟ್ಟುವ ಕಾಯಕಕ್ಕೂ ಕುತ್ತು ಬಿದ್ದಿದೆ. ಪರಿಣಾಮ …
Read More »ಗುರುವಾರದಿಂದ ಕರ್ನಾಟಕದಲ್ಲಿ ಲಾಕ್‍ಡೌನ್ ಭಾಗಶಃ ಸಡಿಲ- ಏನಿದೆ, ಏನಿಲ್ಲ? – ಮದ್ಯ ಪ್ರಿಯರಿಗೆ ಸಿಗಲ್ಲ ಎಣ್ಣೆ
ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಹೇರಿದ್ದ ಲಾಕ್‍ಡೌನ್ ಗುರುವಾರದಿಂದ ಭಾಗಶಃ ಸಡಿಲಗೊಳ್ಳಲಿದೆ. ನಾಳೆಯಿಂದ ಕಟೈಂನ್‍ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆಯಲ್ಲಿ ಲಾಕ್‍ಡೌನ್ ನಿಯಮ ಸಡಿಲಗೊಳ್ಳಲಿದೆ. ಈ ಮೂಲಕ ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಕೈಗಾರಿಕೆ, ಕೆಲ ಸರ್ಕಾರಿ ಕಚೇರಿಗಳು ತೆರೆಯಲಿವೆ. ಆದರೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಸಾರ್ವಜನಿಕ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ. ಏನಿರುತ್ತೆ?: ಸೇಫ್ ಝೋನ್‍ನಲ್ಲಿ ಕಟ್ಟಡ ನಿರ್ಮಾಣ, …
Read More »ಬಡವರಿಗೆ ಉಚಿತವಾಗಿ 67 ಟನ್ ಆಹಾರ ಸಾಮಗ್ರಿ ವಿತರಿಸಿದ ಉಮೇಶ್ ಕತ್ತಿ
ಬೆಳಗಾವಿ(ಚಿಕ್ಕೋಡಿ): ಲಾಕ್‍ಡೌನ್ ಹಿನ್ನೆಲೆ ದುಡಿಮೆ ಇಲ್ಲದೆ ಮನೆಯಲ್ಲಿ ಕಷ್ಟದಲ್ಲಿ ಇರುವ ಬಡವರಿಗೆ ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಸಹಾಯ ಹಸ್ತ ಚಾಚಿದ್ದಾರೆ. ಉಮೇಶ್ ಕತ್ತಿ ಅವರು ತಮ್ಮ ತಂದೆ ವಿಶ್ವನಾಶ್ ಕತ್ತಿ ಹಾಗೂ ತಾಯಿ ರಾಜೇಶ್ವರಿ ಅವರ ಸ್ಮರಣಾರ್ಥ ಹುಕ್ಕೇರಿ ತಾಲೂಕಿನ 5,500 ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ವಸ್ತುಗಳನ್ನ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ವಿಶ್ವರಾಜ ಭವನದಲ್ಲಿ ಸಾಂಕೇತಿಕವಾಗಿ ಬಡವರಿಗೆ ದಿನಸಿ ಸಾಮಗ್ರಿಗಳನ್ನ ವಿತರಿಸಲಾಯಿತು. ಹುಕ್ಕೇರಿ …
Read More »ಪಾಂಡವಪುರ ಪುರಸಭೆಯಿಂದ ಕರೊನಾ ಶವಯಾತ್ರೆ
ಮಂಡ್ಯ ಜಿಲ್ಲೆ ಪಾಂಡವಪುರ: ಮಹಾಮಾರಿ ಕರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಇಲ್ಲಿನ ಪುರಸಭೆ ಅಧಿಕಾರಿಗಳು ಬುಧವಾರ ಕರೊನಾ ಶವಯಾತ್ರೆ ನಡೆಸಿ ಸಾರ್ವಜನಿಕ ರಲ್ಲಿನ ಭಯ ಹೋಗಲಾಡಿಸುವ ಪ್ರಯತ್ನ ನಡೆಸಿದರು. ಪುರಸಭೆ ಕಚೇರಿ ಆವರಣದಿಂದ ಬೆಳಿಗ್ಗೆ 12 ಗಂಟೆಗೆ ಪ್ರಾರಂಭವಾದ ಶವಯಾತ್ರೆ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿತು. ಕರೊನಾ ಸೋಂಕು ತಡೆಗಟ್ಟಲು ಯಾರೂ ಮನೆಯಿಂದ ಹೊರಗೆ ಬರಬಾರದು. ಬಂದರೆ ಸೋಂಕು ತಗಲುವ ಸಾಧ್ಯತೆ ಗಳಿವೆ …
Read More »ಕಾರಿನಲ್ಲಿ ಮದ್ಯ ಸಾಗಣೆ ಮೂವರ ಬಂಧನ
ಮಂಡ್ಯ ಜಿಲ್ಲೆ ನಾಗಮಂಗಲ: ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ನಾಗಮಂಗಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಎದುರಿನ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ 5 ಬಾಕ್ಸ್ ಬಿಯರ್ ಬಾಟಲ್ ಪತ್ತೆಯಾಗಿವೆ ಕೆ.ಎ-53 ಎಂಬಿ 6899 ನಂಬರಿನ ಸ್ಟಿಫ್ಟ್ ಕಾರಿನಲ್ಲಿ ಮಧ್ಯ ಪತ್ತೆಯಾಗಿದ್ದು. ಅಕ್ರಮವಾಗಿ ಮಧ್ಯವನ್ನು ಸಾಗಿಸುತ್ತಿದ್ದ ಚನ್ನಪಟ್ಟಣ ತಾಲ್ಲೂಕಿನ ಮಾಕಳ್ಳ್ಳಿ ಗ್ರಾಮದ ಹರೀಶ್ ಗೌಡ, ಸಂದೀಪ್, ಹಾಗೂ ಸೋಮಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗಮಂಗಲ …
Read More »
Laxmi News 24×7