Breaking News

ಜಿಲ್ಲೆ

ಸರ್ಕಾರ ನೇಕಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ನೇಕಾರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ ಒತ್ತಾಯಿಸಿದ್ದಾರೆ.

ಬೆಳಗಾವಿ: ಲಾಕ್ ಡೌನ್ ದಿಂದ ನೇಕಾರರ ಬದುಕು ಸಂಕಷ್ಟದಲ್ಲಿ ಸಿಲುಕಿದೆ. ಇದರಿಂದ ಸರ್ಕಾರ ನೇಕಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ನೇಕಾರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ ಒತ್ತಾಯಿಸಿದ್ದಾರೆ. ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರ ಪ್ರವಾಹ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದ್ರೆ ಅವು ಕೈ ಸೇರುವ ಮುನ್ನವೆ ಕೊರೊನಾ ಹಾವಳಿ ಹೆಚ್ಚಾಯಿತು. ಆದ ಕಾರಣ ಪ್ಯಾಕೇಜ್ ಕೈ ಸೇರಲಿಲ್ಲ ಎಂದರು. …

Read More »

ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕನ್ನು ಹೋಗಲಾಡಿಸಲು ತಮ್ಮ ಜೀವವನ್ನು ಲೆಕ್ಕಿಸದೇ ಸೋಂಕಿತರನ್ನು ಪತ್ತೆಗಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು

ಸವಣೂರ: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕನ್ನು ಹೋಗಲಾಡಿಸಲು ತಮ್ಮ ಜೀವವನ್ನು ಲೆಕ್ಕಿಸದೇ ಸೋಂಕಿತರನ್ನು ಪತ್ತೆಗಾಗಿ ಶ್ರಮಿಸುತ್ತಾ, ಸಾರ್ವಜನಿಕರಿಂದ ನಿಂದನೆಗೊಳಗಾದರೂ ಸಹ, ನಿರ್ಲಕ್ಷಿಸಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಮುಂದಾದ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಗಂಗಾಧರ ಬಾಣದ ಹೇಳಿದರು. ಕಂದಾಯ ಇಲಾಖೆಯ ಆವರಣದಲ್ಲಿ ಆಶಾ ಕಾರ್ಯಕರ್ತರಿಗೆ ಹಾಗೂ ಪುರಸಭೆ ನೀರು ನಿರ್ವಹಣಾ ಸಿಬ್ಬಂದಿಗಳಿಗೆ ಕ್ಷಮತಾ ಸೇವಾ ಸಂಘದ ವತಿಯಿಂದ ನೀಡಲ್ಪಟ್ಟ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು. …

Read More »

ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾದ ರಮೇಶ್ ಜಾರಕಿಹೊಳಿ ಮನೆ ‘ಗೃಹಪ್ರವೇಶ’

2018ರಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಸದಾ ಒಂದಲ್ಲೊಂದು ಸುದ್ದಿಯಲ್ಲಿರುವ ಸಚಿವ ರಮೇಶ್ ಜಾರಕಿಹೊಳಿ ಇಟ್ಟಿರುವ ಇನ್ನೊಂದು ಹೆಜ್ಜೆ, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬೆಳಗಾವಿಯ ರಾಜಕೀಯದಲ್ಲಿ ಮೂಗು ತೂರಿಸುತ್ತಿದ್ದಾರೆ ಎನ್ನುವ ವಿಚಾರದಲ್ಲಿ ಆರಂಭವಾದ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ದ್ವೇಷ ಈಗ ಇನ್ನೊಂದು ಮಜಲಿಗೆ ಬಂದು ನಿಂತಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಗೋಕಾಕ್ ಉಪ ಚುನಾವಣೆ ಬಳಿಕ ಮತ್ತೆ ಒಂದಾದ್ರಾ ಜಾರಕಿಹೊಳಿ ಬ್ರದರ್ಸ್? ಯಡಿಯೂರಪ್ಪನವರ …

Read More »

ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾದ ರಮೇಶ್ ಜಾರಕಿಹೊಳಿ ಮನೆ ‘ಗೃಹಪ್ರವೇಶ…..? ‘

2018ರಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಸದಾ ಒಂದಲ್ಲೊಂದು ಸುದ್ದಿಯಲ್ಲಿರುವ ಸಚಿವ ರಮೇಶ್ ಜಾರಕಿಹೊಳಿ ಇಟ್ಟಿರುವ ಇನ್ನೊಂದು ಹೆಜ್ಜೆ, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬೆಳಗಾವಿಯ ರಾಜಕೀಯದಲ್ಲಿ ಮೂಗು ತೂರಿಸುತ್ತಿದ್ದಾರೆ ಎನ್ನುವ ವಿಚಾರದಲ್ಲಿ ಆರಂಭವಾದ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ದ್ವೇಷ ಈಗ ಇನ್ನೊಂದು ಮಜಲಿಗೆ ಬಂದು ನಿಂತಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಗೋಕಾಕ್ ಉಪ ಚುನಾವಣೆ ಬಳಿಕ ಮತ್ತೆ ಒಂದಾದ್ರಾ ಜಾರಕಿಹೊಳಿ ಬ್ರದರ್ಸ್? ಯಡಿಯೂರಪ್ಪನವರ …

Read More »

ಜಿಲ್ಲೆಯಲ್ಲಿ ಸೂರ್ಯಗ್ರಹಣದ ವೇಳೆ ನಡೆಯುವ ಮೌಢ್ಯಾಚರಣೆಯನ್ನು ಆಚರಿಸದಂತೆ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ.

ಕಲಬುರಗಿ: ಜಿಲ್ಲೆಯಲ್ಲಿ ಸೂರ್ಯಗ್ರಹಣದ ವೇಳೆ ನಡೆಯುವ ಮೌಢ್ಯಾಚರಣೆಯನ್ನು ಆಚರಿಸದಂತೆ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ. ನಾಳೆ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣದ ವೇಳೆ ಮಕ್ಕಳನ್ನು ಮಣ್ಣಲ್ಲಿ ಹೂತಿಟ್ಟರೆ ಅಂಗವಿಕಲತೆ ವಾಸಿಯಾಗುತ್ತೆ ಎಂಬ ನಂಬಿಕೆ ಇದೆ. ಕಳೆದ ವರ್ಷ ಈ ಆಚರಣೆ ನಡೆದಿದ್ದ ಕಾರಣದಿಂದ ಜಿಲ್ಲಾಧಿಕಾರಿಗಳು ಇನ್ನುಮುಂದೆ ಈ ರೀತಿ ಮೂಢನಂಬಿಕೆಯ ಆಚರಣೆ ಮಾಡದಂತೆ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಆಚರಿಸುವುದು ಕಂಡುಬಂದರೆ ಅಂತಹವರ ವಿರುದ್ಧ ಕೇಸ್ ದಾಖಲಿಸುವುದಾಗಿ ಡಿಸಿ ಶರತ್,​​ …

Read More »

ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಮಹಿಳೆಯರಿಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಬೆಂಗಳೂರು: ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಮಹಿಳೆಯರಿಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಜೈಶಂಕರ್ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ. ಮುಂಬೈನಿಂದ ಆಗಮಿಸಿದ ಮಹಿಳೆಯನ್ನು ಹೆಚ್.ಎಸ್.ಆರ್. ಲೇಔಟ್ ನಲ್ಲಿರೋ ಸರ್ಕಾರಿ ವಸತಿ ನಿಲಯದಲ್ಲಿ 7 ದಿನ ಕ್ವಾರಂಟೈನ್ ಮಾಡಲಾಗಿತ್ತು. ವಸತಿ ನಿಲಯದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಒಂದೇ ಶೌಚಾಲಯದ ವ್ಯವಸ್ಥೆಯಿದೆ. ಶೌಚಾಲಯಕ್ಕೆ ಹೋದ ಮಹಿಳೆಗೆ ಜೈಶಂಕರ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ಶೌಚಾಲಯದಕ್ಕೆ ಹೊಗುತ್ತಿದ್ದಂತೆ ಹಿಂದಿನಿಂದ ಜೈಶಂಕರ ಬಾಗಿಲು …

Read More »

ಮಾಜಿ ಪ್ರಧಾನಿ ಹೆಚ್.ಡಿ.ದೇವಗೌಡ ಅವರು ಆಗ್ರಹಿಸಿದ್ದಾರೆ.

ಬೆಂಗಳೂರು: ಲಡಾಖ್ ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದ ವಾಸ್ತವ ಸಂಗತಿಯನ್ನು ಅರಿತುಕೊಳ್ಳಲು ಸಮ ಗ್ರ ತನಿಖೆಯಾಗಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವಗೌಡ ಅವರು ಆಗ್ರಹಿಸಿದ್ದಾರೆ. ದೇವೇಗೌಡರು ತಮ್ಮ ಅಭಿಪ್ರಾಯವನ್ನು ಪ್ರಕಟಣೆ ಮೂಲಕ ಹೊರಹಾಕಿದ್ದಾರೆ. ಲಡಾಖ್ ನಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಘಟನೆಯಿಂದ ದೇಶದ ಜನರು ದಿಗ್ಬ್ರಮೆ ಗೊಂಡಿದ್ದಾರೆ. ಅಲ್ಲಿನ ವಾಸ್ತವ ಸಂಗತಿ ಏನು ಎಂಬುವುದರ ಬಗ್ಗೆ ತಿಳಿಯಲು ಸಮಗ್ರ ತನಿಖೆ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗೂ ಮಾಧ್ಯಮದವರಿಂದ …

Read More »

ನಿಮ್ಮ ಮನೆ ಮಹಡಿಗಳಿಂದಲೇ ನೋಡಿ ಸಂಭ್ರಮಿಸುವಂತೆ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಕರೆ ನೀಡಿದೆ.

ಬೆಳಗಾವಿ: ನಾಳೆ ವಿಶ್ವವು 2020 ನೇ ವರ್ಷದ ಮೊದಲ ಸೂರ್ಯಗ್ರಹಣ( Solar Eclipse) ಸಾಕ್ಷಿಯಾಗಲಿದೆ. ಈ ಹಿನ್ನೆಲೆ ಮೌಢ್ಯಕ್ಕೆ ಮೊರೆ ಹೋಗದೆ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವ ಅದ್ಭುತ ದೃಶ್ಯವನ್ನು ನಿಮ್ಮ ಮನೆ ಮಹಡಿಗಳಿಂದಲೇ ನೋಡಿ ಸಂಭ್ರಮಿಸುವಂತೆ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಕರೆ ನೀಡಿದೆ. ಅಂದು ಗ್ರಹಣವು ಉತ್ತುಂಗದಲ್ಲಿದ್ದಾಗ ಸೂರ್ಯನು ಹೊಳೆಯುವ ಕಂಕಣ ಅಥವಾ ಉಂಗುರದಂತೆ ಕಾಣುತ್ತಾನೆ. ಭಾಗಶಃ ಮತ್ತು ವಾರ್ಷಿಕ ಗ್ರಹಣಗಳಲ್ಲಿ ಸೂರ್ಯನ ಒಂದು ಭಾಗವನ್ನು ಮಾತ್ರ …

Read More »

ರಾಜ್ಯದಲ್ಲಿ ಕೊರೊನಾ ರೌದ್ರತೆ- ಸರ್ಕಾರಕ್ಕೆ ತಜ್ಞರ ‘ಸಪ್ತ’ ಪ್ರಶ್ನೆ…………

ಬೆಂಗಳೂರು: ಕೊರೊನಾ ಸೋಂಕಿತರು ಹೆಚ್ಚಾಗುವದರ ಜೊತೆಗೆ ಸಾವನ್ನಪ್ಪಿದವರ ಸಂಖ್ಯೆಯೂ ಶರವೇಗ ಪಡೆದುಕೊಳ್ಳುತ್ತಿದೆ. ಸರ್ಕಾರ ನಿರ್ಲಕ್ಷ್ಯ ಮತ್ತು ಗೊಂದಲದ ನಿರ್ಧಾರಗಳೇ ಈ ಸಂಖ್ಯೆ ಹೆಚ್ಚಳವಾಗಲು ಕಾರಣ ಎನ್ನಲಾಗುತ್ತಿದೆ. ಸರ್ಕಾರ ಮೊದಲಿನಿಂದಲೂ ತಜ್ಞರ ಸಲಹೆಗಳನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಶುಕ್ರವಾರದ ಬುಲೆಟಿನ್ ಬೆಂಗಳೂರಿಗರು ಬೆಚ್ಚಿ ಬೀಳುವಂತೆ ಮಾಡಿದೆ. ಶುಕ್ರವಾರ ಪತ್ತೆಯಾದ 138 ಪ್ರಕರಣಗಳಲ್ಲಿ ನಿಗೂಢ ಕೇಸ್ 41 ಆಗಿದೆ. ಅಂದರೆ ಇವರಿಗೆ ಸೋಂಕಿನ ಮೂಲವೇ ಇಲ್ಲ. ಇದು …

Read More »

ದಿನ ಕಳೆದಂತೆ ಕೊರೊನಾ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಹಣ ಉಳಿಸಲು ಕ್ವಾರಂಟೈನ್ ಮಾಡುವವರನ್ನು ಅಂಬುಲೆನ್ಸ್ ಗಳಲ್ಲಿ ಕುರಿ ತುಂಬಿದಂತೆ ತುಂಬಲಾಗುತ್ತಿದೆ.

ಬೆಂಗಳೂರು: ದಿನ ಕಳೆದಂತೆ ಕೊರೊನಾ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಹಣ ಉಳಿಸಲು ಕ್ವಾರಂಟೈನ್ ಮಾಡುವವರನ್ನು ಅಂಬುಲೆನ್ಸ್ ಗಳಲ್ಲಿ ಕುರಿ ತುಂಬಿದಂತೆ ತುಂಬಲಾಗುತ್ತಿದೆ. ಕೊರೊನಾ ಜೀವನದ ಅಂಗ, ನಾವು ಕೊರೊನಾ ಜೊತೆಯಲ್ಲಿಯೇ ಬದುಕಬೇಕು ಎಂದು ಹೇಳುವ ಸರ್ಕಾರ, ಇದೇ ರೀತಿ ವರ್ತಿಸುತ್ತಿದೆ. ದಿನ ಕಳೆದಂತೆ ಮಹಾಮಾರಿ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ. ಇದರಿಂದಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಮಹಾರಾಷ್ಟ್ರದ ರೀತಿಯಾದರೆ ಏನು ಗತಿ ಎಂಬ ಆತಂಕ ಹುಟ್ಟಿಕೊಂಡಿದೆ. ಕ್ವಾರಂಟೈನ್ …

Read More »