ಬೆಂಗಳೂರು: ಮೇ 17ಕ್ಕೆ ಲಾಕ್‍ಡೌನ್ ಅವಧಿ ಮುಗಿಯುತ್ತಿರುವ ಹಿನ್ನೆಲೆ ಸಿಬ್ಬಂದಿಗೆ ಬಿಎಂಟಿಸಿ ಆದೇಶ ಹೊರಡಿಸಿದ್ದು, ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಬಸ್ ಸೇವೆ ಮತ್ತೆ ಆರಂಭವಾಗುವ ಸುಳಿವನ್ನು ನೀಡಿದೆ. ಮೇ 18ರಿಂದ ಎಲ್ಲಾ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಜಾರಿಗೊಳಿಸಿದ ಹಿನ್ನೆಲೆ ಬಿಎಂಟಿಸಿ ಸೇರಿದಂತೆ ಎಲ್ಲಾ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಸ್ಥಗಿತಗೊಂಡಿದ್ದವು. ಕೆಲ ಬಿಎಂಟಿಸಿ ಬಸ್‍ಗಳು …
Read More »ಯುಎಇಯಿಂದ ಉಡುಪಿಗೆ ಬಂದ ಐವರಿಗೆ ಕೊರೊನಾ……..
ಉಡುಪಿ: ಯುಎಇಯಿಂದ ಉಡುಪಿಗೆ ಬಂದ 49 ಮಂದಿ ಪೈಕಿ ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇನ್ನಿಬ್ಬರ ವರದಿ ಬರುವುದು ಬಾಕಿಯಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. 47 ದಿನದಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿರಲಿಲ್ಲ, ಹೀಗಾಗಿ ಜಿಲ್ಲೆ ಗ್ರೀನ್ ಝೋನ್‍ನಲ್ಲಿ ಇತ್ತು. ಆದರೆ ವಿದೇಶಿ ನೆಲದಲ್ಲಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಕ್ಕೆ ಭಾರತ ಮುಂದಾಗಿದ್ದು, ಉಡುಪಿ ಜಿಲ್ಲೆಗೆ 49 ಮಂದಿ ಯುಎಇಯಿಂದ ಬಂದಿದ್ದು, ಅವರಲ್ಲಿ …
Read More »ಮೃತರಾದ ಮಾಜಿ ಭೂಗತ ಲೋಕದ ದೊರೆ ಮುತ್ತಪ್ಪ ರೈ ಅವರು ಡಾನ್ ಅದರೂ ಸಿನಿಮಾರಂಗದ ಜೊತೆ ನಿಕಟ ಸಂಬಂಧ
ಬೆಂಗಳೂರು: ಮೃತರಾದ ಮಾಜಿ ಭೂಗತ ಲೋಕದ ದೊರೆ ಮುತ್ತಪ್ಪ ರೈ ಅವರು ಡಾನ್ ಅದರೂ ಸಿನಿಮಾರಂಗದ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದರು. ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದ ಸಮಸ್ಯೆಯಿಂದ ಬಳಲುತ್ತಿದ್ದ ಮುತ್ತಪ್ಪ ರೈ ಇಂದು ನಸುಕಿನ ಜಾವ 2.10ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಒಂದು ಕಾಲದಲ್ಲಿ ಡಾನ್ ಆಗಿ ಮೆರೆದಿದ್ದ ರೈ ನಂತರ ಜಯಕರ್ನಾಟಕ ಸಂಘಟನೆ ಕಟ್ಟಿ ಸಮಾಜ ಸೇವೆಯ ಕಡೆ ಮುಖ ಮಾಡಿದ್ದರು. ಜೊತೆಗೆ ಸಿನಿಮಾದಲ್ಲೂ …
Read More »ಹಾಸನದಲ್ಲಿ ಮತ್ತೆ ಮೂವರಿಗೆ ಕೊರೊನಾ- ಜಿಲ್ಲೆಯಲ್ಲಿ 12ಕ್ಕೇರಿದ ಸೋಂಕಿತರ ಸಂಖ್ಯೆ
ಹಾಸನ: ಜಿಲ್ಲೆಯಲ್ಲಿ ಇಂದು ತಂದೆ-ಮಗ ಸೇರಿದಂತೆ ಮತ್ತೆ ಮೂವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಎಲ್ಲರೂ ಮುಂಬೈನಿಂದ ವಾಪಸ್ ಬಂದವರಾಗಿದ್ದಾರೆ. ಈ ಹಿಂದೆ ಹಾಸನದಲ್ಲಿ ಒಂಬತ್ತು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಅವರೆಲ್ಲರೂ ಚನ್ನರಾಯಪಟ್ಟಣ ತಾಲೂಕಿನವರಾಗಿದ್ದು, ಮುಂಬೈಯಿಂದ ವಾಪಸ್ಸಾದವರಾಗಿದ್ದರು. ಇಂದು ಮತ್ತೆ ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಹಾಸನದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 12ಕ್ಕೆ ಏರಿದೆ. ಮೂವರಲ್ಲಿ ಇಬ್ಬರು ಚನ್ನರಾಯಪಟ್ಟಣ ಮೂಲದ ತಂದೆ ಮತ್ತು ಮಗನಾಗಿದ್ದು, ಮುಂಬೈನಿಂದ ಸ್ವಂತ …
Read More »ಚಿಕ್ಕೋಡಿ ಪೊಲೀಸ್ ಠಾಣೆ ಪೇದೆ ಓರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ
ಚಿಕ್ಕೋಡಿ: ಕರ್ತವ್ಯ ಮುಗಿಸಿ ಊರಿಗೆ ತೆರಳುತ್ತಿದ್ದ ಚಿಕ್ಕೋಡಿ ಪೊಲೀಸ್ ಠಾಣೆ ಪೇದೆ ಓರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದ ಹತ್ತಿರ ಗುರುವಾರ ಸಂಭವಿಸಿದೆ. ಮೃತ ಪೇದೆ ರಮೇಶ ನಾಯಿಕ(೨೫) ಎಂದು ಗುರ್ತಿಸಲಾಗಿದೆ. ಈತನು ಕರ್ತವ್ಯ ಮುಗಿಸಿ ದ್ವಿಚಕ್ರ ವಾಹನದ ಮೂಲಕ ತನ್ನ ಊರು ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮಕ್ಕೆ ತೆರಳುವಾಗ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯ ನಾಗರಮುನ್ನೋಳ್ಳಿ ಗ್ರಾಮ ವ್ಯಾಪ್ತಿಯ ಬೆಳಗಲಿ ಕ್ರಾಸ್ …
Read More »ಗುತ್ತಿಗೆದಾರನಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ ಆರೋಪಿಗಳ ಬಂಧನ
ರಾಯಚೂರು: ಶಕ್ತಿನಗರದ ರಾಘವೇಂದ್ರ ಕಾಲೋನಿಯಲ್ಲಿ ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ ಆರೋಪಿಗಳು ಸೆರೆಸಿಕ್ಕಿದ್ದಾರೆ. ರಾಯಚೂರಿನ ರೌಡಿಶೀಟರ್ ಮಹ್ಮದ್ ಗೌಸ್ ತಂಡದ 12 ಜನರ ಬಂಧನವಾಗಿದ್ದು, ಮುಖ್ಯ ಆರೋಪಿ ಗೌಸ್ ತಲೆ ಮರೆಸಿಕೊಂಡಿದ್ದಾನೆ. ಮೇ 8ರಂದು ಆರ್ ಟಿಪಿಎಸ್, ವೈಟಿಪಿಎಸ್ ಗುತ್ತಿಗೆದಾರ ಕೇರಳ ಮೂಲದ ಹರ್ಷನ್ ಮನೆಗೆ ಮಹ್ಮದ್ ಗೌಸ್ ಹಾಗೂ 17 ಜನ ನುಗ್ಗಿ ಪಿಸ್ತೂಲ್, ಮಾರಕಾಸ್ತ್ರ ತೋರಿಸಿ ಹಣ ವಸೂಲಿ ಮಾಡಿದ್ದರು. ಹರ್ಷನ್ ರಿಂದ …
Read More »28 ದಿನಗಳ ಬಳಿಕ ತನ್ನ ಹಸುಗೂಸನ್ನು ಅಪ್ಪಿಕೊಂಡು ಮುದ್ದಾಡಿರುವ ಭಾವುಕ ಘಟನೆ ಸಿಲಿಕಾನ್ ಸಿಟಿಯ ದೊಡ್ಡಬಸ್ತಿಯಲ್ಲಿ
ಬೆಂಗಳೂರು: ಕೊರೊನಾ ಗೆದ್ದ ಮಹಿಳೆ 28 ದಿನಗಳ ಬಳಿಕ ತನ್ನ ಹಸುಗೂಸನ್ನು ಅಪ್ಪಿಕೊಂಡು ಮುದ್ದಾಡಿರುವ ಭಾವುಕ ಘಟನೆ ಸಿಲಿಕಾನ್ ಸಿಟಿಯ ದೊಡ್ಡಬಸ್ತಿಯಲ್ಲಿ ನಡೆದಿದೆ. ದೊಡ್ಡಬಸ್ತಿಯಲ್ಲಿ ರೋಗಿ ನಂಬರ್ 259 ಮಹಿಳೆ ಕೊರೊನಾದಿಂದ ಗುಣಮುಖರಾಗಿ ತನ್ನ ಮನೆಗೆ ವಾಪಸ್ಸಾಗಿದ್ದಾರೆ. ಡೆಲಿವರಿಯಾದ ನಾಲ್ಕೇ ದಿನದಲ್ಲಿ ತನ್ನ ಹಸುಗೂಸಿನಿಂದ ದೂರವಾಗಿದ್ದರು. ಮಗುವಿಗೆ ಎದೆಹಾಲು ಉಣಿಸಲಾಗದಂತಹ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ 28 ದಿನಗಳ ಬಳಿಕ, ಈ ಮಹಿಳೆ ಕೊರೊನಾ ಗೆದ್ದು ಮನೆಗೆ ಬಂದಿದ್ದು, ತನ್ನ …
Read More »ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಕೆರೆಯಂತಾದ ರಸ್ತೆ……….
ಮಂಗಳೂರು: ಕಳೆದ ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆಯಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲೂ ಭಾರೀ ಮಳೆ ಸುರಿದಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ದೇವಸ್ಥಾನದ ಬಳಿಯ ರಸ್ತೆ ಪೂರ್ತಿ ನೀರು ನಿಂತು ಕೆರೆಯಂತಾಗಿತ್ತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರವೇಶಿಸುವ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ನೀರು ಹರಿಯುವುದಕ್ಕೆ ಸಾಧ್ಯವಾಗದೇ ರಸ್ತೆ ಕೆರೆಯಂತಾಗಿತ್ತು. ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನ, ಕಾರು ಕೃತಕ ನೆರೆಗೆ ಭಾಗಶಃ ಮುಳುಗಿ ಹೋಗಿತ್ತು. ವಾಹನ ಸವಾರರು …
Read More »ಉಚಿತವಾಗಿ ಹಂಚುವ ರೇಷನ್ ಕಿಟ್‍ಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರ ಸೆರೆ
ಬೆಂಗಳೂರು, – ಕಾರ್ಮಿಕ ಇಲಾಖೆಯಿಂದ ಬಡವರಿಗೆ ಉಚಿತವಾಗಿ ಹಂಚುವ ರೇಷನ್ ಕಿಟ್‍ಗಳನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದ ನಾಲ್ವರು ಆರ್‍ಟಿ ನಗರ ಪೊಲೀಸರ ಅತಿಥಿಗಳಾಗಿದ್ದಾರೆ. ಕಾರ್ಮಿಕ ಇಲಾಖೆಯ ರೇಷನ್‍ಕಿಟ್‍ಗಳನ್ನು ತಲಾ ಒಂದು ಕಿಟ್‍ಗೆ 150ರೂ. ಪಡೆದು ಕೆಲವರು ಮಾರಾಟ ಮಾಡುತ್ತಿದ್ದರು. ಆದರೆ, ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಪಾಲಿಕೆ ಸದಸ್ಯರಿಗೆ ಮಾಹಿತಿ ಇರಲಿಲ್ಲ. ಆರ್‍ಟಿ ನಗರದಲ್ಲಿ ಮೆಟೆಡೋರ್‍ನಲ್ಲಿ ಕಾರ್ಮಿಕ ಇಲಾಖೆಯ ಕಿಟ್‍ಗಳನ್ನು ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ …
Read More »ಮದ್ಯೋದ್ಯಮಿ ಮಲ್ಯಗೆ ಭಾರತದಲ್ಲಿ ಜೈಲೂಟ ಫಿಕ್ಸ್..!
ಲಂಡನ್: ಮದ್ಯೋದ್ಯಮಿ ವಿಜಯ್ ಮಲ್ಯ ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಇಂಗ್ಲೆಂಡ್ (ಯುಕೆ) ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಲು ಇಲ್ಲಿನ ಹೈಕೋರ್ಟ್ ಅವಕಾಶ ಕಲ್ಪಿಸಲಿಲ್ಲ. ಭಾರತಕ್ಕೆ ತನ್ನನ್ನು ಹಸ್ತಾಂತರ ಮಾಡದಂತೆ ಕಳೆದ ತಿಂಗಳು ವಿಜಯ್ ಮಲ್ಯ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಬ್ರಿಟನ್ನ ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮಲ್ಯ ನಿರ್ಧರಿಸಿದ್ದರು. ಆದರೆ, ಮಲ್ಯ ಅವರಿಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಹೈಕೋರ್ಟ್ ಇಂದು ಅವಕಾಶ ನೀಡಿಲ್ಲ. ಈ …
Read More »
Laxmi News 24×7